news18-kannada Updated:February 21, 2021, 4:38 PM IST
ಬಾಟಲಿ
ಕುಡಿಯುವ ನೀರು ಬಾಟಲಿಯಲ್ಲಿ ಸಿಗುವಾಗಲೇ ಜನರು ಅಚ್ಚರಿ ಪಟ್ಟಿದ್ದರು. ನೀರುಗೂ ಹಣ ಕೊಡುವ ಕಾಲ ಬಂತಲ್ಲ ಎಂದು ಹಳ್ಳಿಯ ಜನರು ಮಾತನಾಡುತ್ತಿದ್ದರು. ಆದರೀಗ ಅದೇ ಬಾಟಲಿಯಲ್ಲಿ ಶುದ್ಧ ಗಾಳಿಯೂ ಕೂಡ ಮಾರಾಟವಾಗುತ್ತಿದೆ ಎಂದರೆ ನಂಬುತ್ತೀರಾ?. ನೀರಿನಂತೆ ಶುದ್ಧ ಗಾಳಿಯನ್ನು ಖರೀದಿಸುವ ಕಾಲ ಬಂದಿದೆ ಎಂದರೆ ನಂಬಲೇಬೇಕು!.
ಲಂಡನ್ನಲ್ಲಿ ಶುದ್ಧಗಾಳಿಯ ಮಾರಾಟ ಪ್ರಾರಂಭವಾಗಿದೆ. ಕೋರೋನಾ ಎಂಬ ಮಹಾಮಾರಿ ಜಗತ್ತಿನಾದ್ಯಂತ ಪಸರಿಸುತ್ತಿದ್ದಂತೆ ಶುದ್ಧ ಗಾಳಿಗೂ ಬರ ಬರುವ ಕಾಲ ಒಂದಿದೆ. ಅದರಲ್ಲೂ ಅಚ್ಚರಿಯೆಂದರೆ ಬಾಟಲಿಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಲಂಡನ್ ಬೇರೆ ದೇಶದಿಂದ ಶುದ್ಧಗಾಳಿಯನ್ನು ತರಿಸಿಕೊಂಡು ಬಾಟಲಿಯ ಮೂಲಕ ಮಾರಾಟ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ. ಇಂತಹ ಅಚ್ಚರಿಯ ವಿಚಾರ ಎಲ್ಲರನ್ನು ಬೆಚ್ಚಿಸುವಂತೆ ಮಾಡಿದೆ.
ಇನ್ನು ಶುದ್ಧಗಾಳಿ ಖರೀದಿಸಲು ವೆಬ್ಸೈಟ್ ಒಂದನ್ನು ನಿರ್ಮಿಸಲಾಗಿದೆ. ಅದರ ಮೂಲಕ ಮಾರಾಟ ನಡೆಸಲು ಮತ್ತು ಖರೀದಿಸಲು ಅವಕಾಶ ಕಲ್ಪಿಸಿದೆ.
ಎಲ್ಲವೂ ಕಾಂಚಣ ಮಯವಾಗಿದ್ದ ಪ್ರಪಂಚದಲ್ಲಿ ಇದೀಗ ಗಾಳಿಗೂ ಹಣ ನೀಡಬೇಕಾಗಿದೆ. 500 ಮಿಲಿ ಗಾಳಿ ಎರಡು ಸಾವಿರ ರೂಗೆ ಮಾರಾಟ ಮಾಡುತ್ತಿದೆ.
ಇನ್ನು ಶುದ್ಧಗಾಳಿ ಬಾಟಲಿಯು ಕಾರ್ಕ್ ಸ್ಟಾಪರ್ ನೊಂದಿಗೆ ಬರಲಿದೆ. ಜನರು ಅದನ್ನು ಖರೀದಿಸಿ ಒಂದು ಸೆಕೆಂಡು ಶುದ್ಧಗಾಳಿಯನ್ನು ಸೇವಿಸಿ ನಂತರ ಮುಚ್ಚಿಡಬೇಕು.
Published by:
Harshith AS
First published:
February 21, 2021, 4:36 PM IST