VIDEO: ಸೈಕಲ್ - ಕಾರು ಡಿಕ್ಕಿ: ನಜ್ಜುಗುಜ್ಜಾಗಿದ್ದು ಮಾತ್ರ ಕಾರು..!

zahir | news18
Updated:January 5, 2019, 9:15 PM IST
VIDEO: ಸೈಕಲ್ - ಕಾರು ಡಿಕ್ಕಿ: ನಜ್ಜುಗುಜ್ಜಾಗಿದ್ದು ಮಾತ್ರ ಕಾರು..!
.
  • News18
  • Last Updated: January 5, 2019, 9:15 PM IST
  • Share this:
ದಕ್ಷಿಣ ಚೀನಾದಲ್ಲಿ ನಡೆದ ಕಾರು-ಸೈಕಲ್ ಅಪಘಾತವೊಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ಮುಖ್ಯ ಕಾರಣ ಅಪಘಾತದಲ್ಲಿ ಸೈಕಲ್​ಗೆ ಏನೂ ಆಗದಿರುವುದು.

ಶೆನ್​ಝೆನ್​ ಪಟ್ಟಣದಲ್ಲಿ ಕಾರು ಮತ್ತು ಸೈಕಲ್​ ಮುಖಾಮುಖಿಯಾಗಿ ಡಿಕ್ಕಿಯಾಗಿತ್ತು. ಸಾಮಾನ್ಯವಾಗಿ ಅಪಘಾತ ಸಂಭವಿಸಿದರೆ ಸಣ್ಣ ವಾಹನಕ್ಕೆ ಹಾನಿಯಾಗುತ್ತದೆ. ಆದರೆ ಇಲ್ಲಿ ಸೈಕಲ್ ನಜ್ಜುಗುಜ್ಜಾಗುವ ಬದಲು ಕಾರಿಗೆ ಹೆಚ್ಚು ಹಾನಿಯಾಗಿದೆ.

ಇದನ್ನೂ ಓದಿ: ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮಹಾಮಾರಿಗೆ ಐವರು ಬಲಿ

ಮುಂಭಾಗಕ್ಕೆ ಸೈಕಲ್​ ಗುದ್ದಿದ್ದರಿಂದ ಕಾರಿನ ಬಂಪರ್​ಗೆ ಡ್ಯಾಮೇಜ್ ಆಗಿದ್ದು, ಸೈಕಲ್ ಮಾತ್ರ ಸ್ಟ್ಯಾಡಿಂಗ್​ನಲ್ಲೇ ನಿಂತಿರುವುದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಮೊದಲಿಗೆ ಇದನ್ನು ಎಡಿಟೆಡ್​ ಫೋಟೋ ಎನ್ನಲಾಗಿತ್ತು. ಆದರೆ ಇದಕ್ಕೆ ಸಂಬಂಧಪಟ್ಟ ವೀಡಿಯೋ ಕೂಡ ಹೊರ ಬರುತ್ತಿದ್ದಂತೆ ಅಪಘಾತದ ಚಿತ್ರ ಮತ್ತು ವೀಡಿಯೊ ಭಾರೀ ವೈರಲ್ ಆಗಿದೆ. ನೋಡಲು ತಮಾಷೆಯಂತಿರುವ ಈ ಫೋಟೋಗಳು ಸದ್ಯಕ್ಕಂತು ಚೀನಾದ ಸೋಷಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ.ಇದನ್ನೂ ಓದಿ: ಸ್ಮಾರ್ಟ್​ಫೋನ್ ಪ್ರಿಂಟರ್: ಇನ್ಮುಂದೆ ಮೊಬೈಲ್​ಯಿಂದಲೇ ಪ್ರಿಂಟ್ ತೆಗೆದುಕೊಳ್ಳಬಹುದು..!First published: January 5, 2019, 9:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading