ಈಗಂತೂ ಕೆಲವು ಕಂಪನಿಗಳು ಕೋವಿಡ್-19 (Covid 19) ಸಾಂಕ್ರಾಮಿಕದ (Epidemic) ಕಾರಣ ಹೇಳಿ ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದರೆ, ಇನ್ನೂ ಕೆಲವು ಕಂಪನಿಗಳು(Companies) ಉದ್ಯೋಗಿಗಳಿಗೆ ನೀಡುತ್ತಿರುವ ಸಂಬಳದಲ್ಲಿ (Salaries) ಸ್ವಲ್ಪ ಭಾಗ ಕಡಿತಗೊಳಿಸಿ ನೀಡುತ್ತಿದೆ. ಹೀಗಾಗಿ ಅನೇಕರಿಗೆ ಈ ಉದ್ಯೋಗಗಳನ್ನು ಮಾಡುವುದಕ್ಕಿಂತಲೂ ತಮ್ಮ ಹಳ್ಳಿಗಳಿಗೆ ಹೋಗಿ ಸ್ವಂತ ಜಮೀನಿನಲ್ಲಿ ವ್ಯವಸಾಯ(Farm) ಮಾಡುವುದು ಲೇಸು ಎಂದು ಎಷ್ಟೋ ಜನರು ಹಳ್ಳಿಯ ಕಡೆಗೆ ಮುಖ ಮಾಡಿದ್ದಾರೆ. ಆದರೆ ಇಲ್ಲೊಂದು ಕಂಪನಿ ಇದೆ, ಅದು ತನ್ನ ಉದ್ಯೋಗಿಗಳನ್ನು (Employees ) ಬೇರೆ ಕಡೆಗೆ ಹೋಗದಂತೆ ತಡೆಯಲು ಪ್ರೋತ್ಸಾಹಕವಾಗಿ ಏನು ನೀಡಿದೆ ಎಂದು ನೀವು ನೋಡಿದರೆ ನಿಮ್ಮ ಕಣ್ಣುಗಳ ಹುಬ್ಬುಗಳನ್ನು ಏರಿಸದೆ ಇರಲು ಸಾಧ್ಯವೇ ಇಲ್ಲ.
ಉದ್ಯೋಗಿಗಳಿಗೆ ಮನೆ
ಹೌದು.. ನೀವು ಕೇಳಿಸಿಕೊಂಡಿದ್ದು ಸತ್ಯ, ತನ್ನ ಉದ್ಯೋಗಿಗಳು ಈ ಕಂಪನಿ ಬಿಟ್ಟು ಬೇರೆ ಕಂಪನಿಗೆ ಹೋಗಬಾರದೆಂದು ಸೆಂಟ್ರಲ್ ಫ್ಲೋರಿಡಾದಲ್ಲಿರುವ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಮನೆ ನೀಡುವುದಾಗಿ ಹೇಳಿ ಆ ಯೋಜನೆಗೆ ಸುಮಾರು 500,000 ಡಾಲರ್ ಹಣವನ್ನು ಮಿಸಲಿಟ್ಟಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ಹೊಸ ವರ್ಷಕ್ಕೆ ಡಿಎ ಹೆಚ್ಚಳ ಸಾಧ್ಯತೆ
ಈ ಕಂಪನಿಯ ಸಿಇಒ ಮತ್ತು ಅಧ್ಯಕ್ಷರಾದ ಜಸನ್ ಜೇಮ್ಸ್ ನಮ್ಮ ಕಂಪನಿಯ ಮೂಲ ಮಂತ್ರವೇ ನಾವು ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಏನಾದರೂ ಮಾಡಿದರೆ, ಅವರು ಸಹ ಇನ್ನೂ ಹೆಚ್ಚಿನ ಕೆಲಸವನ್ನು ನಮಗೆ ಮಾಡಿಕೊಡುತ್ತಾರೆ ಎಂದು ಹೇಳಿದರು. 3 ಮಲಗುವ ಕೋಣೆಗಳು ಮತ್ತು 2 ಸ್ನಾನದ ಕೋಣೆಗಳನ್ನು ಹೊಂದಿರುವ ಮನೆಯನ್ನು ತನ್ನ ಪ್ರತಿಯೊಬ್ಬ ಉದ್ಯೋಗಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಬಾಡಿಗೆ ಮನೆ ವಾಸ
ಜೇಮ್ಸ್ ಮೊದಲಿಗೆ ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕಾರು ಅಥವಾ ಯಾವುದಾದರೂ ಪ್ರವಾಸಿ ತಾಣಗಳಿಗೆ ಹೋಗಿ ಬರುವ ವ್ಯವಸ್ಥೆ ಮಾಡುವುದಾಗಿ ಯೋಚಿಸಿದ್ದರು. ಆದರೆ ನಂತರ “ನನ್ನ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಸ್ವಂತ ಮನೆಯಲ್ಲಿರುವ ಅನುಭವ ಸವಿಯಲಿ ಎಂದು ಮನೆಗಳನ್ನು ನೀಡಲು ಬಯಸಿದ್ದೇನೆ, ಏಕೆಂದರೆ ಬಹಳಷ್ಟು ಜನರು ಈಗಲೂ ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದಾರೆ” ಎಂದು ಜೇಮ್ಸ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
1 ವರ್ಷ ಕೆಲಸ ಮಾಡಬೇಕು
ಆದರೆ ಇದನ್ನು ಪಡೆಯಲು ಜೇಮ್ಸ್ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ. ಅವುಗಳು ಯಾವುವೆಂದರೆ ಉದ್ಯೋಗಿಗಳು ಕಂಪನಿಯಲ್ಲಿ 1 ವರ್ಷ ಕೆಲಸ ಮಾಡಬೇಕು, ಹಣಕಾಸಿನ ಬಗ್ಗೆ ಆಯೋಜಿಸುವ ತರಬೇತಿ ಪಡೆಯಬೇಕು ಮತ್ತು ಅವರು 20 ಗಂಟೆಗಳ ಕಾಲ ಸಮುದಾಯದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.
ಡಿಸೆಂಬರ್ 4ರಂದು ಘೋಷಣೆ
ಜೇಮ್ಸ್ 100 ಉದ್ಯೋಗಿಗಳಿರುವ ಕಂಪನಿಯನ್ನು ಜುಲೈ ತಿಂಗಳಿನಲ್ಲಿ ಶುರು ಮಾಡಿದರು ಮತ್ತು ಮನೆ ನೀಡುವ ಯೋಜನೆಯನ್ನು ಡಿಸೆಂಬರ್ 4ರಂದು ಘೋಷಿಸಿದ್ದಾರೆ. ಆದರೆ ಇದುವರೆಗೂ ಯಾವೊಬ್ಬ ಉದ್ಯೋಗಿಯೂ ಇದಕ್ಕೆ ವಿಧಿಸಿಲಾದ ಷರತ್ತುಗಳನ್ನು ನಿರ್ವಹಿಸಿಲ್ಲ ಎಂದು ಸುದ್ದಿ ಮಾಧ್ಯಮ ವರದಿ ಮಾಡಿದೆ. ಅನೇಕರು ಈ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಕೆಲಸ ಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು ಮತ್ತು ಎಷ್ಟೋ ಜನರು ತಿರುಗಿ ಬರಲೇ ಇಲ್ಲ. ಹಾಗಾಗಿ ಉದ್ಯೋಗಿಗಳು ಕೆಲಸ ಬಿಟ್ಟು ಹೋಗದೆ ಇರುವುದಕ್ಕೆ ಈ ರೀತಿಯಾದ ಯೋಜನೆ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: EPFO Credits : EPFO ಬಳಕೆದಾರರಿಗೆ ಗುಡ್ ನ್ಯೂಸ್; EPFO ವಿಮೆ ಯೋಜನೆಯಡಿ ಸಿಗಲಿದೆ 7ಲಕ್ಷ
ಇಷ್ಟೇ ಅಲ್ಲದೆ ತನ್ನ ಉದ್ಯೋಗಿಗಳಿಗೆ ವರ್ಷದಲ್ಲಿ ಎರಡು ಬಾರಿ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಮತ್ತು ಆರೋಗ್ಯ ರಕ್ಷಣೆಯ ಸಲುವಾಗಿ ಯೋಜನೆಯನ್ನು ಸಹ ಹಾಕಿಕೊಂಡಿದ್ದಾರೆ ಎಂದು ಜೇಮ್ಸ್ ಹೇಳಿದ್ದಾರೆ. “ನಿಜಕ್ಕೂ ಈಗ ನೈಪುಣ್ಯತೆ ಇರುವ ಕೆಲಸಗಾರರ ಕೊರತೆ ಇದೆ, ಅದಕ್ಕಾಗಿ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ” ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ