• Home
 • »
 • News
 • »
 • trend
 • »
 • United States: ಯುಎಸ್​ನ ಇತಿಹಾಸದಲ್ಲಿಯೇ ಈ ಹುಡುಗ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಅಂತೆ!

United States: ಯುಎಸ್​ನ ಇತಿಹಾಸದಲ್ಲಿಯೇ ಈ ಹುಡುಗ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಅಂತೆ!

ಕಿರಿಯ ವಯಸ್ಸಿನಲ್ಲಿ ಮೇಯರ್  ಆದ ಸ್ಮಿತ್

ಕಿರಿಯ ವಯಸ್ಸಿನಲ್ಲಿ ಮೇಯರ್  ಆದ ಸ್ಮಿತ್

ನಾವೆಲ್ಲಾ ಸಾಮಾನ್ಯವಾಗಿ ಕಿರಿಯ ವಯಸ್ಸಿನಲ್ಲಿ ಸಣ್ಣ ಸಣ್ಣ ಸಾಧನೆಯನ್ನ ಮಾಡಿರುತ್ತೆವೆ ಆದರೆ ಇಲ್ಲೊಬ್ಬ ಸಣ್ಣ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಕಾಲಿಟ್ಟಿರುವ ಸುದ್ದಿಯನ್ನು ನೀವು ತಿಳಿದುಕೊಳ್ಳಬೇಕು.

 • Share this:

  ನಾವೆಲ್ಲಾ ಸಾಮಾನ್ಯವಾಗಿ ಕಿರಿಯ ವಯಸ್ಸಿನ (Younger Age) ವ್ಯಕ್ತಿಯೊಬ್ಬ (Person) ಕ್ರೀಡೆಯಲ್ಲಿ (Sports) ದೊಡ್ಡ ಸಾಧನೆ ಮಾಡಿದರು (Big Achievement), ಸಣ್ಣ ವಯಸ್ಸಿನ ವ್ಯಕ್ತಿ ರಾಜಕೀಯಕ್ಕೆ (Political) ಕಾಲಿಟ್ಟಿದ್ದಾರೆ, ಚಿಕ್ಕ ಹುಡುಗನೊಬ್ಬ (a Boy) ಮಹತ್ತರವಾದ ಸಾಧನೆ ಮಾಡಿದ್ದಾನೆ ಅಂತೆಲ್ಲಾ ಸುದ್ದಿಗಳನ್ನು ನಾವು ಕೇಳಿರುತ್ತೇವೆ. ಇಂತಹ ಸುದ್ದಿಗಳನ್ನು ಕೇಳಿದಾಗ ನಮಗೆ ಒಂದು ರೀತಿಯ ಸ್ಪೂರ್ತಿ ಸಿಗುತ್ತದೆ (Inspiration) ಬದುಕಿನಲ್ಲಿ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಂತಹದೇ ಒಂದು ಹೊಸ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ ನೋಡಿ.


  ಅದೇನೆಂದರೆ 18 ವರ್ಷದ ಕಾಲೇಜು ಓದುವ ಹುಡುಗ ಜೇಲೆನ್ ಸ್ಮಿತ್ ಅವರು ಅರ್ಕಾನ್ಸಾಸ್ ರಾಜ್ಯದ ಒಂದು ಸಣ್ಣ ಪಟ್ಟಣದಲ್ಲಿ ಮೇಯರ್ ಆಗಿದ್ದಾರೆ ನೋಡಿ.


  ಮೇಯರ್ ಸ್ಥಾನಕ್ಕೆ ಪೈಪೋಟಿ ನಡೆಸಿ, ತಮ್ಮ ಎದುರಾಳಿಯನ್ನು ಸೋಲಿಸಿದ ನಂತರ ಈಗ ಯುನೈಟೆಡ್ ಸ್ಟೇಟ್ಸ್ ಇತಿಹಾಸದಲ್ಲಿಯೇ ಜೇಲೆನ್ ಸ್ಮಿತ್ ಅವರು ಅತ್ಯಂತ ಕಿರಿಯ ಮೇಯರ್ ಆಗಿ ಹೊರ ಹೊಮ್ಮಿದ್ದಾರೆ.


  This boy is the youngest mayor in the history of the United States
  ಕಿರಿಯ ವಯಸ್ಸಿನಲ್ಲಿ ಮೇಯರ್  ಆದ ಸ್ಮಿತ್


  18 ವರ್ಷದ ಕಾಲೇಜ್ ಓದುವ ಹುಡುಗ ಮೇಯರ್ ಆಗಿದ್ದಾರೆ ನೋಡಿ..


  ಸ್ಮಿತ್ ಅವರು ಮಂಗಳವಾರ ಅರ್ಲ್ ಎಂಬ ಸಣ್ಣ ಪಟ್ಟಣದ ಮೇಯರ್ ಆಗಿ ಆಯ್ಕೆಯಾದರು. ಸ್ಥಳೀಯ ಮಾಧ್ಯಮಗಳ ಪ್ರಕಾರ, ಅವರು ತಮ್ಮ ಪ್ರತಿಸ್ಪರ್ಧಿ, ನಗರದ ಬೀದಿ ಮತ್ತು ನೈರ್ಮಲ್ಯ ಮೇಲ್ವಿಚಾರಕ ನೇಮಿ ಮ್ಯಾಥ್ಯೂಸ್ ಅವರನ್ನು 235 ಮತ್ತು 185 ಮತಗಳನ್ನು ಪಡೆಯುವುದರೊಂದಿಗೆ ಸೋಲಿಸಿದ್ದಾರೆ.


  ಜೇಲೆನ್ ಸ್ಮಿತ್ ಈ ವರ್ಷದ ಆರಂಭದಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದರು. 2020 ರ ಜನಗಣತಿಯ ಪ್ರಕಾರ, ಪೂರ್ವ ಅರ್ಕಾನ್ಸಾಸ್ ನಲ್ಲಿರುವ ಅರ್ಲ್ ಎಂಬ ಪಟ್ಟಣವು ಮಿಸ್ಸಿಸ್ಸಿಪ್ಪಿ ನದಿ ಮತ್ತು ಟೆನ್ನೆಸ್ಸಿಯ ಮೆಂಫಿಸ್ ನಿಂದ ಪಶ್ಚಿಮಕ್ಕೆ ಸುಮಾರು 30 ಮೈಲಿಗಳಷ್ಟು ದೂರದಲ್ಲಿದೆ.


  ಇದನ್ನೂ ಓದಿ: Business Trend: FMCG ಉದ್ಯಮದಲ್ಲಿ 20 ರ ಯುವಕನ ಸಾಧನೆ; ಚಿಲ್ಲರೆ ವ್ಯಾಪಾರಿಗಳ ಅಭಿವೃದ್ಧಿಯೇ ಈತನ ಗುರಿ!


  ಮೇಯರ್ ಆಗಿ ಗೆದ್ದ ನಂತರ ಏನ್ ಹೇಳಿದ್ರು ಸ್ಮಿತ್?


  ಅವರು ತಮ್ಮ ಫೇಸ್‌ಬುಕ್ ಖಾತೆಯ ಪುಟದಲ್ಲಿ ತಮ್ಮ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ. "ಅರ್ಕಾನ್ಸಾಸ್ ನ ಅರ್ಲ್ ಜನತೆಗಾಗಿ ಕೆಲಸ ಮಾಡಲು ಮತ್ತು ಉತ್ತಮವಾದ ಸೌಕರ್ಯಗಳನ್ನು ನಿರ್ಮಿಸಲು ಇದು ಒಳ್ಳೆಯ ಸಮಯ" ಎಂದು ಹೇಳಿದರು.


  "ಇದು ತುಂಬಾನೇ ಅದ್ಭುತವಾದ ಕ್ಷಣ ಅಂತ ಅನ್ನಿಸುತ್ತಿದೆ. ಈ ಐತಿಹಾಸಿಕ ಕ್ಷಣದ ಬಗ್ಗೆ ಮುಂದಿನ ತಲೆಮಾರಿನವರು ಸಹ ಓದುತ್ತಾರೆ" ಎಂದು ಅವರು ಹೇಳಿದರು.


  "ನಾನು ಜನರಿಗೆ ತುಂಬಾನೇ ಕೃತಜ್ಞನಾಗಿದ್ದೆನೆ! ನಾನು ಗೆದ್ದಾಗ ನನ್ನ ಮುಖದಲ್ಲಿ ಯಾವ ರೀತಿಯಾದ ಪ್ರತಿಕ್ರಿಯೆ ಇತ್ತು ಅನ್ನೋದು ನನಗೆ ಚೆನ್ನಾಗಿ ನೆನಪಿದೆ! ಇದು ಜನರ ಆಶೀರ್ವಾದವಾಗಿತ್ತು" ಎಂದು ಸ್ಮಿತ್ ತಿಳಿಸಿದ್ದಾರೆ.


  ಅವರ ಪೋಷಕರು ಅವರ ಬಗ್ಗೆ ತುಂಬಾನೇ ಹೆಮ್ಮೆ ಪಡುತ್ತಿದ್ದಾರೆ ಮತ್ತು ಸ್ಮಿತ್ ಅವರ ಚುನಾವಣೆ ಅಭಿಯಾನದ ಪ್ರತಿಯೊಂದು ನಡೆಯನ್ನು ಸಹ ಅವರು ಬೆಂಬಲಿಸಿದ್ದಾರೆ ಎಂದು ಸ್ಮಿತ್ ಹೇಳಿದ್ದಾರೆ.


  ತಾಯಿ ಸಂತೋಷದಿಂದ ಅತ್ತು ಬಿಟ್ರು


  "ನಾನು ಮೇಯರ್ ಆದ ಸುದ್ದಿ ಕೇಳಿ, ನನ್ನ ತಾಯಿ ಸಂತೋಷದಿಂದ ಅಳುವುದನ್ನು ನಿಲ್ಲಿಸಲು ಸಾಧ್ಯವೇ ಆಗುತ್ತಿಲ್ಲ" ಎಂದು ಸ್ಮಿತ್ ಬುಧವಾರ ಮಾಧ್ಯಮಗಳಿಗೆ ತಿಳಿಸಿದರು.


  ಈ ಅಭಿಯಾನದ ಸಮಯದಲ್ಲಿ, ಮೇ ತಿಂಗಳಲ್ಲಿ ಅರ್ಲ್ ಹೈಸ್ಕೂಲ್ ನಿಂದ ಪದವಿ ಪಡೆದ ಸ್ಮಿತ್, ಸಾರ್ವಜನಿಕ ಸುರಕ್ಷತೆಯನ್ನು ಸುಧಾರಿಸಲು, ಪಾಳುಬಿದ್ದ ಮನೆಗಳು ಮತ್ತು ಕಟ್ಟಡಗಳನ್ನು ಪುನಃ ಸ್ಥಾಪಿಸಲು ಅಥವಾ ತೆಗೆದು ಹಾಕಲು ಮತ್ತು ಹೊಸ ತುರ್ತು ಸಿದ್ಧತೆ ಯೋಜನೆಗಳನ್ನು ಜಾರಿಗೆ ತರಲು ಕರೆ ನೀಡಿದರು.


  ಚುನಾಯಿತ ಮೇಯರ್ ಆಗಿ, ಸ್ಮಿತ್ ಅವರು ಸಾರಿಗೆ, ಸಾರ್ವಜನಿಕ ಸುರಕ್ಷತೆ ಮತ್ತು ನಗರಕ್ಕೆ ಪ್ರಮುಖ ಕಿರಾಣಿ ಅಂಗಡಿಯನ್ನು ತರಲು ಗಮನ ಹರಿಸಲು ಯೋಜಿಸಿದ್ದಾರೆ ಎಂದು ಹೇಳಿದರು.


  "ಅರ್ಕಾನ್ಸಾಸ್ ನ ಅರ್ಲ್ ನಲ್ಲಿ ನಾನು ಇಷ್ಟೊಂದು ಶ್ರೇಷ್ಠನಾಗಿರಲು ಸಾಧ್ಯವಿರುವಾಗ ನಾನು ಬೇರೆಲ್ಲಿಯಾದರೂ ಏಕೆ ಶ್ರೇಷ್ಠನಾಗಲು ಬಯಸಬೇಕು" ಎಂದು ಸ್ಮಿತ್ ಅವರು ಅನಿಸಿಕೆ ಹಂಚಿಕೊಂಡಿದ್ದಾರೆ.

  Published by:Gowtham K
  First published: