Viral Video: ಈ ವಿಭಿನ್ನ ಫೈರ್ ದೋಸೆ ತಿಂದ್ರೆ ಬೇರೆ ದೋಸೆ ತಿನ್ನೋದೆ ಮರಿತೀರಾ!

Fire Dosa: ಇತ್ತೀಚೆಗೆ ಚಾಕೋಲೇಟ್ ದೋಸೆ, ಷೆಜ್ವಾನ್ ದೋಸೆ ಕೂಡ ಈ ಪಟ್ಟಿಗೆ ಸೇರಿಕೊಂಡಿದೆ. ಇದು ಎಲ್ಲ ದೋಸೆಗಳಿಗಿಂತ ವಿಭಿನ್ನ. ಇದೀಗ ಈ ಪಟ್ಟಿಗೆ ಇಂದೋರ್ನ‌ ಫೈರ್ ದೋಸೆ ಕೂಡ ಸೇರಿದೆ.ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿದೆ.

ಫೈರ್ ದೋಸೆ

ಫೈರ್ ದೋಸೆ

  • Share this:

ದೋಸೆ ಎಂದಾಕ್ಷಣ ಎಲ್ಲರ ಬಾಯಲ್ಲಿ ನೀರೂರುತ್ತದೆ. ದೋಸೆ ರುಚಿ ನೋಡದ ವ್ಯಕ್ತಿ ಇಲ್ಲವೇ ಇಲ್ಲ. ಚಟ್ನಿ, ಆಲೂಗಡ್ಡೆ ಪಲ್ಯದೊಂದಿಗೆ ಸವಿಯುತ್ತಿದ್ದರೆ, ಕೆಲವೊಮ್ಮೆ ಸ್ವರ್ಗವೇ ಧರೆಗಿಳಿದು ಬಂದರೂ ತಿಳಿಯುವುದಿಲ್ಲವೇನೋ..ಅಷ್ಟೊಂದು ರುಚಿ ದೋಸೆ.ದೋಸೆಯಲ್ಲಿ ಒಂದಾ, ಎರಡಾ ವಿಧಗಳು..ಮಸಾಲೆ ದೋಸೆ, ಸೆಟ್ ದೋಸೆ, ಫ್ಲೈಯಿಂಗ್ ದೋಸೆ, ಬಾಹುಬಲಿ ದೋಸೆ.. ಹೀಗೆ ದೋಸೆಯಲ್ಲೇ ವಿಭಿನ್ನ ರುಚಿ ದಕ್ಕುತ್ತದೆ. ಇತ್ತೀಚೆಗೆ ಚಾಕೋಲೇಟ್ ದೋಸೆ, ಷೆಜ್ವಾನ್ ದೋಸೆ ಕೂಡ ಈ ಪಟ್ಟಿಗೆ ಸೇರಿಕೊಂಡಿದೆ. ಇದು ಎಲ್ಲ ದೋಸೆಗಳಿಗಿಂತ ವಿಭಿನ್ನ. ಇದೀಗ ಈ ಪಟ್ಟಿಗೆ ಇಂದೋರ್ನ‌ ಫೈರ್ ದೋಸೆ ಕೂಡ ಸೇರಿದೆ.ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿದೆ. ಈ ವಿಡಿಯೋವನ್ನು ಫುಡ್ ಬ್ಲಾಗರ್ ಆದ ಫುಡ್ಡಿ ಇನ್ಕಾರ್ನೆಟ್ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೈರ್ ದೋಸೆ ಮಾಡುವ ವಿಡಿಯೋ ಅಪ್‍ಲೋಡ್ ಆಗಿದ್ದು, ಇದನ್ನು 54 ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ ಹಾಗೂ 63 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ದೋಸೆಯ ಬೆಲೆ 180ರೂ. ಇದ್ದು, ದೋಸೆಯ ಸುತ್ತ ಎದ್ದೇಳುವ ಬೆಂಕಿಯು ಕಣ್ಣಿಗೆ ಹಬ್ಬ ಎನಿಸುತ್ತದೆ.


ಫೈರ್ ದೋಸೆ ಮಾಡುವುದು ಹೇಗೆ?


ಮೊದಲು ದೋಸೆ ಮಾಡುವ ವ್ಯಕ್ತಿಯು ದೋಸೆಯ ತವಾವನ್ನು ಕಾಯುವಂತೆ ಮಾಡುತ್ತಾನೆ. ಕಾದ ನಂತರ ತವಾ ಒರೆಸಿ, ಅದರ ಮೇಲೆ ದೋಸೆ ಹಾಕುತ್ತಾರೆ. ನಂತರ ಇದರ ಮೇಲೆ ಬೆಣ್ಣೆ, ಮಸಾಲೆ, ಖಾರದ ಪುಡಿ, ಗರಂ ಮಸಾಲೆ, ಈರುಳ್ಳಿ, ಕ್ಯಾಪ್ಸಿಕಂ, ಟೊಮ್ಯಾಟೋ ಕಾರ್ನ್, ಟೊಮ್ಯಾಟೋ, ಲಿಕ್ವಿಡ್ ಚೀಸ್ ಹಾಕುತ್ತಾರೆ. ನಂತರ ಈ ಎಲ್ಲವನ್ನೂ ಚಟ್ನಿಯ ರೂಪಕ್ಕೆ ಬರುವವರೆಗೂ ದೋಸೆಯ ಮೇಲೆಯೇ ಕಲಿಸುತ್ತಾರೆ.


ನಂತರ ಇದನ್ನು ದೋಸೆಗೆ ಸಂಪೂರ್ಣ ಸವರುತ್ತಾನೆ. ನಂತರ ಅದನ್ನು 5 ಭಾಗಗಳಾಗಿ ಕತ್ತರಿಸುತ್ತಾರೆ. ನಂತರ ಒಲೆಯ ಸುತ್ತ ಬೆಂಕಿಯನ್ನು ಹೆಚ್ಚಳ ಮಾಡುತ್ತಾನೆ. ಇದಕ್ಕೆ ಒಂದೆರಡು ನಿಮಿಷಗಳ ಕಾಲ ಫ್ಯಾನ್ ಹಿಡಿಯುತ್ತಾರೆ. ಆಗ ಬೆಂಕಿಯ ಸಣ್ಣ ಸಣ್ಣ ಕಿಡಿಗಳು ಹಾರಿದಂತೆ ಭಾಸವಾಗುತ್ತದೆ. ಅದೊಂದು ರೀತಿಯಲ್ಲಿ ಸುಮಧುರವಾಗಿ ಕಾಣುತ್ತದೆ. ಒಲೆಯಿಂದ ಹೊರಗೆ ಬೆಂಕಿ ಬರುವಂತಿರಬೇಕು. ಕೊನೆಗೆ ಇದರ ಮೇಲೆ ಚೀಸ್ ತುರಿದು ಹಾಕುತ್ತಾರೆ. ಕೆಲವು ಸೆಕೆಂಡುಗಳ ನಂತರ ಕೊತ್ತಂಬರಿ ಸೊಪ್ಪು ಹಾಕುತ್ತಾರೆ. ಬಳಿಕ ಮೊದಲೇ ಮಾಡಿಕೊಂಡ ನಾಲ್ಕು ಭಾಗಗಳಲ್ಲಿ ಒಂದೊಂದೇ ಭಾಗ ತೆಗೆದು ರೋಲ್ ಮಾಡಿ ತಟ್ಟೆಯಲ್ಲಿ ಇಡುತ್ತಾರೆ. ಇದೆಲ್ಲಾ ಆದ ನಂತರ ಲಿಕ್ವಿಡ್ ಚೀಸ್ ಮತ್ತು ಚೀಸ್ ಅನ್ನು ತುರಿದು ದೋಸೆಯ ಮೇಲೆ ಹಾಕಿ ಅಲಂಕಾರ ಮಾಡುತ್ತಾರೆ. ಬಳಿಕ ಇದನ್ನು ಕಾಯಿ ಚಟ್ನಿ ಮತ್ತು ಸಾಂಬಾರ್ ಜೊತೆ ಸವಿಯಲು ಕೊಡುತ್ತಾರೆ.






ಈ ಫೈರ್ ದೋಸೆ ಮಾಡುವ ವಿಧಾನ ವಿಭಿನ್ನವಾಗಿ, ಕಲಾತ್ಮಕವಾಗಿ ಮತ್ತು ಆಕರ್ಷಕವಾಗಿದೆ. ಇದನ್ನು ತಿಂದವರು ರುಚಿಯು ತುಂಬಾ ಚೆನ್ನಾಗಿದೆ ಎಂದು ತಿಳಿಸಿದ್ದಾರೆ.


First published: