ಕಾಗೆ ಮಾಡಿದ ಕೆಲಸಕ್ಕೆ ನೀವು ಭೇಷ್​ ಎನ್ನಲೇಬೇಕು! ಯಾಕೆ ಅಂತೀರಾ ಈ ವಿಡಿಯೋ ನೋಡಿ

ಕಾಗೆಯೊಂದು ಯಾರೋ ಕುಡಿದು ಬಿಸಾಕಿದ ಪ್ಲಾಸ್ಟಿಕ್​ ಬಾಟಲಿಯನ್ನು ಕೊಕ್ಕಿನಿಂದ ಎತ್ತಿಕೊಂಡು ಬಂದಿದೆ. ನಂತರ ರಸ್ತೆ ಬದಿಯಲ್ಲಿದ್ದ ಹಳದಿ ಬಣ್ಣದ ಕಸದ ಡಬ್ಬಿಯನ್ನು ನೋಡಿ ಕೊಕ್ಕಿನಲ್ಲಿದ್ದ ಪ್ಲಾಸ್ಟಿಕ್​ ಬಾಟಲಿಯನ್ನು ಡಬ್ಬಿ ಒಳಕ್ಕೆ ಹಾಕಿ ಸ್ಚಚ್ಚತೆ ಹಾಗೂ ಪರಿಸರ ಕಾಳಜಿಯನ್ನು ಮೆರೆದಿದೆ. ಈ ಘಟನೆ ಅಮೆರಿಕದಲ್ಲಿ ನಡೆದಿದ್ದು, ವಿಡಿಯೋ ವೈರಲ್​​ ಆಗಿದೆ, ಅನೇಕರು ಸ್ವಚ್ಚತೆಯನ್ನು ಸಾರಿದ ಈ ಮೂಕ ಪಕ್ಷಿ ಮಾಡಿದ ಕೆಲಸಕ್ಕೆ ಭೇಷ್​ ಎಂದಿದ್ದಾರೆ.

@JS

@JS

 • News18
 • Last Updated :
 • Share this:
  ಇತ್ತೀಚೆಗೆ ಆನೆಯೊಂದು ಮನೆಯ ಹಿತ್ತಲಿಗೆ ಬಂದು ಅಲ್ಲಿದ್ದ ಕಸವನ್ನು ಕಸದ ಡಬ್ಬಿಯಲ್ಲಿ ಹಾಕುವ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಇದೀಗ ಪಕ್ಷಿಯೊಂದು ಅದೇ ರೀತಿ ಸ್ವಚ್ಚತೆಯ ಬಗೆಗೆ ಕಾಳಜಿಯನ್ನು ತೋರಿಸಿರುವ ವಿಡಿಯೋ ವೈರಲ್​​ ಆಗಿದೆ.

  ಕಾಗೆಯೊಂದು ಯಾರೋ ಕುಡಿದು ಬಿಸಾಕಿದ ಪ್ಲಾಸ್ಟಿಕ್​ ಬಾಟಲಿಯನ್ನು ಕೊಕ್ಕಿನಿಂದ ಎತ್ತಿಕೊಂಡು ಬಂದಿದೆ. ನಂತರ ರಸ್ತೆ ಬದಿಯಲ್ಲಿದ್ದ ಹಳದಿ ಬಣ್ಣದ ಕಸದ ಡಬ್ಬಿಯನ್ನು ನೋಡಿ ಕೊಕ್ಕಿನಲ್ಲಿದ್ದ ಪ್ಲಾಸ್ಟಿಕ್​ ಬಾಟಲಿಯನ್ನು ಡಬ್ಬಿ ಒಳಕ್ಕೆ ಹಾಕಿ ಸ್ಚಚ್ಚತೆ ಹಾಗೂ ಪರಿಸರ ಕಾಳಜಿಯನ್ನು ಮೆರೆದಿದೆ. ಈ ಘಟನೆ ಅಮೆರಿಕದಲ್ಲಿ ನಡೆದಿದ್ದು, ವಿಡಿಯೋ ವೈರಲ್​​ ಆಗಿದೆ, ಅನೇಕರು ಸ್ವಚ್ಚತೆಯನ್ನು ಸಾರಿದ ಈ ಮೂಕ ಪಕ್ಷಿ ಮಾಡಿದ ಕೆಲಸಕ್ಕೆ ಭೇಷ್​ ಎಂದಿದ್ದಾರೆ.

     ದೇಶದೆಲ್ಲೆಡೆ ಸ್ವಚ್ಚತೆ ಬಗೆಗೆ ಎಷ್ಟೇ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರು, ಮನುಷ್ಯ ಮಾತ್ರ ಜಾಣ ಕಿವುಡನಂತೆ ವರ್ತಿಸುತ್ತಿದ್ದಾನೆ. ಆದರೆ ಬಾಯಿ ಬರದ ಮೂಕ ಪ್ರಾಣಿಗಳು ಮಾಡುತ್ತಿರುವ ಪರಿಸರ ಕಾಳಜಿ ಕೆಲಸ ಮಾನವನನ್ನು ಮೀರಿಸಿದೆ. ತನ್ನ ಸೂಕ್ಷ್ಮ ಭಾವನೆಯ ಮೂಲಕ ಸ್ವಚ್ಚತೆಯನ್ನು ಸಾರಿದ ಈ ಕಾಗೆಯ ಮಾಡಿದ ಕೆಲಸವನ್ನು ನೋಡಿ ಮಾನವನ ದೃಷ್ಠಿಕೋನ ಬದಲಾಗಲಿ.
  First published: