• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Kabab Recipe Viral: ಇದು ಬರೋಬ್ಬರಿ 238 ವರ್ಷಗಳ ಹಿಂದಿನ ಕಬಾಬ್ ರೆಸಿಪಿ, ಬಂಗಾಳದ ಮೊದಲ ಗವರ್ನರ್‌ ರೆಡಿ ಮಾಡಿದ್ದಂತೆ!

Kabab Recipe Viral: ಇದು ಬರೋಬ್ಬರಿ 238 ವರ್ಷಗಳ ಹಿಂದಿನ ಕಬಾಬ್ ರೆಸಿಪಿ, ಬಂಗಾಳದ ಮೊದಲ ಗವರ್ನರ್‌ ರೆಡಿ ಮಾಡಿದ್ದಂತೆ!

ವೈರಲ್ ಆಗಿರುವ ಕಬಾಬ್ ರೆಸಿಪಿ ಮತ್ತು ಬಂಗಾಳದ ಗವರ್ನರ್

ವೈರಲ್ ಆಗಿರುವ ಕಬಾಬ್ ರೆಸಿಪಿ ಮತ್ತು ಬಂಗಾಳದ ಗವರ್ನರ್

ಇದೀಗ ಬಂಗಾಳದ ಮೊದಲ ಗವರ್ನರ್ ತಮ್ಮ ಪರ್ಸನಲ್​ ಡೈರಿಯಲ್ಲಿ​ ಬರೆದಿರುವ ಕಬಾಬ್​ ರೆಸಿಪಿ ಬಗ್ಗೆ ಫೋಟೋ ವೈರಲ್ ಆಗಿದ್ದು, ಇದು 238 ವರ್ಷಗಳ ಹಿಂದಿನ ಪಾಕ ವಿಧಾನ ಎಂದು ಗುರುತಿಸಲಾಗಿದೆ.

 • Share this:

  ಭಾರತದಲ್ಲಿ ಬಹಳ ಹಿಂದಿನಿಂದ ಅಡುಗೆ ಮಾಡುವ ವಿಷಯದಲ್ಲಿ ಭಾರೀ ಪ್ರಾಧ್ಯಾನ್ಯತೆ ನೀಡಲಾಗುತ್ತಿದೆ. ಅದೇ ರೀತಿ ಕೋಳಿ ಪದಾರ್ಥಗಳನ್ನೆಲ್ಲಾ ಭಾರೀ ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ಇತ್ತೀಚೆಗೆ ಕೆಲವರ ಮನೆಗಳಲ್ಲಿ ಯಾವುದೇ ಸಂಭ್ರಮದ ದಿನಗಳು ಬಂದರೆ ಸಾಕು ಅಲ್ಲಿ ಕೋಳಿ, ಮೀನು, ಮೊಟ್ಟೆ ಈ ರೀತಿಯ ಪಾಕಪದ್ಧತಿಯೇ ಹೆಚ್ಚಿರುತ್ತದೆ. ಆದರೆ ಇಲ್ಲೊಂದು ಕಬಾಬ್​ ರೆಸಿಪಿ ವೈರಲ್​ ಆಗಿದ್ದು. ಇದನ್ನು ನೋಡಿದ್ರೆ ನಿಮಗೂ ಅಚ್ಚರಿಯಾಗುತ್ತೆ. ಯಾಕೆಂದರೆ ಬಂಗಾಳದ ಮೊದಲ ಗವರ್ನರ್​ ಆಗಿರುವ  ಜನರಲ್ ವಾರೆನ್ ಹೇಸ್ಟಿಂಗ್ಸ್ (Warren Hastings) ಅವರ ಖಾಸಗಿ ಡೈರಿಯಿಂದ ಕಬಾಬ್​ (Kabab Recipe Viral) ಪಾಕವಿಧಾನದ ಹಳೆಯ ಫೋಟೋವನ್ನು ಇತ್ತೀಚೆಗೆ, ಬರಹಗಾರರಾದ ಇರಾ ಮುಖೋಟಿ(Ira Mukhoty) ಅವರು ತಮ್ಮ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 


  ಇದೀಗ ಬಂಗಾಳದ ಮೊದಲ ಗವರ್ನರ್ ತಮ್ಮ ಪರ್ಸನಲ್​ ಡೈರಿಯಲ್ಲಿ​ ಬರೆದಿರುವ ಕಬಾಬ್​ ರೆಸಿಪಿ ಬಗ್ಗೆ ಫೋಟೋ ವೈರಲ್ ಆಗಿದ್ದು, ಇದು 238 ವರ್ಷಗಳ ಹಿಂದಿನ ಪಾಕ ವಿಧಾನ ಎಂದು ಗುರುತಿಸಲಾಗಿದೆ.


  238 ವರ್ಷಗಳ ಹಿಂದಿನ ರೆಸಿಪಿ


  ಕ್ರಿಸ್ತಶಕ 1772 – 1784 ಸುಮಾರಿಗೆ ಬಂಗಾಳದ ಮೊದಲ ಗವರ್ನರ್ ಆದವರು ಜನರಲ್ ವಾರೆನ್ ಹೇಸ್ಟಿಂಗ್ಸ್. ಅವರ 1784ರ ಖಾಸಗಿ ಡೈರಿಯಿಂದ ಕಬಾಬ್ ಪಾಕವಿಧಾನದ ಬಗ್ಗೆ ಬರೆದಿದ್ದರು. ಇದರ ಹಳೆಯ ಫೋಟೋವನ್ನು ಇತ್ತೀಚೆಗೆ ಬರಹಗಾರರಾದ ಇರಾ ಮುಖೋಟಿ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


  ವೈರಲ್ ಆಗಿರುವ ಕಬಾಬ್ ರೆಸಿಪಿ ಮತ್ತು ಬಂಗಾಳದ ಗವರ್ನರ್


  ಇಂದಿನ ಕಾಲದಿಂದಲೂ ಭಾರತೀಯ ಪಾಕ ಪದ್ದತಿಯಲ್ಲಿ ಕಬಾಬ್​​ಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಇದರಿಂದ ತಿಳಿದುಬರುತ್ತದೆ. ಇರಾ ಮುಖೋಟಿ ತಮ್ಮ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್​​ ಇಲ್ಲಿದೆ. ಅಂದರೆ ಇದು 238 ವರ್ಷಗಳ ಹಿಂದಿನ ವಿಶೇಷ ರೆಸಿಪಿ ಇದಾಗಿದೆ.


  ಇದನ್ನೂ ಓದಿ: ನಾಯಿಗಳು ನಿಮ್ಮ ಬೈಕ್ ಹಿಂಬಾಲಿಸುತ್ತಾ ಇದ್ಯಾ? ತಪ್ಪಿಸಿಕೊಳ್ಳೋಕೆ ಈ ಟಿಪ್ಸ್ ಟ್ರೈ ಮಾಡಿ


  ಏನೆಂದು ಬರೆಯಲಾಗಿದೆ?


  ಈ ಫೋಟೋದಲ್ಲಿ ಮಾಂಸ, ಬೆಳ್ಳುಳ್ಳಿ, ಮೆಣಸಿನಕಾಯಿ, ಮೊಟ್ಟೆಯ ಹಳದಿ, ಮುಂತಾದ ಪದಾರ್ಥಗಳನ್ನು ಬರೆದಿರುವುದನ್ನು ಕಾಣಬಹುದು. ಜೊತೆಗೆ ಪಾಕವಿಧಾನವನ್ನು ಕೂಡ ಬರೆದಿದ್ದಾರೆ. ಮೇಲೆ ನೀಡಿರುವ ಎಲ್ಲಾ ಪದಾರ್ಥಗಳನ್ನು 5 ಅಥವಾ 6 ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ, ನಂತರ ಇದನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಇದನ್ನು ಕಲ್ಲಿನ ಮೇಲೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಾದ ನಂತರ ಬೆಣ್ಣೆಯಲ್ಲಿ ಫ್ರೈ ಮಾಡಿ, ಅವು ಬಾಣಲೆಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಿ ಎಂದು ಬರೆಯಲಾಗಿದೆ.


  ಟ್ವಿಟರ್​ನಲ್ಲಿ ಫುಲ್ ವೈರಲ್​


  ಟ್ವಿಟರ್​​ ಖಾತೆಯಲ್ಲಿ ಶೇರ್ ಮಾಡಿದ ನಂತರ, ಈ ಟ್ವೀಟ್ 1 ಲಕ್ಷಕ್ಕೂ ಹೆಚ್ಚು  ವೀಕ್ಷಣೆಗಳನ್ನು ಮತ್ತು 1300 ಕ್ಕೂ ಹೆಚ್ಚು ಲೈಕ್ಸ್​​ ಸ್ವೀಕರಿಸಿದೆ. ಕಬಾಬ್ ರೆಸಿಪಿಯ ಈ ಹಳೆಯ ಫೋಟೋವನ್ನು ನೋಡಿ ಇಂಟರ್ನೆಟ್ ಬಳಕೆದಾರರು ಮತ್ತು ಅಡುಗೆ ಪರಿಣಿತರು ಸಾಕಷ್ಟು ಆಸಕ್ತಿ ಹೊಂದಿಕೊಂಡು ಕಮೆಂಟ್​ ಮೂಲಕ ಬಹಳ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ವಿಶ್ವದ ಕೆಲವು ರುಚಿಕರವಾದ ಕಬಾಬ್‌ಗಳು ಲಕ್ನೋದಲ್ಲಿ ಇನ್ನೂ ಕಂಡುಬರುತ್ತವೆ ಎಂದು ಮತ್ತೊಬ್ಬರು ಬಳಕೆದಾರರು ಬರೆದುಕೊಂಡಿದ್ದಾರೆ.  1985 ರ ಒಂದು ಊಟದ ಬಿಲ್ ಅನ್ನು ಹಂಚಿಕೊಂಡ ರೆಸ್ಟೋರೆಂಟ್!


  ಮೂಲತಃ ಆಗಸ್ಟ್ 12, 2013 ರಂದು ಫೇಸ್‌ಬುಕ್ ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ಈಗ ಮತ್ತೆ ವೈರಲ್ ಆಗಿದೆ. ದೆಹಲಿಯ ಲಜಪತ್ ನಗರ ಪ್ರದೇಶದಲ್ಲಿರುವ ಲಜೀಜ್ ರೆಸ್ಟೋರೆಂಟ್ ಆಂಡ್ ಹೋಟೆಲ್ ಡಿಸೆಂಬರ್ 20, 1985 ರ ದಿನಾಂಕದ ಒಂದು ಹಳೆಯ ಬಿಲ್ ಅನ್ನು ಹಂಚಿಕೊಂಡಿದೆ. ಬಿಲ್ ನಲ್ಲಿ ತೋರಿಸಿರುವಂತೆ ಗ್ರಾಹಕರು ಶಾಹಿ ಪನ್ನೀರ್, ದಾಲ್ ಮಖ್ನಿ, ರೈತಾ ಮತ್ತು ಕೆಲವು ಚಪಾತಿಗಳ ಒಂದು ಪ್ಲೇಟ್ ಅನ್ನು ಆರ್ಡರ್ ಮಾಡಿದ್ದರು.
  ಮೊದಲ ಎರಡು ಭಕ್ಷ್ಯಗಳಿಗೆ ಕ್ರಮವಾಗಿ 8 ರೂಪಾಯಿ, ಇತರ ಎರಡು ಭಕ್ಷ್ಯಗಳಿಗೆ ಕ್ರಮವಾಗಿ 5 ಮತ್ತು 6 ರೂಪಾಯಿ ಬೆಲೆ ಇತ್ತು. ಹೆಚ್ಚು ಆಘಾತಕಾರಿ ಸಂಗತಿಯೆಂದರೆ, ಬಿಲ್ ನ ಒಟ್ಟು ಮೊತ್ತ ಕೇವಲ 26 ರೂಪಾಯಿ. ಇದು ಇಂದಿನ ಸಮಯದಲ್ಲಿ ಒಂದು ದೊಡ್ಡ ಚಿಪ್ಸ್ ಪ್ಯಾಕೆಟ್ ನ ಬೆಲೆಗೆ ಸಮನಾಗಿರುತ್ತದೆ.

  Published by:Prajwal B
  First published: