ನಮ್ಮ ಗ್ರಹದಲ್ಲಿ ಸೊಳ್ಳೆಗಳಿಗಿಂತ ಹೆಚ್ಚು ಕೆರಳಿಸುವ ಮತ್ತು ಹೆಚ್ಚು ದ್ವೇಷಿಸುವ ಜೀವಿಗಳು ಬೇರೆ ಇಲ್ಲ ಎಂದು ಹೇಳಬಹುದು. ಇದನ್ನು ನೀವೂ ಒಪ್ಪುತ್ತೀರ ಅಲ್ಲವಾ..? ಮಲೇರಿಯಾ, ಡೆಂಗ್ಯೂ ಜ್ವರ, ಚಿಕುನ್ ಗುನ್ಯಾ ಮತ್ತು ಝೀಕಾ ವೈರಸ್ನಂತಹ ಕಾಯಿಲೆಗಳನ್ನು ಹೊತ್ತು ತರುವ ಸೊಳ್ಳೆಗಳು ವರ್ಷಕ್ಕೆ 700,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣರಾಗಿದ್ದಾರೆ. ಪ್ರತಿದಿನ, ಝೇಂಕರಿಸುವ ಶಬ್ದ, ನಮಗೆ ಕಚ್ಚುವ ಮೂಲಕ ಕಿರಿಕಿರಿಯನ್ನೂ ಉಂಟು ಮಾಡುತ್ತವೆ. ಸೊಳ್ಳೆಗಳನ್ನು ನಾಶ ಮಾಡಲು ಮಾರುಕಟ್ಟೆಯಲ್ಲಿ ಅನೇಕ ಲೋಷನ್ಗಳು, ದ್ರವೌಷಧಗಳು ಮತ್ತು ನಿವಾರಕಗಳು ಲಭ್ಯವಿದ್ದರೂ, ಇವುಗಳ ಪೈಕಿ ಎಲ್ಲವೂ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಈಗ್ಯಾಕೆ ಸೊಳ್ಳೆ ವಿಷಯ ಅಂತೀರಾ.. ಇತ್ತೀಚೆಗೆ ಟ್ವಿಟ್ಟರ್ನಲ್ಲಿ ಸೊಳ್ಳೆಗಳನ್ನು ತೊಡೆದುಹಾಕುವ ಹೊಸ ಮಾರ್ಗಗಳನ್ನು ಹಂಚಿಕೊಂಡಿದ್ದಾರೆ. ಅದು, ಉಪ್ಪು, ಟೆಕೀಲಾನಿಂದ..! ಅದ್ಹೇಗೆ ಅಂತೀರಾ..? ಕೆಳಗೆ ಓದಿ ನಿಮಗೇ ಗೊತ್ತಾಗುತ್ತೆ..!
Mosquito trap.
The mosquito lands on the salt, thinking it's sugar. They get thirsty for water, but the cap has tequila in it.
The mosquito gets drunk, trips on the stick and bangs its head on the rock.#IAmGoingToBeRichWithThisPatent pic.twitter.com/wQfAXlbB3j
— Judianna (@Judianna) June 25, 2021
ಜುಡಿಯಾನ್ನಾ ಅವರ ಉಲ್ಲಾಸಭರಿತ ಈ ಟ್ವೀಟ್ ಅನ್ನು ಇಲ್ಲಿ ನೋಡಿ..
''ದಾಖಲೆಗಾಗಿ - ಈ ಜೋಕ್ ಹಲವು ವರ್ಷಗಳಿಂದಲೂ ಇದೆ. ಆದರೆ, ಅನೇಕ ಜನರು ಅದನ್ನು ಆನಂದಿಸುತ್ತಿದ್ದಾರೆ ಮತ್ತು ಹಂಚಿಕೊಳ್ಳುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ. ನಮಗೆಲ್ಲರಿಗೂ ನಗು ಬೇಕು, ಸರಿಯೇ..? ಎಂದು ಜುಡಿಯಾನ್ನಾ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಜುಡಿಯಾನ್ನಾ ಅವರ ಸೊಳ್ಳೆ ಸಾಯಿಸುವ ಈ ಸಖತ್ ಐಡಿಯಾಗೆ ಕೆಲವು ಪ್ರತಿಕ್ರಿಯೆಗಳು ಹೇಗಿದೆ.. ನೀವೇ ನೋಡಿ..
ಅದು ನಮಗೆ ತುಂಬಾ ದುಬಾರಿಯಾಗಿದೆ! ನಾವು ಕುಡಿಯಲು ಆಲ್ಕೋಹಾಲ್ ಪಡೆಯಲು ಸಾಧ್ಯವಿಲ್ಲ. ಇನ್ನು, ನಾನು ಎಂದಿಗೂ ನನ್ನ ಮದ್ಯವನ್ನು ಸೊಳ್ಳೆಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಪ್ಯಾಸಿಫಿಸ್ಟ್ ಸುಲ್ಹಿ ಎಂಬುವರು ತಮಾಷೆಯಾಗಿ ಟ್ವೀಟ್ ಮೂಲಕ ಜುಡಿಯಾನ್ನಾ ಅವರ ಸೊಳ್ಳೆ ಹೊಡೆಯುವ ಐಡಿಯಾಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆಸಕ್ತಿದಾಯಕ ವೈಜ್ಞಾನಿಕ ಪ್ರಯೋಗ. ಅದು ಕೆಲಸ ಮಾಡದಿದ್ದರೆ, ನೀವು ಇನ್ನೂ ವೋಡ್ಕಾವನ್ನು ಹೊಂದಿದ್ದೀರಿ. ವಿನ್, ವಿನ್ ಎಂದೂ ಉಲ್ಲಾಸಕರವಾಗಿ ಮೈಕ್ ನಿಲುಮ್ ಎಂಬುವರು ಟ್ವೀಟ್ ಮಾಡಿದ್ದಾರೆ.
ನೀವೂ ಸಹ ಈ ಸೊಳ್ಳೆ ಸಾಯಿಸುವ ಐಡಿಯಾ ಟ್ರೈ ಮಾಡ್ತೀರಾ..?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ