• Home
  • »
  • News
  • »
  • trend
  • »
  • Fiber Sensor Shoe: ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚುತ್ತೆ ಈ 'ಫೈಬರ್ ಸೆನ್ಸರ್' ಶೂ!

Fiber Sensor Shoe: ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚುತ್ತೆ ಈ 'ಫೈಬರ್ ಸೆನ್ಸರ್' ಶೂ!

'ಫೈಬರ್ ಸೆನ್ಸರ್' ಶೂ

'ಫೈಬರ್ ಸೆನ್ಸರ್' ಶೂ

ಬೂಟುಗಳಲ್ಲಿ ಹೊಂದಿಕೊಳ್ಳುವ ಫೈಬರ್ ಸಂವೇದಕಗಳನ್ನು ಸಂಯೋಜಿಸುವ ಹೊಸ ಪೀಳಿಗೆಯ ತಂತ್ರಜ್ಞಾನವನ್ನು ಬಿಲ್ಕೆಂಟ್ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ನ್ಯಾನೊತಂತ್ರಜ್ಞಾನ ಸಂಶೋಧನಾ ಕೇಂದ್ರ (UNAM) ಅಭಿವೃದ್ಧಿಪಡಿಸಿದೆ.

  • Share this:

ಪಾರ್ಕಿನ್ಸನ್ ಕಾಯಿಲೆ ಮತ್ತು ನಡಿಗೆ ಅಸ್ವಸ್ಥತೆಗಳು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು (Health Problems) ಆರಂಭದಲ್ಲೇ ಪತ್ತೆ ಹಚ್ಚುವ ಸಲುವಾಗಿ 'ಫೈಬರ್ ಸೆನ್ಸರ್' ಶೂಗಳನ್ನು (Fiber sensor shoe) ಟರ್ಕಿಶ್ ವಿಜ್ಞಾನಿಗಳು (Turkish Scientists) ಅಭಿವೃದ್ಧಿಪಡಿಸಿದ್ದಾರೆ. ಬೂಟುಗಳಲ್ಲಿ ಹೊಂದಿಕೊಳ್ಳುವ ಫೈಬರ್ ಸಂವೇದಕಗಳನ್ನು ಸಂಯೋಜಿಸುವ ಹೊಸ ಪೀಳಿಗೆಯ ತಂತ್ರಜ್ಞಾನವನ್ನು (Technology) ಬಿಲ್ಕೆಂಟ್ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ನ್ಯಾನೊತಂತ್ರಜ್ಞಾನ ಸಂಶೋಧನಾ ಕೇಂದ್ರ (UNAM) ಅಭಿವೃದ್ಧಿಪಡಿಸಿದೆ. ಮೇಲೆ ಉಲ್ಲೇಖಿಸಿದಂತೆ ಈ ತಂತ್ರಜ್ಞಾನದ ಸಹಾಯದಿಂದ ಪಾರ್ಕಿನ್ಸನ್ ಕಾಯಿಲೆ (Parkinson's disease) ಮತ್ತು ನಡಿಗೆ ಅಸ್ವಸ್ಥತೆಗಳು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಬಹುದು.


ಸ್ಮಾರ್ಟ್ ಸಂವೇದಕಗಳಿಂದ ಕೂಡಿದ ತಂತ್ರಜ್ಞಾನ
ಫೈಬರ್ ಆಪ್ಟಿಕ್ ಕೇಬಲ್‌ಗಳ ಉತ್ಪಾದನೆ ಮತ್ತು ಗುಣಲಕ್ಷಣಗಳಲ್ಲಿ ಹೆಚ್ಚು ಅನುಭವ ಹೊಂದಿರುವ ಪ್ರಾಜೆಕ್ಟ್ ಮ್ಯಾನೇಜರ್ ಮುಸ್ತಫಾ ಒರ್ಡು, ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನವು ದೇಹದ ಚಲನೆಯನ್ನು ಮೇಲ್ವಿಚಾರಣೆ ಮಾಡುವ ಮತ್ತು ಸಮಸ್ಯೆಗಳು ಮತ್ತು ರೋಗಗಳನ್ನು ನಿರ್ಧರಿಸುವ ಸ್ಮಾರ್ಟ್ ಸಂವೇದಕಗಳಿಂದ ಕೂಡಿದೆ. ಅನೇಕ ಆರೋಗ್ಯ ಸಮಸ್ಯೆಗಳನ್ನು ಇದು ಆರಂಭಿಕ ಹಂತದಲ್ಲೇ ಗುರುತಿಸಲು ಸಹಾಯ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.


ಶೂಗಳಲ್ಲಿನ 'ಫೈಬರ್ ಸೆನ್ಸರ್' ಬಗೆಗಿನ ಅತ್ಯಾಧುನಿಕ ತಂತ್ರಜ್ಞಾನವನ್ನು ಮತ್ತಷ್ಟು ವಿವರಿಸಿದ ಅವರು, ಈ ಕೇಬಲ್‌ಗಳನ್ನು ಒಂದು ರೀತಿಯ ಥ್ರೆಡ್ ಫ್ಯಾಬ್ರಿಕ್‌ನಂತೆ ಒಟ್ಟಿಗೆ ಹೆಣೆಯುವ ಮೂಲಕ ಅವುಗಳನ್ನು ಬಟ್ಟೆಯಲ್ಲಿ ಫೈಬರ್‌ಗಳಾಗಿ ಅಳವಡಿಸಬಹುದಾದ್ದರಿಂದ ಅದನ್ನು ದೇಹದ ಉಡುಗೆ ಜೊತೆ ನೇಯಬಹುದು ಅಥವಾ ಪಾದರಕ್ಷೆಗಳಲ್ಲಿ ಸೇರಿಸಬಹುದು.


ವೈದ್ಯಕೀಯ ಪ್ರಯೋಜನ
ಟರ್ಕಿಶ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ನ್ಯಾನೊತಂತ್ರಜ್ಞಾನವು ಶೂಗಳನ್ನು ಧರಿಸುವವರ ಹೃದಯ ಬಡಿತವನ್ನು ನಿರಂತರವಾಗಿ ಮತ್ತು ಸಂವೇದಕಗಳ ಮೂಲಕ ಅವರ ದೇಹದ ಉಷ್ಣತೆಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ತಂತ್ರಜ್ಞಾನವನ್ನು ಮೂಳೆ ಚಿಕಿತ್ಸೆಯಲ್ಲಿ ಸಹ ಅಳವಡಿಸಿಕೊಳ್ಳಬಹುದು. ಈ ಫೈಬರ್ ಆಪ್ಟಿಕ್ ತಂತ್ರಜ್ಞಾನದ ಅಭಿವೃದ್ಧಿಯು ಪಾರ್ಕಿನ್ಸನ್‌ನಂತಹ ನರವೈಜ್ಞಾನಿಕ ಕಾಯಿಲೆಗಳ ಆರಂಭಿಕ ರೋಗನಿರ್ಣಯದಲ್ಲಿ ಸಹಾಯ ಮಾಡುತ್ತದೆ. ಇದು ರೋಗಿಗಳನ್ನು ಮೊದಲೇ ಪತ್ತೆಹಚ್ಚುವ ವೈದ್ಯರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ:  Viral Story: ಆಕೆ ಗರ್ಭಿಣಿ ಅಂತ ಗೊತ್ತಾದ ಎರಡೇ ದಿನಕ್ಕೆ ಹೆರಿಗೆ ಆಯ್ತು! ಅರೇ, ಇವೆಲ್ಲ ನಿಜಕ್ಕೂ ಸಾಧ್ಯನಾ?


ಜೊತೆಗೆ, ಶೂಗಳ ಅಡಿಭಾಗದ ಅಡಿಯಲ್ಲಿ ಇರಿಸಲಾದ ಫೈಬರ್ಗಳು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇವುಗಳ ಮೂಲಕ ಫೋನ್‌ಗಳಂತಹ ಸಾಧನಗಳನ್ನು ಚಾರ್ಜ್ ಮಾಡಬಹುದು ಎಂದಿದ್ದಾರೆ ವಿಜ್ಞಾನಿಗಳು. ಪಾರ್ಕಿನ್ಸನ್‌ನಂತಹ ನರವೈಜ್ಞಾನಿಕ ರೋಗದ ಅಪಾಯದಲ್ಲಿರುವವರ ನಡಿಗೆಯಲ್ಲಿನ ವ್ಯತ್ಯಾಸಗಳನ್ನು ಪತ್ತೆಹಚ್ಚಲು ತಂಡವು ಸ್ಮಾರ್ಟ್‌ಫೋನ್‌ಗಳೊಂದಿಗೆ ಸಂವೇದಕಗಳನ್ನು ಅಳವಡಿಸುವ ಬಗ್ಗೆಯೂ ಸಂಶೋಧನೆ ನಡೆಸುತ್ತಿದೆ. ಈ ತಂತ್ರಜ್ಞಾನವನ್ನೂ ಕೆಲವೇ ದಿನಗಳಲ್ಲಿ ನಿರೀಕ್ಷಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.


UNAMನಲ್ಲಿ ಫೈಬರ್ ಆಪ್ಟಿಕ್ ಕೇಬಲ್‌ಗಳೊಂದಿಗೆ ಅವರು ಉತ್ಪಾದಿಸಿದ ಸಂವೇದಕಗಳೊಂದಿಗೆ ಜನರ ನಡಿಗೆಯ ನಡವಳಿಕೆಯನ್ನು ಕಂಡುಹಿಡಿಯವುದು ನಮ್ಮ ಪ್ರಯತ್ನ ಎಂದು ಓರ್ಡು ಹೇಳಿದರು, “ಚಪ್ಪಟೆ ಪಾದಗಳು ಅನೇಕ ಜನರಲ್ಲಿ ಸಾಮಾನ್ಯವಾಗಿದೆ, ಆದ್ದರಿಂದ ಇವರಿಗೆ ಅನುಕೂಲವಾಗುವಂತೆ ವೈಯಕ್ತೀಕರಿಸಿದ ಇನ್ಸೊಲ್‌ಗಳನ್ನು ಅಭಿವೃದ್ಧಿಪಡಿಸಲು ನಾವು ವೈದ್ಯರೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.


ತಂತ್ರಜ್ಞಾನಕ್ಕೆ ಹೆಚ್ಚಿನ ಬೇಡಿಕೆ
ಈ ತಂತ್ರಜ್ಞಾನಗಳು ಜಗತ್ತಿನಲ್ಲಿ ಅತ್ಯಂತ ಗಂಭೀರವಾದ ಮಾರುಕಟ್ಟೆ ಪಾಲನ್ನು ಹೊಂದಿವೆ. ಯುಎಸ್ಎ, ಯುರೋಪ್ ಮತ್ತು ದೂರದ ಪೂರ್ವದಲ್ಲಿ ಈ ತಂತ್ರಜ್ಞಾನದೊಂದಿಗೆ ಕೆಲಸ ಮಾಡುವ ಅನೇಕ ಕಂಪನಿಗಳಿವೆ. ನಮ್ಮ ದೇಶದಲ್ಲಿ ಈ ತಂತ್ರಜ್ಞಾನಗಳನ್ನು ಬಳಸುವುದರಿಂದ ಆರ್ಥಿಕವಾಗಿ ಲಾಭ ಪಡೆಯಬಹುದು ಎಂದು ಒರ್ಡು ತಿಳಿಸಿದರು.


ಇದನ್ನೂ ಓದಿ:  New York: ಮಗುವಿಗೆ ಒಂದೊಳ್ಳೆ ಹೆಸರು ಸೂಚಿಸುವುದಕ್ಕೆ ಪೋಷಕರು ಲಕ್ಷ ರೂಪಾಯಿ ಕೊಡ್ತಾರಂತೆ!


ITU ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಪ್ರಾಜೆಕ್ಟ್ ಮ್ಯಾನೇಜರ್ ಮುಸ್ತಫಾ ಒರ್ಡು ಜಪಾನ್‌ನಲ್ಲಿ ತಮ್ಮ ಸ್ನಾತಕೋತ್ತರ ಪದವಿ, ಯುಎಸ್‌ನಲ್ಲಿ ಮತ್ತು ಫ್ರಾನ್ಸ್‌ನಲ್ಲಿ ತಮ್ಮ ಡಾಕ್ಟರೇಟ್ ಅಧ್ಯಯನವನ್ನು ಪೂರ್ಣಗೊಳಿಸಿದರು. ನಂತರ ಟರ್ಕಿಯಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಲು ಮತ್ತು ವಿದೇಶದಲ್ಲಿ ಕಲಿತ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಬಯಸಿದ್ದರಿಂದ ಅವರು ಇಲ್ಲಿಗೆ ಮರಳಿರುವುದಾಗಿ ಸುದ್ದಿ ಮಾಧ್ಯಮಕ್ಕೆ ಒರ್ಡು ತಿಳಿಸಿದರು.

Published by:Ashwini Prabhu
First published: