• Home
  • »
  • News
  • »
  • trend
  • »
  • Viral News: ಬೆಂಗಳೂರಿನ ಈ ಆಟೋ ಹತ್ತಿದ್ರೆ ಬಿಸ್ಕೆಟ್‌, ಸ್ಯಾನಿಟೈಸರ್‌, ನೀರಿನ ಬಾಟಲಿ ಫ್ರೀ!

Viral News: ಬೆಂಗಳೂರಿನ ಈ ಆಟೋ ಹತ್ತಿದ್ರೆ ಬಿಸ್ಕೆಟ್‌, ಸ್ಯಾನಿಟೈಸರ್‌, ನೀರಿನ ಬಾಟಲಿ ಫ್ರೀ!

ಆಟೋ ಡ್ರೈವರ್

ಆಟೋ ಡ್ರೈವರ್

ಇಲ್ಲೊಬ್ಬರು ರಾಜೇಶ್‌ ಎಂಬ ಆಟೋಡ್ರೈವರ್‌ "ಗ್ರಾಹಕರೇ ನನಗೆ ಎಲ್ಲಾ" ಎಂದು ಹೇಳಿಕೊಂಡು ಗ್ರಾಹಕರಿಗೆ ಸಹಾಯವಾಗುವ ಸಾಧನಗಳನ್ನು ಇಟ್ಟಿದ್ದಾರೆ. ಹಾಗಿದ್ರೆ ರಾಜೇಶ್‌ ಅವರ ಆಟೋದಲ್ಲಿ ಏನೆಲ್ಲಾ ಸಾಧನಗಳಿವೆ ಇಲ್ಲಿದೆ ಮಾಹಿತಿ. 

  • Share this:

    ಇತ್ತೀಚಿನ ದಿನಗಳಲ್ಲಿ ಪ್ರಯಾಣ ಮಾಡಬೇಕಾದರೆ ಆಟೋ (Auto), ಬಸ್‌ (Bus), ಕಾರು (Car), ಬೈಕ್‌ (Bike) ಇಂತಹ ವಾಹನಗಳನ್ನೇ (Vehicle) ಬಳಸುಯತ್ತಾರೆ. ಹಿಂದೆಲ್ಲಾ ಜನರು ಪ್ರಯಾಣ (Travel) ಮಾಡಬೇಕಾದರೆ ಸಾರಿಗೆ ವಾಹನಗಳನ್ನೇ ಬಳಸುತ್ತಿದ್ದರು. ಆದರೆ ಬೆಂಗಳೂರಿನ (Bangalore) ಪರಿಸರದಲ್ಲಂತೂ ಇದೀಗ ಆಟೋಗಳ ಸಂಖ್ಯೆ ಹೆಚ್ಚಾಗಿದೆ ಮತ್ತು ಜನರು ಕೂಡ ಇದನ್ನೇ ಅವಲಂಭಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕಾದರು ಸಹ ಈಗ ಆಟೋಗಳಲ್ಲೇ ಸಂಚಾರ ಮಾಡುತ್ತಾರೆ. ಆದರೆ ಕೆಲವೊಂದು ಮಳೆ, ಟ್ರಾಫಿಕ್‌ (Traffic) ಈ ರೀತಿಯ ಸಮಸ್ಯೆಗಳಿಂದ ಜನರು ಆಟೋದಲ್ಲೂ ಹೋಗಲು ನಿರಾಕರಿಸುತ್ತಾರೆ. ಈಗಿನ ಆಟೋಡ್ರೈವರ್‌ಗಳು (Auto Drivers) ಆದಷ್ಟು ಗ್ರಾಹಕರಿಗೆ ಅನುಕೂಲವಾಗುವಂತೆ ಪ್ರಯಾಣವನ್ನು ಬೆಳೆಸಲು ಅನುಕೂಲಕರವಾಗುವಂತೆ ಪ್ರಯತ್ನಿಸುತ್ತಾರೆ. ಇದಕೊಂದು ಮೂಲ ಉದಾಹರಣೆ ಇಲ್ಲಿದೆ.


    ಇಲ್ಲೊಬ್ಬರು ರಾಜೇಶ್‌ ಎಂಬ ಆಟೋ ಡ್ರೈವರ್‌ "ಗ್ರಾಹಕರೇ ನನಗೆ ಎಲ್ಲಾ" ಎಂದು ಹೇಳಿಕೊಂಡು ಗ್ರಾಹಕರಿಗೆ ಸಹಾಯವಾಗುವ ಸಾಧನಗಳನ್ನು ಇಟ್ಟಿದ್ದಾರೆ. ಇದನ್ನು ಗಮನಿಸಿ ಉತ್ತಮ್‌ ಕಶ್ಯಪ್‌ ಅವರು ತಮ್ಮ ಟ್ವಿಟರ್‌ ಮೂಲಕ ಟ್ವೀಟ್‌ ಮಾಡಿ ಈ ಆಟೋ ಡ್ರೈವರ್‌ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾದರೆ ರಾಜೇಶ್‌ ಅವರ ಆಟೋದಲ್ಲಿ ಏನೆಲ್ಲಾ ಸಾಧನಗಳಿವೆ ಇಲ್ಲಿದೆ ಮಾಹಿತಿ.


    ಗ್ರಾಹಕರಿಗಾಗಿ ಆಟೋದಲ್ಲಿ ಏನೆಲ್ಲಾ ಇಟ್ಟುಕೊಂಡಿದ್ದಾರೆ?


    ರಾಜೇಶ್‌ ಅವರು ತಮ್ಮ ಆಟೋದಲ್ಲಿ ಸ್ಯಾನಿಟೈಸರ್‌, ಬ್ಯಾಂಡ್‌ಎಡ್‌, ಬಿಸ್ಕೆಟ್‌, ಚಾಕಲೇಟ್‌ ಮತ್ತು ನೀರಿನ ಬಾಟಲಿಗಳನ್ನು ಇಟ್ಟುಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಗ್ರಾಹಕರಿಗೆ  ಸರ್ವೀಸ್‌ ಮಾಡುತ್ತಾರೆ. ಇದಲ್ಲದೇ ಇಲ್ಲಿ ಇಟ್ಟಿರುವಂತಹ ಈ ಎಲ್ಲವೂ ಉಚಿತವಾಗಿಯೇ ತಮ್ಮ ಗ್ರಾಹಕರಿಗೆ  ನೀಡುತ್ತಾರೆ.



    ಇದರ ಬಗ್ಗೆ ಯಾಕೆ ಈ ರೀತಿ ಸೇವೆಯನ್ನು ನೀಡ್ತಾ ಇದ್ದೀರೆಂದು ಕೇಳಿದರೆ ಗ್ರಾಹಕರೇ ನನಗೆ ಎಲ್ಲ ಎಂದು ರಾಜೇಶ್‌ ಅವರು ಹೇಳುತ್ತಾರೆ.


    ಇದನ್ನೂ ಓದಿ: ಮುರುಘಾ ಸ್ವಾಮಿ ಕೇಸ್; ಪೊಲೀಸರಿಂದ ಒಡನಾಡಿ ಸಂಸ್ಥೆ ಮುಖ್ಯಸ್ಥರ ವಿಚಾರಣೆ


    ಉತ್ತಮ್‌ ಕಶ್ಯಪ್‌ ಅವರ ಟ್ವೀಟ್‌ಗೆ ಜನರ ಪ್ರತಿಕ್ರಿಯೆ:


    ಈ ಫೋಟೋ ಮತ್ತು ಉತ್ತಮ್‌ ಅವರ ಟ್ವೀಟ್‌ ಅನ್ನು ಕಂಡು ಒಂದು ಸಾವಿರ ಜನರು ಅವರ ಟ್ಚೀಟ್‌ಗೆ ಲೈಕ್‌ ಅನ್ನು ನೀಡಿದ್ದಾರೆ. ನಿಜವಾಗಲು ಹೇಳಬೇಕೆಂದರೆ ರಾಜೇಶ್‌ ಅವರ ಇಂತಹ ಸಮಾಜಕಾರ್ಯ ಮೆಚ್ಚಲೇಬೇಕು.


    ಇದನ್ನು ವೀಕ್ಷಿಸಿದ ಕೆಲವೊಂದು ಜನರು ಇಂತಹ ಆಟೋ ಚಾಲಕರು ಇನ್ನಷ್ಟು ಬರಬೇಕು ಎಂದಿದ್ದಾರೆ. ಅದ್ರಲ್ಲೂ ಒಬ್ಬರು "ನನಗೆ ಇಂತಹ ಆಟೋ ಚಾಲಕರು ಸಿಕ್ಕಿದರೆ ಅವರಿಗೆ ನಾನು ಹೆಚ್ಚವರಿ ಮೊತ್ತವನ್ನು ಪಾವತಿಸುತ್ತೇನೆ" ಎಂದು ವ್ಯಕ್ತಪಡಿಸಿದ್ದಾರೆ.


    ವೃತ್ತಿಯ ಜೊತೆ ಗ್ರಾಹಕರನ್ನೂ ಪ್ರೀತಿಸುವ ಆಟೋಚಾಲಕ:


    ಹೊಟ್ಟೆಪಾಡಿಗಷ್ಟೇ ದುಡಿಯುವ ಜೊತೆಗೆ ಇಲ್ಲೊಬ್ಬರು ಜನರನ್ನು, ತನ್ನ ವೃತ್ತಿಯನ್ನು ಪ್ರೀತಿಸಿಕೊಂಡು ನಿರ್ವಹಿಸುತ್ತಿರುವ ಇವರ ಈ ಸಮಾಜಸೇವೆಗ ಎಲ್ಲರೂ ಕೈ ಮುಗಿಯಲೇಬೇಕು ಎಂದು ಇನ್ನೊಬ್ಬರು ವ್ಯಕ್ತಪಡಿಸಿದ್ದಾರೆ.


    ಇದನ್ನೂ ಓದಿ: ಆನೆಯೂ ವಿಡಿಯೋ ನೋಡುತ್ತಂತೆ ಈ ಊರಲ್ಲಿ! ಹೀಗೂ ಉಂಟಾ? ನೀವೇ ನೋಡಿ


    ಇದು ನಮ್ಮದೇ ಹತ್ತಿರದ ಬೆಂಗಳೂರಿನಲ್ಲಿ ವೈರಲ್‌ ಆಗುತ್ತಿರುವ ಒಬ್ಬ ಸಮಾಜ ಸೇವಕನ ಕಥೆ. ಇಂತಹವ ಜನರು ಈಗಿನ ಸಮಾಜದಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬೆಳೀಬೇಕು. ರಾಜೇಶ್‌ ಅವರ ಈ ಕಾರ್ಯವನ್ನು ಕಂಡು ಎಲ್ಲರೂ ಉತ್ತಮ ಶ್ಲಾಘಿಸಿದ್ದಾರೆ.


    ಪ್ರತಿಯೊಂದು ಸಮಾಜದಲ್ಲಿ ಇಂತಹ ಸಹೃದಯತೆಯನ್ನು ಹೊಂದಿದ ಹಲವಾರು ಸಮಾಜಸೇವಕರು ಇದ್ದೇ ಇರುತ್ತಾರೆ. ಈ ರೀತಿಯ ವ್ಯಕ್ತಿಗಳು ಈಗಿನ ಯುವಪೀಳಿಗಗೆ ಒಂದು ಸ್ಪೂರ್ತಿ ಎಂದು ಹೇಳಬಹುದು.

    Published by:Harshith AS
    First published: