• Home
  • »
  • News
  • »
  • trend
  • »
  • Cute Puppy Video: ಚೆಂಡಿನಲ್ಲಿ ಆಡುವುದು ಹೇಗೆ ಅಂತ ನಾಯಿಮರಿಗೆ ಪಾಠ ನಡೀತಿದೆ, ಈ ಕ್ಯೂಟ್ ವಿಡಿಯೋ ನೋಡಿ

Cute Puppy Video: ಚೆಂಡಿನಲ್ಲಿ ಆಡುವುದು ಹೇಗೆ ಅಂತ ನಾಯಿಮರಿಗೆ ಪಾಠ ನಡೀತಿದೆ, ಈ ಕ್ಯೂಟ್ ವಿಡಿಯೋ ನೋಡಿ

ನಾಯಿಮರಿಗೆ ಚೆಂಡಿನಲ್ಲಿ ಆಡಲು ಕಲಿಸುತ್ತಿರುವ ನಾಯಿ

ನಾಯಿಮರಿಗೆ ಚೆಂಡಿನಲ್ಲಿ ಆಡಲು ಕಲಿಸುತ್ತಿರುವ ನಾಯಿ

ಒಂದು ಸಾಕುನಾಯಿ ಮನೆಯಲ್ಲಿರುವ ಮಗುವಿಗೆ ಹೇಗೆ ಗೊಂಬೆಗಳ ಜೋತೆಗೆ ಆಟವಾಡುವುದು ಅಂತ ಹೇಳಿಕೊಡುವ ವಿಡಿಯೋ ಮತ್ತು ಮಗುವಿನ ಜೊತೆಗೆ ಚೆಂಡಾಟ ಆಡುವ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಈಗ ಸ್ವಲ್ಪ ವಿಭಿನ್ನ ಎನ್ನುವಂತೆ ಮನೆಯಲ್ಲಿರುವ ಒಂದು ದೊಡ್ಡ ನಾಯಿ ಅಲ್ಲೇ ಸೋಫಾ ಮೇಲೆ ಕುಳಿತ ಪುಟ್ಟ ನಾಯಿಮರಿಗೆ ಚೆಂಡಾಟ ಹೇಗೆ ಆಡುವುದು ಅಂತ ಹೇಳಿಕೊಡುತ್ತಿದೆ ನೋಡಿ. ಒಟ್ಟಿನಲ್ಲಿ ನಾಯಿ ತುಂಬಾನೇ ಬುದ್ದಿವಂತ ಪ್ರಾಣಿ.

ಮುಂದೆ ಓದಿ ...
  • Share this:

ಇತ್ತೀಚೆಗೆ ಈ ಸಾಕು ನಾಯಿಗಳ (Pet Animals) ತುಂಟಾಟದ ಮತ್ತು ಮುದ್ದಾದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ನೋಡಲು ಸಿಕ್ಕಿವೆ. ಸಾಕುನಾಯಿಯೊಂದು ಮನೆಯ ಮಗುವಿನ ಜೊತೆಗೆ ಆಟವಾಡುವುದರಿಂದ ಹಿಡಿದು, ಸಾಕುನಾಯಿಯೊಂದು ಮನೆಯಲ್ಲಿ ಸೋಫಾ ಮೇಲೆ ಒಂಟಿಯಾಗಿ ಮಲಗಿ ಗೊಂಬೆಯನ್ನು (Doll) ಹಿಡಿದುಕೊಂಡು ಆಟವಾಡುತ್ತಿರುವ ವಿಡಿಯೋದವರೆಗೆ ಎಲ್ಲವೂ ಮುದ್ದು ಬರುವಂತಹ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನಾವೆಲ್ಲಾ ನೋಡಿ ಖುಷಿಪಟ್ಟಿದ್ದೇವೆ. ಈ ಹಿಂದೆ ನಿಮಗೆ ನೆನಪಿದ್ದರೆ, ಒಂದು ಸಾಕುನಾಯಿ (Pet Dog) ಮನೆಯಲ್ಲಿರುವ ಮಗುವಿಗೆ ಹೇಗೆ ಗೊಂಬೆಗಳ ಜೋತೆಗೆ ಆಟವಾಡುವುದು ಅಂತ ಹೇಳಿಕೊಡುವ ವಿಡಿಯೋ ಮತ್ತು ಮಗುವಿನ ಜೊತೆಗೆ ಚೆಂಡಾಟ ಆಡುವ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.


ಈಗ ಸ್ವಲ್ಪ ವಿಭಿನ್ನ ಎನ್ನುವಂತೆ ಮನೆಯಲ್ಲಿರುವ ಒಂದು ದೊಡ್ಡ ನಾಯಿ ಅಲ್ಲೇ ಸೋಫಾ ಮೇಲೆ ಕುಳಿತ ಪುಟ್ಟ ನಾಯಿಮರಿಗೆ ಚೆಂಡಾಟ ಹೇಗೆ ಆಡುವುದು ಅಂತ ಹೇಳಿಕೊಡುತ್ತಿದೆ ನೋಡಿ. ಒಟ್ಟಿನಲ್ಲಿ ನಾಯಿ ತುಂಬಾನೇ ಬುದ್ದಿವಂತ ಪ್ರಾಣಿ.


ಮುದ್ದಾದ ವಿಡಿಯೋದಲ್ಲಿ ಏನಿದೆ?
ಈಗ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ 18 ಸೆಕೆಂಡಿನ ಮುದ್ದಾದ ವಿಡಿಯೋದಲ್ಲಿ, ದೊಡ್ಡ ನಾಯಿಯೊಂದು ಸಣ್ಣ ನಾಯಿಮರಿಯೊಂದಕ್ಕೆ ಚೆಂಡಿನೊಂದಿಗೆ ಹೇಗೆ ಆಡಬೇಕೆಂದು ತರಬೇತಿ ನೀಡುತ್ತಿರುವುದನ್ನು ನಾವು ನೋಡಬಹುದು.


ಇದನ್ನೂ ಓದಿ: Cute Baby Video: ಮಲಗಿದ್ದ ಅಮ್ಮನಿಗೆ ಕಾಟ ಕೊಟ್ಟು ಎಬ್ಬಿಸಿದ ಪುಟಾಣಿ, ಫುಲ್ ವೈರಲ್ ಆಗ್ತಿದೆ ವಿಡಿಯೋ


ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಸಣ್ಣ ನಾಯಿಮರಿಯೊಂದು ಸೋಫಾದ ಮೇಲೆ ಇರುವುದನ್ನು ನಾವು ನೋಡಬಹುದು. ಒಂದು ದೊಡ್ಡ ನಾಯಿ ಅಲ್ಲಿಗೆ ಬಂದು ತನ್ನ ಬಾಯಿಯಲ್ಲಿ ನೀಲಿ ಬಣ್ಣದ ಟೆನ್ನಿಸ್ ಚೆಂಡನ್ನು ಇಟ್ಟುಕೊಂಡು ಆ ನಾಯಿಮರಿಯ ಹತ್ತಿರ ಬರುತ್ತದೆ. ಅದರ ನಂತರ ಆ ನಾಯಿಮರಿಗೆ ಚೆಂಡಿನೊಂದಿಗೆ ಹೇಗೆ ಆಡಬೇಕೆಂದು ತೋರಿಸುತ್ತದೆ.


ನಾಯಿಯು ಚೆಂಡನ್ನು ನಾಯಿಮರಿಯ ಬಳಿಯ ಸೋಫಾದ ಮೇಲೆ ಇಡುತ್ತದೆ, ನಂತರ ಅದು ಚೆಂಡನ್ನು ಹಿಡಿದುಕೊಳ್ಳಲು ಕೈಲಾದಷ್ಟು ಪ್ರಯತ್ನ ಮಾಡುತ್ತದೆ, ಆದರೆ ಅದು ಕಠಿಣವೆಂದು ಭಾವಿಸುತ್ತದೆ ಮತ್ತು ಅದರ ಬಾಯಿಯ ಸಣ್ಣ ಗಾತ್ರದಿಂದ ಮೋಸ ಹೋಗುತ್ತದೆ. ಚೆಂಡನ್ನು ಹಿಡಿಯಲು ವಿಫಲವಾದರೂ, ನಾಯಿಮರಿ ಮಾತ್ರ ಚೆಂಡು ಇಲ್ಲದೆಯೇ ಆ ದೊಡ್ಡ ನಾಯಿಯೊಂದಿಗೆ ಆಟವಾಡುವುದನ್ನ ಹಾಗೆಯೇ ಮುಂದುವರಿಸುತ್ತದೆ.


ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ..
ಪ್ರಾಣಿಗಳ ತಮಾಷೆಯ ಮತ್ತು ಮುದ್ದಾದ ವಿಡಿಯೋಗಳನ್ನು ಟ್ವೀಟ್ ಮಾಡುವ ಯೋಧಫಾರೆವರ್ ಎಂಬ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ ನಂತರ ಈ ವಿಡಿಯೋ ಆನ್ಲೈನ್ ನಲ್ಲಿ ತುಂಬಾನೇ ವೈರಲ್ ಆಗಿದೆ. ನಾಯಿ ಮತ್ತು ನಾಯಿಮರಿ ನಡುವಿನ ಮುದ್ದಾದ ಕ್ಷಣವನ್ನು ಸೆರೆಹಿಡಿದವರು ಯಾರು ಎಂದು ತಿಳಿದಿಲ್ಲ. "ನಾಯಿಮರಿಯು ಚೆಂಡಿನೊಂದಿಗೆ ಹೇಗೆ ಆಡಬೇಕೆಂದು ಕಲಿಸುತ್ತದೆ" ಎಂಬ ಶೀರ್ಷಿಕೆಯೊಂದಿಗೆ ಸಣ್ಣ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ.


ಇದನ್ನೂ ಓದಿ: Fox in Bengaluru: ನಾಯಿ ಮರಿ ಅಂತ ನರಿ ಮರಿಗೆ ಮೊಸರನ್ನ ತಿನ್ನಿಸಿದ್ರು! ಸತ್ಯ ತಿಳಿದ ಮೇಲೆ ಮನೆಮಂದಿಗೆ ಶಾಕ್!


ಇದು ಹಂಚಿಕೆಯಾದಾಗಿನಿಂದ ಇಲ್ಲಿಯವರೆಗೆ 2 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಇಷ್ಟೇ ಅಲ್ಲದೆ ವಿಡಿಯೋವನ್ನು 10 ಸಾವಿರ ಬಾರಿ ಮರು ಹಂಚಿಕೊಂಡಿದ್ದಾರೆ.


ಮುದ್ದಾದ ವಿಡಿಯೋಗೆ ಕಾಮೆಂಟ್ ಹೇಗೆ ಬಂದಿವೆ ಗೊತ್ತೇ?
"ಹಿರಿಯ ತನ್ನಲ್ಲಿರುವ ಜ್ಞಾನವನ್ನು ಮುಂದಿನ ತಲೆಮಾರಿನ ಸೋದರಸಂಬಂಧಿಗಳಿಗೆ ರವಾನಿಸುತ್ತಿದ್ದಾನೆ, ತುಂಬಾ ಸುಂದರವಾಗಿದೆ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ನಾನು ನನ್ನ ನಾಯಿಯೊಂದಿಗೆ ಆಟವಾಡುತ್ತಿದ್ದಾಗ, ಇಂತದೆಲ್ಲಾ ನಾನು ಗಮನಿಸಿದ್ದೇನೆ. ಅದು ಸಣ್ಣದರಿಂದ ಚೆಂಡನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವಾಗ ಅದು ಎಷ್ಟು ಜಾಗರೂಕವಾಗಿದೆ ಎಂದು ನೋಡಿ. ನನ್ನ ನಾಯಿ ಸಹ ನನ್ನ ಕೈಯಲ್ಲಿರುವ ಆಹಾರವನ್ನು ತೆಗೆದುಕೊಳ್ಳುವಾಗ ನನ್ನ ನಾಯಿ ತುಂಬಾನೇ ಜಾಗರೂಕವಾಗಿರುತ್ತದೆ. ನನ್ನ ಕೈಗಳಿಂದ ಆಹಾರವನ್ನು ತೆಗೆದುಕೊಳ್ಳುವಾಗ ಯಾವಾಗಲೂ ತನ್ನ ಹಲ್ಲುಗಳು ನನ್ನನ್ನು ಕೈಗಳನ್ನು ಸ್ಪರ್ಶಿಸದಂತೆ ಎಚ್ಚರದಿಂದಿರುತ್ತದೆ" ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

Published by:Ashwini Prabhu
First published: