ಸಾಮಾನ್ಯವಾಗಿ ಯಾರಿಗಾದರೂ ಆಸ್ಪತ್ರೆಯಲ್ಲಿನ ಚಿಕಿತ್ಸೆ ನೀಡುವ ಕೊಠಡಿಗೆ ಮತ್ತು ಆಪರೇಷನ್ ಥಿಯೇಟರ್ ಗೆ ಹೋಗಬೇಕು ಅಂತ ಹೇಳಿದರೆ ಸಾಕು ಹೃದಯ (Heart) ಇನ್ನಷ್ಟು ಜೋರಾಗಿ ಬಡಿದುಕೊಳ್ಳಲು ಶುರುವಾಗುತ್ತದೆ. ಆಪರೇಷನ್ ಥಿಯೇಟರ್ ಗೆ ಕರೆದುಕೊಂಡು ಹೋಗುವಾಗ ಕೈ ಕಾಲಿನಲ್ಲಿ ನಡುಕ ಹುಟ್ಟುತ್ತದೆ. ಇಂಜೆಕ್ಷನ್ ಅನ್ನು ನೋಡಿಯೇ ಅಳುವ ಮಕ್ಕಳಿಗೆತಮಗೆ ಕ್ಯಾನ್ಸರ್ ನಂತಹ (Cancer) ಭಯಾನಕ ರೋಗವಿದೆ, ಅದಕ್ಕೆ ಚಿಕಿತ್ಸೆ ನೀಡಲು ಚಿಕಿತ್ಸೆ ಕೊಠಡಿಗೆ ಕರೆದುಕೊಂಡು ಹೋಗುತ್ತಾರೆ ಅಂತ ಹೇಳಿದರೆ ಭಯ ಪಟ್ಟುಕೊಂಡು ಅಳುವುದಕ್ಕೆ ಶುರು ಮಾಡುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ವೈದ್ಯರ ಬಳಿಗೆ ಆಸ್ಪತ್ರೆಗೆ (Hospital) ಹೋಗುವುದೆ ಎಲ್ಲಾ ವಯಸ್ಸಿನ ಜನರಿಗೆ ಸ್ವಲ್ಪ ಕಷ್ಟಕರವಾಗಿಯೇ ಇರುತ್ತದೆ. ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗಲು ಈ ಸ್ಟ್ರೆಚರ್ ಗಳನ್ನು ಬಳಸುತ್ತಾರೆ. ಆದರೆ ಮಕ್ಕಳು ಸಾಮಾನ್ಯವಾಗಿ ಅದರ ಮೇಲೆ ಮಲಗಲು ಹಿಂಜರಿಯುತ್ತವೆ ಅಂತ ಹೇಳಬಹುದು. ಈ ರೀತಿಯ ಹಿಂಜರಿಕೆ ಮತ್ತು ಭಯವನ್ನು ಹೋಗಲಾಡಿಸಲು ಟರ್ಕಿಯ ಆಸ್ಪತ್ರೆಯೊಂದು ಸೃಜನಶೀಲವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಚಿಕಿತ್ಸೆಗೆ ಎಲೆಕ್ಟ್ರಿಕ್ ಕಾರು:
ಟರ್ಕಿಯ ಸೆಂಟ್ರಲ್ ಕೈಸೇರಿ ಪ್ರಾಂತ್ಯದ ಹೃದಯಭಾಗದಲ್ಲಿರುವ ಪಿಲೊಂಥ್ರೋಪಿಸ್ಟ್ಸ್ ಆಂಡ್ ಅಸೋಸಿಯೇಷನ್ ಅಗೇನ್ಸ್ಟ್ ಕ್ಯಾನ್ಸರ್ ಸಹಯೋಗದೊಂದಿಗೆ ನಿರ್ಮಿಸಲಾದ ಆಂಕೊಲಾಜಿ ಆಸ್ಪತ್ರೆ ಮಕ್ಕಳಿಗೆ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಹೊಸ ಮತ್ತು ರೋಮಾಂಚಕಾರಿ ಮಾರ್ಗವನ್ನು ಒದಗಿಸುತ್ತಿದೆ. ಕ್ಯಾನ್ಸರ್ ಮತ್ತು ಅಸ್ಥಿಮಜ್ಜೆ ಕಸಿ ಅಗತ್ಯವಿರುವ ಮಕ್ಕಳಿಗೆ ಸೇವೆ ಸಲ್ಲಿಸುವ ಈ ಆಸ್ಪತ್ರೆಯು ಅವರಿಗೆ ಚಿಕಿತ್ಸಾ ಕೊಠಡಿಗೆ ಜಾಲಿಯಾಗಿ ಹೋಗಲು ಎಲೆಕ್ಟ್ರಿಕ್ ಕಾರು ಸವಾರಿಯನ್ನು ನೀಡುತ್ತಿದೆ.
(VIDEO) Turkish hospital gives children electric cars to drive to cancer treatment
At a hospital in Turkish city of Kayseri, children with cancer can get on mini battery-operated cars, instead of a stretcher, to go to their treatment room pic.twitter.com/0GjmsKeTac
— ANADOLU AGENCY (@anadoluagency) February 1, 2023
ಇದನ್ನೂ ಓದಿ: Organ Donation: ಅಂಗಾಂಗ ದಾನ ಮಾಡಿದ ಕೈದಿಗಳಿಗೆ ಜೈಲು ಶಿಕ್ಷೆ ಕಡಿತ, ಹೊಸ ಮಸೂದೆ ಮಂಡನೆ
ವೀಡಿಯೋ ಪೋಸ್ಟ್ ನ ಶೀರ್ಷಿಕೆ:
56 ಸೆಕೆಂಡಿನ ವೀಡಿಯೋವನ್ನು ಪೋಸ್ಟ್ ಮಾಡಿದ ಟ್ವೀಟ್ ನಲ್ಲಿ "ಟರ್ಕಿಯ ಆಸ್ಪತ್ರೆ ಮಕ್ಕಳಿಗೆ ಕ್ಯಾನ್ಸರ್ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಎಲೆಕ್ಟ್ರಿಕ್ ಕಾರುಗಳನ್ನು ಬಳಸುತ್ತದೆ. ಟರ್ಕಿಯ ಕೈಸೇರಿ ನಗರದ ಆಸ್ಪತ್ರೆಯಲ್ಲಿ, ಕ್ಯಾನ್ಸರ್ ಪೀಡಿತ ಮಕ್ಕಳು ತಮ್ಮ ಚಿಕಿತ್ಸಾ ಕೊಠಡಿಗೆ ಹೋಗಲು ಸ್ಟ್ರೆಚರ್ ಬದಲು ಮಿನಿ ಬ್ಯಾಟರಿ ಚಾಲಿತ ಕಾರುಗಳಲ್ಲಿ ಹೋಗಬಹುದು.
ಇಷ್ಟವಿಲ್ಲದೆ ಚಿಕಿತ್ಸೆಗೆ ಹೋಗುತ್ತಿದ್ದ ಮತ್ತು ಆಗಾಗ್ಗೆ ಅಳುತ್ತಿದ್ದ ಮಕ್ಕಳು ಈಗ ರೈಡ್-ಆನ್ ಕಾರುಗಳಿಂದಾಗಿ ಅದೇ ಪ್ರಯಾಣದಲ್ಲಿ ತುಂಬಾನೇ ತಮಾಷೆಯಾಗಿ ಕಾಣುತ್ತಾರೆ ಎಂದು ವೈದ್ಯರು ಹೇಳಿದರು. ಈ ವರ್ಣರಂಜಿತ ಮತ್ತು ಮುದ್ದಾದ ಆಟಿಕೆಗಳಿಗೆ ಸಾಂಪ್ರದಾಯಿಕ ಸ್ಟ್ರೆಚರ್ ಗಳನ್ನು ಬದಲಾಯಿಸುವುದು ಮಕ್ಕಳ ಮೇಲೆ ಮೋಡಿ ಮಾಡಿದೆ ಅಂತಾನೆ ಹೇಳಬಹುದು. ಈ ವೀಡಿಯೋಗೆ ಈಗಾಗಲೇ 650ಕ್ಕೂ ಹೆಚ್ಚು ವೀಕ್ಷಣೆಗಳು ಬಂದಿವೆ. ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆಗೆ ಬರುವಾಗ ಅವುಗಳು ಭಯದಿಂದ ಅಲ್ಲದೆ ಸ್ವಲ್ಪ ಮೋಜಿನಿಂದ ಮತ್ತು ಖುಷಿಯಿಂದ ಬರಲು ಈ ರೀತಿಯ ವಿನೂತನ ಸೌಲಭ್ಯಗಳ ಅವಶ್ಯಕತೆ ತುಂಬಾನೇ ಇದೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ