• Home
 • »
 • News
 • »
 • trend
 • »
 • Covid-19 ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡಿದ್ದಕ್ಕೆ ತನ್ನ ಉದ್ಯೋಗಿಗಳಿಗೆ ಈ ಕಂಪನಿ ಏನು ನೀಡಿದೆ ನೋಡಿ!

Covid-19 ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡಿದ್ದಕ್ಕೆ ತನ್ನ ಉದ್ಯೋಗಿಗಳಿಗೆ ಈ ಕಂಪನಿ ಏನು ನೀಡಿದೆ ನೋಡಿ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Yolk Recruitment: ಎಷ್ಟೋ ಕಂಪನಿಗಳು ಕೆಲಸ ಇರದೇ ತಮ್ಮ ಉದ್ಯೋಗಿಗಳಿಗೆ ಮನೆಗೆ ಕಳುಹಿಸಿದ್ದನ್ನು ಸಹ ನಾವು ನೋಡಿದ್ದೇವೆ ಮತ್ತು ಕೇಳಿರುತ್ತೇವೆ. ಇಂತಹ ಸಂದರ್ಭದಲ್ಲಿ ಕೆಲವೇ ಕೆಲವು ಕಂಪನಿಗಳು ಮಾತ್ರ ಸ್ವಲ್ಪವೂ ಸಮಯವನ್ನು ವ್ಯರ್ಥ ಮಾಡದೆಯೇ ಕೆಲಸ ಮಾಡಿದ್ದು ಇದೆ.

 • Share this:

  ಕೋವಿಡ್-19 ವೈರಸ್ (Covid-19) ಹಾವಳಿಯ ಸಮಯದಲ್ಲಿ ಅನೇಕ ಕಂಪನಿಗಳು (Company) ಈ ಲಾಕ್‌ಡೌನ್‌ನಿಂದಾಗಿ (Lockdown) ತಮ್ಮ ಕಟ್ಟಡಗಳಿಗೆ ಬೀಗ ಹಾಕಿ ತನ್ನ ಉದ್ಯೋಗಿಗಳನ್ನು (Employees) ಮನೆಯಿಂದಲೇ ಕೆಲಸ ಮಾಡಲು (Work From Home) ಹೇಳಿ ಅವರಿಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದು ನಾವೆಲ್ಲರೂ ನೋಡಿಯೇ ಇರುತ್ತೇವೆ. ಎಷ್ಟೋ ಕಂಪನಿಗಳು ಮನೆಯಿಂದ ಕೆಲಸ ಮಾಡುವ ತಮ್ಮ ಉದ್ಯೋಗಿಗಳನ್ನು ಕೆಲಸದ ಬಗ್ಗೆ ಗಮನವನ್ನು ಕೇಂದ್ರೀಕರಿಸಲು ಸಹಾಯವಾಗಲೆಂದು ಕಾಲಕಾಲಕ್ಕೆ ವರ್ಚುವಲ್ ಮೀಟಿಂಗ್‌ಗಳನ್ನು(Virtual Meeting) ಮಾಡುತ್ತಾ ತಮ್ಮ ಕೆಲಸಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ನೋಡಿಕೊಂಡರು ಎಂದು ಹೇಳಬಹುದು.


  ಎಷ್ಟೋ ಕಂಪನಿಗಳು ಕೆಲಸ ಇರದೇ ತಮ್ಮ ಉದ್ಯೋಗಿಗಳಿಗೆ ಮನೆಗೆ ಕಳುಹಿಸಿದ್ದನ್ನು ಸಹ ನಾವು ನೋಡಿದ್ದೇವೆ ಮತ್ತು ಕೇಳಿರುತ್ತೇವೆ. ಇಂತಹ ಸಂದರ್ಭದಲ್ಲಿ ಕೆಲವೇ ಕೆಲವು ಕಂಪನಿಗಳು ಮಾತ್ರ ಸ್ವಲ್ಪವೂ ಸಮಯವನ್ನು ವ್ಯರ್ಥ ಮಾಡದೆಯೇ ಕೆಲಸ ಮಾಡಿದ್ದು ಇದೆ.


  ಎಷ್ಟೋ ಕಂಪನಿಗಳು ತಮ್ಮ ಉದ್ಯೋಗಿಗಳ ಕೆಲಸವನ್ನು ಮೆಚ್ಚಿ ಬೋನಸ್ ನೀಡಿರುವುದಾಗಲಿ, ಒಂದು ಮೆಚ್ಚುಗೆಯ ಮಾತನ್ನು ಸಹ ಅಡಿರುವುದಿಲ್ಲ. ಇಂತಹ ಒಂದು ಪರಿಸ್ಥಿತಿಯಲ್ಲಿ ಚೆನ್ನಾಗಿ ಕೆಲಸ ಮಾಡಿದ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 55 ಉದ್ಯೋಗಿಗಳನ್ನು ಯುಕೆ ಮೂಲದ ಕಂಪನಿಯು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಕೆಲಸ ಮಾಡಿದ್ದಕ್ಕಾಗಿ ಧನ್ಯವಾದ ಹೇಳಲು ಅವರನ್ನೆಲ್ಲಾ ಒಂದು ರಜೆಗೆ ಕರೆದೊಯ್ಯುತ್ತಿದೆ.


  ಕಾರ್ಡಿಫ್ ಮೂಲದ ಯೋಕ್ ರೆರ್ಕ್ಯೂಟ್‌ಮೆಂಟ್ ಕಂಪನಿಯು ಏಪ್ರಿಲ್‌ನಲ್ಲಿ ಕಂಪನಿಯ ರಜಾ ದಿನದಂದು ಬರೀ ಉತ್ತಮ ಕೆಲಸವನ್ನು ಪ್ರದರ್ಶಿಸಿದ ಉದ್ಯೋಗಿಗಳನ್ನು ಅಲ್ಲದೆ ಎಲ್ಲಾ ಉದ್ಯೋಗಿಗಳನ್ನು ಟೆನೆರಿಫ್‌ಗೆ ಕರೆದೊಯ್ಯುತ್ತಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.


  "ಯೋಕ್ ರೆರ್ಕ್ಯೂಟ್‌ಮೆಂಟ್ ಕಂಪನಿಯ ಎಲ್ಲಾ ಉದ್ಯೋಗಿಗಳು ಪ್ರವಾಸಕ್ಕೆಂದು ಟೆನೆರಿಫ್‌ಗೆ ಹೊರಟಿದ್ದಾರೆ. ನಮ್ಮ ಐತಿಹಾಸಿಕ 2021ರ ಫಲಿತಾಂಶಗಳಲ್ಲಿ ಕೇವಲ ಉನ್ನತವಾಗಿ ಕೆಲಸ ಮಾಡಿದವರಲ್ಲದೆ, ಎಲ್ಲಾ ಉದ್ಯೋಗಿಗಳನ್ನು ಕರೆದೊಯ್ಯಲಾಗುತ್ತಿದೆ" ಎಂದು ಕಂಪನಿಯು ಲಿಂಕ್ಡ್ ಇನ್‌ನಲ್ಲಿ ಹೇಳಿಕೊಂಡಿದೆ.


  "ಪ್ರತಿಯೊಬ್ಬರೂ ಕೆಲಸ ಬಗ್ಗೆ ಕಾಳಜಿ ವಹಿಸಿ ಗೆಲ್ಲುವ ಸಂಸ್ಕೃತಿಯನ್ನು ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ, ಇದರರ್ಥ ಬರಿ ಗೆದ್ದವರನಲ್ಲದೇ ಕಂಪನಿಯ ಏಳಿಗೆಗಾಗಿ ದುಡಿದ ಎಲ್ಲಾ ಉದ್ಯೋಗಿಗಳನ್ನು ಕರೆದೊಯ್ಯಲಾಗುತ್ತಿದೆ, ಯಾರನ್ನೂ ಹಿಂದೆ ಬಿಡಲಾಗುವುದಿಲ್ಲ" ಎಂದು ಕಂಪನಿಯು ಬರೆದಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಕಂಪನಿಗೆ ಸೇರ್ಪಡೆಯಾದ ಉದ್ಯೋಗಿಗಳು ಸಹ ಈ ನಾಲ್ಕು ದಿನಗಳ ರಜಾದಿನವನ್ನು ಕಳೆಯಲಿದ್ದಾರೆ ಎಂದು ಕಂಪನಿ ತಿಳಿಸಿದೆ.


  "ನಾವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಸಹ ಅದನ್ನು ತುಂಬಾನೇ ಧೈರ್ಯದಿಂದ ಮತ್ತು ತ್ವರಿತಗತಿಯಲ್ಲಿ ಉತ್ತಮ ಗುಣಮಟ್ಟದೊಂದಿಗೆ ಮಾಡಲು ನಾವು ಪ್ರಯತ್ನಿಸುತ್ತೇವೆ". ಇದೇ ಕಾರಣದಿಂದ ಇದನ್ನು ಸಾಧ್ಯವಾಗಿಸಲಾಗಿದೆ ಎಂದು ಯೋಕ್ ರೆರ್ಕ್ಯೂಟ್‌ಮೆಂಟ್ ಕಂಪನಿಯು ಹೇಳಿದೆ.


  ಇದನ್ನು ಓದಿ: Humanitarian Story: ಅಂದು ಸುನಾಮಿಯಿಂದ ಬದುಕುಳಿದ ಹುಡುಗಿಗೀಗ ವಿವಾಹದ ಸಂಭ್ರಮ! ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ ಐಎಎಸ್ ಅಧಿಕಾರಿ!


  ಬಿಬಿಸಿ ವರದಿಯ ಪ್ರಕಾರ ಈ ರಜಾದಿನಕ್ಕೆಂದು 100,000 ಪೌಂಡ್‌ಗಳಿಗಿಂತ ಎಂದರೆ ಸುಮಾರು 1 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ವೆಚ್ಚ ಮಾಡಲಾಗುವುದು ಎಂದು ಕಂಪನಿ ಅಂದಾಜಿಸಿದೆ.


  ಯೋಕ್ ರೆರ್ಕ್ಯೂಟ್‌ಮೆಂಟ್ ಕಂಪನಿಯ ಮುಖ್ಯ ವಾಣಿಜ್ಯ ಅಧಿಕಾರಿ ಪವನ್ ಅರೋರಾ ಅವರು "2020 ನಮ್ಮ ಇಡೀ ಉದ್ಯಮದಲ್ಲಿ ನಿಜವಾಗಿಯೂ ಕಠಿಣ ಸಮಯವಾಗಿತ್ತು, ನಾವು ಉದ್ಯೋಗ ಮಾರುಕಟ್ಟೆಯನ್ನು ತಡೆಹಿಡಿಯಲಾಗಿತ್ತು. ನಮ್ಮ ಸಿಬ್ಬಂದಿಯವರು ಅನೇಕ ಜನರು ಈ ಕೋವಿಡ್ ಸಮಯದಲ್ಲಿ ಮನೆಯಿಂದ ಕಳೆದ ಎರಡು ವರ್ಷಗಳಿಂದ ಸತತವಾಗಿ ಚೆನ್ನಾಗಿ ಕೆಲಸ ಮಾಡಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಲು ಬಯಸಿದ್ದೇವೆ” ಎಂದು ಹೇಳಿದರು.


  ಇದನ್ನು ಓದಿ: Crocodile: 6 ವರ್ಷಗಳಿಂದ ಕುತ್ತಿಗೆಗೆ ಟೈರ್ ಸಿಕ್ಕಿಸಿಕೊಂಡು ಓಡಾಡುತ್ತಿದೆ ಈ ಮೊಸಳೆ! ಇದನ್ನು ನೋಡಿದ ಪ್ರಾಣಿ ಪ್ರೇಮಿ ಏನು ಮಾಡಿದ ಗೊತ್ತಾ?


  ಈ ಕಂಪನಿಯ ಲಿಂಕ್ಡ್‌ಇನ್ ಪೋಸ್ಟ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಮತ್ತು ನೆಟ್ಟಿಗರು ಈ ಕಂಪನಿಯ ಒಂದು ವಿನಯತೆಗೆ ಮತ್ತು ಉದ್ಯೋಗಿ ಸ್ನೇಹಿ ಆಗಿರುವುದಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಒಬ್ಬ ಸಾಮಾಜಿಕ ಮಾಧ್ಯಮದ ಬಳಕೆದಾರರು "ಇದಪ್ಪಾ ನಿಮ್ಮ ಉದ್ಯೋಗಿಗಳನ್ನು ನೋಡಿಕೊಳ್ಳುವ ರೀತಿ ಎಂದರೆ" ಎಂದು ಪ್ರತಿಕ್ರಿಯಿಸಿದ್ದಾರೆ.

  Published by:Harshith AS
  First published: