Viral Story: ತಲೆ ಇಲ್ಲದೆ ಒಂದು ವಾರ ಬದುಕುತ್ತದೆ ಈ ಕೀಟ! ಆಮೇಲೂ ಸಾಯೋದು ತಿನ್ನೋಕೆ ಆಗದೆ ಹಸಿವಿನಿಂದ

Creature: ತಲೆಯಿಲ್ಲದೆ, ಆಲೋಚಿಸುವುದು ಬಿಡಿ, ಉಸಿರಾಡುವುದು, ಆಹಾರ ಸೇವಿಸುವುದು, ಕೇಳುವುದೇ ಆಸಾಧ್ಯ. ಆದರೆ ಸುಮಾರು ಒಂದು ವಾರದವರೆಗೆ ತಲೆಯಿಲ್ಲದೆ ಬದುಕಬಲ್ಲ ಇಂತಹ ಜೀವಿ ಭೂಮಿಯ ಮೇಲಿರುವುದು ನಿಜ.

ಜಿರಳೆ

ಜಿರಳೆ

  • Share this:
    ಸಾಮಾನ್ಯವಾಗಿ ಬೈಗುಳದ ರೂಪವಾಗಿ ನಿಮಗೆ ತಲೆ (Head) ಎಂಬದು ಇದೆಯಾ? ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಆಲೋಚಿಸದೆ (Without Thonking) ಸುಲಭವಾಗಿ ಮಾಡಬೇಕಾದ ಕೆಲಸವನ್ನು ಕಷ್ಟಪಟ್ಟು ಮಾಡಿದಾಗ ಆತನಿಗೆ ತಲೆನೇ ಇಲ್ಲ ಎಂದು ಹೇಳುತ್ತಾರೆ. ಅಂದರೆ, ಆತನಿಗೆ ಬುದ್ದಿ (Brain) ಇಲ್ಲ ಎಂಬರ್ಥದಲ್ಲಿ ತಲೆಯೇ ಇಲ್ಲ ಎನ್ನುತ್ತಾರೆ. ಆದರೆ ಒಂದು ಬಾರಿ ಆಲೋಚಿಸಿದಾಗ, ತಲೆ ಇಲ್ಲದೆ ಬದುಕಲು ಸಾಧ್ಯವೇ? ಮನುಷ್ಯನಾದವನು (Man) ತಲೆ ಇಲ್ಲದೆ ಬದುಕಿದ ಉದಾಹರಣೆ ಇದೆಯಾ? ಎಂದು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಏನೇ ಆದರು ಮನುಷ್ಯನಾಗಲಿ, ಪ್ರಾಣಿಯಾಗಲಿ (Animals) ತಲೆ ಅಥವಾ ರುಂಡವಿಲ್ಲದೆ ಬದುಕಲು ಆಸಾಧ್ಯ. ಆದರೆ ನಾವೀಗ ಹೇಳುತ್ತಿರುವ ಕೀಟವೊಂದು (Insect) ರುಂಡವಿಲ್ಲದೆ ಒಂದು ವಾರಗಳ ಕಾಲ ಬದುಕುತ್ತದೆ!. ಅಂದಹಾಗೆಯೇ ಆ ಕೀಟ ಯಾವುದು? ಈ ಸ್ಟೋರಿ ಓದಿ.

    ತಲೆಯಿಲ್ಲದೆ, ಆಲೋಚಿಸುವುದು ಬಿಡಿ, ಉಸಿರಾಡುವುದು, ಆಹಾರ ಸೇವಿಸುವುದು, ಕೇಳುವುದೇ ಆಸಾಧ್ಯ. ಆದರೆ ಸುಮಾರು ಒಂದು ವಾರದವರೆಗೆ ತಲೆಯಿಲ್ಲದೆ ಬದುಕಬಲ್ಲ ಇಂತಹ ಜೀವಿ ಭೂಮಿಯ ಮೇಲಿರುವುದು ನಿಜ. ಈ ಕೀಟದ ಹೆಸರು ಜಿರಳೆ.

    ಜಿರಳೆಗಳು ತಮ್ಮ ತಲೆ ಇಲ್ಲದೆ ಸುಮಾರು ಒಂದು ವಾರ ಬದುಕಬಲ್ಲವು. ವಾಸ್ತವವಾಗಿ, ಪ್ರಕೃತಿಯ ಈ ವರ್ಚಸ್ಸಿನ ಹಿಂದೆ ವಿಜ್ಞಾನವಿದೆ

    ಜಿರಳೆ ದೇಹವು ವಿಶೇಷ ರಚನೆಯನ್ನು ಹೊಂದಿದೆ

    ಒಮ್ಮೊಮ್ಮೆ ಮನೆಯ ಚರಂಡಿಯ ಹತ್ತಿರ, ಅಡುಗೆ ಮನೆ ಅಥವಾ ಬಾತ್ ರೂಂನಲ್ಲಿ ಜಿರಳೆ ಇರುವುದನ್ನು ನೀವು ನೋಡಿರಬಹುದು. ಆದರೆ ಅದು ತಲೆ ಇಲ್ಲದೆ ಒಂದು ವಾರ ಬದುಕಬಹುದು ಎಂದು ನೀವು ಯೋಚಿಸಿದ್ದೀರಾ? ವಾಸ್ತವವಾಗಿ ಜಿರಳೆ ತನ್ನ ದೇಹದ ವಿಶೇಷ ರಚನೆಯಿಂದಾಗಿ ಬದುಕುತ್ತದೆಯಂತೆ.

    ಇದನ್ನೂ ಓದಿ- Space Hotel: ಐದು ವರ್ಷದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮೊದಲ ಬಾಹ್ಯಾಕಾಶ ಹೋಟೆಲ್!

    ತಲೆ ಇಲ್ಲದೆ ಉಸಿರಾಡಬಹುದು

    ಜಿರಳೆ ತನ್ನ ತಲೆಯಿಲ್ಲದೆ ಒಂದು ವಾರ ಬದುಕಲು ಅದರ ದೇಹದಲ್ಲಿನ ತೆರೆದ ರಕ್ತಪರಿಚಲನಾ ವ್ಯವಸ್ಥೆಯೇ ಕಾರಣವಾಗಿದೆ. ಜಿರಳೆ ತನ್ನ ದೇಹದ ಮೇಲೆ ಸಣ್ಣ ರಂಧ್ರಗಳನ್ನು ಹೊಂದಿದ್ದು ಅದರ ಮೂಲಕ ಉಸಿರಾಡುತ್ತದೆ. ಅದಕ್ಕಾಗಿಯೇ ಜಿರಳೆ ಉಸಿರಾಡಲು ತನ್ನ ತಲೆಯ ಮೇಲೆ ಅವಲಂಬಿತವಾಗಿಲ್ಲ.

    ಇದನ್ನೂ ಓದಿ- Mobile Phone: ಈ ಭಯಾನಕ ಕಾಯಿಲೆ ಮೊಬೈಲ್​ ಬಳಕೆಯಿಂದ ಬರೋದಿಲ್ಲವಂತೆ! ಸಂಶೋಧಕರೇ ಹೇಳಿದ್ದಾರೆ ಕೇಳಿ

    ಜಿರಳೆಗಳು ಸಾಯಲು ಇದೇ ಕಾರಣ?

    ಜಿರಳೆ ಸಾಯೋದು ಹೇಗೆ ಗೊತ್ತಾ? ಬಾಯಾರಿಕೆಯಿಂದ ಜಿರಳೆ ಸಾಯುತ್ತದೆ. ಜಿರಳೆ ತಲೆಯನ್ನು ಬೇರ್ಪಡಿಸಿದಾಗ ಅದು ನೀರನ್ನು ಕುಡಿಯಲು ಸಾಧ್ಯವಾಗುವುದಿಲ್ಲ ಮತ್ತು ನಂತರ ಅದು ಬಾಯಾರಿಕೆಯಿಂದ ಸಾಯುತ್ತದೆ.
    Published by:Harshith AS
    First published: