ಪ್ರಪಂಚವು ಹಲವಾರು ಪ್ರಾಣಿ, ಪಕ್ಷಿ ಸಂಕುಲನಕ್ಕೆ ನೆಲೆಯಾಗಿದೆ. ವಿವಿಧ, ವಿಶೇಷ ಪ್ರಭೇದಗಳು, ಜಾತಿಗಳು ಪಕ್ಷಿ, ಪ್ರಾಣಿ ಜಗತ್ತಿನಲ್ಲಿವೆ. ಇಂಥ ಕೆಲವು ವಿಶೇಷ ಪ್ರಾಣಿಗಳು ಅಂತರ್ಜಾಲದಲ್ಲಿ (Internet) ಆಗಾಗ್ಗೆ ವೈರಲ್ (Viral) ಆಗುತ್ತಿರುತ್ತವೆ. ಅವುಗಳ ವಿಶಿಷ್ಟ ಗುಣಲಕ್ಷಣಗಳಿಂದ ಜನರ ಮೆಚ್ಚುಗೆ ಪಡೆಯುವುದಲ್ಲದೇ ಜನಸಾಮಾನ್ಯರಿಗೆ, ಪ್ರಾಣಿ ತಜ್ಞರಿಗೆ ಕೆಲವು ವಿಚಾರಗಳು ಅಚ್ಚರಿಯಾಗಿ ಉಳಿಯುತ್ತದೆ. ಪ್ರಸ್ತುತ, ಅಂತಹ ಅಸಾಮಾನ್ಯ ನಾಯಿಯ ಫೋಟೋವೊಂದು (Photo) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುವ ಈ ನಾಯಿಯ ವಿಶೇಷವಾಗಿ ಹಳದಿ ಪಂಜಗಳನ್ನು (Yellow Paws) ಹೊಂದಿದ್ದು ನಾಯಿಮರಿ ಕಾಲಿಗೆ ಹಳದಿ ಕೈಗವಸುಗಳನ್ನು ಧರಿಸಿದಂತೆ ಕಾಣುತ್ತದೆ. ಹಳದಿ ಬಣ್ಣದ ಪಂಜ ಹೊಂದಿರುವ ಈ ನಾಯಿಮರಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮಾರಿಗೋಲ್ಡ್ ಎಂಬ ಮಿಶ್ರತಳಿಯ ಈ ನಾಯಿಯು ಮೂರು ವರ್ಷ ವಯಸ್ಸಿನದು ಮತ್ತು ಯುನೈಟೆಡ್ ಕಿಂಗ್ಡಮ್ನ ಫಾರ್ಮ್ಗಳ ಸುತ್ತಲೂ ವಾಸಿಸುವುದು ಕಂಡುಬಂದಿದೆ. ಸಾಮರ್ಸೆಟ್ನಲ್ಲಿರುವ RSPCA ಬಾತ್ ಕ್ಯಾಟ್ಸ್ ಮತ್ತು ಡಾಗ್ಸ್ ಹೋಮ್ನಲ್ಲಿ ಈ ನಾಯಿಮರಿಯನ್ನು ಈಗ ಆರೈಕೆ ಮಾಡುತ್ತಿದ್ದು, ದತ್ತು ನೀಡಲು ಉತ್ತಮ ಮಾಲೀಕರಿಗಾಗಿ ಹುಡುಕಾಟ ನಡೆಸುತ್ತಿದೆ.
RSPCA ಬಾತ್ ಕ್ಯಾಟ್ಸ್ ಮತ್ತು ಡಾಗ್ಸ್ ಹೋಮ್ನ ಸಿಇಒ ರಾಚೆಲ್ ಜೋನ್ಸ್ ಹೇಳುವ ಪ್ರಕಾರ, ಮಾರಿಗೋಲ್ಡ್ ಹೇಗೆ ಹಳದಿ ಬಣ್ಣದ ಪಂಜ ಹೊಂದಿದೆ ಎಂಬುವುದರ ಬಗ್ಗೆ ಅಚ್ಚರಿ ಇದೆ. ಈ ನಾಯಿಮರಿ ಹೊಲಗಳಲ್ಲಿ ತಿರುಗುತ್ತಿರುವುದನ್ನು ರೈತರು ಗುರುತಿಸಿದ್ದಾರೆ. ಹೀಗಾಗಿ ಹೊಲಗಳಲ್ಲಿನ ಬಣ್ಣ ಅಥವಾ ಕೀಟನಾಶಕಗಳಿಂದಾಗಿ ನಾಯಿಯ ಪಂಜಗಳು ಹಳದಿ ಬಣ್ಣಕ್ಕೆ ತಿರುಗಿರಬಹುದು ಎಂದು ರಾಚೆಲ್ ಹೇಳಿದರು.
ಇದು ನಾಯಿಮರಿಯ ನೋಯುತ್ತಿರುವ ಪಾದಗಳು ಅಥವಾ ಅಯೋಡಿನ್ ಸ್ಪ್ರೇನ ಪರಿಣಾಮವೂ ಆಗಿರಬಹುದು. ನಾಯಿಮರಿಯ ಪಂಜಗಳಲ್ಲಿನ ಹಳದಿ ಬಣ್ಣ ಈಗ ಮಾಯವಾಗಲು ಪ್ರಾರಂಭಿಸಿದೆ ಮತ್ತು ಶೀಘ್ರದಲ್ಲೇ ಮಾರಿಗೋಲ್ಡ್ ಅದರ ನೈಸರ್ಗಿಕ ಬಿಳಿ ಬಣ್ಣಕ್ಕೆ ಹಿಂತಿರುಗುತ್ತದೆ ಎಂದಿದ್ದಾರೆ.
ಸಾಮಾನ್ಯವಾಗಿ ತಜ್ಞರು ಅಭಿಪ್ರಾಯಪಡುವ ಹಾಗೆ ನಾಯಿಯ ಪಂಜದ ಪ್ಯಾಡ್ಗಳು ಹಲವಾರು ಕಾರಣಗಳಿಗಾಗಿ ಬೇರೆ ಬಣ್ಣಕ್ಕೆ ತಿರುಗುತ್ತದೆ. ಹವಾಮಾನ ಅಥವಾ ಭೂಪ್ರದೇಶವನ್ನು ಲೆಕ್ಕಿಸದೆಯೇ ನಾಯಿಗಳು ತಮ್ಮ ಪಂಜಗಳನ್ನು ಸುತ್ತಲು ಬಳಸುವುದರಿಂದ ಹುಲ್ಲು ಅಥವಾ ಮಣ್ಣಿನ ಕಲೆಗಳಂತಹ ಪರಿಸರಕ್ಕೆ ಒಡ್ಡಿಕೊಳ್ಳುವುದರಿಂದ ಅವುಗಳ ಪಂಜ ಬೇರೆ ಬಣ್ಣಕ್ಕೆ ತಿರುಗಬಹುದು ಎಂದು ಹೇಳುತ್ತಾರೆ.
ಮಾರಿಗೋಲ್ಡ್ ಬೀದಿ ನಾಯಿಯಾಗಿರುವುದರಿಂದ ಆಕೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ, ಈ ನಾಯಿಯು ಮನೆಯಲ್ಲಿ ವಾಸಿಸಲು ಒಗ್ಗಿಕೊಳ್ಳುತ್ತಾಳೆ ಮತ್ತು ಅವಳಿಗೆ ನೆಲೆಸಲು ಸಮಯವನ್ನು ನೀಡುವ ಮಾಲೀಕರ ಅಗತ್ಯವಿದೆ ಎನ್ನುತ್ತಾರೆ ರಾಚೆಲ್.
ನಾಯಿಮರಿಗಳ ಪಂಜಗಳು ಸಾಮಾನ್ಯವಾಗಿ ಕಪ್ಪು ಬಣ್ಣ ಅಥವಾ ಬಿಳಿ ಬಣ್ಣದಲ್ಲಿರಬಹುದು. ಮತ್ತು ಒಂದು ನಾಯಿ ಈ ಎರಡು ಬಣ್ಣದ ಸಂಯೋಜನೆಯನ್ನು ಹೊಂದಿರಬಹುದು. ಮತ್ತು ನಾಯಿಮರಿಗಳ ಚರ್ಮಕ್ಕೆ ಅನಗುಣವಾಗಿ ಅವು ವಾಸ್ತವವಾಗಿ ಎಪಿಡರ್ಮಿಸ್ನಿಂದ ಮಾಡಲ್ಪಟ್ಟಿರುತ್ತದೆ ಎಂದು ಪ್ರಾಣಿ ತಜ್ಞರು ಹೇಳುತ್ತಾರೆ.
ವಿಶೇಷವಾಗಿ ಜನ್ಮತಾಳುವ ಹಲವು ಪ್ರಾಣಿಗಳನ್ನು ನಾವು ನೋಡುತ್ತಿರುತ್ತೇವೆ. ಇತ್ತೀಚೆಗಷ್ಟೇ ಕೆನಡಾದಲ್ಲಿ ಬುಲ್ಡಾಗ್ನೊಂದು ಹಸಿರು ತುಪ್ಪಳದ ನಾಯಿಮರಿಗೆ ಜನ್ಮ ನೀಡಿತ್ತು. ಹೀಗಾಗಿ ವಿಶಿಷ್ಟ ಬಣ್ಣಗಳಲ್ಲಿ ನಾಯಿಗಳನ್ನು ಗುರುತಿಸುವುದು ಇದೇ ಮೊದಲೇನಲ್ಲ. ಅಚ್ಚರಿಯ ಸಂಗತಿಯೆಂದರೆ, ಹಸಿರು ಬಣ್ಣದ ನಾಯಿ ಮರಿ ಆರೋಗ್ಯಕರ ಸ್ಥಿತಿಯಲ್ಲಿದ್ದು, ಸಾಮಾನ್ಯವಾಗಿ ವರ್ತಿಸುತ್ತಿದೆ. ಬುಲ್ಡಾಗ್ನ ಮಾಲೀಕ, ಟ್ರೆವರ್ ಅವರು ಹಸಿರು ಬಣ್ಣದ ನಾಯಿಮರಿಗಳ ಬಗ್ಗೆ ವಿಷಯ ಹಂಚಿಕೊಂಡಿದ್ದರು.
ಈ ರೀತಿಯಾದ ಅಪರೂಪದ ಘಟನೆ ಪ್ರಪಂಚದಾದ್ಯಂತ ಆಗಾಗ್ಗೆ ಸಂಭವಿಸಿರುತ್ತದೆ. ಇಂತಹ ಘಟನೆಗಳು ಅಚ್ಚರಿ ಜೊತೆಗೆ ಅವುಗಳ ಬಗೆಗಿನ ಹಿಂದಿನ ಅಸಲಿ ಕಾರಣದ ಬಗ್ಗೆ ಕೆಲವೊಮ್ಮೆ ತಜ್ಞರಿಗೂ ಸಹ ರಹಸ್ಯವಾಗಿ ಉಳಿದು ಬಿಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ