ಈ ವ್ಯಕ್ತಿಯ ಕಾರ್ ಪಾರ್ಕಿಂಗ್​ ಕಲೆಗೆ ಬೆಲೆ ಕಟ್ಟೋದು ಬಲು ಕಷ್ಟ; ವಿಡಿಯೋ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ

ಎರಡು ಮನೆಗಳ ಮಧ್ಯೆ, ಎರಡು ಕಾರುಗಳ ನಡುವೆ ಕಾರ್​ ಪಾರ್ಕ್​ ಮಾಡಬೇಕು ಎಂದರೆ ಹರಸಾಹಸ ಪಡುತ್ತಾರೆ. ಆದರೆ, ಕೆಲವರಿಗೆ ಇದು ನೀರು ಕುಡಿದಷ್ಟೇ ಸುಲಭ. ಕೇರಳದ ವ್ಯಕ್ತಿಯೋರ್ವ ಕಾರು ಪಾರ್ಕ್​ ಮಾಡಿದ್ದು ನೋಡಿದರೆ ನೀವು ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ.

news18-kannada
Updated:September 8, 2020, 3:39 PM IST
ಈ ವ್ಯಕ್ತಿಯ ಕಾರ್ ಪಾರ್ಕಿಂಗ್​ ಕಲೆಗೆ ಬೆಲೆ ಕಟ್ಟೋದು ಬಲು ಕಷ್ಟ; ವಿಡಿಯೋ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ
ಕಾರ್ ಪಾರ್ಕ್​ ಮಾಡಿದ ವಿಡಿಯೋ
  • Share this:
ಕಾರು ಓಡಿಸೋದು ತುಂಬಾನೇ ಸುಲಭ. ಆದರೆ, ಹಿಂದೆ ಮುಂದೆ ನೋಡಿಕೊಂಡು ಪಾರ್ಕಿಂಗ್​ ಮಾಡೋದು ಇದೆಯಲ್ಲ ಅದು ತುಂಬಾನೇ ಚಾಲೆಂಜಿಂಗ್​ ವಿಚಾರ. ಹೀಗೆ ಅನೇಕರು ಹೇಳಿಕೊಂಡಿದ್ದನ್ನು ನೀವು ಕೇಳಿರುತ್ತೀರಿ. ಕಾರು ಪಾರ್ಕ್​ ಮಾಡೋದು ಕೆಲವರಿಗೆ ಕಬ್ಬಿಣದ ಕಡಲೆ ಎಂದರೂ ತಪ್ಪಾಗಲಾರದು. ಎರಡು ಮನೆಗಳ ಮಧ್ಯೆ, ಎರಡು ಕಾರುಗಳ ನಡುವೆ ಕಾರ್​ ಪಾರ್ಕ್​ ಮಾಡಬೇಕು ಎಂದರೆ ಹರಸಾಹಸ ಪಡುತ್ತಾರೆ. ಆದರೆ, ಕೆಲವರಿಗೆ ಇದು ನೀರು ಕುಡಿದಷ್ಟೇ ಸುಲಭ. ಕೇರಳದ ವ್ಯಕ್ತಿಯೋರ್ವ ಕಾರು ಪಾರ್ಕ್​ ಮಾಡಿದ್ದು ನೋಡಿದರೆ ನೀವು ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ.

ವ್ಯಕ್ತಿಯೋರ್ವ ಕಾರನ್ನು ರಸ್ತೆ ಪಕ್ಕದಲ್ಲಿ ಪಾರ್ಕ್​ ಮಾಡಿದ್ದ. ರಸ್ತೆ ಪಕ್ಕದಲ್ಲಿ ಪಾರ್ಕ್​ ಮಾಡಿದ ಕಾರನ್ನು ತೆಗೆಯೋದು ದೊಡ್ಡ ವಿಚಾರವೇನು ಎಂದು ನೀವು ಪ್ರಶ್ನೆ ಮಾಡಬಹದು. ಆದರೆ, ರಸ್ತೆ ಬದಿಯಲ್ಲಿರುವ ಕಾಲುವೆ ಮೇಲೆ ಕೇವಲ ಕಾರು ನಿಲ್ಲುವಷ್ಟೇ ಜಾಗದಲ್ಲಿ ಗಾಡಿಯನ್ನು ಪಾರ್ಕ್ ಮಾಡಲಾಗಿತ್ತು. ಕೇವಲ ಒಂದೇ ಒಂದು ನಿಮಿಷದಲ್ಲಿ ಆತ ಕಾರನ್ನು ತೆಗೆದು ಹೊರ ಹೋಗಿದ್ದ. ಬಹುಶಃ ಅದನ್ನು ನಾವು ಹೇಳುವುದಕ್ಕಿಂತ ಅದನ್ನು ನೀವು ನೋಡಿದರೆ ಉತ್ತಮ.
ಸದ್ಯ ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಈ ವಿಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ನಾನು ಈ ವಿಡಯೋ ನೋಡುವಾಗ ಉಸಿರು ಬಿಗಿ ಹಿಡಿದು ನಿಂತಿದ್ದೆ ಎಂದಿದ್ದಾರೆ.
Published by: Rajesh Duggumane
First published: September 8, 2020, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading