Ice Cream: ಅಬ್ಬಬ್ಬಾ ಇದು 24 ಕ್ಯಾರೆಟ್ ಗೋಲ್ಡ್ ಐಸ್‌ಕ್ರೀಮ್ ಅಂತೆ... ಬೆಲೆ ಎಷ್ಟು ಗೊತ್ತಾ?

ಮಿನಿ ಮಿಡಾಸ್ ಎಂದು ಕರೆಯುವ ಈ ಐಸ್ಕ್ರೀಮ್ ಬೆಲೆ 500ರೂ ಆಗಿದ್ದು ಮಿಸ್ ಮಾಡದೆ ಕೆಫೆಗೆ ಭೇಟಿ ನೀಡಿ ಇದನ್ನು ತಿನ್ನಿರಿ ಎಂದು ತಮ್ಮ ಫಾಲೋವರ್ಸ್‌ಗೆ ಫುಡ್ ಬ್ಲಾಗರ್ ಅಭಿನವ್ ಜೇಸ್ವಾನಿ ಹೇಳಿದ್ದಾರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಹೈದರಾಬಾದ್ (Hyderabad Cafe) ಕೆಫೆಯೊಂದರಲ್ಲಿ ಹೊಸದೊಂದು ಐಸ್ ಕ್ರೀಮ್ (Ice Cream)‌ ಅನ್ನು ತಯಾರಿ ಮಾಡಿದ್ದಾರೆ. ಇದು ಅಂತಿಂತಹ ಐಸ್ ಕ್ರೀಮ್ ಅಲ್ಲ 24 ಕ್ಯಾರೆಟ್ ಗೋಲ್ಡ್ (24-Carat Gold) ಫಾಯಿಲ್‌ನಲ್ಲಿ ಸುತ್ತಿರುವ ಬಂಗಾರದಂತ ಐಸ್ ಕ್ರೀಮ್. ಏನಿದು ಗೋಲ್ಡ್ ಐಸ್ ಕ್ರೀಮ್ ಅಂತೀರಾ ಇದರ ಬಗ್ಗೆ ಫುಡ್ ಬ್ಲಾಗರ್ (Food blogger Abhinav) ಅಭಿನವ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಬನ್ನಿ ಅದನ್ನು ನೋಡೋಣ.

ಮಿನಿ ಮಿಡಾಸ್ ಎಂದು ಹೆಸರು
ಫುಡ್ ಬ್ಲಾಗರ್ ಅಭಿನವ್ ಜೇಸ್ವಾನಿ, ಹೈದರಾಬಾದ್‌ನ ಹ್ಯೂಬರ್ ಮತ್ತು ಹಾಲಿ ಕೆಫೆಯೊಂದರಲ್ಲಿ ಸಿಬ್ಬಂದಿಗಳು ತಯಾರಿಸುತ್ತಿರುವ ಗೋಲ್ಡ್ ಪ್ಲೇಟೆಡ್ ಐಸ್ ಕ್ರೀಮ್ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನೀವು ಈ ಐಸ್ ಕ್ರೀಮ್ ಅನ್ನು ಎಂದಾದರೂ ತಿಂದಿದ್ದೀರಾ? ಎಂದು ಬರೆದು ಕೊಂಡಿದ್ದಾರೆ. ಇಲ್ಲಿ ಬೆಳ್ಳಿಯ ಫಾಯಿಲ್ ಬದಲು ಐಸ್ ಕ್ರೀಮ್ ಮೇಲೆ ಬಂಗಾರದ ಹಾಳೆಯಿಂದ ಲೇಪನ ಮಾಡಿದ್ದಾರೆ. ಈ ಭಕ್ಷ್ಯಕ್ಕೆ ಮಿನಿ ಮಿಡಾಸ್ ಎಂದು ಹೆಸರಿಸಿದ್ದು ಇದರ ಬೆಲೆ ತೆರಿಗೆ ಸೇರಿ 500 ರೂ ಶುಲ್ಕವಾಗುತ್ತದೆ ಎಂದು ಅಭಿನವ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ನಮಗೆ ತಿಳಿದಿರುವ ಸಿಹಿತಿಂಡಿಗಳೆಂದರೆ ಕಾಜು ಕಟ್ಲಿ, ರಸಗುಲ್ಲಾ, ಗುಲಾಬ್ ಜಾಮೂನ್,ಬೇಸನ್ ಲಾಡು. ಇದರ ಹೊರತಾಗಿ ವಿಧವಿಧವಾದ ಬಾಯಲ್ಲಿ ನೀರೂರಿಸುವಂತಹ ಅನೇಕ ಭಾರತೀಯ ಸಿಹಿತಿಂಡಿಗಳು ಇವೆ.

ಇದನ್ನೂ ಓದಿ: Anar Kulfi: ಎಂಥಾ ಟೇಸ್ಟ್​ ಮಾರಾಯ್ರೆ ಈ 'ಅನಾರ್ ಕುಲ್ಫಿ'.. ಹೊಸ ರುಚಿಗೆ ನೆಟಿಜನ್‌ ಫಿದಾ..!

ಇತ್ತೀಚೆಗೆ ಈ ಫುಡ್ ಬ್ಲಾಗರ್ ಗಳಿಂದ ಹೊಸ ಹೊಸ ತಿನಿಸುಗಳು ನಮಗೆ ತಿಳಿಯುತ್ತಿರುವುದು ನಿಜಕ್ಕೂ ಉಪಯುಕ್ತ. ಹೊಸ ಹೊಸ ಜಾಗಗಳಿಗೆ ಹೋದಾಗ ಅಲ್ಲಿ ನಮಗೆ ಯಾವುದು ಜನಪ್ರಿಯ ತಿನಿಸು ಎಂಬುದನ್ನು ತಿಳಿಸಿಕೊಡಲು ಫುಡ್ ಬ್ಲಾಗರ್ ಗಳ ವಿಡಿಯೋ, ಪೋಸ್ಟ್ ಸಹಾಯ ಮಾಡುತ್ತದೆ. ಹೀಗೆ ಈ ಫುಡ್ ಬ್ಲಾಗರ್ ಗಳು ತಮ್ಮ ಫಾಲೋವರ್ಸ್‌ಗಳಿಗೆ ನಿರಾಶೆ ಮಾಡದೆ ಅವರನ್ನು ಬೇರೆ ರುಚಿಗಳನ್ನು ಟ್ರೈ ಮಾಡುವಂತೆ ಸಹಾಯ ಮಾಡುತ್ತಾರೆ.

ವಿಡಿಯೋ ನೋಡಿ..




ಐಸ್ಕ್ರೀಮ್ ಬೆಲೆ 500ರೂ
ಇತ್ತೀಚೆಗೆ, ಫುಡ್ ಬ್ಲಾಗರ್ ಅಭಿನವ್ ಜೇಸ್ವಾನಿ ಬೆಳ್ಳಿ ಹಾಳೆಯ ಬದಲಿಗೆ ಬಂಗಾರ ಲೇಪಿತ ಸಿಹಿಭಕ್ಷ್ಯದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಭಿನವ್ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ಗೆ ಭೇಟಿ ನೀಡಿದಾಗ ಅಲ್ಲಿಯ ಹ್ಯೂಬರ್ ಮತ್ತು ಹಾಲಿ ಕೆಫೆಯಲ್ಲಿ ಈ ಐಸ್‌ಕ್ರೀಮ್ ಅನ್ನು ಟೇಸ್ಟ್ ಮಾಡಿದ್ದಾರೆ. ನೀವು ಹೈದರಾಬಾದ್‌ನಲ್ಲಿದ್ದರೆ, ಇಲ್ಲಾ ನೀವು ಯಾವಾಗಲಾದರೂ ಇಲ್ಲಿಗೆ ಭೇಟಿ ನೀಡಿದರೆ ಈ ಗೋಲ್ಡನ್ ಐಸ್ ಕ್ರೀಮ್ ಅನ್ನು ಟೇಸ್ಟ್ ಮಾಡುವುದನ್ನು ಮರೆಯದಿರಿ ಅಂತ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಮಿನಿ ಮಿಡಾಸ್ ಎಂದು ಕರೆಯುವ ಈ ಐಸ್ಕ್ರೀಮ್ ಬೆಲೆ 500ರೂ ಆಗಿದ್ದು ಮಿಸ್ ಮಾಡದೆ ಕೆಫೆಗೆ ಭೇಟಿ ನೀಡಿ ಇದನ್ನು ತಿನ್ನಿರಿ ಎಂದು ತಮ್ಮ ಫಾಲೋವರ್ಸ್‌ಗೆ ಹೇಳಿದ್ದಾರೆ.

ಇದನ್ನೂ ಓದಿ: Ice cream: ಐಸ್ ಕ್ರೀಂ ಸವಿದು ನೋಡೊದೇ ಒಂದು ಕೆಲಸ! ಸಂಬಳದ ಬಗ್ಗೆ ಟೆನ್ಷನ್ ಬೇಡ!

ವಿಡಿಯೋ ಶೇರ್
ಅಭಿನವ್ ಶೇರ್ ಮಾಡಿರುವ ವಿಡಿಯೋದಲ್ಲಿ ಕೆಫೆ ಸಿಬ್ಬಂದಿ ಐಸ್ ಕ್ರೀಮ್ ಕೋನ್ ಮೇಲೆ ಕ್ರೀಂ ತುಂಬುತ್ತಿರುವ ದೃಶ್ಯವಿದೆ. ಚಾಕೊಲೇಟ್‌ಗಳು ಮತ್ತು ಇತರೆ ಪದಾರ್ಥಗಳು ತುಂಬಿರುವ ಹಲವಾರು ಲೇಯರ್‌ಗಳು ಈ ಐಸ್ ಕ್ರೀಮ್ ನಲ್ಲಿವೆ. ನಂತರ ಕೊನೆಯದಾಗಿ 24 ಕ್ಯಾರೆಟ್ ಗೋಲ್ಡ್ ಹಾಳೆಯನ್ನು ಐಸ್ ಕ್ರೀಮ್ ಮೇಲೆ ಹರಡಿ ಗ್ರಾಹಕರಿಗೆ ನೀಡುತ್ತಾರೆ. ಅಭಿನವ್ ಶೇರ್ ಮಾಡಿರುವ ವಿಡಿಯೋ ನೋಡಿದರೆ ಬಾಯಲ್ಲಿ ನೀರೂರುತ್ತದೆ. ಅಭಿನವ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಇದುವರೆಗೆ 3.1 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ನೂರಾರು ಕಾಮೆಂಟ್‌ಗಳು ಬಂದಿದ್ದು ಚಿನ್ನದ ಹಾಳೆಯನ್ನು ಲೇವಡಿ ಮಾಡಿದರೆ, ಇನ್ನು ಕೆಲವರು ಒಂದು ಸ್ಕೂಪ್ ರುಚಿ ನೋಡುವ ಬಯಕೆ ವ್ಯಕ್ತಪಡಿಸಿದ್ದಾರೆ.
Published by:vanithasanjevani vanithasanjevani
First published: