ಬಾಲಕಿಯ ಜಡೆಯಲ್ಲಿ ಮೂಡಿತು ‘ಲಿಟ್ಲ್​ ಮೆರ್ಮೈಡ್‘; ಸಾಮಾಜಿಕ ತಾಣಗಳಲ್ಲಿ ಲೈಕ್ಸ್​ಗಳ ಸುರಿಮಳೆ

ಫ್ಯಾಷನ್​ ಲೋಕ ಬದಲಾದಂತೆ ಎಲ್ಲರೂ ಹೊಸತನಕ್ಕೆ ಹೆಚ್ಚು ಒತ್ತುನೀಡುತ್ತೇವೆ. ಅಂದವಾಗಿ ಕಾಣಿಸಿಕೊಳ್ಳಲು ಚಂದದ ಬಟ್ಟೆ, ಸೌಂದರ್ಯ ವರ್ಧಕ, ವಿಶುಷ್ಠವಾದ ಜಡೆ ಮುಡಿಯುವುದು ಸಾಮಾನ್ಯ. ಆದರೆ ಆ್ಯಪ್ರೀಲ್ ಕ್ಯಾಸ್ಟಿಲ್ಲೊ​ ಎಂಬಾಕೆ ತನ್ನ 4 ವರ್ಷದ ಮಗಳ ಕೂದಲನ್ನು ವಿಭಿನ್ನವಾಗಿ ಜಡೆ ಕಟ್ಟಿ ಸುದ್ದಿಯಲ್ಲಿದ್ದಾಳೆ.

Harshith AS | news18
Updated:March 25, 2019, 3:36 PM IST
ಬಾಲಕಿಯ ಜಡೆಯಲ್ಲಿ ಮೂಡಿತು ‘ಲಿಟ್ಲ್​ ಮೆರ್ಮೈಡ್‘; ಸಾಮಾಜಿಕ ತಾಣಗಳಲ್ಲಿ ಲೈಕ್ಸ್​ಗಳ ಸುರಿಮಳೆ
ಲಿಟ್ಲ್​ ಮೆರ್ಮೈಡ್
  • News18
  • Last Updated: March 25, 2019, 3:36 PM IST
  • Share this:
ಮಹಿಳೆಯರು ಸೌಂದರ್ಯ ಕಾಪಾಡಿಕೊಳ್ಳುವುದರಲ್ಲಿ ಹೆಚ್ಚಿನ ಕಾಳಜಿವಹಿಸುತ್ತಾರೆ. ಅದರಲ್ಲೂ ಕೂದಲಿನ ವಿಷಯಕ್ಕೆ ಬಂದರೆ ಹುಡುಗರ ದೃಷ್ಠಿಹಾಯುವಂತೆ ವಿಭಿನ್ನವಾದ ಶೈಲಿಯಲ್ಲಿ ಜಡೆ ಕಟ್ಟುತ್ತಾರೆ.

ಫ್ಯಾಷನ್​ ಲೋಕ ಬದಲಾದಂತೆ ಎಲ್ಲರೂ ಹೊಸತನಕ್ಕೆ ಹೆಚ್ಚು ಒತ್ತುನೀಡುತ್ತೇವೆ. ಅಂದವಾಗಿ ಕಾಣಿಸಿಕೊಳ್ಳಲು ಚಂದದ ಬಟ್ಟೆ, ಸೌಂದರ್ಯ ವರ್ಧಕ, ವಿಶುಷ್ಠವಾದ ಜಡೆ ಮುಡಿಯುವುದು ಸಾಮಾನ್ಯ. ಆದರೆ ಆ್ಯಪ್ರೀಲ್ ಕ್ಯಾಸ್ಟಿಲ್ಲೊ​ ಎಂಬಾಕೆ ತನ್ನ 4 ವರ್ಷದ ಮಗಳ ಕೂದಲನ್ನು ವಿಭಿನ್ನವಾಗಿ ಜಡೆ ಕಟ್ಟಿ ಸುದ್ದಿಯಲ್ಲಿದ್ದಾಳೆ.ಆ್ಯಪ್ರೀಲ್ ಕ್ಯಾಸ್ಟಿಲ್ಲೊ ಮಗಳು ಎರ್​ಯೆಲ್​ ರೊಮೆರೊ ಕಲಿಯುತ್ತಿರುವ ಶಾಲೆಯಲ್ಲಿ ‘ಹೇರ್​ ಡೇ‘ ಎಂಬ ಸ್ಪರ್ಧೆ ಏರ್ಪಡಿಸಿದ್ದರು. ಇದಕ್ಕಾಗಿ ಆ್ಯಪ್ರಿಲ್​ ತನ್ನ ಮಗಳಿಗೆ ವಿಭಿನ್ನ ಶೈಲಿಯಲ್ಲಿ ‘ಲಿಟ್ಲ್​ ಮೆರ್ಮೈಡ್​‘ ಹೇರ್​ ಸ್ಟೈಲ್​ ಮಾಡಿದ್ದಾಳೆ. ಇವರಿಗೆ ಈ ಹೇರ್​​ ಸ್ಟೈಲ್​​​  ಸಾಮಾಜಿಕ ತಾಣ  ಹುಡುಕಾಡಿದಾಗ ಕಂಡುಬಂತಂತೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಚಾಕೊಲೇಟ್ ತಿಂದು ಕ್ಷಮೆಯಾಚಿಸಿದ ಪ್ರಧಾನಿ..!

 
View this post on Instagram
 

Crazy hair day at school!! #2019#disneyworld#littlemermaid


A post shared by April Castillo (@april_castillo19) on
ಹೀಗೆ ಇಂಟರ್​ನೆಟ್​ನಲ್ಲಿ ಸಿಕ್ಕ ಹೇರ್​ ಸ್ಟೈಲ್​ ಚಿತ್ರಣವನ್ನು​ ನೋಡಿಕೊಂಡು​ ತನ್ನ ಮಗಳ ಕೂದಲನ್ನು ಕೇವಲ 20 ನಿಮಿಷಗಳಲ್ಲಿ ‘ಲಿಟ್ಲ್​ ಮೆರ್ಮೈಡ್‘​ ಶೈಲಿಯನ್ನು ಮಾಡಿದ್ದಾರೆ.

 ಆ್ಯಪ್ರೀಲ್​ ತನ್ನ ಮಗಳ ತಲೆ ಕೂದಲಿನಲ್ಲಿ ಮಾಡಿದ ‘ಲಿಟ್ಲ್​ ಮೆರ್ಮೈಡ್​‘ ಶೈಲಿ ಇದೀಗ ಸಾಮಾಜಿಕ ತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ಜೊತೆಗೆ ವೀಕ್ಷಕರಿಂದ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.

First published: March 25, 2019, 3:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading