Viral News: ಬೆಕ್ಕೋ ಬ್ರೆಡ್ಡೋ? ಏನಿದು? ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ

ನೋಡಿದರೆ ಮನಸ್ಸಿಗೆ ಮುದ ನೀಡುವಂತಹ ಈ ಬೆಕ್ಕಿನ ಮರಿಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮವಾದ ರೆಡ್ಡಿಟ್‌ನಲ್ಲಿ "ಹೌ ಟು ಬಿಕಮ್ ಲೋಫ್" (ಬ್ರೆಡ್ ನ ತುಂಡು ಆಗುವುದು ಹೇಗೆ) ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಆರ್/ಕ್ಯಾಟ್ಸ್ ಎಂದು ಹೆಸರಿಸಲಾದ ಸಬ್ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್ ಬೆಕ್ಕು

ವೈರಲ್ ಬೆಕ್ಕು

  • Share this:
ನಾವೆಲ್ಲರೂ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಈ ಸಾಕು ಪ್ರಾಣಿಗಳಾದ (Pet Animals) ಬೆಕ್ಕು ಮತ್ತು ನಾಯಿಗಳ ಚೇಷ್ಟೆ ಮಾಡುತ್ತಿರುವಂತಹ ಮತ್ತು ಮುದ್ದಾದ ವೀಡಿಯೋಗಳನ್ನು ಪ್ರತಿದಿನ ಒಂದಲ್ಲ ಒಂದು ನೋಡುತ್ತಲೇ ಇರುತ್ತೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಇತ್ತೀಚೆಗೆ ಅನೇಕ ವಿಡಿಯೋಗಳನ್ನು (Video) ಜನರು ನೋಡಿ ಅವುಗಳನ್ನು ಇಷ್ಟಪಟ್ಟು ವೈರಲ್ (Viral) ಮಾಡುತ್ತಿದ್ದಾರೆ. ನಿನ್ನೆ ತಾನೇ ಒಂದು ಮುದ್ದಾದ ವೀಡಿಯೋ ವೈರಲ್ ಆಗಿದ್ದು, ಅದರಲ್ಲಿ ಒಂದು ಮಗುವು ಅಲ್ಲೇ ಕುಳಿತಂತಹ ಒಂದು ಬೆಕ್ಕಿಗೆ ಮುತ್ತು ನೀಡುತ್ತಿರುವುದನ್ನು ನಾವು ನೋಡಿದ್ದೆವು. ಈ ಮುದ್ದಾದ ವೀಡಿಯೋವನ್ನು (Video) ಬ್ಯೂಟೆಂಗೇಬೈಡೆನ್ ಎಂಬ ಹೆಸರಿನ ಟ್ವಿಟ್ಟರ್ (Twitter)‌ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು ಮತ್ತು ಇಲ್ಲಿಯವರೆಗೆ 2.5 ಮಿಲಿಯನ್ ವೀಕ್ಷಣೆಗಳನ್ನು ಪಡೆದಿತ್ತು ಎಂದು ತಿಳಿದುಕೊಂಡಿದ್ದೆವು.

ಇವತ್ತು ಸಹ ಇಂತಹದೇ ಮತ್ತೊಂದು ಹೊಸ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮುದ್ದಾದ ಬೆಕ್ಕಿನ ಮರಿಯೊಂದು ಒಂದು ಚಿಕ್ಕ ಗಾಜಿನ ಪಾತ್ರೆಯಲ್ಲಿ ಹೋಗಿ ಕುಳಿತುಕೊಳ್ಳುತ್ತದೆ ಮತ್ತು ಅದು ಹೊರಗಿನಿಂದ ನೋಡುವುದಕ್ಕೆ ಒಂದು ಬ್ರೆಡ್‌ನ ಒಂದು ಸ್ಲೈಸ್ ರೀತಿಯಲ್ಲಿ ಕಾಣಿಸುತ್ತದೆ ಎಂದು ಹೇಳಬಹುದು.

ಗಾಜಿನ ಪಾತ್ರೆ ಒಳಗೆ ಕೂತರೆ ಬ್ರೆಡ್

ಈ ವಿಡಿಯೋದಲ್ಲಿ ಈ ಪುಟ್ಟ ಬೆಕ್ಕಿನ ಮರಿ ಮೊದಲಿಗೆ ಆ ಗಾಜಿನ ಪಾತ್ರೆಯೊಳಗೆ ಒಂದು ತುದಿಯ ಮೇಲೆ ತನ್ನ ಕಾಲನಿಟ್ಟುಕೊಂಡು ನಿಂತಿತ್ತು, ತಕ್ಷಣಕ್ಕೆ ಒಳಗೆ ಇಳಿದು ತನ್ನ ದೇಹವನ್ನು ಮುದುಡಿಸಿಕೊಂಡು ಕುಳಿತುಕೊಂಡಿತು. ಆಗ ಅದನ್ನು ಯಾರಾದರೂ ತಕ್ಷಣಕ್ಕೆ ನೋಡಿದರೆ ಯಾವುದೋ ಒಂದು ಬ್ರೆಡ್‌ನ ಸ್ಲೈಸ್ ತರಹ ಕಾಣುವಂತಿತ್ತು.



ಎಷ್ಟು ಜಾಣ ಬೆಕ್ಕಿದು!

ಈ ವಿಡಿಯೋ ಪ್ರಾರಂಭವಾಗುವುದು ಒಂದು ಮುದ್ದಾದ ಪುಟ್ಟ ಬೆಕ್ಕಿನ ಮರಿ ಗಾಜಿನ ಬಾಣಲೆಯ ತುದಿಯ ಮೇಲೆ ಕಾಲುಗಳನ್ನು ಹೊರಕ್ಕೆ ಇರಿಸಿಕೊಂಡು ಕುಳಿತಿರುವ ದೃಶ್ಯದಿಂದ ಎಂದು ಹೇಳಬಹುದು. ಇಷ್ಟೇ ಅಲ್ಲದೆ ಈ ವೀಡಿಯೋಗೆ "ನಾನು ಇದರಲ್ಲಿ ಸರಿ ಹೊಂದಿದರೆ, ನಾನು ಕುಳಿತುಕೊಳ್ಳುತ್ತೇನೆ" ಪರಿಕಲ್ಪನೆಗೆ ನಿಜವಾಗಿ, ಬೆಕ್ಕಿನ ಮರಿ ಕೂಡ ಅದರ ಪಕ್ಕದಲ್ಲೇ ಇರುವ ಗಾಜಿನ ಕಂಟೇನರ್‌ನಲ್ಲಿ ಸರಿಯಾಗಿ ಹೊಂದಿಕೊಂಡಿರುವುದನ್ನು ನಾವು ಗಮನಿಸಬಹುದು, ಆದರೆ ಅದು ಕೇವಲ ಒಂದು ಬ್ರೆಡ್‌ನ ಸ್ಲೈಸ್ ನಂತೆ ಕಾಣುತ್ತದೆ ಮತ್ತು ನಿಜವಾದ ಬೆಕ್ಕಿನ ಮರಿಯ ಹಾಗೆ ಕಾಣುತ್ತಿಲ್ಲ ನೋಡಿ.

ಬ್ರೆಡ್ ಆಗಿ ಬದಲಾಗೋದು ಹೀಗೆ ನೋಡಿ

ನೋಡಿದರೆ ಮನಸ್ಸಿಗೆ ಮುದ ನೀಡುವಂತಹ ಈ ಬೆಕ್ಕಿನ ಮರಿಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮವಾದ ರೆಡ್ಡಿಟ್‌ನಲ್ಲಿ "ಹೌ ಟು ಬಿಕಮ್ ಲೋಫ್" (ಬ್ರೆಡ್ ನ ತುಂಡು ಆಗುವುದು ಹೇಗೆ) ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಆರ್/ಕ್ಯಾಟ್ಸ್ ಎಂದು ಹೆಸರಿಸಲಾದ ಸಬ್ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Viral News: ಗೊರಿಲ್ಲಾಗೆ ಸ್ಮಾರ್ಟ್​ಫೋನ್ ಗೀಳು, ಫೋನ್ ನೋಡ್ತಾ ಕೂತ್ರೆ ಏಳೋದೇ ಇಲ್ಲ

ಈ ಮುದ್ದಾದ ಬೆಕ್ಕಿನ ವಿಡಿಯೋ ಒಮ್ಮೆ ನೋಡಿದರೆ ಸಾಕು, ಇದು ನಿಮ್ಮ ಇಡೀ ದಿನವನ್ನು ವಿನೋದವಾಗಿರಿಸುತ್ತದೆ, ಇದು ಹಲವಾರು ನೆಟ್ಟಿಗರನ್ನು ತನ್ನೆಡೆಗೆ ಸೆಳೆದಿದೆ ಎಂದು ಹೇಳಬಹುದು. ಈ ವಿಡಿಯೋವನ್ನು ಸುಮಾರು 21 ಗಂಟೆಗಳ ಹಿಂದೆ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಬೆಕ್ಕುಗಳು ಮತ್ತು ಬೆಕ್ಕಿನ ಮರಿಗಳನ್ನು ಪ್ರೀತಿಸುವ ಜನರಿಂದ ಇದು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ.

6,600 ಕ್ಕೂ ಹೆಚ್ಚು ಅಪ್‌ವೋಟ್

ಇದು ಇಲ್ಲಿಯವರೆಗೆ 6,600 ಕ್ಕೂ ಹೆಚ್ಚು ಅಪ್‌ವೋಟ್‌ಗಳನ್ನು ಪಡೆದಿದೆ ಮತ್ತು 60ಕ್ಕೂ ಹೆಚ್ಚು ಕಾಮೆಂಟ್ ಗಳು ಸಹ ಇದಕ್ಕೆ ಬಂದಿವೆ ಎಂದು ಹೇಳಬಹುದು.

ಇದನ್ನೂ ಓದಿ: Banana: ಬಾಳೆಹಣ್ಣುಗಳೇಕೆ ನೇರವಾಗಿರದೆ ಬೆಂಡ್ ಆಗಿರುತ್ತೆ? ಮೇಲ್ಮುಖವಾಗಿ ಬೆಳೆಯೋದ್ಯಾಕೆ?

ರೆಡ್ಡಿಟ್ ಬಳಕೆದಾರರೊಬ್ಬರು ಉಲ್ಲಾಸದಿಂದ "ಈ ಬೆಕ್ಕಿನ ಮರಿಗೆ ಬಣ್ಣವನ್ನು ನೀಡಿದರೆ, ಅದು ಆಗ ಜಿಂಜರ್ ಬ್ರೆಡ್‌ನಂತೆ ಕಾಣುತ್ತದೆಯೇ" ಎಂದು ಕೇಳಿದ್ದಾರೆ. ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಅದು ಹೇಗೆ ತಕ್ಷಣವೇ ಮುದುಡಿಕೊಂಡು ಕುಳಿತುಕೊಂಡಿತು ನೋಡಿ" ಎಂದು ಕಾಮೆಂಟ್ ಮಾಡಿದ್ದಾರೆ.
Published by:Divya D
First published: