ಈತ ಮನುಷ್ಯ ಆದರೆ ಮನುಷ್ಯರೆಂದರೆ ದೂರ ಓಡುತ್ತಾನೆ, ಆಹಾರಕ್ಕೆ ಹುಲ್ಲು ತಿನ್ನುತ್ತಾನೆ..!

ಕಲಿಕೆಯ ತೊಂದರೆಗಳನ್ನು ಎದುರಿಸುತ್ತಿರುವ ಇವನು ಶಾಲೆಗೆ ಹೋಗುವುದಿಲ್ಲ ಮತ್ತು ಗ್ರಾಮಸ್ಥರಿಗೆ ಹೆದರುತ್ತಾನೆ. ಅಫ್ರಿಮ್ಯಾಕ್ಸ್ ಟಿವಿಯವರು 'ಮಂಕಿ' ಎಂಬ ಕಾರ್ಯಕ್ರಮವನ್ನು ಚಿತ್ರೀಕರಿಸಿ ಇವನ ಜೀವನವನ್ನು ಅಸಾಮಾನ್ಯ ಜೀವನ ವಿಧಾನ ಎಂದು ಕರೆದಿದ್ದಾರೆ.

ಮಂಕಿ ಮ್ಯಾನ್​ ಎಲ್ಲೀ..

ಮಂಕಿ ಮ್ಯಾನ್​ ಎಲ್ಲೀ..

  • Share this:

ಇಲ್ಲೊಬ್ಬ ಯುವಕನಿದ್ದಾನೆ, ಆತನು ಕಾಡಿನಲ್ಲಿಯೇ ವಾಸಿಸುತ್ತಿದ್ದಾನೆ. ಈತನಿಗೆ ತಾಯಿ ಮಾಡಿದ ಅಡುಗೆಗಿಂತ ಹುಲ್ಲು ತಿನ್ನುತ್ತಾ ಪ್ರಾಣಿಯಂತೆ ಬದುಕು ಸಾಗಿಸುತ್ತಿದ್ದಾನೆ.ಅವನ ಹೆಸರೇ ಎಲ್ಲೀ, ವಯಸ್ಸು 21, ಇವನಿಗೆ ಮಾತನಾಡಲು ಬರುವುದಿಲ್ಲ ಮತ್ತು ತನ್ನ ತಾಯಿ ತಯಾರಿಸಿದ ಆಹಾರ ತಿನ್ನಲು ನಿರಾಕರಿಸುವ ಇವನು ರುವಾಂಡಾ ಹಳ್ಳಿಯ ಬಳಿಯ ಕಾಡಿನಲ್ಲಿ ಬಾಳೆಹಣ್ಣು ಮತ್ತು ಇತರ ಹಣ್ಣುಗಳನ್ನು, ಹುಲ್ಲನ್ನು ತಿನ್ನುತ್ತಾನೆ. ಆದರೆ ತಾಯಿ ತನ್ನ ಮಗುವನ್ನು ದೇವರ ಆಶೀರ್ವಾದದ ಫಲ ಎಂದು ನಂಬಿದ್ದಾಳೆ. ಏಕೆಂದರೆ ಅವರು ಈಗಾಗಲೇ ಐದು ಮಕ್ಕಳನ್ನು ಕಳೆದುಕೊಂಡರು.


ಕಲಿಕೆಯ ತೊಂದರೆಗಳನ್ನು ಎದುರಿಸುತ್ತಿರುವ ಇವನು ಶಾಲೆಗೆ ಹೋಗುವುದಿಲ್ಲ ಮತ್ತು ಗ್ರಾಮಸ್ಥರಿಗೆ ಹೆದರುತ್ತಾನೆ. ಅಫ್ರಿಮ್ಯಾಕ್ಸ್ ಟಿವಿಯವರು 'ಮಂಕಿ' ಎಂಬ ಕಾರ್ಯಕ್ರಮವನ್ನು ಚಿತ್ರೀಕರಿಸಿ ಇವನ ಜೀವನವನ್ನು ಅಸಾಮಾನ್ಯ ಜೀವನ ವಿಧಾನ ಎಂದು ಕರೆದಿದ್ದಾರೆ.


ಅವನಿಗೆ ಆಹಾರ ಇಷ್ಟವಿಲ್ಲ. ಅವನು ಬಾಳೆಹಣ್ಣು ತಿನ್ನಲು ಆದ್ಯತೆ ನೀಡುತ್ತಾನೆ. ಅವನಿಗೆ ಏನೂ ಗೊತ್ತಿಲ್ಲ, ಅವನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ತಾಯಿ ಹೇಳುತ್ತಾಳೆ.


ಅವನು ಮಾಡುವುದೆಲ್ಲ ಓಡುವುದು. ಅವನು ಜನರನ್ನು ನೋಡಿದಾಗ ಅವರಿಂದ ದೂರ ಓಡಿ ಹೋಗುತ್ತಾನೆ. ಅವನು ಎಲ್ಲಿ ಓಡಿದರೂ ನಾನು ಅವನ ಹಿಂದೆ ಓಡಬೇಕು. ಇಡೀ ವಾರದಲ್ಲಿ ನಾವು 230 ಕಿ.ಮೀ ಕ್ರಮಿಸಬಹುದು ಎಂದು ಹೇಳುತ್ತಾರೆ.


ಎಲ್ಲಿಯ ಓಟವನ್ನು 'ಉಸೇನ್ ಬೋಲ್ಟ್‌ನಷ್ಟು ವೇಗವಾಗಿ' ಓಡುತ್ತಾನೆ ಎಂದು ವಿವರಿಸಲಾಗಿದೆ ಮತ್ತು ಕಾಡಿನಲ್ಲಿ ಓಡುತ್ತಲೇ ತನ್ನ ದಿನಗಳನ್ನು ಕಳೆಯುತ್ತಾನೆ. ಅಲ್ಲದೇ ಈತನಿಗೆ ಹೇಗೆ ಮಾತನಾಡಬೇಕೆಂದು ತಿಳಿದಿಲ್ಲ ಮತ್ತು ಸಂಜ್ಞೆಗಳೊಂದಿಗೆ ಮಾತ್ರ ಸಂವಹನ ಮಾಡಬಹುದು.ಅವನ ತಾಯಿಯು ಅವನನ್ನು ಹಿಡಿಯಲು ತಾತ್ಕಾಲಿಕವಾದ ತಂತ್ರ ರೂಪಿಸಿದ್ದಾಳೆ, ಏಕೆಂದರೆ ಅವನು ತನ್ನ ಸಮಯವನ್ನು ಹಳ್ಳಿಯಿಂದ ದೂರ ಉಳಿದೇ ಕಳೆಯುತ್ತಿದ್ದನು.


"ನಮ್ಮ ಐದು ಮಕ್ಕಳನ್ನು ಕಳೆದುಕೊಂಡ ನಂತರ ನಾವು ಹಿಂದಿನ ಮಕ್ಕಳಂತೆ ಸಾಯದಂತ ಮಗುವನ್ನು ಕೊಡು ದೇವರೆ! ಕನಿಷ್ಠ ಅಂಗವಿಕಲ ಮಗುವನ್ನು ನಮಗೆ ನೀಡಬೇಕೆಂದು ದೇವರನ್ನು ಕೇಳಿಕೊಂಡೆವು. ಇವನು ಜನಿಸಿದಾಗ ದೇವರಿಂದ ಬಂದ ಸಂದೇಶ ಎಂದು ನಾವು ಭಾವಿಸಿದೆವು ಎಂದು ಅವರ ತಾಯಿ ಚಲನಚಿತ್ರ ನಿರ್ಮಾಪಕರಿಗೆ ಹೇಳಿದ್ದಾರೆ.


ನೆರೆಹೊರೆಯವರು ತನ್ನ ಮಗನನ್ನು ಹುಡುಗನನ್ನಾಗಿ ಪರಿಗಣಿಸುವುದಿಲ್ಲ, ಬದಲಾಗಿ ಕೋತಿಯೆಂದು ಪರಿಗಣಿಸುತ್ತಾರೆ ಎಂದು ವಿವರಿಸಿದಳು. ನನ್ನ ಮಗು ಹೋದಾಗ ಮತ್ತು ಹಿಂತಿರುಗಿ ಬಂದು ಹೊಡೆಯುತ್ತಾರೆ. ನನಗೆ ಇದು ತುಂಬಾ ನೋವುಂಟು ಮಾಡುತ್ತದೆ. ಅವನನ್ನು ಮಂಗ ಎಂದು ಕರೆಯುತ್ತಾರೆ. ಜನರು ನನ್ನ ಮಗನನ್ನು ಹಿಂಸಿಸುವುದನ್ನು ಕೇಳಿ ನನಗೆ ತುಂಬಾ ದುಃಖವಾಗಿದೆ ಎಂದು ಬೇಸರ ಮಾಡಿಕೊಳ್ಳುತ್ತಾರೆ ಅವನ ತಾಯಿ.


ಮಕ್ಕಳು ಮಾತ್ರವಲ್ಲ, ವಯಸ್ಕರು ಅವನನ್ನು ನಾಚಿಕೆಯಿಲ್ಲದೆ ಹಿಂಸಿಸುವುದನ್ನು ನೋಡಿದರೆ ನನ್ನ ಕೋಪ ಎಲ್ಲೆ ಮೀರುತ್ತದೆ. ಅವರು ಅವನನ್ನು ಮನುಷ್ಯರಂತೆ ನೋಡುವುದಿಲ್ಲ, ಕೇವಲ ಪ್ರಾಣಿಯಂತೆ ನೋಡುತ್ತಾರೆ.


ಇದನ್ನೂ ಓದಿ: ನೂತನ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಯಶಸ್ವಿಯಾದರೆ? ಹೈಕಮಾಂಡ್ ಒಳಮರ್ಮವೇನು?

ಅವನು ಹುಲ್ಲನ್ನು ತಿನ್ನುತ್ತಾನೆ. ಇತರರಿಗಿಂತ ವಿಭಿನ್ನ ಎಂದು ಎಲ್ಲರಿಗೂ ತಿಳಿದಿದೆ, ಇತರ ಪ್ರಾಣಿಗಳಂತೆ ಮೈದಾನದಲ್ಲಿನ ಹುಲ್ಲುಗಾವಲನ್ನು ಅವಲಂಬಿಸುವ ಇನ್ನೊಬ್ಬ ವ್ಯಕ್ತಿಯನ್ನು ನಾವು ನೋಡಿಲ್ಲ. ಅವನು ಕಾಡಿನಲ್ಲಿ ಬದುಕಬಲ್ಲನು ಎಂದು ನೆರೆಹೊರೆಯವರು ಹೇಳಿದರು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: