ತಾನು ಬೆಳೆದ ಈರುಳ್ಳಿ ಬೇಗ ಹಾಳಾಗದಂತೆ ತಡೆಯಲು ಈ ರೈತ ಮಾಡಿರುವ ಪ್ಲಾನ್ ನೋಡಿ, ಸಖತ್ತಾಗಿದೆ!

Benefits of Organic Farming: ಸುಮಾರು 6 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಾ ಬಂದಿರುವ ಸುಮೇರ್ , ಅಂದಿನಿಂದ ಇಂದಿನವರೆಗೆ ತಾನು ಮತ್ತು ತನ್ನ ಕುಟುಂಬ ಆಸ್ಪತ್ರೆಗೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ ಎನ್ನುತ್ತಾರೆ.

ಈರುಳ್ಳಿ

ಈರುಳ್ಳಿ

  • Share this:
ಸಾವಯವ ಕೃಷಿ (Organic Farming) ಇತ್ತೀಚಿನ ದಿನಗಳಲ್ಲಿ ತುಂಬಾ ಜನಪ್ರಿಯವಾಗಿದೆ. ಈ ಕೃಷಿ ವಿಧಾನದಿಂದ ರೈತರು ಹೆಚ್ಚಿನ ಆದಾಯವನ್ನು (Income) ಗಳಿಸಬಹುದು. ಜೊತೆಗೆ ಅದರದ್ದೇ ಆದ ಅನಾನುಕೂಲತೆಗಳನ್ನು ಕೂಡ ಹೊಂದಿದೆ. ಅದೇನೇ ಇದ್ದರೂ, ಹರಿಯಾಣದ ಸುಮೇರ್ ಸಿಂಗ್ ಎಂಬುವವರು, ರಾಸಾಯನಿಕ ಗೊಬ್ಬರಗಳಿಂದ (Chemical Fertilizer) ಆಗುವ ದುಷ್ಪರಿಣಾಮಗಳ ಕುರಿತು ತಿಳಿದುಕೊಂಡ ನಂತರ ಸಾವಯವ ಕೃಷಿ ಮಾಡಲು ನಿರ್ಧರಿಸಿದರು. ಹರಿಯಾಣದ ಧನಿ ಮಾಹು ಗ್ರಾಮದ ಸುಮೇರ್, 14 ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಅವರು ಅದರಿಂದ ಉತ್ತಮ ಆದಾಯ ಗಳಿಸುತ್ತಿರುವುದು ಮಾತ್ರವಲ್ಲ, ಇತರ ಕೃಷಿಕರು ಕೂಡ ತಮ್ಮನ್ನು ಅನುಸರಿಸುವಂತೆ ಪ್ರೇರಣೆ ನೀಡುತ್ತಿದ್ದಾರೆ.

ಸುಮೇರ್ 1999ರಲ್ಲಿ ಕೃಷಿ ಆರಂಭಿಸಿದರು ಮತ್ತು ಅವರ ಮುಖ್ಯ ಬೆಳೆ ಹತ್ತಿಯಾಗಿತ್ತು. ಇತರ ರೈತರಂತೆ ಅವರು ಕೂಡ ರಾಸಾಯನಿಕ ರಸಗೊಬ್ಬರಗಳನ್ನು ಬಳಸುತ್ತಿದ್ದರು. ಆದರೆ ಕ್ರಮೇಣ ಅವರ ಭೂಮಿ ಮತ್ತು ಕುಟುಂಬದ ಅರೋಗ್ಯ ಹಾಳಾಗತೊಡಗಿತು. ಎಚ್ಚೆತ್ತುಕೊಂಡ ಸುಮೇರ್, ಇತರ ಸಾವಯವ ಕೃಷಿಕರ ಮಾರ್ಗದರ್ಶನ ಪಡೆದುಕೊಂಡು, ಸಾವಯವ ಕೃಷಿ ಆರಂಭಿಸಿದರು.

1999ರಲ್ಲಿ ಕೇವಲ ಹತ್ತಿ ಬೆಳೆಯುತ್ತಿದ್ದ ಅವರು, ಇದೀಗ ತರಕಾರಿ, ಕಡಲೆಕಾಳು ಮತ್ತು ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಸುದೀರ್ಘ ಹಾದಿ ಸವೆಸಿದ್ದಾರೆ. ಅವರು ಇನ್ನಷ್ಟು ಹೆಚ್ಚು ಬೆಳೆಯನ್ನು ಬೆಳೆಯಲು ಬಯಸಿದರೂ, ನೀರಿನ ಕೊರತೆ ಹಾಗೂ ಮಣ್ಣಿನ ಗುಣಮಟ್ಟದಿಂದ ಅದು ಅವರಿಗೆ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: Kitchen Hacks: ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರದಂತೆ ಮಾಡಲು ಹೀಗೆ ಮಾಡಿ!

ಸುಮಾರು 6 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಾ ಬಂದಿರುವ ಸುಮೇರ್ , ಅಂದಿನಿಂದ ಇಂದಿನವರೆಗೆ ತಾನು ಮತ್ತು ತನ್ನ ಕುಟುಂಬ ಆಸ್ಪತ್ರೆಗೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ ಎನ್ನುತ್ತಾರೆ. ಅವರ ಕುಟುಂಬ ಮತ್ತು ನೆರೆ ಹೊರೆಯ ಮಂದಿ ಅವರ ತರಕಾರಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ.

ಸುಮೇರ್ ಅವರು ಬಹಳ ಸಮಯದಿಂದ ಸಾವಯವ ಉತ್ಪನ್ನಗಳನ್ನು ಖರೀದಿಸುತ್ತಾ ಬಂದಿರುವ , ಅದೇ ಹಳ್ಳಿಯ ಸುಖ್ ದರ್ಶನ್ ಎಂಬುವರು ಸಾವಯವ ಈರುಳ್ಳಿ ಮತ್ತು ಮಾರುಕಟ್ಟೆಯಿಂದ ತಂದ ಈರುಳ್ಳಿಯ ನಡುವಿನ ವ್ಯತ್ಯಾಸ ತಿಳಿಸುತ್ತಾ, ಸಾವಯವ ಈರುಳ್ಳಿ ಊಟಕ್ಕೆ ರುಚಿ ನೀಡುತ್ತದೆ. ಮಾತ್ರವಲ್ಲ ಆ ಈರುಳ್ಳಿಗಳನ್ನು ದೀರ್ಘಕಾಲ ಸಂಗ್ರಹಿಸಿಡಬಹುದಾಗಿದೆ ಎನ್ನುತ್ತಾರೆ.

ಇದನ್ನೂ ಓದಿ: Beauty Tips: ಈರುಳ್ಳಿ ಸಿಪ್ಪೆ ಸೇರದಿರಲಿ ತಿಪ್ಪೆ; ಅದರ ಪ್ರಯೋಜನಗಳನ್ನು ಕೇಳಿದ್ರೆ ಅಚ್ಚರಿ ಪಡ್ತೀರಾ..!

ಒಂದು ಎಕರೆಯಲ್ಲಿ 80 ಕ್ವಿಂಟಾಲ್‍ನಷ್ಟು ಈರುಳ್ಳಿ ಬೆಳೆಯುವ ಸುಮೇರ್, ತನ್ನದೇ ಆದ ಉಪಾಯಗಳನ್ನು ಬಳಸಿ ಸಾವಯವ ಕೃಷಿಯಲ್ಲಿ ಪ್ರಯೋಗಗಳನ್ನು ಮಾಡುತ್ತಾರೆ. ಅವರು ಬೆಳೆಗಳಿಗೆ ಹೊದಿಕೆ ಹಾಕಲು ಪ್ಲಾಸ್ಟಿಕ್‌ ಬಳಸುವ ಬದಲು, ಕೊಯ್ದ ಪೈರಿನ ಕೊಳೆ ಬಳಸುತ್ತಾರೆ. ಸುಮೇರ್ ಪ್ರಕಾರ, ಕೊಯ್ದ ಪೈರಿನ ಕೊಳೆ, ಮಣ್ಣಿನಲ್ಲಿ ದೀರ್ಘಕಾಲದವರೆಗೆ ತೇವಾಂಶ ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ ಮತ್ತು ಈ ವಿಧಾನ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ತುಂಬಾ ಪರಿಣಾಮಕಾರಿ.

ಸುಮೇರ್ ಅನುಸರಿಸುವ ಮತ್ತೊಂದು ತಂತ್ರವೆಂದರೆ, ಈರುಳ್ಳಿಯನ್ನು ಗೋಣಿ ಚೀಲದಲ್ಲಿ ಹಾಕುವ ಬದಲು, ಕಟ್ಟುಗಳಲ್ಲಿ ನೇತು ಹಾಕುವುದು. ಅವರು ಹೇಳುವ ಪ್ರಕಾರ, ಗೋಣಿ ಚೀಲದಲ್ಲಿ ಸಂಗ್ರಹಿಸಿಟ್ಟ ಈರುಳ್ಳಿ ಒತ್ತಿದಂತಾಗಿ ಮತ್ತು ಬಿಸಿಲಿಗೆ ಹಾಳಾಗುತ್ತವೆ. ಅವುಗಳನ್ನು ಕಟ್ಟುಗಳಲ್ಲಿ ನೇತು ಹಾಕುವುದರಿಂದ ಯಾವುದೇ ಹಾನಿ ಆಗುವುದಿಲ್ಲ.

ಈ ವಿಧಾನದಲ್ಲಿ ಒಂದು ಅಥವಾ ಎರಡು ಹಾನಿಗೆ ಒಳಗಾದರೂ ಸಹ, ಅವುಗಳನ್ನು ಸುಲಭವಾಗಿ ತೆಗೆದು ಹಾಕಬಹುದು ಮತ್ತು ಅದು ಉತ್ಪನ್ನ ಹಾಳಾಗುವುದನ್ನು ತಡೆಯುತ್ತದೆ ಎನ್ನುತ್ತಾರೆ ಅವರು.
Published by:Soumya KN
First published: