Viral Post: ಇಡೀ ಮನೆಯೇ ಉಲ್ಟಾ, ವಾಸ ಮಾಡುತ್ತಿರುವವರು ಹೇಗೆ ನಡೆದಾಡ್ತಾರೆ?

ಆಸ್ಟ್ರಿಯಾದಲ್ಲಿರುವ ತಲೆಕೆಳಗಾದ ಮನೆಯನ್ನು ಪೋಲಿಷ್ ವಾಸ್ತುಶಿಲ್ಪಿಗಳಾದ ಐರೆಕ್ ಗ್ಲೋವಾಕಿ ಮತ್ತು ಮಾರೆಕ್ ರೊಜಾನ್ಸ್ಕಿ ವಿನ್ಯಾಸಗೊಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೊಲಂಬಿಯಾ(Colombia) ರಾಜಧಾನಿ ಬೊಗೋಟಾಕ್ಕೆ ಸಮೀಪದಲ್ಲಿರುವ ಕೊಲಂಬಿಯಾ ಗ್ವಾಟಾವಿಟಾದಲ್ಲಿ ತಲೆಕೆಳಗಾದ (Upside-Down House) ಮನೆಯೊಂದು ಕೊರೊನಾವೈರಸ್ (Coronavirus) ನಿರ್ಬಂಧಗಳ ಮಧ್ಯೆಯೂ ಕೂಡ ಸಂದರ್ಶಕರ ಗಮನ ಸೆಳೆಯುತ್ತಿದೆ. ಕೊಲಂಬಿಯಾದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುವ ಆಸ್ಟ್ರಿಯಾದ ಫ್ರಿಟ್ಜ್ ಶಾಲ್ ವಿನ್ಯಾಸಗೊಳಿಸಿದ(Designed by Fritz Shawl) ಈ ಮನೆಯಲ್ಲಿ, ಪ್ರವಾಸಿಗರು ಮಹಡಿಗಳಿರುವ ಛಾವಣಿಗಳ ಮೇಲೆ ನಡೆಯುತ್ತಾರೆ ಮತ್ತು ಇಲ್ಲಿ ಪೀಠೋಪಕರಣಗಳನ್ನು ಛಾವಣಿಗಳ ಕೆಳಗೆ ಜೋಡಿಸಲಾಗಿದೆ.

ನಂಬಲೇಬೇಕಾದ ಸತ್ಯ
ನಾನು ಹೇಳುತ್ತಿರುವುದನ್ನು ಯಾರೂ ಕೂಡ ನಂಬಲಿಲ್ಲ ಮತ್ತು ಎಲ್ಲರೂ ನನ್ನನ್ನು ಹುಚ್ಚನೆಂದು ಭಾವಿಸಿದರು . ನಾನು ತಲೆಕೆಳಗಾದ ಮನೆಯನ್ನು ನಿರ್ಮಿಸಲಿದ್ದೇನೆ ಎಂದು ಹೇಳಿದಾಗ, ಎಲ್ಲರೂ 'ಖಂಡಿತ ಸರ್, ಮುಂದುವರೆಯಿರಿ” ಎಂದು ಉಡಾಫೆ ಮಾಡಿದರೆಂದು ಶಾಲ್ ತಿಳಿಸಿದರು. ಈ ಮನೆಯನ್ನು ನಿರ್ಮಿಸುವಂತೆ ಪ್ರೇರೇಪಿಸಿದ್ದು 2015ರಲ್ಲಿ ಮೊಮ್ಮಕ್ಕಳೊಂದಿಗಿನ ಆಸ್ಟ್ರಿಯಾ ಪ್ರವಾಸ. ಆ ಪ್ರವಾಸದಲ್ಲಿ ಇದೇ ರೀತಿಯ ಮನೆಯೊಂದನ್ನು ನೋಡಿ ಸ್ಪೂರ್ತಿಗೊಂಡ ಸ್ಕಾಲ್ ಅಂತಹುದೇ ಮನೆಯನ್ನು ಕಟ್ಟಲು ನಿರ್ಧರಿಸಿದರು .

ಸಾಂಕ್ರಾಮಿಕ ರೋಗದಿಂದಾಗಿ ಮನೆಯ ನಿರ್ಮಾಣದ ಕೆಲಸ ಸ್ವಲ್ಪ ನಿಧಾನಗತಿಯಲ್ಲಿ ನಡೆದರೂ, ಇದೀಗ ಕೆಲಸ ಸಂಪೂರ್ಣಗೊಂಡು ಮೂರು ವಾರಗಳ ಹಿಂದೆ ಉದ್ಘಾಟಿಸಲ್ಪಟ್ಟಿತು “ಎಂದು ಶಾಲ್ ಹೇಳಿದರು. ಸಾಂಕ್ರಾಮಿಕ ರೋಗ ಮತ್ತು ಅಧಿಕಾರಿಗಳು ವಿಧಿಸಿರುವ ಲಾಕ್‌ಡೌನ್‌ಗಳ ನಿರ್ಬಂಧಗಳ ಹೊರತಾಗಿಯೂ, ಸಂದರ್ಶಕರಿಗೆ ಈ ಮನೆ ಸ್ವಲ್ಪ ಆರಾಮವನ್ನು ನೀಡುತ್ತಿದೆ ಎಂದು ಸಂದರ್ಶಕರಾದ ಲೀನಾ ಗುಟೈರೆಜ್ ಹೇಳಿದರು.

ಇದನ್ನೂ ಓದಿ: ಮರದ ಒಂದು ಸಣ್ಣ ಕೊಂಬೆಯನ್ನೂ ಕತ್ತರಿಸದೆ ಮೂರಂತಸ್ತಿನ ಮನೆ ಕಟ್ಟಿದ್ದಾರೆ, ಏನ್ ಸಖತ್ತಾಗಿದೆ ನೋಡಿ!

Unusual house turns frowns upside down in Colombia | Free Malaysia Today (FMT)

ಪ್ರವಾಸಿಗರ ಆಕರ್ಷಣೆ
ಶಾಲ್ ಅವರು ಉಲ್ಲೇಖಿಸಿದ ಆಸ್ಟ್ರಿಯಾದಲ್ಲಿರುವ ತಲೆಕೆಳಗಾದ ಮನೆಯನ್ನು ಪೋಲಿಷ್ ವಾಸ್ತುಶಿಲ್ಪಿಗಳಾದ ಐರೆಕ್ ಗ್ಲೋವಾಕಿ ಮತ್ತು ಮಾರೆಕ್ ರೊಜಾನ್ಸ್ಕಿ ವಿನ್ಯಾಸಗೊಳಿಸಿದ್ದಾರೆ. ಈ ಮನೆಯು ಆಸ್ಟ್ರಿಯಾದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಕಟ್ಟಡದ ಹೊರ ಮತ್ತು ಒಳಭಾಗದಲ್ಲಿ ಗುರುತ್ವಾಕರ್ಷಣಾ ಬಲ ಇಲ್ಲದಂತೆ ಗೋಚರಿಸುತ್ತದೆ. ಗ್ಯಾರೇಜ್ ಅಥವಾ ಮಲಗುವ ಕೋಣೆಗೆ ಪ್ರವೇಶಿಸಿದರೆ, ನೀವು ಖಂಡಿತವಾಗಿಯೂ ವಾಕರಿಕೆ ಭಾವನೆಯನ್ನು ಅನುಭವಿಸುವಿರಿ; ಆದ್ದರಿಂದ ಪ್ರವೇಶಿಸುವ ಮೊದಲು ಅದಕ್ಕೆ ಸಿದ್ಧರಾಗಿರಿ.

Worlwide Trends: Global Trends News and Headlines, Viral Topics Woldwide, Latest Trending Topics | The Indian Express

ತಲೆಕೆಳಗಾದ ಚಮತ್ಕಾರ
ತಲೆಕೆಳಗಾದ ಮನೆಯ ಪರಿಕಲ್ಪನೆ ಹಲವಾರು ಕಾಲ್ಪನಿಕ ಕೃತಿಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಇವುಗಳು ಸಾಮಾನ್ಯವಾಗಿ ಮನೆಯ ವಸ್ತುಗಳನ್ನು ಚಾವಣಿಯ ಮೇಲೆ ಇರಿಸುವುದನ್ನು ಒಳಗೊಂಡಿರುತ್ತವೆ. ಆದರೆ ಈ ಮನೆಯ ವಿಶೇಷತೆ ಏನೆಂದರೆ, ಅಡಿಪಾಯ ಸೇರಿದಂತೆ ಇಡೀ ಮನೆಯು ಸಂಪೂರ್ಣವಾಗಿ ತಲೆಕೆಳಗಾಗಿರುವಂತೆ ಕಾಣುತ್ತದೆ.

ಪ್ರಕೃತಿಯಲ್ಲಿ ತಲೆಕೆಳಗಾದ ಚಮತ್ಕಾರವನ್ನು ನೋಡುವ ಆಸಕ್ತಿ ಇದ್ದಲ್ಲಿ ನೀವು ಫ್ರಾನ್ಸ್‌ನಲ್ಲಿರುವ ಪಿಕ್ ಡಿ ಬುಗರಾಚ್ ಅನ್ನು ಪರಿಶೀಲಿಸಬಹುದು. ಸಾವಿರಾರು ವರ್ಷಗಳ ಹಿಂದೆ ಸ್ಫೋಟದ ಸಮಯದಲ್ಲಿ ಈ ಪರ್ವತವು ತಲೆಕೆಳಗಾಗಿದೆ ಎಂದು ನಂಬಲಾಗಿದೆ.

ಯಾರದ್ದೋ ಮನೆಗೆ ನುಗ್ಗಿ ಖಿಚಡಿ ಮಾಡಿ ತಿನ್ನುತ್ತಿದ್ದ ವ್ಯಕ್ತಿ ಬಂಧನ..!

ಹೀಗೊಂದು ಪ್ರಕರಣದಲ್ಲಿ ಯಾರದ್ದೋ ಮನೆಗೆ ನುಗ್ಗಿ ಖಿಚಡಿ ಮಾಡಿ ತಿನ್ನುತ್ತಿದ್ದ ವ್ಯಕ್ತಿಯನ್ನು ಅಸ್ಸಾಂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವನು ಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದಾಗ ಅದರ ಮಧ್ಯೆ, ಅಡುಗೆಮನೆಯಲ್ಲಿ ತನಗಾಗಿ ಖಿಚಡಿ ತಯಾರಿಸಲು ಪ್ರಾರಂಭಿಸಿದನು. ಅವನನ್ನು ಗುವಾಹಟಿ ಪೊಲೀಸರು ಬಂಧಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: E-Auction: ಅಗ್ಗದ ದರದಲ್ಲಿ ಮನೆ ಖರೀದಿಸಲು ಪ್ಲಾನ್ ಮಾಡ್ತಿದ್ದೀರಾ? ಈ 3 ಬ್ಯಾಂಕ್ ಗಳು ನೀಡುತ್ತಿವೆ ಸುವರ್ಣಾವಕಾಶ

ಅಸ್ಸಾಂ ಪೊಲೀಸರು ಈ ಘಟನೆಯ ಬಗ್ಗೆ ಟ್ವೀಟ್‌ ಮಾಡಿದ್ದು,ಅನೇಕ ಆರೋಗ್ಯ ಪ್ರಯೋಜನಗಳ ಹೊರತಾಗಿಯೂ, ಕಳ್ಳತನದ ಪ್ರಯತ್ನದ ಸಮಯದಲ್ಲಿ ಖಿಚಡಿಯನ್ನು ಬೇಯಿಸುವುದು, ತಿನ್ನುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿರುವುದಲ್ಲದೆ ಈ ಪ್ರಯತ್ನ ನಿಮ್ಮ ಮೇಲೆ ತಿರುಗಿ ಬೀಳಬಹುದು . ಕಳ್ಳನನ್ನು ಬಂಧಿಸಿದ್ದು ಗುವಾಹಟಿ ಪೊಲೀಸ್ ಕಳ್ಳನಿಗೆ ಬಿಸಿ ಬಿಸಿ ಊಟದ ವ್ಯವಸ್ಥೆಯನ್ನು ಸ್ಟೇಷನ್‌ನಲ್ಲಿ ಮಾಡಿದ್ದಾರೆ ಎಂದಿದ್ದಾರೆ.ಇನ್ನು, ಆಜ್‌ತಕ್‌/ಇಂಡಿಯಾ ಟುಡೆ ಟಿವಿ ಪ್ರಕಾರ, ಈ ಘಟನೆಯು ಡಿಸ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಹೆಂಗರಬಾರಿಯ ಮನೆಯೊಂದರಲ್ಲಿ ಈ ಕಳ್ಳತನದ ಪ್ರಕರಣ ನಡೆದಿದೆ.
Published by:vanithasanjevani vanithasanjevani
First published: