• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಕೆಲ್ಸ ಮಾಡಿಸಿಕೊಳ್ಳದೇ ವರ್ಷಕ್ಕೆ1 ಕೋಟಿ ಸ್ಯಾಲರಿ ಕೊಡುತ್ತಂತೆ! ಆದರೂ ಕಂಪನಿ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ನೌಕರ!

ಕೆಲ್ಸ ಮಾಡಿಸಿಕೊಳ್ಳದೇ ವರ್ಷಕ್ಕೆ1 ಕೋಟಿ ಸ್ಯಾಲರಿ ಕೊಡುತ್ತಂತೆ! ಆದರೂ ಕಂಪನಿ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ನೌಕರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಉದ್ಯೋಗಿ ತನಗೆ ಒಳ್ಳೆ ಸಂಬಳ ಕೊಟ್ಟರೂ, ಮಾಡಲು ಏನೂ ಕೆಲಸವಿಲ್ಲ ಅಂತ ತನ್ನ ಕಂಪನಿಯ ಬಾಸ್ ನನ್ನು ನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಮಾಡಿದ್ದಾನೆ.

  • Trending Desk
  • 2-MIN READ
  • Last Updated :
  • Share this:

ಕೆಲವೊಬ್ಬರಿಗೆ ತಾವು ಮಾಡುವ ಉದ್ಯೋಗದಲ್ಲಿ(Job) ತುಂಬಾ ಕೆಲಸ ಇರಬಾರದು, ಆದರೆ ಕೈ ತುಂಬಾ ಸಂಬಳ(Salary) ಮಾತ್ರ ಎಣಿಸಬೇಕು ಅಂತ ಆಸೆ ಇದ್ದರೆ, ಇನ್ನೂ ಕೆಲವರಿಗೆ ಸಂಬಳಕ್ಕೆ ತಕ್ಕಂತೆ ಕೆಲಸ ಇರಬೇಕು, ಸಂಬಳಕ್ಕಿಂತ ಜಾಸ್ತಿ ಕೆಲಸ ಇರಬಾರದು ಅಂತ ಅನ್ನಿಸುತ್ತಿರುತ್ತದೆ. ಆದರೂ ಸಹ ಬಹುತೇಕರು ಆರಾಮಾಗಿ ಆಫೀಸಿನಲ್ಲಿ(Office) ಓಡಾಡಿಕೊಂಡು ಮಾಡುವ ಕೆಲಸ ಇದ್ದರೆ ಒಳ್ಳೆಯದು, ಗಂಟೆಗಟ್ಟಲೆ ಕಂಪ್ಯೂಟರ್(Computer) ಮುಂದೆ ಕುಳಿತು ಕಣ್ಣು ಮಿಟುಕಿಸದೆ ಕೆಲಸ ಮಾಡುವುದು ನಮಗೆ ಬೇಡ ಅಂತಾನೆ ಹೇಳ್ತಾರೆ.


ಇನ್ನೂ ಕೆಲವರು ತಾವು ಕೆಲಸ ಮಾಡುವುದೇ ಅವರ ಬಿಲ್ಲುಗಳನ್ನು ಪಾವತಿಸಲು ಸಹಾಯ ಮಾಡುತ್ತದೆ, ಅವರ ಜೀವನವನ್ನು ಇನ್ನಷ್ಟು ಆರಾಮದಾಯಕವಾಗಿಸುತ್ತದೆ ಎಂಬ ಕಾರಣಕ್ಕಾಗಿ ಅಂತ ಹೇಳಿದರೆ ಸುಳ್ಳಲ್ಲ.


ಕೆಲವೊಮ್ಮೆ ನಾವು ನೋಡಿರುವ ಹಾಗೆ ಕೆಲವೊಬ್ಬರಿಗೆ ಅವರ ಕಂಪನಿಯಲ್ಲಿ ಮೈ ತುಂಬಾ ಕೆಲಸವಿದ್ದು, ಒಂದು ನಿಮಿಷವು ಸಹ ಬಿಡುವು ಸಿಗುವುದಿಲ್ಲ, ಆದರೆ ಸಂಬಳ ಅವರ ಕೆಲಸಕ್ಕೆ ತಕ್ಕಂತೆ ಇರುವುದಿಲ್ಲ ಅಂತ ಹೇಳಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ಜಾಸ್ತಿ ಸಂಬಳವಿರುತ್ತದೆ, ಆದರೆ ಮಾಡಲು ಅಷ್ಟೊಂದು ಕೆಲಸವಿರುವುದಿಲ್ಲ ಅಂತ ಹೇಳಬಹುದು. ಇಲ್ಲಿಯೂ ಸಹ ಅಂತಹದೇ ಒಂದು ಸ್ಟೋರಿ ಇದೆ ನೋಡಿ.. ಈ ವ್ಯಕ್ತಿಗೆ ವರ್ಷಕ್ಕೆ 1 ಕೋಟಿ ರೂಪಾಯಿಗಿಂತ ಹೆಚ್ಚು ಸಂಬಳ ಸಿಗುತ್ತಂತೆ, ಆದರೆ ಕಚೇರಿಯಲ್ಲಿ ಮಾಡಲು ಏನೂ ಕೆಲಸವಿಲ್ಲವಂತೆ.


ಅನೇಕರು ಇದನ್ನು ಡ್ರೀಮ್ ಜಾಬ್ ಅಂತ ಹೇಳಬಹುದು, ಆದರೆ ಈ ಉದ್ಯೋಗಿಯು ವಾಸ್ತವವಾಗಿ ತನ್ನ ಬೋರ್ ಆದ ಕೆಲಸದ ಬಗ್ಗೆ ತುಂಬಾನೇ ಬೇಸರಗೊಂಡು ಎಂತಹ ಕೆಲಸ ಮಾಡಿದ್ದಾನೆ ಗೊತ್ತೇ? ಅದನ್ನು ಕೇಳಿದರೆ ನಿಮಗೆ ನಗಬೇಕೋ? ಅಳಬೇಕೋ ಅನ್ನೋದು ಅರ್ಥವಾಗುವುದಿಲ್ಲ. ಈ ಉದ್ಯೋಗಿ ತನಗೆ ಒಳ್ಳೆ ಸಂಬಳ ಕೊಟ್ಟರೂ, ಮಾಡಲು ಏನೂ ಕೆಲಸವಿಲ್ಲ ಅಂತ ತನ್ನ ಕಂಪನಿಯ ಬಾಸ್ ನನ್ನು ನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಮಾಡಿದ್ದಾನೆ.


ಇದನ್ನೂ ಓದಿ: Four Legs Baby: ಆಗತಾನೇ ಹುಟ್ಟಿದ ಕಂದಮ್ಮನಿಗೆ ಎರಡಲ್ಲ, 4 ಕಾಲು! ವಿಚಿತ್ರ ಮಗು ನೋಡಿ ತಂದೆ-ತಾಯಿಗೇ ಶಾಕ್


ಕೈ ತುಂಬಾ ಸಂಬಳ, ಆದರೆ ಮಾಡಲು ಕೆಲಸವಿಲ್ಲ


Mirror.Co.UK ವರದಿಯ ಪ್ರಕಾರ, ಡಬ್ಲಿನ್ ನ ಐರಿಷ್ ರೈಲ್ ನಲ್ಲಿ ಕೆಲಸ ಮಾಡುವ ಹಣಕಾಸು ವ್ಯವಸ್ಥಾಪಕ ಡೆರ್ಮೊಟ್ ಅಲಸ್ಟೇರ್ ಮಿಲ್ಸ್ ಅವರು ವರ್ಷಕ್ಕೆ 105,000 ಪೌಂಡ್ (ಅಂದಾಜು 1.06 ಕೋಟಿ ರೂಪಾಯಿ) ಪಡೆಯುತ್ತಿದ್ದರೂ ಸಹ ತನಗೆ ಮಾಡಲು ಯಾವುದೇ ಕೆಲಸವಿಲ್ಲ ಎಂದು ತಮ್ಮ ಉದ್ಯೋಗದಾತರ ಬಗ್ಗೆ ದೂರು ದಾಖಲಿಸಿದ್ದಾರೆ.


ತಾನು ಕಚೇರಿಗೆ ಬಂದು ದಿನದ ಹೆಚ್ಚಿನ ಸಮಯವನ್ನು ದಿನಪತ್ರಿಕೆಯನ್ನು ಓದುತ್ತಾ, ಸ್ಯಾಂಡ್ವಿಚ್ ತಿನ್ನುತ್ತಾ ಮತ್ತು ಕಂಪನಿಯ ಕ್ಯಾಂಪಸ್ ನಲ್ಲಿ ವಾಕ್ ಮಾಡುತ್ತಾ ಕಳೆಯುತ್ತೇನೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಅವರು ತಾವು ಕೆಲಸ ಮಾಡುತ್ತಿರುವ ಕಂಪನಿಯ ಬಗ್ಗೆ ಬಹಿರಂಗವಾಗಿ ಹೇಳಿದ್ದರು. ಅಂದಿನಿಂದ ಅವರ ಕೆಲಸವನ್ನು ಕಡಿಮೆ ಮಾಡುತ್ತಾ ಬಂದರು ಎಂದು ಹೇಳಲಾಗುತ್ತಿದೆ. ಇವರು ಕಂಪನಿಯ ಬಗ್ಗೆ ದೂರುಗಳನ್ನು ಹೇಳಿದ್ದರಂತೆ. ತನ್ನ ದೂರಿನ ವಿಚಾರಣೆಯಲ್ಲಿ ಡಿಸೆಂಬರ್ 1 ರಂದು ಸಲ್ಲಿಸಿದ ಪುರಾವೆಗಳ ಪ್ರಕಾರ, ಐರಿಷ್ ರೈಲ್ ವಿರುದ್ಧ ಮಾತನಾಡಿದ್ದಕ್ಕಾಗಿ ತನಗೆ ದಂಡ ವಿಧಿಸಲಾಗಿದೆ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ.


ದಿನದ ಕೆಲಸ ಹೇಗಿರುತ್ತದೆ ಅಂತ ಹೇಳಿದ ಉದ್ಯೋಗಿ


"ನನಗೆ ಒಂದು ವಾರದಲ್ಲಿ ಏನಾದರೂ ಸ್ವಲ್ಪ ಕೆಲಸ ಮಾಡಲು ನನಗೆ ಸಿಕ್ಕರೆ ನಾನು ತುಂಬಾನೇ ಖುಷಿ ಪಡುತ್ತೇನೆ" ಎಂದು ಮಿಲ್ಸ್ ಐರ್ಲೆಂಡ್ ನ ಕಾರ್ಯಸ್ಥಳ ಸಂಬಂಧಗಳ ಆಯೋಗಕ್ಕೆ (ಡಬ್ಲ್ಯೂಆರ್‌ಸಿ) ತಿಳಿಸಿದರು. ಅವನ ಕೆಲಸಕ್ಕೆ ಈಗ ಅವನು ವಾರಕ್ಕೆ ಮೂರು ದಿನ ಕಚೇರಿಗೆ ಹೋಗಬೇಕಾಗುತ್ತದೆ, ಆದರೆ ಎರಡು ದಿನಗಳ ಕಾಲ ಮನೆಯಲ್ಲಿರುತ್ತಾನೆ.


"ನಾನು ನನ್ನ ಕ್ಯೂಬಿಕಲ್ ಗೆ ಹೋಗುತ್ತೇನೆ,  ಕಂಪ್ಯೂಟರ್ ಅನ್ನು ಆನ್ ಮಾಡುತ್ತೇನೆ, ಇಮೇಲ್ ಗಳನ್ನು ನೋಡುತ್ತೇನೆ. ಕೆಲಸಕ್ಕೆ ಸಂಬಂಧಿಸಿದ ಯಾವುದೇ ಇಮೇಲ್ ಗಳಿರುವುದಿಲ್ಲ, ಯಾವುದೇ ಸಂದೇಶಗಳಿರುವುದಿಲ್ಲ, ಸಂವಹನಗಳಿರುವುದಿಲ್ಲ" ಎಂದು ಮಿಲ್ಸ್ ತಮ್ಮ ಕೆಲಸದ ಸರಾಸರಿ ದಿನ ಹೇಗಿದೆ ಎಂದು ನೆನಪಿಸಿಕೊಂಡರು.


ಇದನ್ನೂ ಓದಿ: Viral Video: ಕಣ್ಣುಚ್ಚಿ ಕಣ್ಣು ಬಿಡೋದ್ರೊಳಗೆ 7 ಕೋಟಿ ಮೌಲ್ಯದ 5 ಕಾರು ಮಾಯ! ಕಳ್ಳರ ಕರಾಮತ್ತಿಗೆ ಪೊಲೀಸರೇ ಶಾಕ್!


"ನನಗೆ ಏನೂ ಕೆಲಸ ನೀಡುತ್ತಿಲ್ಲ ಅಂತ ಹೇಳಿದರೆ, ನನ್ನ ಕೌಶಲ್ಯಗಳನ್ನು ಬಳಸಬಾರದು ಎಂದರ್ಥ" ಎಂದು ಆ ವ್ಯಕ್ತಿ ನ್ಯಾಯಾಲಯಕ್ಕೆ ತಿಳಿಸಿದರು, ತರಬೇತಿ ಅವಕಾಶಗಳು ಮತ್ತು ಕಂಪನಿ ಸಭೆಗಳಿಂದ ತಮ್ಮನ್ನು ನಿರ್ಬಂಧಿಸಲಾಗಿದೆ ಎಂದು ಸಹ ಹೇಳಿದರು.

top videos
    First published: