AC Effect: ಈ ನಾಯಿಗೆ ಎಸಿ ಇಲ್ಲದೆ ನಿದ್ದೆ ಬರಲ್ಲ! AC ಆಫ್ ಮಾಡಿದ್ರೆ ಏನ್ಮಾಡುತ್ತೆ ನೋಡಿ

ಪೆಟ್‌ ಲವರ್‌ಗಳಿಗೆ ಇಷ್ಟವಾಗುವ ಮನಮೋಹಕ ಶ್ವಾನದ ಒಂದು ವಿಡಿಯೋ ಇಂದು ಟ್ರೆಂಡ್‌ನಲ್ಲಿದೆ. ಈ ವಿಡಿಯೋ ಸಾಕಷ್ಟು ಲೈಕ್‌ಗಳನ್ನು ಪಡೆಯುತ್ತಿದೆ. ಹಾಗೆಯೇ ಶೇರ್‌ ಕೂಡ ಆಗುತ್ತಿದೆ. ಈ ವಿಡಿಯೋದಲ್ಲಿ ಒಂದು ಶ್ವಾನವು ಮಲಗಿರುತ್ತದೆ, ಆ ಮನೆಯ ಒಡೆಯ ಮನೆಯಲ್ಲಿರುವ ಹವಾ ನಿಯಂತ್ರಣ (ಎ.ಸಿ) ವನ್ನು ಬಂದ್‌ ಮಾಡಿದ ತಕ್ಷಣ ಈ ಶ್ವಾನ ನಿದ್ದೆಯಿಂದ ಎಚ್ಚರಗೊಳ್ಳುವ ವಿಡಿಯೋ ಇಂದು ಹೆಚ್ಚು ಜನರ ಮೆಚ್ಚುಗೆಯನ್ನು ಪಡೆಯುತ್ತಿದೆ.

ಸಾಕು ನಾಯಿ

ಸಾಕು ನಾಯಿ

  • Share this:
ಆಧುನಿಕ ದಿನಗಳಲ್ಲಿ ಶ್ವಾನಗಳನ್ನು (Dog) ಸಾಕುವುದು ಎಲ್ಲರಿಗೂ ಅಚ್ಚು ಮೆಚ್ಚಿನ ಕೆಲಸವಾಗಿದೆ. ತಮ್ಮ ಸ್ವಂತ ಮಕ್ಕಳಂತೆ (Children) ಅವುಗಳನ್ನು ಸಾಕುತ್ತಿರುವ ಜನರು ಇಂದು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದ್ದಾರೆ. ಅವುಗಳನ್ನು ತುಂಬಾ ಮುದ್ದಿನಿಂದ ಬೆಳೆಸಿ, ಅವುಗಳಿಗೆ ಬೇಕಾದ ಆಹಾರ ನೀಡಿ, ಮನುಷ್ಯರಿಗೆ ಮಾಡಿಸುವಂತೆ ಹೆರ್‌ಸ್ಟೈಲ್‌, ಡ್ರೆಸಿಂಗ್‌ ಮಾಡಿಸುವವರೂ ಕೂಡ ಇದ್ದಾರೆ. ಪ್ರಖ್ಯಾತ ನಗರಗಳಲ್ಲಿ ಈ ಸಾಕು ಪ್ರಾಣಿಗಳಿಗೆ (Pet Animals) ಬಳಕೆ ಮಾಡುವ ವಸ್ತುಗಳನ್ನು ತೆಗೆದುಕೊಳ್ಳುವುದಕ್ಕಾಗಿಯೇ ದೊಡ್ಡ-ದೊಡ್ಡ ಶಾಪಿಂಗ್‌ ಮಾಲ್‌ಗಳು ಇವೆ ಎಂದರೆ ಆಶ್ಚರ್ಯವಾದರೂ ಸಹ ಇದು ಸತ್ಯ ಸಂಗತಿ ಆಗಿದೆ. ಇದರಿಂದ ನಮಗೆ ತುಂಬಾ ಸ್ಪಷ್ಟವಾಗಿ ತಿಳಿಯುವ ವಿಚಾರ ಎಂದರೆ ಪೆಟ್ಸ್‌ ಲವರ್‌ಗಳು (pet Lovers ಎಲ್ಲ ಕಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ.

ಎಸಿ ಆಫ್ ಮಾಡಿದ ತಕ್ಷಣ ಏಳುವ ಸಾಕು ನಾಯಿ 
ಪೆಟ್‌ ಲವರ್‌ಗಳಿಗೆ ಇಷ್ಟವಾಗುವ ಮನಮೋಹಕ ಶ್ವಾನದ ಒಂದು ವಿಡಿಯೋ ಇಂದು ಟ್ರೆಂಡ್‌ನಲ್ಲಿದೆ. ಈ ವಿಡಿಯೋ ಸಾಕಷ್ಟು ಲೈಕ್‌ಗಳನ್ನು ಪಡೆಯುತ್ತಿದೆ. ಹಾಗೆಯೇ ಶೇರ್‌ ಕೂಡ ಆಗುತ್ತಿದೆ. ಈ ವಿಡಿಯೋದಲ್ಲಿ ಒಂದು ಶ್ವಾನವು ಮಲಗಿರುತ್ತದೆ, ಆ ಮನೆಯ ಒಡೆಯ ಮನೆಯಲ್ಲಿರುವ ಹವಾ ನಿಯಂತ್ರಣ (ಎ.ಸಿ) ವನ್ನು ಬಂದ್‌ ಮಾಡಿದ ತಕ್ಷಣ ಈ ಶ್ವಾನ ನಿದ್ದೆಯಿಂದ ಎಚ್ಚರಗೊಳ್ಳುವ ವಿಡಿಯೋ ಇಂದು ಹೆಚ್ಚು ಜನರ ಮೆಚ್ಚುಗೆಯನ್ನು ಪಡೆಯುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ನಾಯಿಯ ವಿಡಿಯೋ 
ಶ್ವಾನಗಳು ತುಂಬಾ ಮುದ್ದಾಗಿರುವ ಸಾಕು ಪ್ರಾಣಿಗಳಾಗಿವೆ ಮತ್ತು ಅವುಗಳ ಆಟ-ತುಂಟಾಟಗಳನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಮನೆಯಲ್ಲಿ ವಾಸಿಸುವ ನಾಯಿಗಳು ಮನೆಯಲ್ಲಿ ಅಳವಡಿಸಲಾಗಿರುವ ಹವಾ ನಿಯಂತ್ರಣದಂತಹ ಸೌಕರ್ಯಗಳಿಗೆ ಮನುಷ್ಯ ಎಷ್ಟರ ಮಟ್ಟಿಗೆ ಅದಕ್ಕೆ ಒಗ್ಗಿಕೊಳ್ಳುತ್ತಾನೋ ಅಷ್ಟೆ ಈ ಶ್ವಾನಗಳು ಕೂಡ ಒಗ್ಗಿಕೊಳ್ಳುತ್ತವೆ ಎಂದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಅಪರೂಪ ಮತ್ತು ಮನಮೋಹಕದ ವಿಡಿಯೋದಲ್ಲಿ ಹವಾ ನಿಯಂತ್ರಣ (ಎ.ಸಿ)ವನ್ನು ಬಂದ್‌ ಮಾಡಿದಾಗ ತನ್ನ ಶ್ವಾನ ಹೇಗೆ ನಿದ್ದೆಯಿಂದ ಎಚ್ಚರಗೊಳ್ಳುತ್ತದೆ ಎಂಬುದನ್ನು ವ್ಯಕ್ತಿಯೊಬ್ಬರು ತೋರಿಸಿದ್ದಾರೆ.

ಇದನ್ನೂ ಓದಿ:  Viral Video: ಉಕ್ಕಿ ಹರಿಯುತ್ತಿರುವ ನದಿ ದಾಟಿದ ಜಾಣ ಆಡುಗಳು! ನೋಡಿ ಕಲೀರಪ್ಪಾ ಎಂದ ನೆಟ್ಟಿಗರು

ವಿಡಿಯೋವನ್ನು ಜೂನ್ 29 ರಂದು ಇನ್‌ಸ್ಟಾಗ್ರಾಮ್‌ನ crazy_dog_eden ಪುಟದಲ್ಲಿ ಈ ಅಪರೂಪದ ಮತ್ತು ಮನಮೋಹಕ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ ಮತ್ತು ಈ ವಿಡಿಯೋ ಇದುವರೆಗೆ 4.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ, ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗ್ತಿರೋ ವಿಡಿಯೋ ಇದಾಗಿದೆ. ಈ ಪುಟದಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ "ಎಸಿ ವ್ಯಸನಿಗಳ ರಿಯಾಲಿಟಿ" ಎಂದು ಕ್ಯಾಪ್ಷನ್‌ ಬರೆಯಲಾಗಿದೆ.

ವಿಡಿಯೋದಲ್ಲಿ ಏನಿದೆ
ಗೋಲ್ಡನ್ ಲ್ಯಾಬ್ರಡಾರ್ ರಿಟ್ರೈವರ್ ಶ್ವಾನವು ಸೋಫಾದ ಮೇಲೆ ನಿದ್ರಿಸುತ್ತಿರುವುದನ್ನು ವೀಡಿಯೊದ ಆರಂಭದಲ್ಲಿ ತೋರಿಸಲಾಗುತ್ತದೆ. ಇದರ ನಂತರ ಒಬ್ಬ ವ್ಯಕ್ತಿಯು ಎ.ಸಿ. ಯ ರಿಮೋಟ್‌ ತೆಗೆದುಕೊಂಡು ಅದನ್ನು ಕೂಡಲೇ ಬಂದ್‌ ಮಾಡುತ್ತಾನೆ. ಆಗ ತಕ್ಷಣ ಶ್ವಾನ ಎಚ್ಚರಗೊಂಡು, ತನ್ನ ಒಡೆಯನ ಕಡೆಗೆ “ಏಕೆ ಎ.ಸಿ. ಬಂದ್‌ ಮಾಡಿದ್ದು” ಎಂಬ ಪ್ರಶ್ನಾ ನೋಟವನ್ನು ಅವನತ್ತ ಚೆಲ್ಲುತ್ತದೆ. ಅದಕ್ಕೆ "ಮೇರಾ ಎಸಿ ಕ್ಯೂ ಬಂದ್‌ ಕಿಯಾ (ನೀವು ನನ್ನ ಎಸಿಯನ್ನು ಏಕೆ ಆಫ್ ಮಾಡಿದ್ದೀರಿ)" ಎಂದು ಹಿಂದಿಯಲ್ಲಿ ಇರುವ ಶಿರ್ಷಿಕೆಯನ್ನು ಈ ವಿಡಿಯೋಗೆ ನೀಡಲಾಗಿದೆ.


View this post on Instagram


A post shared by eden🐶 (@crazy_dog_eden)
ಮನಮೋಹಕ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ
ಈ ವಿಡಿಯೋ ಒಂದು ಸಲ ನೋಡಿದರೆ ಸಾಕು ಮತ್ತೆ-ಮತ್ತೆ ನೋಡಬೇಕು ಎಂದು ಅನಿಸುವಷ್ಟು ಮುದ್ದಾಗಿದೆ. ಈ ಜಾಗತಿಕ ತಾಪಮಾನದಲ್ಲಿ ಮನುಷ್ಯರಷ್ಟೆ ಅಲ್ಲದೇ ಪ್ರಾಣಿಗಳು ಕೂಡ ಈ ಬಿಸಿಲಿನಿಂದ ಪರದಾಡುತ್ತವೆ. ಅವುಗಳಿಗೂ ತಂಪಾದ ಸ್ಥಳಗಳಲ್ಲಿ ಇರಬೇಕು ಎಂದು ಅನಿಸುತ್ತದೆಯೋ ಏನೋ ಅದಕ್ಕೆ ಈ ವಿಡಿಯೋ ಸಾಕ್ಷಿಯಾಗುತ್ತಿರುವುದು ಸುಳ್ಳಲ್ಲ.

ಇದನ್ನೂ ಓದಿ:  Cat And Kitten: ಬೆಕ್ಕಿನ ಮರಿಗಳ ಕ್ಯೂಟ್ ವಿಡಿಯೋ ಈಗ ಎಲ್ಲೆಡೆ ವೈರಲ್‌

ಏನೇ ಹೇಳಿ ಈ ವಿಡಿಯೋ ಮಾತ್ರ ಸಖತ್ ಆಗಿದೆ. ಸಾಕು ಪ್ರಾಣಿ ಪ್ರಿಯರು ಈ ತರಹದ ವಿಡಿಯೋವನ್ನು ಇನ್ನು ಮುಂದೆ ತಮ್ಮ ಶ್ವಾನಗಳ ಮೇಲೆ ಪ್ರಯೋಗ ಮಾಡಿದ್ರೂ ಏನ್‌ ಆಶ್ಚರ್ಯವಿಲ್ಲ ಬಿಡಿ.
Published by:Ashwini Prabhu
First published: