Assam Village: ಹಿಂಸಾಚಾರದಲ್ಲಿ ಮುಳುಗಿದ್ದ ಅಸ್ಸಾಂನ ಈ ಕುಗ್ರಾಮದಲ್ಲಿ ಈಗ ಅರಳಿ ನಿಂತಿದೆ ಕಲೆ

ಈ ಕುಗ್ರಾಮವನ್ನು ಈಗ ನೇಕಾರರ ಗ್ರಾಮ (handloom weaving)ಎಂದು ಕರೆಯಲಾಗುತ್ತದೆ. ಕೆಲವು ವರ್ಷಗಳ ಹಿಂದೆ, ಇಡೀ ಗ್ರಾಮವು ಉಗ್ರಗಾಮಿ ದಾಳಿ, ಗಲಭೆ, ಹಿಂಸಾಚಾರಕ್ಕೆ ತುತ್ತಾಗಿತ್ತು ಮತ್ತು ಗ್ರಾಮಸ್ಥರು ಬಡತನದಲ್ಲಿ ಬದುಕಬೇಕಾಯಿತು. ಆದರೆ ಈಗ  ಹಳ್ಳಿಯ ಪ್ರತಿ ಕುಟುಂಬವೂ ಕೈಮಗ್ಗ ನೇಯ್ಗೆಯಲ್ಲಿ ತೊಡಗಿದ್ದು, ಆದಾಯವೂ ಹೆಚ್ಚಿದೆ.

ಅಸ್ಸಾಂ ಕೈಮಗ್ಗ

ಅಸ್ಸಾಂ ಕೈಮಗ್ಗ

 • Share this:
  ಒಂದು ಕಾಲದಲ್ಲಿ ಗಲಭೆ ಹಾಗೂ ಹಿಂಸಾಚಾರಗಳಿಂದ ರೋಸಿ ಹೋಗಿದ್ದ ಅಸ್ಸಾಂನ ಕೊಕ್ರಜಾರ್ (This Assam village)  ಜಿಲ್ಲೆಯ ಬುಡಕಟ್ಟು ಹಳ್ಳಿಯೊಂದು ಇದೀಗ ನೇಕಾರರ ಕೇಂದ್ರವಾಗಿ ರೂಪಾಂತರಗೊಂಡಿದೆ. 66 ಕುಟುಂಬಗಳನ್ನು ಒಳಗೊಂಡಿರುವ ಮೊಯಿನಾಗುರಿ ಗ್ರಾಮವು ರಾಭಾ ಬುಡಕಟ್ಟು (Rabha tribes)ಜನಾಂಗದವರ ಪ್ರಾಬಲ್ಯವನ್ನು ಹೊಂದಿದೆ ಮತ್ತು ಇದು ಕೊಕ್ರಜಾರ್ ಜಿಲ್ಲೆಯ ಗೊಸಾಯಿ ಗಾಂವ್‌ನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಭಾರತ-ಭೂತಾನ್ ಗಡಿಯ(India-Bhutan border) ಸಮೀಪದಲ್ಲಿದೆ. ಈ ಕುಗ್ರಾಮವನ್ನು ಈಗ ನೇಕಾರರ ಗ್ರಾಮ (handloom weaving)ಎಂದು ಕರೆಯಲಾಗುತ್ತದೆ. ಕೆಲವು ವರ್ಷಗಳ ಹಿಂದೆ, ಇಡೀ ಗ್ರಾಮವು ಉಗ್ರಗಾಮಿ ದಾಳಿ, ಗಲಭೆ, ಹಿಂಸಾಚಾರಕ್ಕೆ ತುತ್ತಾಗಿತ್ತು ಮತ್ತು ಗ್ರಾಮಸ್ಥರು ಬಡತನದಲ್ಲಿ ಬದುಕಬೇಕಾಯಿತು. ಆದರೆ ಈಗ  ಹಳ್ಳಿಯ ಪ್ರತಿ ಕುಟುಂಬವೂ ಕೈಮಗ್ಗ ನೇಯ್ಗೆಯಲ್ಲಿ ತೊಡಗಿದ್ದು, ಆದಾಯವೂ ಹೆಚ್ಚಿದೆ.

  ಇದನ್ನು ಓದಿ:Illegal Immigrant: ಅಸ್ಸಾಂನಲ್ಲಿ 20 ವರ್ಷಗಳಿಂದ ಮತ ಚಲಾಯಿಸುತ್ತಿದ್ದ ವಿದೇಶಿಗ; ಸಿಕ್ಕಿಬಿದ್ದಿದ್ದು ಹೇಗೆ?

  ಬೆಂಬಲ
  ಗೊಸಾಯಿಗಾಂವ್‌ನ ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧೀಕ್ಷಕಿ (Superintendent of Handloom and Textile department, Gossaigaon) ಹಿರಣ್ಯ ದೇವಿ ಅವರು ಈ ಗ್ರಾಮದ ಜನರಿಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ಇವರ ಯಶಸ್ವಿಗೆ ಕಾರಣರಾಗಿದ್ದಾರೆ. ಈ ಕುರಿತು ಮಾತನಾಡಿದ ಅವರು ನಮ್ಮ ಹಳ್ಳಿಯಲ್ಲಿ ಬುಡಕಟ್ಟು ಸಮುದಾಯವು ಹುಟ್ಟಿನಿಂದಲೇ ಬಣ್ಣಗಳ ಬಗ್ಗೆ ಜ್ಞಾನವನ್ನು ಹೊಂದಿದೆ, ಮತ್ತು ಅಸ್ಸಾಂನ ಹೆಚ್ಚಿನ ಬುಡಕಟ್ಟುಗಳು ನೇಯ್ಗೆಯೊಂದಿಗೆ ಸಂಬಂಧವನ್ನು ಹೊಂದಿದ್ದಾರೆ.

  ನಮ್ಮ ಇಲಾಖೆಯು ಅವರ ಪ್ರತಿಭೆಯನ್ನು ಗುರತಿಸಲು ನಾವು ಗ್ರಾಮಸ್ಥರಿಗೆ ಉಚಿತವಾಗಿ ಮಗ್ಗ, ನೂಲು( free looms) ಮತ್ತು ಇತರ ವಸ್ತುಗಳನ್ನು ಒದಗಿಸುವ ಮೂಲಕ ಎಲ್ಲಾ ಬೆಂಬಲವನ್ನು ನೀಡಿದ್ದೇವೆ ಮತ್ತು ನಾವು ಕಾರ್ಮಿಕರಿಗೆ ಮಳೆಗಾಲದಲ್ಲಿ ಸಮಸ್ಯೆಯಾಗದಂತೆ ಗೋಡೆಗಳನ್ನು ನಿರ್ಮಿಸಿಕೊಟ್ಟಿದ್ದೇವೆ, ಇದರಿಂದ ಅವರು ಯಾವುದೇ ತೊಂದರೆಗಳನ್ನು ಎದುರಿಸದೆ ಮಳೆಗಾಲದಲ್ಲೂ ಕೆಲಸ ಮಾಡಬಹುದು.

  ಶಿಕ್ಷಣಕ್ಕೆ ನೆರವು
  ಈ ಗ್ರಾಮದ ಎಲ್ಲಾ 66 ಕುಟುಂಬಗಳು ಬಟ್ಟೆ ತಯಾರಿಸುವ ವೃತ್ತಿಯಲ್ಲಿದ್ದು, ಈ ವ್ಯಾಪಾರದಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ಬಟ್ಟೆಗೆ ಸಂಬಂಧಿಸಿದ ಕೆಲಸ ಅಥವಾ ಇನ್ನಿತರ ಕೆಲಸಗಳನ್ನು ಮಾಡುತ್ತಾರೆ ಎಂದು ಮೊಯಿನಾಗುರಿ ಗ್ರಾಮದ ನಿವಾಸಿ ಮತ್ತು ಕಾರ್ಮಿಕ ರುಂಡುಮಿ ಕೋಚ್ (Rundumi Koch,) ಹೇಳುತ್ತಾರೆ. ಇದು ಕುಟುಂಬವನ್ನು ನಡೆಸಲು ಅವರಿಗೆ ಸಹಾಯ ಮಾಡುತ್ತದೆ ಮತ್ತು ಇತರ ವೆಚ್ಚಗಳೊಂದಿಗೆ ಅವರ ಮಕ್ಕಳ ಶಿಕ್ಷಣವನ್ನು ಭರಿಸಲು ಸಹಾಯ ಮಾಡುತ್ತದೆ.

  ಸಹಾಯಕ್ಕಾಗಿ ಬಿಟಿಸಿ ಮತ್ತು ಅಸ್ಸಾಂ ಸರ್ಕಾರವನ್ನು ಕೇಳುತ್ತಿದೆ ಎಂದು ಹೇಳಿದ ಅವರು. "ನಾವು ಸುಮಾರು ಒಂದು ವರ್ಷದಿಂದ ಬಟ್ಟೆಯನ್ನು ತಯಾರಿಸುತ್ತಿದ್ದೇವೆ, ಆದರೆ ಇನ್ನೂ ಬಿಟಿಸಿ ಸರ್ಕಾರದಿಂದ ಅಥವಾ ಅಸ್ಸಾಂ ಸರ್ಕಾರದಿಂದ ಯಾವುದೇ ಸಹಾಯವನ್ನು ಪಡೆದಿಲ್ಲ. ಆದ್ದರಿಂದ, ನಮಗೆ ಬಟ್ಟೆ ತಯಾರಿಸುವ ಯಂತ್ರಗಳನ್ನು ಒದಗಿಸಿ ಮತ್ತು ನಮ್ಮ ಗ್ರಾಮಕ್ಕೆ ಸಹಾಯ ಮಾಡುವಂತೆ ಎರಡೂ ಸರ್ಕಾರಗಳಿಗೆ ನಮ್ಮ ಮನವಿಯಾಗಿದೆ. ಸಮಾಜದ ಬಿಟಿಆರ್ ಸರ್ಕಾರವು ನಮಗೆ 2,500,000 ರೂಪಾಯಿಗಳನ್ನು ನೀಡುವುದಾಗಿ ಹೇಳಿತ್ತು, ಆದರೆ ಯಾವುದೇ ನೆರವು ಬಂದಿಲ್ಲ ಎಂದು ಹೇಳಿದ್ದಾರೆ.

  ಇದನ್ನು ಓದಿ:Assam: ಪರೀಕ್ಷೆಗೆ Shorts ಹಾಕಿಕೊಂಡು ಬಂದ ವಿದ್ಯಾರ್ಥಿನಿಗೆ ಕರ್ಟನ್ ಸುತ್ತಿ ಎಕ್ಸಾಂ ಬರೆಸಿದ ಸಿಬ್ಬಂದಿ

  ವಿವಿಧ ವಿನ್ಯಾಸದ ಬಟ್ಟೆ ತಯಾರಿ
  ನಾವು ಅನೇಕ ಹಲವಾರು ಆರ್ಡರ್‌ಗಳನ್ನು ಪಡೆಯುತ್ತವೆ ಮತ್ತು ನಾವು ವಿವಿಧ ವಿನ್ಯಾಸದ ಬಟ್ಟೆಗಳನ್ನು ತಯಾರಿಸುತ್ತೇವೆ ಇದರಿಂದ ಪಶ್ಚಿಮ ಬಂಗಾಳ ಮತ್ತು ಹತ್ತಿರದ ಜಿಲ್ಲೆಗಳ ಜನರು ಬಟ್ಟೆಗಳನ್ನು ಖರೀದಿಸಲು ಇಲ್ಲಿಗೆ ಬರುತ್ತಾರೆ, ಏಕೆಂದರೆ ಈಗ ನಮ್ಮ ಪ್ರದೇಶದಲ್ಲಿ ಯಾವುದೇ ರೀತಿಯ ಭಯವಿಲ್ಲ ಮತ್ತು ನಾವು ಯಾವುದೇ ಆತಂಕವಿಲ್ಲದೆ ಕೆಲಸ ಮಾಡುತ್ತೇವೆ. " ಎಂದು ರುಂಡುಮಿ ತಿಳಿಸಿದ್ದಾರೆ.

  ಬುಡಕಟ್ಟು ನಿವಾಸಿಗಳು
  ಅಸ್ಸಾಂನ ಸ್ಥಳೀಯ ಮೂಲನಿವಾಸಿಗಳನ್ನು, ಹಲವಾರು ಸಮುದಾಯಗಳ ಮೂಲ ನಿವಾಸಿಗಳನ್ನು ಒಟ್ಟಾಗಿ ಬೋಡೋಗಳು ಎಂದು ಕರೆಯಲಾಗುತ್ತದೆ. 1970ಕ್ಕೂ ಮುನ್ನ ಇವರೇ ಅಸ್ಸಾಂನಲ್ಲಿ ಬಹುಸಂಖ್ಯಾತರಾಗಿದ್ದರು. 2011ರ ಜನಗಣತಿಯ ಪ್ರಕಾರ ಇವರ ಜನಸಂಖ್ಯೆ 14 ಲಕ್ಷಗಳಷ್ಟಿತ್ತು. ಇವರು ತಮ್ಮದೇ ಆದ ಸಂಸ್ಕೃತಿ, ಆಚರಣೆ, ನಂಬಿಕೆಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ಬೋಡೋ ಪ್ರಾಂತ್ಯದಲ್ಲಿ ಸಾಕಷ್ಟು ಬುಡಕಟ್ಟು ನಿವಾಸಿಗಳೂ ಇದ್ದಾರೆ. 1971ರಲ್ಲಿ ನಡೆದ ಭಾರತ- ಪಾಕಿಸ್ತಾನ ಯುದ್ಧ ಹಾಗೂ ಬಾಂಗ್ಲಾದೇಶದ ಸೃಷ್ಟಿಯಿಂದ ಈ ಪ್ರಾಂತ್ಯದಲ್ಲಿಇದ್ದಕ್ಕಿದ್ದಂತೆ ಒತ್ತಡ ಸೃಷ್ಟಿಯಾಯಿತು.

  ಬಾಂಗ್ಲಾದಲ್ಲಿ ನಡೆದ ಧಾರ್ಮಿ ದೌರ್ಜನ್ಯದ ಪರಿಣಾಮ, ಅಲ್ಲಿಂದ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳ ಜೊತೆಗೆ ಮುಸ್ಲಿಮರೂ ಅಸ್ಸಾಂಗೆ ವಲಸೆ ಬಂದರು. ಮ್ಯಾನ್ಮಾರ್‌ನಿಂದ ರೋಹಿಂಗ್ಯಾ ಮುಸ್ಲಿಮರು ಧಾವಿಸಿ ಬಂದರು. ಇವರ ಸಂಖ್ಯೆ ಅಧಿಕವಾಗುತ್ತ ಹೋದಂತೆ, ಸ್ಥಳೀಯ ಸಂಸ್ಕೃತಿಯಲ್ಲಿಆತಂಕ ಹೆಚ್ಚತೊಡಗಿತು. ಪ್ರಾದೇಶಿಕ ಅಸ್ಮಿತೆ, ಅಸ್ತಿತ್ವದ ಉಳಿವಿಗಾಗಿ ಬೋಡೋಗಳು, ಬುಡಕಟ್ಟು ನಿವಾಸಿಗಳು ಹೋರಾಟ ಆರಂಭಿಸಿದ್ದರು.
  Published by:vanithasanjevani vanithasanjevani
  First published: