ಪ್ರಪಂಚದಾದ್ಯಂತ ಬೇರೆ ಬೇರೆ ರೀತಿಯ ಉದ್ಯಾನವನಗಳಿವೆ (Garden). ವನ್ಯಜೀವಿಗಳ ಜೊತೆಗೆ ಕೇವಲ ಸಸ್ಯಗಳಿರುವ ಉದ್ಯಾವನಗಳೂ ಸಹ ಇವೆ. ಒಂದೊಂದು ಸ್ಥಳದಲ್ಲಿ ಒಂದೊಂದು ಉದ್ಯಾನವನವನ್ನು ನಾವು ಕಾಣಬಹುದು. ಸಸ್ಯಗಳಿರುವ ಗಾರ್ಡನ್ ಗೆ ಭೇಟಿ ನೀಡಿದ್ದಲ್ಲಿ ನಮಗೆ ಚೆಂದದ ಹೂಗಳಿರುವ ಗಿಡಗಳು (Flower Plants), ಅಲಂಕಾರಿಕ ಗಿಡಗಳು, ಮರಗಳು ಹೀಗೆ ಬಗೆಬಗೆಯ ಸಸ್ಯ ಸಂಪತ್ತು ಅನಾವರಣವಾಗುತ್ತದೆ. ಆದರೆ ಇಂಗ್ಲೆಂಡ್ ನಲ್ಲಿರುವ (England) ಈ ಉದ್ಯಾನವನ ಮಾತ್ರ ಸಖತ್ ಡೇಂಜರ್ (Danger) ಅಂತೆ. ಹೌದು, ಇಂಗ್ಲೆಂಡ್ ನಲ್ಲಿರುವ ಈ ಪಾರ್ಕ್ ನಲ್ಲಿರುವ ಕೆಲವು ಹೂ, ಗಿಡಗಳನ್ನು ಮೂಸಲು ಹೋದರೆ ನಿಮ್ಮನ್ನು ಆ ದೇವರೇ ಕಾಪಾಡ ಬೇಕು, ಅಷ್ಟರ ಮಟ್ಟಿಗೆ ಇಲ್ಲಿನ ಸಸ್ಯಗಳು ವಿಷಕಾರುತ್ತವೆ. ಯಾವುದು ಆ ಪಾರ್ಕ್ ಅನ್ನೋ ನಿಮ್ಮ ಕೂತೂಹಲಕ್ಕೆ ಇಲ್ಲಿದೆ ಉತ್ತರ.
ಹೇಳಿ ಕೇಳಿ ಈ ಪಾರ್ಕ್ ನ ಹೆಸರು ಕೂಡ ‘ದಿ ಪಾಯಿಸನ್ ಗಾರ್ಡನ್’. ವಿಷದ ಉದ್ಯಾನವನ ಎಂದೇ ಕರೆಯಲ್ಪಡುವ ಪ್ರಪಂಚದ "ಮಾರಣಾಂತಿಕ" ಉದ್ಯಾನವನ ಇದಾಗಿದೆ. ಇಂಗ್ಲೆಂಡ್ ನ ನಾರ್ತಂಬರ್‌ಲ್ಯಾಂಡ್‌ನ ಅಲ್ನ್‌ವಿಕ್‌ನಲ್ಲಿ ಇರುವ ಈ ಸುಂದರ ಹಸಿರು ತೋಟವನ್ನು ನೋಡಿದರೆ ಅಬ್ಬಬ್ಬ ಎಷ್ಟು ಅದ್ಭುತವಾಗಿದೆ ಎಂದೆನಿಸದೇ ಇರದು. ಆದರೆ ನಿಮಗೆ ಗೊತ್ತಾ, ಇಲ್ಲಿ 100ಕ್ಕೂ ಹೆಚ್ಚು ವಿಧದ ಅಪಾಯಕಾರಿ ಸಸ್ಯಗಳು ಇವೆಯಂತೆ.
ಇದನ್ನೂ ಓದಿ: Tourist Places: ಜುಲೈ ತಿಂಗಳಿನಲ್ಲಿ ಸುತ್ತಾಡುವ ಪ್ಲಾನ್ ಇದೆಯಾ? ಹಾಗಿದ್ರೆ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ
ಇಂಗ್ಲೆಂಡ್‌ನ ಅಲ್ನ್‌ವಿಕ್ ಕ್ಯಾಸಲ್‌ನಲ್ಲಿರುವ ವಿಷಕಾರಿ ಉದ್ಯಾನವನ್ನು 2005 ರಲ್ಲಿ ಡಚೆಸ್ ಆಫ್ ನಾರ್ತಂಬರ್‌ಲ್ಯಾಂಡ್ ಸ್ಥಾಪಿಸಿದರು. ನಾರ್ತಂಬರ್‌ಲ್ಯಾಂಡ್‌ನ ಡಚೆಸ್, ಜೇನ್ ಪರ್ಸಿ ಅವರು 2005ರಲ್ಲಿ ಕ್ರಿಸ್‌ಮಸ್ ಟ್ರೀಗಳು ತುಂಬಿದ ವಿಸ್ತಾರವಾದ ಪ್ರದೇಶವನ್ನು ಗಾರ್ಡನ್ ಆಗಿ ಪರಿವರ್ತಿಸಲು ಫ್ರೆಂಚ್ ಟ್ಯೂಲೆರೀಸ್‌ನ ಭೂದೃಶ್ಯ ವಾಸ್ತುಶಿಲ್ಪಿ ಜಾಕ್ವೆಸ್ ವಿರ್ಟ್ಜ್ ಅವರನ್ನು ನೇಮಿಸಿದ ನಂತರ ಉದ್ಯಾನವು ಸ್ಥಾಪನೆಯಾಯಿತು ಎಂದು ಬಿಬಿಸಿ ವರದಿ ಮಾಡಿದೆ.
ಹೂವು, ಗಿಡಗಳ ವಾಸನೆ ನೋಡುವಂತಿಲ್ಲ
ಉದ್ಯಾನವನ್ನು ವೀಕ್ಷಿಸಲು ಪ್ರತಿ ವರ್ಷ ಬರುವ 600,000 ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಮೂಲಕ ಮಾತ್ರ ಒಳಗೆ ಪ್ರವೇಶವನ್ನು ಅನುಮತಿಸಲಾಗುತ್ತದೆ. ಒಮ್ಮೆ ಪಾರ್ಕ್ ಒಳಗೆ ಹೋದ ಸಂದರ್ಶನಕಾರರು ಅಲ್ಲಿ ಯಾವುದೇ ಸಸ್ಯಗಳನ್ನು ಸ್ಪರ್ಶಿಸುವುದಾಗಲಿ, ವಾಸನೆ ಅಥವಾ ರುಚಿ ನೋಡುವುದರ ವಿರುದ್ಧ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗುತ್ತದೆ ಎಂದು ಉದ್ಯಾನದ ಅಧಿಕೃತ ವೆಬ್‌ಸೈಟ್ ತಿಳಿಸಿದೆ. ಆದರೆ ಎಚ್ಚರಿಕೆಯ ಹೊರತಾಗಿಯೂ, ಕೆಲವೊಮ್ಮೆ ಈ ಮಾರಕ ಸಸ್ಯಗಳಿಂದ ವಿಷಕಾರಿ ಗಾಳಿಯನ್ನು ತೆಗೆದುಕೊಂಡು ಉಸಿರಾಡುವ ಮೂಲಕ ಮೂರ್ಛೆ ಹೋಗುವ ಪ್ರಕರಣಗಳು ಸಹ ನಡೆಯುತ್ತವೆ.
The sun almost makes The Poison Garden a little less scary ☠️
Walk beyond the gates for your guided tour to learn not everything is as it seems in a quaint English Garden. Tours are included with Garden Entry, just ask our friendly guides! 🌱 pic.twitter.com/bD5fOKJVxH
— The Alnwick Garden (@AlnwickGarden) June 25, 2022
ಪ್ರವಾಸಿಗರಲ್ಲದೆ, ಪ್ರಪಂಚದಾದ್ಯಂತದ ಸಸ್ಯಶಾಸ್ತ್ರದ ತಜ್ಞರಾದಂತಹ ಮಾಂಕ್‌ಹುಡ್, ರೋಡೋಡೆಂಡ್ರನ್ಸ್ ಮತ್ತು ವುಲ್ಫ್ಸ್ ಬೇನ್‌ನಂತಹ ವಿಷಕಾರಿ ಸಸ್ಯಗಳನ್ನು ನೋಡಲು ಇಲ್ಲಿಗೆ ಭೇಟಿ ನೀಡುತ್ತಾರೆ.
ಗಿನ್ನೆಸ್ ದಾಖಲೆ ಬರೆದಿದೆ ಈ ಪಾರ್ಕ್ ನಲ್ಲಿರುವ ಕ್ಯಾಸ್ಟರ್ ಬೀನ್ ಸಸ್ಯ
ಉದ್ಯಾನವನ ಹಲವಾರು ಸಸ್ಯ ಪ್ರಭೇದಗಳಿಗೆ ನೆಲೆಯಾಗಿದೆ. ಇಲ್ಲಿರುವ ಕ್ಯಾಸ್ಟರ್ ಬೀನ್ ಅಥವಾ ಕ್ಯಾಸ್ಟರ್ ಆಯಿಲ್ ಎಂದು ಕರೆಯಲಾಗುವ ಸಸ್ಯ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ವಿಶ್ವದ ಅತ್ಯಂತ ವಿಷಕಾರಿ ಸಸ್ಯ ಎಂದು ದಾಖಲೆ ಬರೆದಿದೆ.
The Poison Garden at England’s Alnwick Garden is beautiful—and filled with plants that can kill you
🍄 https://t.co/IuCmZ1YEhq pic.twitter.com/W4pJecBY0x
— Sarah Chavez (@sarah_calavera) January 24, 2019
ಇಂಗ್ಲೆಂಡ್ ನ ಈ ‘ದಿ ಪಾಯಿಸನ್ ಗಾರ್ಡನ್’ನಲ್ಲಿ ಎಷ್ಟು ಭಯಾನಕ ಸಸ್ಯಗಳಿವೆಯೋ ಅಷ್ಟೇ ಔಷಧಿ ಗುಣಗಳಿರುವ ಸಸ್ಯಗಳು ಸಹ ನೆಲೆಯಾಗಿವೆ. ಇಲ್ಲಿರುವ ಹೆಚ್ಚಿನ ಸಸ್ಯಗಳು ಚಿಕಿತ್ಸೆ ನೀಡಲಾಗದ ಕೆಲವು ಕಾಯಿಲೆಗಳನ್ನು ಗುಣಪಡಿಸುವಲ್ಲಿ ಪ್ರಮುಖವಾಗಿವೆ.
ಇದನ್ನೂ ಓದಿ: Bihar: 5 ಲಕ್ಷ ರುದ್ರಾಕ್ಷಿಯಿಂದ 20 ಅಡಿ ಎತ್ತರದ ಶಿವಲಿಂಗ ಪ್ರತಿಷ್ಠಾಪನೆ, ಇಲ್ಲಿವೆ ಫೋಟೋಸ್
ಕೆಲವು ವರದಿಗಳು ಹೇಳುವ ಪ್ರಕಾರ, ಯೂ ಎಂಬ ಮರವು ಟ್ಯಾಕ್ಸಿನ್ ಎಂಬ ವಿಷಕ್ಕೆ ಕುಖ್ಯಾತವಾಗಿದೆ. ಇದು 20 ನಿಮಿಷಗಳಲ್ಲಿ ಒಬ್ಬರನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಿಯಾದ ಟ್ಯಾಕ್ಸೋಲ್ ಅನ್ನು ಸಹ ಇದು ಉತ್ಪಾದಿಸುತ್ತದೆ ಎಂಬುವುದು ಅಚ್ಚರಿಗೆ ಕಾರಣವಾಗುವ ವಿಚಾರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ