• Home
 • »
 • News
 • »
 • trend
 • »
 • ದೂರದಿಂದ ಬಜಾಜ್ ಸ್ಕೂಟರ್..ಹತ್ತಿರ ಬಂದಾಗ ಸೈಕಲ್!; 15 ವರ್ಷದ ಬಾಲಕನ ದ್ವಿಚಕ್ರ ಪ್ರೇಮವಿದು!

ದೂರದಿಂದ ಬಜಾಜ್ ಸ್ಕೂಟರ್..ಹತ್ತಿರ ಬಂದಾಗ ಸೈಕಲ್!; 15 ವರ್ಷದ ಬಾಲಕನ ದ್ವಿಚಕ್ರ ಪ್ರೇಮವಿದು!

ಆದಿತ್

ಆದಿತ್

15 ವರ್ಷ ವಯಸ್ಸಿನ ಈ ಬಾಲಕನ ಹೆಸರು ಆದಿತ್​​. ಕೇರಳ ಮೂಲದವನಾಗಿದ್ದು, ಆತನಿಗೆ ಸ್ಕೂಟರ್​ ಎಂದರೆ ಇಷ್ಟವೆಂದು ಕಾಣುತ್ತದೆ.

 • Share this:

  ಯುವಕರಿಗೆ ದ್ವಿಚಕ್ರ ವಾಹನಗಳೆಂದರೆ ಅತೀವ ಪ್ರೀತಿ. ಹಾಗಾಗಿ ತಮ್ಮಿಷ್ಟದ ಬೈಕ್​ಗಳನ್ನು ಸ್ಕೂಟರ್​ಗಳನ್ನು ಪ್ರೇಯಸಿಯಂತೆ ಕಾಣುತ್ತಾರೆ. ಮಾತ್ರವಲ್ಲದೆ, ಮತ್ತೊಬ್ಬರ ವಾಹನಕ್ಕಿಂತ ಚೆನ್ನಾಗಿ ಕಾಣಲು ಮಾಡಿಫೈ ಮಾಡುತ್ತಾರೆ. ಆದರಂತೆ ಇಲ್ಲೊಬ್ಬ 15 ವರ್ಷದ ಬಾಲಕ ತನ್ನ ಸೈಕಲ್​ ಅನ್ನು ಮಾಡಿಫೈ ಮಾಡಿದ್ದಾನೆ. ಸ್ಕೂಟರ್​ನಂತೆ ಕಾಣುವ ಹಾಗೆ ಮಾಡಿದ್ದಾನೆ. ಸದ್ಯ ಈ ಯುವಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.


  15 ವರ್ಷ ವಯಸ್ಸಿನ ಈ ಬಾಲಕನ ಹೆಸರು ಆದಿತ್​​. ಕೇರಳ ಮೂಲದವನಾಗಿದ್ದು, ಆತನಿಗೆ ಸ್ಕೂಟರ್​ ಎಂದರೆ ಇಷ್ಟವೆಂದು ಕಾಣುತ್ತದೆ. ಹಾಗಾಗಿ ಆದಿತ್​ ತನ್ನ ಸೈಕಲ್​ ಅನ್ನು ಬಜಾಜ್​ ಕಂಪನಿಯ ಚೇತಕ್​ ಸ್ಕೂಟರ್​​ ಬಾಡಿ ಬಳಸಿ ಮಾಡಿಫೈ ಮಾಡಿದ್ದಾನೆ.


  ಸದ್ಯ ಫೇಸ್​ಬುಕ್​ನಲ್ಲಿ ಈ ಆದಿತ್​ನ ವಿಡಿಯೋ ವೈರಲ್​ ಆಗಿದೆ. 6 ನಿಮಿಷಗಳ ವಿಡಿಯೋ ಇದಾಗಿದ್ದು, ಬಾಲಕ ದೂರದಿಂದ ಸ್ಕೂಟರ್​ನಲ್ಲಿ ಬರುವಂತೆ ಕಾಣುತ್ತದೆ. ಅಷ್ಟರಲ್ಲಿ ವಿಡಿಯೋ ಚಿತ್ರೀಕರಿಸುವಾತ ಸರಿಯಾಗಿ ಗಮನಿಸದೆ ಆದಿತ್​ನ ಬಳಿ ಹೆಲ್ಮೆಟ್​ ಎಲ್ಲಿ ಎಂದು ಕೇಳುತ್ತಾನೆ. ನಂತರ ಬಾಲಕ ಹೆಲ್ಮೆಟ್​ ಬೇಡವೆಂದು ಹೇಳುತ್ತಾನೆ. ಆ ಬಳಿಕ ವಿಡಿಯೋ ಚಿತ್ರೀಕರಿಸುವಾದ ಸರಿಯಾಗಿ ಗಮನಿದಾಗ ಅದು ಸೈಕಲ್​ ಎಂದು ಆತನಿಗೆ ತಿಳಯುತ್ತದೆ.
  ಇನ್ನು ಈ ಮಾಡಿಫೈ ಮಾಡಿದ ಸೈಕಲ್​ ಕಂಡು ಪೊಲೀಸರು ಕೂಡ ಕನ್​ಫ್ಯೂಶ್​ ಆಗಿದ್ದಾರಂತೆ. ಬಾಲಕ ಸುಮಾರು 80 ಕಿ.ಮೀಗಳನ್ನು ಈ ಸೈಕಲ್​ನಲ್ಲಿ ಕ್ರಮಿಸಿದ್ದಾನೆ ಎಂದು ವೀಡಿಯೋದಲ್ಲಿ ಹೇಳಿದ್ದಾನೆ.


  ಅಂದಹಾಗೆಯೇ ಈ ಯುವಕ ಮಾಡಿಫೈ ಮಾಡಿರುವ ಸೈಕಲ್​ಗೆ checy (Chetal+Cycle) ಎಂದು ಹೆಸರಿಟ್ಟಿದ್ಧಾನೆ.

  Published by:Harshith AS
  First published: