Viral video: "ಶೇಪ್ ಆಫ್ ಯು" ಗೀತೆ ಕರ್ನಾಟಕ ಸಂಗೀತ ಶೈಲಿಯಲ್ಲಿ ಕೇಳಿ! ನೀವೇ ಹೇಳಿ ಹೇಗಿದೆ?

ಭಾರತವೇ ಕೆಲವು ಅದ್ಭುತ ಸಂಗೀತ ಶೈಲಿಗಳಾದ ಹಿಂದೂಸ್ತಾನ್ ಹಾಗೂ ಕರ್ನಾಟಿಕ್ ಸಂಗೀತ ಶೈಲಿಗೆ ಮೂಲವಾಗಿದೆ ಎಂದರೂ ತಪ್ಪಿಲ್ಲ. ಅಷ್ಟಕ್ಕೂ ಈಗ ಸಂಗೀತದ ಬಗ್ಗೆ ಮಾತು ಏಕೆ ಎಂದು ಕೇಳಿದರೆ ಅದಕ್ಕೆ ಉತ್ತರ ಇತ್ತೀಚಿಗಷ್ಟೆ ವೈರಲ್ ಆಗಿರುವ ಒಂದು ಅದ್ಭುತ ಹಾಡು.

 ಹೃಷಿ

ಹೃಷಿ

  • Share this:
ಸಂಗೀತ (Music) ಎಂಬುದು ಪ್ರತಿಯೊಬ್ಬರಿಗೂ ವಿಶೇಷ ಅನುಭವ ನೀಡುತ್ತದೆ. ಹಲವು ತಜ್ಞರ ಪ್ರಕಾರ, ಸಂಗೀತ ಆಲಿಸುವುದು ಒತ್ತಡವನ್ನು ಶಮನಗೊಳಿಸುತ್ತದೆ ಹಾಗೂ ಈ ಮೂಲಕ ನಮ್ಮ ಆರೋಗ್ಯದ (Health) ಮೇಲೆ ಧನಾತ್ಮಕ ಪರಿಣಾಮ (Positive effect) ಬೀರುತ್ತದೆ ಎನ್ನಲಾಗಿದೆ. ಅಷ್ಟಕ್ಕೂ ನಾವು ಸಂಗೀತ ಚಿಕಿತ್ಸೆ ಬಗ್ಗೆಯೂ ಕೇಳಿದ್ದೇವೆ. ಒಟ್ಟಿನಲ್ಲಿ ಹೇಳಬೇಕಾದ ವಿಷಯ ಎಂದರೆ ಸಂಗೀತ ಆಲಿಸುವುದು ಬಹುತೇಕ ಎಲ್ಲರಿಗೂ ಸುಮಧುರ ಅನುಭವವನ್ನೇ ನೀಡುತ್ತದೆ ಎನ್ನುವುದಾಗಿದೆ. ಇನ್ನು ಸಂಗೀತದಲ್ಲಿ ಹಲವಾರು ಪ್ರಕಾರಗಳಿವೆ ರಾಕ್ (Rock) ನಂತಹ ಸದ್ದು ತೀವ್ರತೆಯಿರುವ ಸಂಗೀತದಿಂದ ಹಿಡಿದು ಮೆಲೋಡಿ ಎಂಬ ಸೌಮ್ಯ ಹಾಗೂ ಸುಮಧುರವಾಗಿರುವ ಸಂಗೀತಗಳಿವೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಶಾಸ್ತ್ರೀಯ ಸಂಗೀತಗಳ (Classical music) ದೊಡ್ಡ ಇತಿಹಾಸವೇ ಇದೆ.

ಇತ್ತೀಚಿಗಷ್ಟೆ ವೈರಲ್ ಆಗಿರುವ ಒಂದು ಅದ್ಭುತ ಹಾಡು
ಭಾರತವೇ ಕೆಲವು ಅದ್ಭುತ ಸಂಗೀತ ಶೈಲಿಗಳಾದ ಹಿಂದೂಸ್ತಾನ್ ಹಾಗೂ ಕರ್ನಾಟಿಕ್ ಸಂಗೀತ ಶೈಲಿಗೆ ಮೂಲವಾಗಿದೆ ಎಂದರೂ ತಪ್ಪಿಲ್ಲ. ಅಷ್ಟಕ್ಕೂ ಈಗ ಸಂಗೀತದ ಬಗ್ಗೆ ಮಾತು ಏಕೆ ಎಂದು ಕೇಳಿದರೆ ಅದಕ್ಕೆ ಉತ್ತರ ಇತ್ತೀಚಿಗಷ್ಟೆ ವೈರಲ್ ಆಗಿರುವ ಒಂದು ಅದ್ಭುತ ಹಾಡು.

ಇದನ್ನೂ ಓದಿ: Aditya Sasikumar: ಹಳ್ಳಿಯ ಪ್ರೇಮ ಕಥೆ ಹೇಳಹೊರಟ್ಟಿದ್ದಾರೆ ಸಿದ್ಧಾರ್ಥ್ ಮರಡೆಪ್ಪ, ಚಿತ್ರದ ಟೈಟಲ್​ ಅನೌನ್ಸ್

ಈ ಹಾಡು ಸಾಮಾನ್ಯವಾಗಿಲ್ಲ ಇದೊಂದು ಎರಡು ಸಂಗೀತ ಶೈಲಿಯ ಸಮಾಗಮ ಅಂದರೆ ಫ್ಯೂಷನ್ ರೂಪವಾಗಿದೆ. ನೀವು ಕೆಲವು ಉತ್ತಮ ಸಂಗೀತಗಳನ್ನು ಆಲಿಸಬೇಕೆಂಬ ಮೂಡ್‌ನಲ್ಲಿದ್ದೀರಾ? ಈ ವಾರವು ತುಂಬ ಭಾರವಾಗಿದೆ, ಏನಾದರೂ ರಿಫ್ರೆಶಿಂಗ್ ಅನುಭವ ಬೇಕೆಂಬ ಹಂಬಲ ನಿಮ್ಮಲ್ಲಿದೆಯೆ? ಚಿಂತಿಸದಿರಿ. ನಿಮಗಾಗಿ ನಾವು ಅಂತಹ ಒಂದು ಅದ್ಭುತ ಸಂಗೀತದ ಬಗೆ ಇಲ್ಲಿ ಮಾತನಾಡುತ್ತಿದ್ದೇವೆ. ಇಲ್ಲಿ ನಾವು ಹೇಳುತ್ತಿರುವ ಈ ಸಂಗೀತದ ಮ್ಯಾಶಪ್ ನಿಮ್ಮ ಕಿವಿಗಳಿಗೆ ಹಿಂದೆಂದೂ ಕೇಳದ ಅದ್ಭುತ ಅನುಭೂತಿ ನೀಡುವುದರಲ್ಲಿ ಸಂಶಯವೇ ಇಲ್ಲ.

ಪ್ರಾಯೋಗಿಕವಾಗಿ ಕರ್ನಾಟಕ ಸಂಗೀತದೊಂದಿಗೆ ಬೆರೆಸಿ  ಹಾಡಿದ ಹಾಡು
ಒಬ್ಬ ಸಂಗೀತ ಕಲಾವಿದನಾಗಿರುವ ಎಡ್ ಶೀರನ್ ಅವರ ಗೀತೆಯಾದ "ಶೇಪ್ ಆಫ್ ಯು" ಅನ್ನು ಪ್ರಾಯೋಗಿಕವಾಗಿ ಕರ್ನಾಟಕ ಸಂಗೀತದೊಂದಿಗೆ ಬೆರೆಸಿ ಹಾಡಲಾಗಿದೆ. ಹೌದು, ನೀವು ಸರಿಯಾಗಿ ಓದಿದ್ದೀರಿ. ಮತ್ತು, ಇದು ಖಂಡಿತವಾಗಿಯೂ ಅದ್ಭುತವಾಗಿ ಮೂಡಿ ಬಂದಿದ್ದು ನೀವು ಕೇಳಲೇಬೇಕಾದ ಒಂದು ಉತ್ತಮ ಸಂಗೀತ ಇದಾಗಿದೆ ಎಂದು ಹೇಳಬಹುದು.


View this post on Instagram


A post shared by hrishi (@hrishisongs)
ವೈರಲ್ ಆಗಿರುವ ಹಾಡು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್
ಸದ್ಯ ವೈರಲ್ ಆಗಿರುವ ಆ ಹಾಡಿನ ಈ ವಿಡಿಯೋವನ್ನು ಹೃಷಿ ಎಂಬುವವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ತಮ್ಮನ್ನು ತಾವು ವಾಷಿಂಗ್ಟನ್ ಡಿಸಿ ಯಲ್ಲಿ ಬೆಳೆದಿರುವ ಮತ್ತು ತಮಿಳುನಾಡು ಮೂಲದ ಕಲಾವಿದ ಎಂದು ಸ್ವತಃ ವಿವರಿಸಿಕೊಂಡಿದ್ದಾರೆ. ಕೆಲವು ಕರ್ನಾಟಕ ಸಂಗೀತದ ಟಿಪ್ಪಣಿಗಳನ್ನು ಸೇರಿಸುವ ಮೂಲಕ ಹೃಷಿ ಅವರು ಶೇಪ್ ಆಫ್ ಯೂ ಎಂಬ ಗೀತೆಗೆ ತಮ್ಮದೇ ಆದ ಟ್ವಿಸ್ಟ್ ನೀಡಿದ್ದಾರೆ ಮತ್ತು ಅದು ಮೂಡಿಬಂದ ರೀತಿ ಸಂಪೂರ್ಣವಾಗಿ ಅದ್ಭುತವಾಗಿದೆ ಎಂದು ಕೊಂಡಾಡಲಾಗುತ್ತಿದೆ.

ಹೃಷಿ ಅವರು ಮೊದಲು ಎಡ್ ಶೀರನ್ ಹಾಡಿನ ಸಾಲುಗಳೊಂದಿಗೆ ಗೀತೆ ಪ್ರಾರಂಭಿಸಿ ತದನಂತರ ಸುಗಮವಾಗಿ ಅದನ್ನು ಕರ್ನಾಟಕ ಶೈಲಿಯಲ್ಲಿ ಪರಿವರ್ತನೆ ಮಾಡುವುದನ್ನು ಗಮನಿಸಬಹುದು. ಹೃಷಿ ಅವರು ತಮ್ಮ ಈ ಗೀತೆಯನ್ನು ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಆ ಬಗ್ಗೆ "ಶೇಪ್ ಆಫ್ ಯು - ಕರ್ನಾಟಿಕ್ ರಿಮಿಕ್ಸ್ // ಈ ಬೇಸಿಗೆಯ ಪ್ರವಾಸದಲ್ಲಿ ನಿಮ್ಮನ್ನು ಭೇಟಿಯಾಗುವೆ, ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ" ಎಂದು ಬರೆದುಕೊಂಡಿದ್ದಾರೆ.

ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು
ಅವರು ಈ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ ಮೆಚ್ಚುಗೆಗಳ ಮಹಾಪೂರವೆ ಹರಿದುಬರುತ್ತಿದೆ. ಸಾವಿರಾರು ಸಂಗೀತ ಪ್ರೇಮಿಗಳು ಈ ವಿನೂತನ ಫ್ಯೂಷನ್ ಸಂಗೀತವನ್ನು ಮೆಚ್ಚಿ ಕೊಂಡಾಡಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಸದ್ಯ ಈ ಕ್ಲಿಪ್ ಗೆ ಎರಡುವರೆ ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ದೊರೆತಿದ್ದು ಅದು ಏರುತ್ತಲೇ ಇದೆ.

ಇದನ್ನೂ ಓದಿ: Pranitha Subhash Exclusive Interview: ಉದಯಪುರ ಹತ್ಯೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ನಟಿ ಪ್ರಣಿತಾ

ಇದನ್ನು ನೋಡಿರುವ ಒಬ್ಬ ಬಳಕೆದಾರರು, "ಇದು ತುಂಬ ಅದ್ಭುತವಾಗಿದೆ, ನೀವು ಅದ್ಭುತವಾಗಿದ್ದೀರಿ" ಎಂದು ಬರೆದರೆ ಎರಡ್ನೇಯವರು, "ನಾನು ದಕ್ಷಿಣ ಭಾರತೀಯನೊಬ್ಬನನ್ನು ನೋಡಿದಾಗ, ನನಗೆ ಕಾಯುವ ಅವಶ್ಯಕತೆ ಇರಲಿಲ್ಲ" ಎಂದು ಬರೆದುಕೊಂಡಿದ್ದಾರೆ. ಮೂರನೇಯವರು ಬೆಂಕಿಯ ಸಿಂಬಲ್ ಬಳಸಿ ಈ ಸಮಾಗಮ ಅದ್ಭುತವಾಗಿದೆ ಎಂದು ಬರೆದಿದ್ದಾರೆ.
Published by:Ashwini Prabhu
First published: