Medicine: ವೈದ್ಯರಿಂದ ಗುಣಪಡಿಸಲಾಗದ ಮಗನ ರೋಗಕ್ಕೆ ಔಷಧ ಕಂಡುಹಿಡಿದ ತಂದೆ; ಈತ ಓದಿರುವುದು ಹೈ ಸ್ಕೂಲ್​ ಮಾತ್ರ

ಅಸ್ವಸ್ಥತೆಯ ರೋಗಲಕ್ಷಣಗಳನ್ನು ಕಡಿಮೆ ಮಾಡುವ ಏಕೈಕ ಔಷಧಿ ಚೀನಾದಲ್ಲಿ ಲಭ್ಯವಿಲ್ಲ ಎಂದು ಕ್ಸುಗೆ ಹೇಳಿದ ನಂತರ, ಅವನು ಸ್ವತಃ ಔಷಧಿಗಳನ್ನು ತಯಾರಿಸಲು ಶುರು ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ತಂದೆ-ಮಗ

ತಂದೆ-ಮಗ

  • Share this:
ತಮ್ಮ ಮಗುವು(Child) ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ(Treatment)ಗೆ ಬೇರೆಡೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದೆ ಇದ್ದಾಗ ತಂದೆ -ತಾಯಿ(Father-Mother)ಗೆ ಆಗುವ ನೋವು ಕೇವಲ ಅವರಿಗೆ ಮಾತ್ರ ಗೊತ್ತಿರುತ್ತದೆ. ಬಹುಶಃ ಈ ತಂದೆಯ ನೋವು ಅವರು ತಮ್ಮ ಮಗುವಿನ ಚಿಕಿತ್ಸೆ ನೀಡಲು ಸ್ವಂತ ಔಷಧಿ(Own Medicine)ಯನ್ನು ತಯಾರಿಸಲು ಪ್ರೇರೇಪಿಸಿದೆ ಎಂದರೆ ತಪ್ಪಾಗುವುದಿಲ್ಲ.

ಎರಡು ವರ್ಷದ ಮಗು ಹಾವೊಯಾಂಗ್ ಅಪರೂಪದ ಅನುವಂಶಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇದಕ್ಕೆ ಬೇಕಾದ ಚಿಕಿತ್ಸೆ ಚೀನಾದಲ್ಲಿ ಲಭ್ಯವಿಲ್ಲದ ಕಾರಣ ಬೇರೆ ದೇಶಕ್ಕೆ ಹೋಗುವ ಅಗತ್ಯವಿದೆ. ಆದರೆ ಈ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ದೇಶದ ಗಡಿಗಳನ್ನು ಮುಚ್ಚಲಾಗಿದೆ, ಆದ್ದರಿಂದ ಅವನು ಚಿಕಿತ್ಸೆಗಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ.

ಮನೆಯಲ್ಲೇ ಪ್ರಯೋಗಾಲಯ

ಆದಾಗ್ಯೂ, ಅಂಬೆಗಾಲಿಡುವ ಮಗುವಿನ ತಂದೆ ಕ್ಸು ವೀ ಭರವಸೆಯನ್ನು ಕಳೆದುಕೊಂಡಿಲ್ಲ. ತನ್ನ ಮಗನಿಗಾಗಿ ಔಷಧಿಯನ್ನು ತಯಾರಿಸಲು ಮನೆಯಲ್ಲಿಯೇ ಪ್ರಯೋಗಾಲಯವನ್ನು ಮಾಡಿಕೊಂಡಿದ್ದಾನೆ. “ಅದನ್ನು ಮಾಡಬೇಕೋ? ಬೇಡವೋ? ಎಂದು ಯೋಚಿಸಲು ನನಗೆ ನಿಜವಾಗಿಯೂ ಸಮಯವಿರಲಿಲ್ಲ. ಅದನ್ನು ಮಾಡಬೇಕಾಗಿತ್ತು" ಎಂದು 30 ವರ್ಷದ ತಂದೆ ಕುನ್ಮಿಂಗ್ ನಲ್ಲಿರುವ ತಮ್ಮ ಪ್ರಯೋಗಾಲಯದಿಂದ ಸುದ್ದಿ ಸಂಸ್ಥೆಗೆ ತಿಳಿಸಿದರು.

ಇದನ್ನೂ ಓದಿ: Fire in Express Train- ಜಮ್ಮು ತಾವಿ ದುರ್ಗ್ ಎಕ್ಸ್​ಪ್ರೆಸ್ ರೈಲಿನಲ್ಲಿ ಅಗ್ನಿಅವಘಡ

ಗುಣಪಡಿಸಲಾಗದ ರೋಗ

ಹಾವೊಯಾಂಗ್ ಮೆಂಕೆಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಇದನ್ನು ಗುಣಪಡಿಸಲಾಗದ ಆನುವಂಶಿಕ ಅಸ್ವಸ್ಥತೆ ಎಂದು ಹೇಳಲಾಗುತ್ತಿದ್ದು, ಮಕ್ಕಳಲ್ಲಿ ಮಿದುಳು ಹಾಗೂ ನರ ವ್ಯವಸ್ಥೆ ಬೆಳೆಯಲು ಅತ್ಯಂತ ಮುಖ್ಯವಾದ ತಾಮ್ರದ ಅಂಶ ಕಡಿಮೆಯಾಗಿರುವುದರಿಂದ ಈ ಅಸ್ವಸ್ಥತೆ ಮಕ್ಕಳನ್ನು ಕಾಡುತ್ತದೆ ಎಂದು ಹೇಳಲಾಗುತ್ತಿದೆ.

ಹೈಸ್ಕೂಲ್ ಓದಿರುವ ತಂದೆ

ಈ ಮಗುವಿನ ತಂದೆ ಕ್ಸು ಕೇವಲ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದ್ದು, ಅವನು ತನ್ನ ಮಗನಿಗೆ ಜೀವನದಲ್ಲಿ ಒಂದು ಅವಕಾಶವನ್ನು ಕಲ್ಪಿಸಿಕೊಡುವುದಕ್ಕಾಗಿ ತನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾನೆ. "ನನ್ನ ಮಗುವಿಗೆ ಚಲಿಸಲು ಅಥವಾ ಮಾತನಾಡಲು ಸಾಧ್ಯವಾಗದಿದ್ದರೂ, ಅವನು ಭಾವನೆಗಳನ್ನು ಹೊಂದಿದ್ದಾನೆ" ಎಂದು ಅವರು ಹೇಳಿದರು.

ಅಸ್ವಸ್ಥತೆಯ ರೋಗಲಕ್ಷಣಗಳನ್ನು ಕಡಿಮೆ ಮಾಡುವ ಏಕೈಕ ಔಷಧಿ ಚೀನಾದಲ್ಲಿ ಲಭ್ಯವಿಲ್ಲ ಎಂದು ಕ್ಸುಗೆ ಹೇಳಿದ ನಂತರ, ಅವನು ಸ್ವತಃ ಔಷಧಿಗಳನ್ನು ತಯಾರಿಸಲು ಶುರು ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಶಕ್ತಿ ಮೀರಿ ಪ್ರಯತ್ನ

"ನನ್ನ ಸ್ನೇಹಿತರು ಮತ್ತು ಕುಟುಂಬದವರು ಇದಕ್ಕೆ ವಿರುದ್ಧವಾಗಿದ್ದರು. ಅದು ಅಸಾಧ್ಯ ಎಂದು ಅವರು ಹೇಳಿದರು" ಎಂದು ಈ ಮಗುವಿನ ತಂದೆ ನೆನಪಿಸಿಕೊಂಡರು. ಆನುವಂಶಿಕ ಸ್ಥಿತಿಯ ಬಗ್ಗೆ ಮಾಹಿತಿ ಇಂಗ್ಲಿಷ್ ನಲ್ಲಿ ಲಭ್ಯವಿತ್ತು, ಆದ್ದರಿಂದ ಕ್ಸು ಅವುಗಳನ್ನು ಅರ್ಥಮಾಡಿಕೊಳ್ಳಲು ಅನುವಾದ ಸಾಫ್ಟ್‌ವೇರ್ ಅನ್ನು ಬಳಸಿದರು.

ಅವರು ತಮ್ಮ ತಂದೆಯ ಜಿಮ್ ನಲ್ಲಿ ಡಿಐವೈ ಲ್ಯಾಬ್ ಅನ್ನು ಸ್ಥಾಪಿಸಿದರು. ಅವರು ಆರು ವಾರಗಳ ಸತತ ಪ್ರಯತ್ನದಿಂದ ಕಾಪರ್ ಹಿಸ್ಟಿಡೈನ್ ನ ಒಂದು ಸೀಸೆಯನ್ನು ತಯಾರಿಸಿದರು. ಅವನು ಮೊದಲು ಅದನ್ನು ಮೊಲಗಳ ಮೇಲೆ ಪ್ರಯೋಗ ಮಾಡಿದನು, ನಂತರ ಔಷಧಿಯನ್ನು ತನ್ನ ದೇಹಕ್ಕೆ ಚುಚ್ಚಿಕೊಂಡು ಅಂತಿಮವಾಗಿ ತನ್ನ ಮಗನಿಗೆ ನೀಡಿದನು. ಆದಾಗ್ಯೂ ಈ ಔಷಧವು ಅಸ್ವಸ್ಥತೆಗೆ ಚಿಕಿತ್ಸೆಯಲ್ಲ.

ಫ್ರಾನ್ಸ್ ನ ಟೂರ್ಸ್ ಯೂನಿವರ್ಸಿಟಿ ಆಸ್ಪತ್ರೆಯ ಅಪರೂಪದ ರೋಗಗಳ ತಜ್ಞ ಪ್ರೊಫೆಸರ್ ಅನ್ನಿಕ್ ಟೌಟೈನ್, ಈ ಚಿಕಿತ್ಸೆಯು "ಜೀವನದ ಮೊದಲ ಮೂರು ವಾರಗಳಲ್ಲಿ ಇದನ್ನು ಬಹಳ ಮುಂಚಿತವಾಗಿ ನೀಡಿದರೆ ಕೆಲವು ಆನುವಂಶಿಕ ವೈಪರೀತ್ಯಗಳ ವಿರುದ್ಧ ತುಂಬಾನೇ ಸಮರ್ಥವಾಗಿ ಕೆಲಸ ಮಾಡುತ್ತದೆ" ಎಂದು ಹೇಳಿದರು.

ಇದನ್ನೂ ಓದಿ: Explained: ಭಾರತೀಯ ರೈಲ್ವೆಯ ಭಾರತ್ ಗೌರವ್ ಯೋಜನೆ ಎಂದರೇನು..? ಇಲ್ಲಿದೆ ವಿವರ..

ಮಗಳನ್ನು ನೋಡಿಕೊಳ್ಳುತ್ತಿರುವ ಪತ್ನಿ

ಇದು ರೋಗವನ್ನು ನಿಧಾನಗೊಳಿಸುತ್ತದೆ ಎಂದು ಕ್ಸು ಗೆ ತಿಳಿದಿದ್ದು, ಕ್ಸು ಅವರ ಪತ್ನಿ ನಗರದ ಮತ್ತೊಂದು ಭಾಗದಲ್ಲಿ ತಮ್ಮ ಐದು ವರ್ಷದ ಮಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇಂತಹ ಅಪರೂಪದ ರೋಗಗಳು 1 ಲಕ್ಷ ಶಿಶುಗಳಲ್ಲಿ ಒಬ್ಬರು ಮಾತ್ರ ಮೆಂಕೆಸ್ ಸಿಂಡ್ರೋಮ್ ನೊಂದಿಗೆ ಜನಿಸುತ್ತಾರೆ ಎಂದು ಅಂದಾಜಿಸಲಾಗಿದೆ.

ವೆಕ್ಟರ್ ಬಿಲ್ಡರ್ ಎಂಬ ಅಂತರರಾಷ್ಟ್ರೀಯ ಬಯೋಟೆಕ್ ಕಂಪನಿಯು ಕ್ಸು ಅವರ ಕೆಲಸದಲ್ಲಿ ಆಸಕ್ತಿ ತೋರಿಸಿ ಮತ್ತು ಕ್ಸು ಅವರೊಂದಿಗೆ ಮೆಂಕೆಸ್ ಸಿಂಡ್ರೋಮ್ ಗೆ ಜೀನ್ ಥೆರಪಿ ಸಂಶೋಧನೆಯನ್ನು ಪ್ರಾರಂಭಿಸುತ್ತಿದೆ.  
Published by:Latha CG
First published: