ಪ್ರೀತಿಯಲ್ಲಿ ಬ್ರೇಕಪ್ (Breakup) ಆಗುವುದು ಸಹಜ. ಕೆಲವರು ಈ ಬ್ರೇಕಪ್ ನಂತರ ಜೀವನದಲ್ಲಿ ಮುಂದುವರಿದರೆ ಇನ್ನು ಕೆಲವರು ಖಿನ್ನತೆಗೆ ಒಳಗಾಗುತ್ತಾರೆ ಮನೋರೋಗಿಯಾಗುತ್ತಾರೆ ಇನ್ನು ಕೆಲವರು ಜೀವನವನ್ನೇ ಕಳೆದುಕೊಳ್ಳುವ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ. ಪ್ರೀತಿಯಲ್ಲಿ ವಿಫಲನಾದರೆ ಜೀವನವೇ ಮುಗಿದು ಹೋಯಿತು ಎಂದುಕೊಳ್ಳುವವರು ಅದೆಷ್ಟೋ ಮಂದಿ. ಆದರೆ ಪ್ರೀತಿಯ ನಂತರ ಕೂಡ ಒಂದು ಬದುಕಿದೆ ಎಂಬುದನ್ನು ಅರಿತುಕೊಂಡು ಮುಂದುವರಿಯುವವರು ತುಂಬಾ ಕಡಿಮೆ ಎಂದು ಹೇಳಬಹುದು. ಮುರಿದ ಪ್ರೇಮಿಗಳ ಹತಾಶೆಯನ್ನು ದುಃಖವನ್ನು ಹೊರಹಾಕಲು ಟೊರೊಂಟೊ ಮೃಗಾಲಯದ ವನ್ಯಜೀವಿ ಸಂರಕ್ಷಣಾ ಸಂಸ್ಥೆಯು ಹತಾಶ ಪ್ರೇಮಿಗಳೊಂದಿಗೆ (Lovers) ಕೈ ಜೋಡಿಸಿದ್ದು ಪ್ರೇಮಿಗಳ ದಿನಕ್ಕಾಗಿ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಿದೆ. ತಮ್ಮ ಮಾಜಿ ಗೆಳೆಯ ಗೆಳತಿಯರ ಹೆಸರನ್ನು ಜಿರಳೆಗಳಿಗೆ (Cockroach) ಇರಿಸುವ ಮೂಲಕ ಭಗ್ನ ಹೃದಯಿಗಳು ಈ ರೀತಿ ತಮ್ಮ ಅಸಮಾಧಾನವನ್ನು ಹೊರಹಾಕಬಹುದಾಗಿದೆ.
ಎಲ್ಲರಿಗೂ ಇದೆ ಅವಕಾಶ
ಇದಕ್ಕಾಗಿ ಜಿರಳೆಗಳಿಗೆ ಹೆಸರನ್ನಿಡುವವರು ರೂ 2,000 ಪಾವತಿ ಮಾಡಿದರೆ ಆಯಿತು ಮೃಗಾಲಯ ಜಿರಳೆಗಳಿಗೆ ಮಾಜಿಗಳ ಹೆಸರನ್ನಿಡಲು ಅನುಮತಿಸುತ್ತದೆ.
ಇನ್ನು ಈ ಮೃಗಾಲಯವು ಬರೀ ಭಗ್ನ ಪ್ರೇಮಿಗಳಿಗೆ ಈ ಅವಕಾಶವನ್ನು ನೀಡುತ್ತಿಲ್ಲ ಯಾರು ಬೇಕಾದರೂ ಜಿರಳೆಗಳಿಗೆ ಹೆಸರಿನ್ನಿಡಬಹುದಾಗಿದೆ. ನಿಮ್ಮ ಬಾಸ್‌ಗಳ ಹೆಸರಾಗಿರಬಹುದು, ಸಂಬಂಧಿಕರ, ನೆರೆಹೊರೆಯವರ ಹೀಗೆ ತೀರಾ ಕಿರಿಕಿರಿ ಎಂದೆನಿಸಿದ ಯಾರ ಹೆಸರನ್ನು ಬೇಕಾದರೂ ಜಿರಳೆಗಳಿಗೆ ಇಡುವ ಮೂಲಕ ಅವರ ಮೇಲಿನ ಅಸಮಾಧಾನವನ್ನು ಹೊರಹಾಕಬಹುದು ಎಂಬ ಸಲಹೆಯನ್ನು ಮೃಗಾಲಯ ನೀಡಿದೆ.
ಟೊರೊಂಟೊ ಮೃಗಾಲಯದ ಅಭಿಯಾನ ಇದೇ ಹೊಸದು
ಟೊರೊಂಟೊ ಮೃಗಾಲಯದ ವನ್ಯಜೀವಿ ಸಂರಕ್ಷಣಾ ಸಂಸ್ಥೆಯು ಇಂತಹ ಅಭಿಯಾನವನ್ನು ಆಯೋಜಿಸಲು ಮುಂದಾಗಿರುವುದು ಇದೇ ಮೊದಲು. ಮೃಗಾಲಯದ ಡೋನರ್ ಸ್ಟೆವಾರ್ಡ್‌ಶಿಪ್ ಮತ್ತು ಎಂಗೇಜ್‌ಮೆಂಟ್ ಕೋಆರ್ಡಿನೇಟರ್, ಕೆಲ್ಸಿ ಗೊಡೆಲ್ ಸುದ್ದಿಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ವಿನೂತನ ಯೋಜನೆಯ ಬಗ್ಗೆ ಮಾತನಾಡಿದರು.
ಇದನ್ನೂ ಓದಿ: ಸ್ಮಾರ್ಟ್‌ಫೋನ್ ಸ್ಕ್ರಾಲ್ ಮಾಡುತ್ತಿವೆ ಈ ಕೋತಿಗಳು! ವಿಡಿಯೋ ವೈರಲ್
ಜಿರಳೆಗಳಿಗೆ ಹೆಸರಿಡಲು ಏನು ಮಾಡಬೇಕು?
ಈ ಯೋಜನೆಗೆ ಯಾರು ಬೇಕಾದರೂ ಸೈನ್ ಅಪ್ ಮಾಡಬಹುದಾಗಿದ್ದು, ಪ್ರಕ್ರಿಯೆಯ ಬಗ್ಗೆ ತಿಳಿಸಿದ್ದಾರೆ. ಮೃಗಾಲಯದ ಆನ್‌ಲೈನ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಅಲ್ಲಿ ಡೆಡಿಕೇಶನ್ ಯುವರ್ ಡೊನೇಶನ್ (ನಿಮ್ಮ ದೇಣಿಗೆ) ವಿಭಾಗವನ್ನು ಆರಿಸಬೇಕು. ಹೀಗೆ ಬಳಕೆದಾರರು ತಮಗೆ ಬೇಕಾದ ಹೆಸರನ್ನು ಖಾಲಿ ಸ್ಥಳದಲ್ಲಿ ತುಂಬುವ ಮೂಲಕ ಜಿರಳೆಗಳಿಗೆ ಹೆಸರಿಡಬಹುದು ಎಂದು ಕೆಲ್ಸಿ ತಿಳಿಸಿದ್ದಾರೆ.
ಹೆಸರನ್ನಿಟ್ಟವರಿಗೆ ಕಾರ್ಡ್ ಇಮೇಲ್ ಮಾಡಬಹುದು
ಅಗತ್ಯವಿರುವ ಎಲ್ಲಾ ಆಯ್ಕೆಗಳನ್ನು ಭರ್ತಿ ಮಾಡಿದ ನಂತರ ದಾನಿಗಳು ತಾವು ನಮೂದಿಸಿದ ವ್ಯಕ್ತಿಗೆ ಕಾರ್ಡ್ ಅನ್ನು ಇಮೇಲ್ ಮಾಡಬಹುದು ಡಿಜಿಟಲ್ ಪ್ರಮಾಣಪತ್ರವನ್ನು ಮುದ್ರಿಸಬಹುದು ಎಂದು ಗೂಡೆಲ್ ತಿಳಿಸಿದ್ದಾರೆ. ಟೊರೊಂಟೊ ಝೀ ಸ್ಯಾನ್ ಆಂಟೋನಿಯೊ ಮೃಗಾಲಯವು ಬ್ರೋಕ್ಸ್ ಮೃಗಾಯಲದ ಯೋಜನೆಯಾದ ನಿಮ್ಮ ಪ್ರೇಮಿಯ ಹೆಸರನ್ನು ಜಿರಳೆಗೆ ಇರಿಸಿ ಎಂಬುದರಿಂದ ಪ್ರೇರೇಪಣೆ ಪಡೆದುಕೊಂಡಿದೆ ಎಂದು ಗೂಡೆಲ್ ತಿಳಿಸಿದ್ದಾರೆ.
ಜಿರಳೆಗಳಿಗೂ ಈ ಮೃಗಾಲಯದಲ್ಲಿದೆ ಆದ್ಯತೆ
ಟೊರೊಂಟೊ ಮೃಗಾಯಲದ ವಿಶೇಷತೆ ಎಂದರೆ ಇಲ್ಲಿರುವ ವನ್ಯ ಮೃಗಗಳು ಸಣ್ಣದಿರಲಿ ದೊಡ್ಡದಿರಲಿ ಪ್ರತಿಯೊಂದಕ್ಕೂ ಸಮಾನ ಗೌರವವನ್ನು ನೀಡಲಾಗುತ್ತದೆ. ಪರಿಸರ ವಿಜ್ಞಾನದಲ್ಲಿ ಜಿರಳೆಗಳ ಪಾತ್ರ ಬಹಳ ಹಿರಿದು ಎಂದು ತಿಳಿಸಿದ ಗೂಡೆಲ್ ಕಾಡಿನ ಕಸ ಹಾಗೂ ತ್ಯಾಜ್ಯಗಳು ಕೊಳೆಯಲು ಜಿರಳೆಗಳು ಸಹಕಾರಿ ಎಂದು ಹೇಳಿದ್ದಾರೆ. ಜಿರಳೆಗಳು ಇತರ ಪ್ರಾಣಿಗಳು ಹಾಗೂ ಕೀಟಗಳಿಗೆ ಆಹಾರವಾಗುವ ಮೂಲಕ ಆಹಾರ ಚಕ್ರವನ್ನು ಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸಿದ್ದಾರೆ.
ಜಿರಳೆಗಳಿಗೆ ಇಟ್ಟಿರುವ ಹೆಸರುಗಳನ್ನು ಬಹಿರಂಗಪಡಿಸಬಾರದು ಎಂಬುದು ನಮ್ಮ ಆಶಯವಾಗಿದೆ ಎಂದು ಗೂಡೆಲ್ ತಿಳಿಸಿದ್ದಾರೆ. ಆದರೆ ಪಟ್ಟಿಯಲ್ಲಿರುವ ಜನಪ್ರಿಯ ಹೆಸರುಗಳನ್ನು ಗೂಡೆಲ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ