Bear: ಸಿಕ್ಕ-ಸಿಕ್ಕ ಮನೆಗಳಿಗೆಲ್ಲಾ ನುಗ್ಗುತ್ತೆ ಈ ಕರಡಿ, ಯಾರಾದ್ರೂ ಗಾಂಚಾಲಿ ಆಡುದ್ರೆ ಕಥೆ ಮುಗೀತು!

ಈ ಕರಡಿಯು ಕ್ಯಾಟಲಿನಾ ಡ್ರೈವ್‍ನಲ್ಲಿ ಮನೆಯ ಕಿಟಕಿಯೊಂದನ್ನು ಮುರಿದು ಒಳಗೆ ನುಗ್ಗಿತ್ತು. ಸುದ್ದಿ ತಿಳಿದ ಪೊಲೀಸರು ಬಾಗಿಲನ್ನು ಭದ್ರವಾಗಿ ಮುಚ್ಚಿದಾಗ, ಹಿಂಬಾಗಿಲ ಮೂಲಕ ತಪ್ಪಿಸಿಕೊಂಡು ಕಾಡಿನಲ್ಲಿ ಮರೆಯಾಗಿತ್ತು.

ಕರಡಿ

ಕರಡಿ

  • Share this:
ನೀವು ಮನೆಯೊಳಗೆ ಕಾಲಿಟ್ಟಾಗ 500 ಪೌಂಡ್ ತೂಕದ ಕರಡಿಯೊಂದು (Bear) ನಿಮ್ಮ ರೆಫ್ರಿಜರೇಟರ್ ಅನ್ನು (Refrigerator) ತೆರೆದು ಅಲ್ಲಿರುವ ಆಹಾರವನ್ನೆಲ್ಲ (Food) ಭಕ್ಷಿಸುತ್ತಿರುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಅಲ್ಲದೆ ನೀವು ಅದರ ಮನೆಗೇ ಕಾಲಿಟ್ಟಿದ್ದೀರಿ ಎಂಬಂತೆ ಕರಡಿ ನಿಮ್ಮನ್ನು ದುರುಗುಟ್ಟಿ ನೋಡುವುದನ್ನೂ ಸಹ. ಸತ್ಯವೆಂದರೆ, ಇಂತಹ ದೃಶ್ಯಗಳು ಕ್ಯಾಲಿಫೋರ್ನಿಯಾದ (California) ಲೇಕ್ ಟಹೋಯಿದಲ್ಲಿ ಸಾಮಾನ್ಯವಾಗಿಬಿಟ್ಟಿದೆ.

ಕರಡಿ ಹಿಡಿಯಲು ಹರಸಾಹಸ

ಸಿಬಿಎಸ್‍ 13 ಸಾಕ್ರಮೆಂಟೊ ಸುದ್ದಿ ಸಂಸ್ಥೆ ಪ್ರಕಾರ, “ಹ್ಯಾಂಕ್‍ ದ ಟ್ಯಾಂಕ್‍’” ಎಂದೇ ಹೆಸರಾಗಿರುವ ಕರಡಿಯು ಹಲವಾರು ವರ್ಷಗಳಿಂದ ಮನೆಗಳ ಬಾಗಿಲು ಮುರಿದು ಒಳಗೆ ನುಗ್ಗುತ್ತಿದೆ. ಈ ಕರಡಿಯು ಉತ್ತರ ಕ್ಯಾಲಿಫೋರ್ನಿಯಾ-ನೆವಾಡ ಪ್ರಾಂತ್ಯದಲ್ಲಿ ಇಂತಹ 150 ಪ್ರಕರಣಗಳಲ್ಲಿ ಭಾಗಿಯಾಗಿರುವುದರಿಂದ ಕ್ಯಾಲಿಫೋರ್ನಿಯಾ ಮತ್ಸ್ಯ ಮತ್ತು ವನ್ಯಜೀವಿ ಇಲಾಖೆಯು ಇದನ್ನು ಸೆರೆ ಹಿಡಿಯಲು ಬಯಸುತ್ತಿದೆ. ಇತ್ತೀಚೆಗೆ ಟಹೋಯಿ ಕೀಸ್ ಪ್ರದೇಶದಲ್ಲಿ ಈ ಕರಡಿಯು ಮತ್ತೊಂದು ಮನೆ ಬಾಗಿಲನ್ನು ಮುರಿದು ಒಳನುಗ್ಗಿದೆ.

ಆಹಾರಕ್ಕಾಗಿ ಅರಸಿ ಮನೆಗೆ ನುಗ್ಗುವ ಕರಡಿ

ಕ್ಯಾಲಿಫೋರ್ನಿಯಾ ಮತ್ಸ್ಯ ಮತ್ತು ವನ್ಯಜೀವಿ ಇಲಾಖೆಯ ವಕ್ತಾರ ಪೀಟರ್ ಟಿರಾ ಪ್ರಕಾರ, “ಇವೆಲ್ಲ ನೆರೆಹೊರೆಯಲ್ಲಿ ವಾಸಿಸುವ ಪ್ರಾಣಿಗಳು. ಈ ಪ್ರದೇಶದಲ್ಲಿ ಹಲವಾರು ಜನರು, ವಾಹನ ಸಂದಣಿ ಮತ್ತು ಕಾರುಗಳಿರುತ್ತವೆ. ಹೀಗಾಗಿ ನಾವು ಕರಡಿಯ ಸೆರೆಯನ್ನು ಸಾರ್ವಜನಿಕರು ಹಾಗೂ ಕರಡಿ ಎರಡಕ್ಕೂ ಸುರಕ್ಷಿತವಾಗಿರುವಂತೆ ನಿರ್ವಹಿಸಬೇಕಿದೆ. ಈ ಕರಡಿಯು ತೀವ್ರ ಅನ್ನಬಾಕ ಕರಡಿಯಾಗಿದೆ. ಇದರರ್ಥ ಈ ಕರಡಿಯು ಜನರ ಬಗ್ಗೆ ಎಲ್ಲ ಭಯವನ್ನೂ ತೊರೆದಿದ್ದು, ಜನರು ಹಾಗೂ ಮನೆಗಳನ್ನು ತನ್ನ ಆಹಾರದ ಮೂಲವೆಂದು ಭಾವಿಸಿದೆ” ಎನ್ನುತ್ತಾರೆ.

ಇದನ್ನೂ ಓದಿ: Viral News: ಬೆಣಚು ಕಲ್ಲುಗಳನ್ನು ಇರಿಸಿ 42 ಕೋಟಿ ಬೆಲೆ ಬಾಳುವ ವಜ್ರ ಕಳ್ಳತನ ಮಾಡಿದ್ದು ಹೇಗೆ ಗೊತ್ತಾ ಈ ಕಳ್ಳಿ?

ಮನೆಗೆ ನುಗ್ಗಿ ಕಳ್ಳನಂತೆ ಎಸ್ಕೇಪ್ ಆಗಿದ್ದ ಕರಡಿ

ಈ ಕರಡಿಯು ಕ್ಯಾಟಲಿನಾ ಡ್ರೈವ್‍ನಲ್ಲಿ ಮನೆಯ ಕಿಟಕಿಯೊಂದನ್ನು ಮುರಿದು ಒಳಗೆ ನುಗ್ಗಿತ್ತು. ಸುದ್ದಿ ತಿಳಿದ ಪೊಲೀಸರು ಬಾಗಿಲನ್ನು ಭದ್ರವಾಗಿ ಮುಚ್ಚಿದಾಗ, ಹಿಂಬಾಗಿಲ ಮೂಲಕ ತಪ್ಪಿಸಿಕೊಂಡು ಕಾಡಿನಲ್ಲಿ ಮರೆಯಾಗಿತ್ತು.

“ಈ ಕರಡಿಯನ್ನು ಜೇಕ್, ಯೋಗಿ ಅಥವಾ ಬಿಗ್ ಗಯ್ ಎಂದು ಮಾತ್ರ ಕರೆಯಲಾಗುತ್ತಿದ್ದು, ಈ ಕರಡಿಯು ಜನರ ಬಗೆಗಿನ ಎಲ್ಲ ಭಯವನ್ನೂ ಕಳೆದುಕೊಂಡಿದೆ ಮತ್ತು ಅವರನ್ನು ತನ್ನ ಆಹಾರದ ಮೂಲವನ್ನಾಗಿ ಪರಿಗಣಿಸಿದೆ” ಎನ್ನುತ್ತಾರೆ ಟಿರಾ.

ಕಳೆದ ವಾರ ನಡೆದ ಸಭೆಯಲ್ಲಿ ಮನೆ ಮಾಲೀಕರ ಸಂಘವು ವನ್ಯಜೀವಿ ಪ್ರಾಧಿಕಾರಗಳಿಗೆ ಕರಡಿಯನ್ನು ಸೆರೆ ಹಿಡಿಯಲು ಅನುಮತಿ ನೀಡಲು ನಿರ್ಧರಿಸಿದೆ. ಕಾಡುಗಳಲ್ಲಿ ಪರಿಣಾಮಕಾರಿಯಾಗಿರುವ ಸಾಂಪ್ರದಾಯಿಕ ರೂಪದ ಸೆರೆ ಹಿಡಿಯುವ ತಂತ್ರಗಳನ್ನು ವಸತಿ ಪ್ರದೇಶಗಳಿಗೆ ಒಗ್ಗಿ ಹೋಗಿರುವ ಕರಡಿಯನ್ನು ಅಲ್ಲಿ ಸೆರೆ ಹಿಡಿಯಲು ಬಳಸುವುದು ನಿಷ್ಪ್ರಯೋಜಕ ಎಂದು ಎಸ್‍ಎಫ್ ಗೇಟ್ ವರದಿ ಮಾಡಿದೆ.

ಕರಡಿ ಸೆರೆಸಿಕ್ಕರೆ ಮೃಗಾಲಯಕ್ಕೆ ಬಿಡಲು ನಿರ್ಧಾರ

ಶುಕ್ರವಾರ ಕರಡಿಯು ಮನೆಗೆ ನುಗ್ಗಿರುವ ಬೆನ್ನ ಹಿಂದೆಯೇ ಅಧಿಕಾರಿಗಳು ಡಿಎನ್ಎ ಸಾಕ್ಷಿಗಳನ್ನು ಸಂಗ್ರಹಿಸಿದ್ದು, ಕರಡಿಯೇನಾದರೂ ಸೆರೆ ಸಿಕ್ಕರೆ ಡಿಎನ್ಎ ಹೋಲಿಕೆಯನ್ನು ಖಚಿತವಾಗಿ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಕರಡಿಯೇನಾದರೂ ಸೆರೆ ಸಿಕ್ಕರೆ, ಅದಕ್ಕೆ ಅನುಮೋದಿಸಲ್ಪಟ್ಟಿರುವ ಮೃಗಾಲಯ ಮತ್ತು ವನ್ಯಜೀವಿ ಸಂಗ್ರಹಾಲಯಗಳಲ್ಲಿ ಮರು ವಾಸ್ತವ್ಯ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರಡಿ ಹಾವಳಿ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಮಹಿಳೆಯೊಬ್ಬರು, "ನಾನು ನಮ್ಮ ಜೀವಕ್ಕಾಗಿ ಭಯಪಟ್ಟು ಸುಸ್ತಾಗಿ ಹೋಗಿದ್ದೇನೆ. ಮುಕ್ತವಾಗಿ ಹೇಳುವುದಾದರೆ, ಕರಡಿ ನಮಗೆ ತೊಂದರೆ ಮಾಡಬಹುದು ಅಥವಾ ಮಾಡದೆಯೂ ಇರಬಹುದು" ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಜಿಮ್​​ನಲ್ಲಿ ವ್ಯಾಯಾಮ ಮಾಡುವಾಗ ನಡೆಯಿತು ದುರಂತ; ಎಚ್ಚರ

ಜಾನ್ ಬ್ಯಾರೆಟ್ ಅವರೊಂದಿಗೆ ಬ್ರಿಜೆಟ್ ಮಾರ್ಷೆಟ್ಟಿ ಕುಟುಂಬವೊಂದರ ಮನೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅವರು ಶುಕ್ರವಾರ ಕರಡಿಯು ಬಾಗಿಲು ಮುರಿದು ನುಗ್ಗಿದ ತಮ್ಮ ನೆರೆಮನೆಯವರ ಪಕ್ಕವೇ ವಾಸಿಸುತ್ತಿದ್ದಾರೆ.

ಕರಡಿಯಿಂದ ಪಾರಾದ ಕುಟುಂಬ

"ಆ ಸಂದರ್ಭದಲ್ಲಿ ನಾವು ನಮ್ಮ ಮಕ್ಕಳನ್ನು ರಕ್ಷಿಸಿಕೊಂಡು ಮನೆಯಿಂದ ಸುರಕ್ಷಿತವಾಗಿ ಹೊರಬರಲು ಸಾಧ್ಯವಾಯಿತು" ಎಂದು ಸಂತ್ರಸ್ತ ಬ್ಯಾರೆಟ್ ಹೇಳಿಕೊಂಡಿದ್ದಾರೆ.

ತಮ್ಮ ನೆರೆಹೊರೆಯಲ್ಲಿ ಹಾಗೂ ಹಿಂಬದಿಯಲ್ಲಿ ಹಲವಾರು ವರ್ಷಗಳಿಂದ ಪ್ರಾಣಿಗಳನ್ನು ನೋಡುತ್ತಲೇ ಬಂದಿರುವ ಜಾನ್ ಬ್ಯಾರೆಟ್ ಮತ್ತು ಬ್ರಿಜೆಟದ ಮಾರ್ಷೆಟ್ಟಿ, ತಮ್ಮ ಮಕ್ಕಳಿಗೆ ಕರಡಿಯಿಂದ ಸುರಕ್ಷಿತವಾಗಿ ತಪ್ಪಿಸಿಕೊಳ್ಳುವ ತಂತ್ರವನ್ನು ಕಲಿಸಿಕೊಡುತ್ತಿದ್ದಾರೆ. 
Published by:Latha CG
First published: