Neighbourhood: ಜರ್ಮನಿ ದೇಶದ ಈ ನಗರದಲ್ಲಿ ವಸತಿ ಕಟ್ಟಡಗಳು ಯಾವ ಪದವನ್ನು ಸಾರಿ ಸಾರಿ ಹೇಳುತ್ತಿವೆ ನೋಡಿ

Neighbourhood : ವಸತಿ ಕಟ್ಟಡವು "ಓ" ಆಕಾರವನ್ನು ಹೊಂದಿದೆ. ಆದ್ದರಿಂದ ಇದನ್ನು "ಓ" ಎಂದು ಹೆಸರಿಸಲಾಗಿದೆ. ಅದರ ಅಪಾರ್ಟ್ಮೆಂಟ್ ಗಳು ನವೆಂಬರ್ 2021 ರಲ್ಲಿ ಮಾರಾಟವಾದವು ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ದೊಡ್ಡ ದೊಡ್ಡ ದೇಶಗಳಲ್ಲಿರುವ ನಗರಗಳಲ್ಲಿ ಅಪಾರ್ಟ್ಮೆಂಟ್ ಗಳನ್ನು(Apartment) ಅಲ್ಲಿನ ಜನರನ್ನು ತನ್ನೆಡೆಗೆ ಸೆಳೆಯಲು ವಿಭಿನ್ನವಾದ ವಿನ್ಯಾಸಗಳಿಂದ ಕಟ್ಟುತ್ತಾರೆ. ಈಗ ಜರ್ಮನಿಯ(Germany) ಮನ್‌ಹೈಮ್ ನಗರವು ತನ್ನ ಫ್ರಾಂಕ್ಲಿನ್ ಮಿಟ್(Franklin Mitte) ಜಿಲ್ಲೆಯನ್ನು ಮೂಲ ನಗರವಾಗಿ ಪರಿವರ್ತಿಸುತ್ತಿದ್ದು, ಮೊದಲಿಗೆ ಯುಎಸ್ ಮಿಲಿಟರಿ ಬ್ಯಾರಕ್‌ಗಳಿದ್ದ ಈ ಪ್ರದೇಶವು ಈಗ ನಾಲ್ಕು ಅಕ್ಷರಾಕಾರದ ವಸತಿ ಕಟ್ಟಡಗಳಿಗೆ ನೆಲೆಯಾಗಿದೆ.

ಈ ಪ್ರದೇಶದಲ್ಲಿ ತಲೆಯೆತ್ತುತ್ತಿರುವ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡ ವಸತಿ ಕಟ್ಟಡಗಳು ನಾಲ್ಕು ಅಕ್ಷರಗಳ ಆಕಾರದಲ್ಲಿ ವಿನ್ಯಾಸ ಮಾಡಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಈ ನಾಲ್ಕು ಅಪಾರ್ಟ್‌ಮೆಂಟ್‌ಗಳ ಅಕ್ಷರಗಳು ಸೇರಿದರೆ "ಹೋಮ್" ಎಂಬ ಪದವನ್ನು ರೂಪಿಸುತ್ತದೆ. ಮನ್‌ಹೈಮ್‌ನ ಫ್ರಾಂಕ್ಲಿನ್ ಮಿಟ್ ಜಿಲ್ಲೆಯಲ್ಲಿ ಅಸಾಮಾನ್ಯ ಕಟ್ಟಡ ನಿರ್ಮಾಣ ಹಂತದಲ್ಲಿದೆ.

ವಸತಿ ಕಟ್ಟಡವು "ಓ" ಆಕಾರವನ್ನು ಹೊಂದಿದೆ. ಆದ್ದರಿಂದ ಇದನ್ನು "ಓ" ಎಂದು ಹೆಸರಿಸಲಾಗಿದೆ. ಅದರ ಅಪಾರ್ಟ್ಮೆಂಟ್ ಗಳು ನವೆಂಬರ್ 2021 ರಲ್ಲಿ ಮಾರಾಟವಾದವು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರೋಬೋ ಮುಖಛಾಯೆಯ ಹಕ್ಕಿಗಾಗಿ 1.5 ಕೋಟಿ ಆಫರ್‌ ಕೊಟ್ಟ ಭೂಪ

ಒಟ್ಟು 120 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ 15 ಅಂತಸ್ತಿನ ಕಟ್ಟಡವು ದೊಡ್ಡ ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದಾಗಿದೆ. "ಒ" ಆಕಾರದಲ್ಲಿ ಮಧ್ಯದಲ್ಲಿ ವಿಶಿಷ್ಟ ಸಾರ್ವಜನಿಕ ಟೆರೇಸ್ ಅನ್ನು ಹೊಂದಿದೆ. "ನೆರೆಹೊರೆಯ ಲಾಂಜ್" ಎಂದು ಕಲ್ಪಿಸಿಕೊಳ್ಳಲಾದ ಈ ಸ್ಥಳವನ್ನು ಕಟ್ಟಡದ ನಿವಾಸಿಗಳಿಗೆ ಮಾತ್ರವಲ್ಲ, ಸಮುದಾಯಕ್ಕೆ ಪ್ರವೇಶಿಸಲು ವಿನ್ಯಾಸಗೊಳಿಸಲಾಗಿದೆ.

ಈ "ಓ" ಫ್ರಾಂಕ್ಲಿನ್ ಮಿಟ್ ನಲ್ಲಿ ಯೋಜಿಸಲಾದ ನಾಲ್ಕು ಕಟ್ಟಡಗಳಲ್ಲಿ ಒಂದಾಗಿದೆ. ಜೊತೆಗೆ "ಎಂ", ಇದಕ್ಕಾಗಿ ಯೋಜನೆಗಳನ್ನು ಸಹ ಬಹಿರಂಗಪಡಿಸಲಾಗಿದೆ. "ಎಚ್" ಮತ್ತು "ಇ" ಗಳೊಂದಿಗೆ ಸಂಯೋಜಿಸಿದಾಗ, ಅವರು ಒಟ್ಟಿಗೆ "ಹೋಮ್" ಎಂಬ ಪದವನ್ನು ಅಲ್ಲಿ ನೋಡಲು ಸಿಗುವುದು, ಇದನ್ನು ವಾಸ್ತುಶಿಲ್ಪ ಸಂಸ್ಥೆಯು "ವಸತಿ ಗೋಪುರಗಳ ಕುಟುಂಬ" ಎಂದು ಹೇಳುತ್ತದೆ.

ಯುಎಸ್ ಮಿಲಿಟರಿ ನೆಲೆಯನ್ನು ಮುಚ್ಚಿದ ನಂತರ ಫ್ರಾಂಕ್ಲಿನ್ ಮಿಟ್ ಪ್ರದೇಶವನ್ನು ಪುನರುಜ್ಜೀವನಗೊಳಿಸಲು ವಿನ್ಯಾಸಗೊಳಿಸಲಾದ ಈ ಯೋಜನೆಯ ಹಿಂದೆ ಡಚ್ ವಾಸ್ತುಶಿಲ್ಪ ಸಂಸ್ಥೆ ಎಂವಿಆರ್ ಡಿವಿ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ನಾಲ್ಕು ರಚನಾತ್ಮಕವಾಗಿ ಅನನ್ಯ ಕಟ್ಟಡಗಳ ಜೊತೆಗೆ, ಈ ಯೋಜನೆಯು ಹಸಿರು ಬೆಟ್ಟ ಮತ್ತು ಸಮುದಾಯ ಪ್ರದೇಶವನ್ನು ಒಳಗೊಂಡಿರುತ್ತದೆ. ಇವೆಲ್ಲವೂ ಮಿಲಿಟರಿ ಬ್ಯಾರಕ್ ಗಳ ಕಟ್ಟಡಗಳನ್ನು ಮರುಬಳಕೆ ಮಾಡುತ್ತಿವೆ.

"ಈ ಕಟ್ಟಡಗಳ ಹಿಂದೆ ಇರುವ ಬೆಟ್ಟಗಳ ಮಧ್ಯೆದಲ್ಲಿಯೇ ರಸ್ತೆಗಳನ್ನು ಮಾಡಿ ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿ ಕೊಡಲಾಗುತ್ತದೆ ಎಂದು ಹೇಳಲಾಗುತ್ತಿದೆ.” ಇನ್ನೂ “ಎಚ್" ಅಕ್ಷರದ ಆಕಾರದ ವಸತಿ ಕಟ್ಟಡದ ನಿರ್ಮಾಣ ಕೆಲಸವನ್ನು ಮತ್ತೊಂದು ವಾಸ್ತುಶಿಲ್ಪ ಸಂಸ್ಥೆಗೆ ನೀಡಲಾಗಿದ್ದು, 2022 ರ ವರ್ಷದ ಕೊನೆಯಲ್ಲಿ ಕೆಲಸ ಮುಗಿಯಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ನೆಟ್ಟಿಗರನ್ನು ಒಂದು ಕ್ಷಣ ದಿಗ್ಭ್ರಮೆಗೊಳಿಸಿದ ಕರಡಿ ವಿಡಿಯೋ

ಮನ್‌ಹೈಮ್ ನ ಫ್ರಾಂಕ್ಲಿನ್ ಮಿಟ್ ಒಂದು ಪರಿಸರದ ಮಧ್ಯೆ ಒಂದು ಪುಟ್ಟ ನಗರ ಪರಿವರ್ತನೆಗೆ ಒಂದು ಪ್ರಮುಖ ಉದಾಹರಣೆಯಾಗಿದೆ. ಕೆಲವು ನಗರಗಳು ಈಗಾಗಲೇ ಶುದ್ಧವಾದ ಪರಿಸರದ ಕೊರತೆಯಿಂದ ಸಾಕಷ್ಟು ಗಿಡ ಮರಗಳಿಂದ ತುಂಬಿರುವ ಪರಿಸರದಲ್ಲಿ ಇಂತಹ ವಸತಿ ಕಟ್ಟಡಗಳನ್ನು ಕಟ್ಟುವ ಮೂಲಕ ನಗರಗಳನ್ನು ನವೀಕರಿಸಲು ಪ್ರಯತ್ನಿಸುತ್ತಿವೆ.
Published by:Sandhya M
First published: