ಅಮೆರಿಕಾದ ಒರೆಗಾನ್ನ ಅಪ್ಪಲೋಸಾ ತಳಿಯ ಕುರುಡು ಕುದುರೆಯಾದ ಎಂಡೋ ತನ್ನ ಮಾಲೀಕನ ಜೊತೆ ಸೇರಿ ಮೂರು ಗಮನಾರ್ಹ ಪ್ರಶಸ್ತಿಗಳನ್ನು ಬಾಚಿಕೊಂಡಿದೆ ಎಂದು ಗಿನ್ನೀಸ್ ವರ್ಲ್ಡ್ ರೆಕಾರ್ಡ್ಸ್ (Gunnies World Record- GWR) ತಿಳಿಸಿದೆ.
ಕುದುರೆಯು ಉತ್ತಮ ಸ್ವಭಾವವನ್ನು ಹೊಂದಿದ್ದು, ತನ್ನ ನಡವಳಿಕೆಯಿಂದ ವಿಶ್ವವನ್ನು ಸೆಳೆದಿದ್ದು ಮಾತ್ರವಲ್ಲದೆ ಅದರ ಮೈಯಲ್ಲಿರುವ ಆಕರ್ಷಕ ಕಂದು ಬಣ್ಣದ ಚುಕ್ಕೆ ಗಮನಸೆಳೆಯುವಂತಿದೆ ಎಂದು GWR ವೆಬ್ಸೈಟ್ ತಿಳಿಸಿದೆ.
ಮೂರು ದಾಖಲೆಗಳನ್ನು ಮಾಡಿದ ಅಂಧ ಕುದುರೆ
ಎಂಡೋ ದಿ ಬ್ಲೈಂಡ್ ಎಂಬ ಹೆಸರಿನ ಅಪ್ಪಲೋಸಾ ತಳಿಯ ಅಂಧ ಕುದುರೆಯು ತನ್ನ ಮಾಲೀಕ ಮೋರ್ಗನ್ ವ್ಯಾಗ್ನರ್ ಜೊತೆ ಸೇರಿ ಅಕ್ಟೋಬರ್ 29, 2022 ರಂದು ಮೂರು ದಾಖಲೆಗಳನ್ನು ಮಾಡಿದೆ.
ಕುದುರೆ ತನ್ನ ಅಂಧತ್ವನ್ನು ಮೀರಿ ಮೂರು ದಾಖಲೆಗಳನ್ನು ಮಾಡಿದ್ದು, ಎತ್ತರದ ಜಿಗಿತ ಹಾಗೂ ಮೂರು ಬೇರೆ ಬೇರೆ ಜಿಗಿಯುವ ಭಂಗಿಗಳು ಹಾಗೂ ಐದು ಕಂಬಗಳನ್ನು ವೇಗವಾಗಿ ಸುತ್ತುವುದು ಹೀಗೆ ಮೂರು ವಿಭಾಗಗಳಲ್ಲಿ ತಲಾ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕುದುರೆಯ ಅಂಧತ್ವ ಅದರ ಸಾಧನೆಗೆ ಅಡ್ಡಿಯಾಗಲಿಲ್ಲ
ಕುದುರೆಯ ಮಾಲೀಕಳಾದ ವ್ಯಾಗ್ನರ್ ತನ್ನದೇ ಆದ ಸ್ವಂತ ಕುದುರೆಯನ್ನು ಹೊಂದುವ ಬಯಕೆಯನ್ನು ಹೊಂದಿದ್ದರು ಹಾಗೂ ಎಂಡೋವನ್ನು ಆಕೆಯ ಅಜ್ಜಿ ಆಕೆಗೆ ನೀಡಿದಾಗ ವ್ಯಾಗ್ನರ್ 13 ರ ಹರೆಯದವರಾಗಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.
ಪುಟ್ಟ ಮರಿ ಎಂಡೋ ಆಕೆಯ ಕಣ್ಣಿಗೆ ಆಕರ್ಷಕವಾಗಿ ಕಂಡಿತು ಎಂಬುದನ್ನು ವ್ಯಾಗ್ನರ್ ನೆನೆಸಿಕೊಳ್ಳುತ್ತಾರೆ. ಆಕೆಯ ಕುಟುಂಬ ಕ್ಯಾಲಿಫೋರ್ನಿಯಾದಿಂದ ಒರೆಗಾನ್ಗೆ ಸ್ಥಳಾಂತರಗೊಂಡಾಗ ಆಕೆಯ ಜಮೀನಿನಲ್ಲಿ ಎಂಡೋವನ್ನು ಮೊದಲ ಬಾರಿಗೆ ಭೇಟಿಯಾದೆ ಎಂಬುದನ್ನು ವ್ಯಾಗ್ನರ್ ನೆನಪಿಸಿಕೊಂಡಿದ್ದಾರೆ.
ಅಜ್ಜಿಯ ಬಳಿಯಲ್ಲಿ ಹಲವಾರು ಕುದುರೆಗಳಿದ್ದವು ಹಾಗೂ ಒಂದು ಕುದುರೆಯನ್ನು ವ್ಯಾಗ್ನರ್ ಹೊಂದಬಹುದೆಂದು ಹೇಳಿದಾಗ ಎಂಡೋವನ್ನು ನಾನು ಆಯ್ಕೆಮಾಡಿಕೊಂಡೆ ಎಂದು ವ್ಯಾಗ್ನರ್ ತಿಳಿಸಿದ್ದಾರೆ.
ಎಂಟರ ಹರೆಯದಲ್ಲೇ ಕುದುರೆಗೆ ಬಂದಿತ್ತು ಕುರುಡುತನ
ಎಂಡೋ ತುಂಬಾ ಸ್ನೇಹಪರ ಕುದುರೆ ಎಂದು ತಿಳಿಸಿರುವ ವ್ಯಾಗ್ನರ್ ಅದರ ಒರಟುತನವನ್ನು ಜಯಿಸಿ ಎಂಡೋವಿನ ಮೇಲೆ ನಿಯಂತ್ರಣ ಸಾಧಿಸುವವರೆಗೆ ಮಾತ್ರ ನಾನು ಕೊಂಚ ಅಡೆತಡೆಗಳನ್ನೆದುರಿಸಿದೆ ಎಂದು ತಿಳಿಸಿದ್ದಾರೆ. ಈಗ ನಾವಿಬ್ಬರೂ ಉತ್ತಮ ಸ್ನೇಹಿತರು ಎಂಬುದನ್ನು ವ್ಯಾಗ್ನರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಎಂಡೋ ಎಂಟರ ಪ್ರಾಯವಿದ್ದಾಗ ಅದರ ಕಣ್ಣಲ್ಲಿ ತನ್ನಷ್ಟಕ್ಕೆ ನೀರು ಒಸರುತ್ತಿರುವುದು ಹಾಗೂ ಆಗ್ಗಾಗ್ಗೆ ಕಣ್ಣು ಮಿಟುಕಿಸುತ್ತಿರುವುದನ್ನು ವ್ಯಾಗ್ನರ್ ಗಮನಿಸಿದರು.
ಕೂಡಲೇ ಪಶುವೈದ್ಯರನ್ನು ಭೇಟಿಯಾದ ವ್ಯಾಗ್ನರ್ ತಮ್ಮ ಕುದುರೆ ಎಂಡೋವಿಗೆ ಎಕ್ವೈನ್ ರಿಕರೆಂಟ್ ಯುವೆಟಿಸ್ ಎಂಬ ಕುರುಡುತನದ ರೋಗವಿರುವುದನ್ನು ಕಂಡುಕೊಂಡರು.
ಇದೊಂದು ರೀತಿಯ ಅನಾರೋಗ್ಯವಾಗಿದ್ದು ಅಂಧತ್ವಕ್ಕೆ ಕಾರಣವಾಗಿದೆ ಹಾಗೂ ವಿಶ್ವದಾದ್ಯಂತ ಕುದುರೆಗಳ ಕುರುಡತನಕ್ಕೆ ಕಾರಣವಾಗಿದೆ ಎಂದು ವ್ಯಾಗ್ನರ್ ತಿಳಿಸಿದ್ದಾರೆ.
ಕುರುಡನಾದರೂ ಸಾಧಿಸುವ ಛಲ ಕುದುರೆಯಲ್ಲಿತ್ತು
ದುರಾದೃಷ್ಟದ ಸಂಗತಿ ಎಂದರೆ ಎಂಡೋ ಕಣ್ಣಿಲ್ಲದ ನೋವನ್ನು ಅನುಭವಿಸುತ್ತಲಿದ್ದು, ರೋಗದಿಂದ ಬಲಗಣ್ಣು ಹಾನಿಗೊಳಪಟ್ಟಾಗ ಅದನ್ನು ತೆಗೆದುಹಾಕಬೇಕಾದ ಅತ್ಯಂತ ನೋವಿನ ನಿರ್ಣಯವನ್ನು ವ್ಯಾಗ್ನರ್ ತೆಗೆದುಕೊಂಡಿದ್ದರು.
ನಂತರ ಎಂಡೋವಿನ ಎಡಗಣ್ಣಿಗೂ ರೋಗ ಹಾನಿಯನ್ನುಂಟು ಮಾಡಿತು ಹಾಗೂ ಅದನ್ನು ಶೀಘ್ರದಲ್ಲೇ ತೆಗೆದುಹಾಕಲಾಯಿತು ಹೀಗೆ ಎಂಡೋವಿನ ಕುರುಡು ಪ್ರಪಂಚ ಆರಂಭವಾಯಿತು ಮತ್ತು ತನ್ನ ಹೊಸ ಲೋಕದಲ್ಲಿ ಹೇಗೆ ಜೀವಿಸಬೇಕು ಎಂಬುದನ್ನು ಎಂಡೋ ಕ್ಷಿಪ್ರವಾಗಿ ಕಲಿತುಕೊಂಡಿತು ಎಂದು ವ್ಯಾಗ್ನರ್ ತಿಳಿಸಿದ್ದಾರೆ.
ಇತರರಿಗೆ ಮಾದರಿಯಾಗಿರುವ ಎಂಡೋ
ಹೀಗೆ ಧೈರ್ಯ ಹಾಗೂ ದೃಢಸಂಕಲ್ಪದಿಂದ ತನ್ನ ನೋವನ್ನು ಮೆಟ್ಟಿನಿಂತು ಹೋರಾಡಿದ ಕುದುರೆ ಎಂಡೋ ದಿ ಬ್ಲೈಂಡ್ ಎಂಬ ಮನ್ನಣೆಯನ್ನು ಪಡೆದುಕೊಂಡಿತು ಎಂದು GWR ವೆಬ್ಸೈಟ್ ತಿಳಿಸಿದೆ.
ಮಾಲೀಕರ ಪ್ರೀತಿ ಹಾಗೂ ಇತರ ಕುದುರೆಗಳ ಪ್ರೀತಿಯನ್ನು ಪಡೆದುಕೊಂಡ ಎಂಡೋ ತನ್ನಲ್ಲಿರುವ ಸಮಸ್ಯೆಗಳನ್ನು ಬದಿಗೊತ್ತಿ ನೆಗೆಯುವುದನ್ನು ಕಲಿತುಕೊಂಡಿತು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾನೂ ಇತರ ಕುದುರೆಗಳಿಗಿಂತ ಕಡಿಮೆಯಿಲ್ಲ ಎಂಬುದನ್ನು ಸಾಧಿಸಿತು.
ಎಂಡೋ ಸಾಧನೆ ಎಲ್ಲರಿಗೂ ಸ್ಫೂರ್ತಿ ಎಂಬುದು ಅದರ ಮಾಲೀಕರಾದ ವ್ಯಾಗ್ನರ್ ಅಭಿಪ್ರಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ