ಐದಂತಸ್ಥಿನ ಕಟ್ಟಡ ವೇರಿ ಮಗುವನ್ನು ರಕ್ಷಿಸಿದ ಆಧುನಿಕ ಸ್ಪೈಡರ್​ ಮ್ಯಾನ್​


Updated:May 29, 2018, 4:50 PM IST
ಐದಂತಸ್ಥಿನ ಕಟ್ಟಡ ವೇರಿ ಮಗುವನ್ನು ರಕ್ಷಿಸಿದ ಆಧುನಿಕ ಸ್ಪೈಡರ್​ ಮ್ಯಾನ್​
screengrab taken from a video post in FB by Habib bibou

Updated: May 29, 2018, 4:50 PM IST
ಪ್ಯಾರಿಸ್​: ಐದು ಅಂತಸ್ಥಿನ ಕಟ್ಟಡದಿಂದ ಬೀಳುತ್ತಿದ್ದ ಮಗುವನ್ನು ಸ್ಪೈಡರ್​ಮ್ಯಾನ್​ ರೀತಿಯಲ್ಲಿ ಕಟ್ಟಡವೇರಿ ಬದುಕಿಸಿದ ಮಲಿ ರಾಷ್ಟ್ರದ ಅಕ್ರಮ ವಲಸಿಗನ  ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈತನ ಸಾಧನೆಗೆ ಫ್ರಾಂನ್ಸ್​ ಅಧ್ಯಕ್ಷರೇ ಬೆರಗಾಗಿ ರಾಷ್ಟ್ರ ಪೌರತ್ವವನ್ನು ನೀಡಿದ ಘಟನೆ ನಡೆದಿದೆ.

ಭಾನುವಾರದಂದು ಪ್ಯಾರಿಸ್​ನ ಕಟ್ಟಡವೊಂದರ ಐದನೇ ಅಂತಸ್ಥಿನಲ್ಲಿ ಮಗುವೊಂದು ನೇತಾಡುತ್ತಿತ್ತು, ಇದನ್ನು ಕಂಡ ಸಾರ್ವಜನಿಕರು ಮಗುವಿನ ರಕ್ಷಣೆಗೆ ಬೊಬ್ಬೆಯಿಡುತ್ತಿದ್ದರು. ಈ ದೃಶ್ಯಾವಳಿಯನ್ನು ಕಂಡ 22 ವರ್ಷದ ಮಮೌಡು ಗ್ಯಾಸೆಮೋ ಯಾವುದೇ ಸಲಕರಣೆಯಿಲ್ಲದೆ ಕಟ್ಟಡವನ್ನು ಏರಿ ಮಗುವಿನ ರಕ್ಷಣೆ ಮಾಡಿದ್ದಾನೆ. ಈ ಘಟನೆಗೆ ಸಂಬಂಧಿಸಿದ ಹಲವಾರು ವೀಡಿಯೋಗಳು ಸಾಮಾಜಿಕ ಜಾಲತಣಾದಲ್ಲಿ ವೈರಲ್​ ಆಗಿತ್ತು.

 


Loading...ಲಿಬಿಯಾ ಮತ್ತು ಸಿರಿಯಾ ಉಗ್ರ ದಾಳಿ ಬಳಿಕ ಅಲ್ಲಿನ ನಿವಾಸಿಗಳೆಲ್ಲಾ ಫ್ರಾಂನ್ಸ್​ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ಅಕ್ರಮ ವಲಸೆ ನಡೆಸುತ್ತಿದ್ದಾರೆ. ಇದೇ ರೀತಿಯಲ್ಲಿ ಇಟಲಿ ಮಾರ್ಗ ಮೂಲಕ ಫ್ರಾಂನ್ಸ್​​ ಪ್ರವೇಶಿಸಿರುವ ಗ್ಯಾಸೆಮೋ ಕಳೆದ ಹಲವಾರು ದಿನಗಳಿಂದ ಫ್ರಾಂನ್ಸ್​ನಲ್ಲಿ ತಿರುಗಾಡುತ್ತಿದ್ದ. ಈ ಘಟನೆ ಬಳಿಕ ಅಧ್ಯಕ್ಷ ಎಮಾನ್ಯುವಲ್​ ಮ್ಯಾಕ್ರೋನ್​ನ್ನು ಭೇಟಿ ಮಾಡಿರುವ ಈತ ತನಗೆ ಫ್ರಾಂನ್ಸ್​ ಪೌರತ್ವ ನೀಡುವಂತೆ ಮನವಿ ಮಾಡಿದ್ದಾನೆ, ಇದಕ್ಕೆ ಅಧ್ಯಕ್ಷರ ಒಪ್ಪಿಗೆ ಕೂಡಾ ದೊರೆತಿದೆ.

 
First published:May 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...