ಕ್ಯಾಲೆಂಡರ್ ಕಾಗದದಿಂದಲೂ ಹೂ ಅರಳುತ್ತದೆ: ಪೇಪರ್​ ಪ್ರಯೋಗದಿಂದ ಸಸಿಗಳನ್ನು ಬೆಳೆಯುತ್ತಿರುವ ಕಂಪನಿ

news18
Updated:October 7, 2018, 6:40 PM IST
ಕ್ಯಾಲೆಂಡರ್ ಕಾಗದದಿಂದಲೂ ಹೂ ಅರಳುತ್ತದೆ: ಪೇಪರ್​ ಪ್ರಯೋಗದಿಂದ ಸಸಿಗಳನ್ನು ಬೆಳೆಯುತ್ತಿರುವ ಕಂಪನಿ
  • Advertorial
  • Last Updated: October 7, 2018, 6:40 PM IST
  • Share this:
-ನ್ಯೂಸ್ 18 ಕನ್ನಡ

ಜನವರಿ ತಿಂಗಳಿಂದ ಮಾರಿಗೋಲ್ಡ್​ ಹೂವನ್ನು ಅರಳಿಸಬಹುದೆಂದು ಯೋಚಿಸಿದ್ದೀರಾ? ಇಲ್ಲ, ಏಪ್ರಿಲ್​ನಿಂದ ಪರಿಮಳ ಭರಿತ ತುಳಸಿ ಗಿಡವನ್ನು? ಅಥವಾ ವರ್ಷಾಂತ್ಯದಲ್ಲಿ ತಿಂಗಳುಗಳಿಂದ ಹೂ ಕುಂಡಗಳನ್ನು ತುಂಬಿಸುವ ಬಗ್ಗೆ ಅಲೋಚಿಸಿದ್ದೀರಾ? ಇದೆಂತಾ ಪ್ರಶ್ನೆಗಳು ಎಂದು ನಿಮ್ಮ ತಲೆಯನ್ನು ಕೊರೆಯುತ್ತಿರಬಹುದು. ಪ್ರಶ್ನೆ ಕೇಳಿದವರೇನು ಮೂರ್ಖರಾ ಎಂದು ಭಾವಿಸಿದರೆ ಬರುವ ಉತ್ತರ 21ಫೂಲ್ಸ್ ​. ಹೌದು 21ಫೂಲ್ಸ್​ ಎಂಬ ಸಂಸ್ಥೆಯು ಕ್ಯಾಲೆಂಡರ್​, ರಾಖಿ ಸೇರಿದಂತೆ ಹಲವು ವಸ್ತುಗಳಿಂದ ಸಸ್ಯಗಿಡಗಳನ್ನು ಬೆಳೆಯಬಹುದೆಂದು ತೋರಿಸಿಕೊಟ್ಟಿದೆ. ಇದೇ ಮೊದಲ ಬಾರಿ ಭಾರತದಲ್ಲಿ ಸಸ್ಯಗಿಡಗಳನ್ನು ಬೆಳೆಯುವ ಕಾಗದಗಳನ್ನು 21 ಫೂಲ್ಸ್​ ಸಂಸ್ಥೆ ಉತ್ಪಾದಿಸುತ್ತಿದೆ.

Divyanshu Asopa, Founder & CEO, 21Fools.


ಇಂತಹದೊಂದು ಅಪರೂಪದ ಐಡಿಯಾ ಹೊಳೆದಿದ್ದು ಮುಂಬೈ ಮೂಲದ ದಿವಾನ್ಶು ಅಸೊಪಾ ಅವರಿಗೆ. 2014ರಲ್ಲಿ ಆರಂಭವಾದ ಈ ಕಂಪನಿಯಲ್ಲಿ ಹತ್ತಿ ಮತ್ತು ಬೀಜಗಳಿಂದ ಕಾಗದಗಳನ್ನು ತಯಾರಿಸಲಾಗುತ್ತದೆ. ಈ ಕಾಗದಗಳನ್ನು ಮಣ್ಣಿನಲ್ಲಿ ಬಿತ್ತನೆ ಮಾಡಿದರೆ ಬೀಜಗಳು ಮೊಳಕೆಯೊಡೆಯುತ್ತದೆ. ಇಂತಹ ಬೀಜಗಳ ಕಾಗದಿಂದ ಕ್ಯಾಲೆಂಡರ್​ ಮತ್ತು ಇತರೆ ವಸ್ತುಗಳನ್ನು ಸಂಸ್ಥೆಯು ಉತ್ಪಾದಿಸುತ್ತಿದ್ದು, ಈ ಕಾಗದಗಳನ್ನು ಮಣ್ಣಿನಲ್ಲಿ ಹೂತಿದರೆ ಜನವರಿಯಲ್ಲಿ ಮಾರಿಗೋಲ್ಡ್​ ಅರಳಿದರೆ ಏಪ್ರಿಲ್​ ತಿಂಗಳ ಕಾಗದಲ್ಲಿ ತುಳಸಿಯು ಮೊಳಕೆಯೊಡುತ್ತದೆ.

ಮೊದಲ ಪ್ರಯತ್ನ:

ತನ್ನ ಕಾಲೇಜು ಜೀವನದಲ್ಲಿರುವಾಗಲೇ ಅಸೊಪಾ ಇಂತಹದೊಂದು ಪ್ರಯತ್ನಕ್ಕೆ ಕೈಹಾಕಿದ್ದರು. ದೆಹಲಿಯಲ್ಲಿ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೇಲ್​ನಲ್ಲಿದ್ದಾಗ, ಹಳೆಯ ವಿದ್ಯಾರ್ಥಿಗಳ ಕಾರ್ಯಕ್ರಮಕ್ಕೆ ಇಂತಹ ಕಾಗದಗಳನ್ನು ಬಳಸಿ ಶುಭಾಶಯ ಪತ್ರ ಮತ್ತು ಆಹ್ವಾನ ಪತ್ರಿಕೆಗಳನ್ನು ಸೃಷ್ಟಿಸಿದ್ದರು. ಆದರೆ ಮೊದಲ ಪ್ರಯತ್ನವೇ ವಿಫಲವಾಗಿತ್ತು. ಆದರೆ ಅಸೊಪಾ ಮಾತ್ರ ತನ್ನ ಗುರಿಯನ್ನು ಸಾಧಿಸುವ ಛಲದಲ್ಲಿದ್ದರು. ಹೀಗಾಗಿ ಜೈಪುರ್​ನಲ್ಲಿರುವ ಕಲ್ಪಾನಾ ಹ್ಯಾಂಡ್​ಮೇಡ್ ಪೇಪರ್​ ಕಾರ್ಖಾನೆಯಲ್ಲಿ ತನ್ನ ಪ್ರಯೋಗಗಳನ್ನು ಮುಂದುವರಿಸಿದ ಅವರು ಅಲ್ಲಿ ಯಶಕಂಡರು. ಈ ಪ್ರಯೋಗದ ಯಶಸ್ವಿಯೇ ಈಗ 21ಫೂಲ್ಸ್ ಎಂಬ ನೆಡುವ ಕಾಗದಗಳನ್ನು ಸೃಷ್ಟಿಸಲು ಅಸೊಪಾ ಅವರಿಗೆ ಪ್ರೇರಣೆಯಾಗಿದೆ.

ಆದರೆ ಅವರ ಈ ನಿರ್ಧಾರದ ಹಾದಿ ಮಾತ್ರ ಸುಗಮವಾಗಿರಲಿಲ್ಲ. ಆರಂಭದಲ್ಲಿ ಕಂಪನಿಯಲ್ಲಿ ಏಕೈಕ ವಿನ್ಯಾಸಕನಾಗಿ ದುಡಿದಿರುವ ಅಸೊಪಾ ಸ್ವತಃ ಮಾರಾಟ ಮಾಡಲು ಕೂಡ ತೆರಳುತ್ತಿದ್ದುರು. ಒಂದೆಡೆ ಕಂಪನಿ ಬೆಳೆಯುತ್ತಿದ್ದಂತೆ ಕೆಲಸದವರ ಕೊರತೆ ಕೂಡ ಅಸೊಪಾ ಅವರನ್ನು ಕಾಡಿದೆ. ಹೀಗಾಗಿ ಕಂಪನಿಯನ್ನು ಮುಂದಕ್ಕೆ ಕೊಂಡೊಯ್ಯಲು ಡೆಲಿವರಿ ಬಾಯ್​ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಪಟ್ಟಿರುವ ಕಷ್ಟಗಳನ್ನು ನೆನೆಯುತ್ತಾ ಅಸೊಪಾ ಈಗ ಮತ್ತಷ್ಟು ಹೊಸ ಪ್ರಯೋಗಗಳನ್ನು ಮಾಡುವ ತುಡಿತದಲ್ಲಿದ್ದಾರೆ. ಇದರಲ್ಲಿ ಮುಖ್ಯವಾಗಿ  ಮರದ ಕ್ಯಾಲೆಂಡರ್, ಟ್ಯಾಗ್​ಗಳು, ರಾಖಿ, ವೃತ್ತಪತ್ರಿಕೆ, ಕಟೌಟ್​ ಸೇರಿದಂತೆ ಹಲವು ಸುಧಾರಿತ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ.

ಪ್ಲಾನೆಟೇಬಲ್ ಕಾಗದಗಳನ್ನು ತಯಾರಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಜವಳಿ ಕಾರ್ಖಾನೆಗಳಿಂದ ಹತ್ತಿಯನ್ನು ಸಂಗ್ರಹಿಸಿ, ಅದನ್ನು ಸ್ಥಿರತೆಯಿಂದ ಕೂಡಿರುವಂತೆ ಮಾಡಲಾಗುತ್ತದೆ. ನಂತರ ಅವುಗಳಿಗೆ ನೀರು ಮತ್ತು ಗಮ್​ ಮತ್ತು ಬೀಜಗಳನ್ನು ಮಿಶ್ರಣ ಮಾಡಲಾಗುತ್ತದೆ. ಈ ಮಿಶ್ರಣವನ್ನು ಆಯತಾಕಾರದ ತಟ್ಟೆಯಲ್ಲಿ ಇರಿಸಿ, ಬೀಜದ ಕಾಗದಗಳನ್ನು ತಯಾರಿಸಲು ಒಣಗಿಸಲಾಗುತ್ತದೆ. ಬಳಿಕವಷ್ಟೇ ಇದನ್ನು ಕಾಗದಗಳ ರೂಪಕ್ಕೆ ತರಲಾಗುತ್ತದೆ ಎನ್ನುತ್ತಾರೆ ಅಸೊಪಾ.

ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಸಂಸ್ಥೆಯು ಗೂಗಲ್, ವೈಕಾಮ್18, ಪೆಪ್ಪರ್​ಫ್ರೈ, ಫ್ಲಿಪ್​ಕಾರ್ಟ್​, ಹ್ಯಾಟ್,ಬಿಎಂಡಬ್ಲ್ಯು, ರಿಲಯನ್ಸ್ ಸೇರಿದಂತೆ ಹಲವಾರು ಗ್ರಾಹಕರೊಂದಿಗೆ ಕೈ ಜೋಡಿಸಿದೆ. ಪೆಪ್ಪರ್​ಫ್ರೈ ಸಂಸ್ಥೆಗಾಗಿ ಬೀಜಗಳ ಕಾಗದಗಳನ್ನು ನಾವು ರಚಿಸಿದ್ದೇವೆ. ಹಾಗೆಯೇ ಮಾರುತಿ ಸುಜುಕಿ ಕಂಪನಿಗಾಗಿ ಬೀಜಗಳ ಕಾಗದದ ಕಾರು ಡಂಗ್ಲರ್​ಗಳನ್ನು ತಯಾರಿಸಿದ್ದೇವೆ ಎಂದು ಅಸೊಪಾ ಹೇಳಿದರು.21ಫೂಲ್ಸ್ ಸಂಸ್ಥೆಯು ಸದ್ಯ ನಗರಗಳ ಗ್ರಾಹಕರನ್ನು ಗಮನದಲ್ಲಿಟ್ಟು ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿಯೇ ಮಾರಿಗೋಲ್ಡ್​ ಸಸ್ಯ, ಟೊಮ್ಯಾಟೊ, ತುಳಸಿ ಸೇರಿದಂತೆ ಹಲವು ಬೀಜಗಳ ಕಾಗದಗಳನ್ನು ತಯಾರಿಸಲಾಗುತ್ತಿದೆ. ಈ ಕಾಗದಗಳು ಶೇ.85-90 ರಷ್ಟು ಮೊಳಕೆಯೊಡೆಯುತ್ತದೆ. ಕೆಲ ಬಾರಿ ಹವಾಮಾನದ ಏರಿಳಿತದಿಂದ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತದೆ. ಉದಾ: ವೈಲ್ಡ್​ಫ್ಲಾವರ್​ಗಳು ದೆಹಲಿ ಹವಾಮಾನಕ್ಕೆ ಸರಿ ಹೊಂದುತ್ತದೆ. ಆದರೆ ಇದೇ ಸಸಿಗಳು ಮುಂಬೈನ ವಾತಾವರಣದಲ್ಲಿ ಮೊಳಕೆಯೊಡೆಯುವುದಿಲ್ಲ ಎಂದು ಅವರು ತಿಳಿಸುತ್ತಾರೆ.

21ಫೂಲ್ಸ್​ ಉತ್ಪನ್ನಗಳು ಮುಂದಿನ ದಿನಗಳಲ್ಲಿ ಜನಪ್ರಿಯ ಉತ್ಪನ್ನವಾಗಲಿದೆ. ಏಕೆಂದರೆ ವರ್ಷದ ಕೊನೆಯಲ್ಲಿ ಸಾಮಾನ್ಯವಾಗಿ ಕ್ಯಾಲೆಂಡರ್​ಗಳು ಮೂಲೆ ಸೇರುತ್ತದೆ. ಆದರೆ ನಮ್ಮ ಕ್ಯಾಲೆಂಡರ್​ನಿಂದ 12 ಸಸ್ಯಗಳ ಸುಂದರ ಉದ್ಯಾನವನ್ನೇ ಸೃಷ್ಟಿಸಿಕೊಳ್ಳಬಹುದು ಆತ್ಮ ವಿಶ್ವಾಸ ವ್ಯಕ್ತಪಡಿಸುತ್ತಾರೆ ಸಂಸ್ಥೆಯ ಸಿಇಒ ದಿವಾನ್ಶು ಅಸೊಪಾ.
First published:October 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ