HOME » NEWS » Trend » THIS AMERICA GIRL DRINKS DOGS URINE EVERY DAY HERES WHY HG

Video: ಸೌಂದರ್ಯ ಕಾಪಾಡಿಕೊಳ್ಳಲು ನಾಯಿ ಮೂತ್ರ ಸೇವಿಸುತ್ತಾಳೆ ಈಕೆ!

ಅಂದ ಚೆಂದಕ್ಕಾಗಿ ಗೋಮೂತ್ರವನ್ನು ಕುಡಿಯುವವರುನ್ನು ನೋಡಿರುತ್ತೇವೆ, ಅಷ್ಟೇ ಏಕೆ ಸ್ವಮೂತ್ರವನ್ನು ಕುಡಿಯುವ ಸೇವಿಸುವವರು ಇದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ನಾಯಿ ಮೂತ್ರವನ್ನು ಸೇವಿಸುತ್ತಿದ್ದಾಳೆ!.

news18-kannada
Updated:January 13, 2021, 1:03 PM IST
Video: ಸೌಂದರ್ಯ ಕಾಪಾಡಿಕೊಳ್ಳಲು ನಾಯಿ ಮೂತ್ರ ಸೇವಿಸುತ್ತಾಳೆ ಈಕೆ!
ಲೀನಾ
  • Share this:
ಸೌಂದರ್ಯ ಕಾಳಜಿ ಯಾರಿಗಿಲ್ಲ ಹೇಳಿ. ಮಹಿಳೆಯರಿಗಂತೂ ಚೆನ್ನಾಗಿ ಕಾಣಬೇಕು ಎಂಬ ಮಹದಾಸೆ ಇರುತ್ತದೆ. ಹಾಗಾಗಿ ಚೆನ್ನಾಗಿ ಕಾಣಲು ಮಹಿಳೆಯರು ನಾನಾ ಸರ್ಕಸ್​ ಮಾಡುತ್ತಾರೆ. ಇನ್ನು ಕೆಲವರು ಆಹಾರ, ಮನೆಮದ್ದುಗಳನ್ನು ಮುಖಕ್ಕೆ ಹಚ್ಚುವ ಮೂಲಕ ಅಂದವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಸೌಂದರ್ಯ ಕಾಪಾಡಿಕೊಳ್ಳಲು ಏನು ಮಾಡುತ್ತಿದ್ದಾಳೆ ಗೊತ್ತಾ?

ಅಂದ ಚೆಂದಕ್ಕಾಗಿ ಗೋಮೂತ್ರವನ್ನು ಕುಡಿಯುವವರುನ್ನು ನೋಡಿರುತ್ತೇವೆ, ಅಷ್ಟೇ ಏಕೆ ಸ್ವಮೂತ್ರವನ್ನು ಕುಡಿಯುವ ಸೇವಿಸುವವರು ಇದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ನಾಯಿ ಮೂತ್ರವನ್ನು ಸೇವಿಸುತ್ತಿದ್ದಾಳೆ!.

ಅಚ್ಚರಿಯಾದ್ರು ಸತ್ಯ!. ಅಮೆರಿಕ ಮೂಲದ ಈ ಯುವತಿಯ ಹೆಸರು ಲೀನಾ. ಆಕೆ ತನ್ನ ತ್ವಚೆಯನ್ನು ನಾಯಿ ಮೂತ್ರ ಸೇವಿಸುವ ಮೂಲಕ ಕಾಪಾಡಿಕೊಂಡು ಬಂದಿದ್ದೇನೆ ಎಂದಿದ್ದಾಳೆ.

ಈ ಬಗ್ಗೆ ಮಾತನಾಡುವ ಲೀನಾ ‘ನಾನು ನಾಯಿಯನ್ನು ಸಾಕುತ್ತಿದ್ದೇನೆ. ಅದರ ಮೂತ್ರವನ್ನು ಸೇವಿಸುತ್ತಿದ್ದೇನೆ. ನಾಯಿ ಮೂತ್ರವಲ್ಲಿ ಮಿಟಮಿನ್​ ಎ, ಮಿಟಮಿನ್​ ಇ ಮತ್ತು ಕ್ಯಾಲ್ಸಿಯಂ ಗುಣಗಳಿವೆ. ಅಷ್ಟೇ ಏಕೆ, ಕ್ಯಾನ್ಸರ್​ ರೋಗವನ್ನು ತಡೆಯುವ ಶಕ್ತಿ ಇದರಲ್ಲಿದೆ. ಹಾಗಾಗಿ ನಾನು ನಾಯಿ ಮೂತ್ರವನ್ನು ಸೇವಿಸುತ್ತಾ ಬಂದಿದ್ದೇನೆ ಎಂದು ಹೇಳಿದ್ದಾಳೆ.

ಇತ್ತೀಚೆಗೆ ಲೀನಾ ಮುಖದಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದ್ದವಂತೆ. ಅದರಿಂದ ಬೇಸರಗೊಂಡಿದ್ದ ಲೀನಾ ಮುಖದ ಚಂದ ಹಾಳಾಗುತ್ತಿದೆಯಲ್ಲ ಎಂದು ಬೇಸರದಿಂದ ಇದ್ದಳು. ಕೊನೆಯ ಆಕೆಯ ಪರಿಚಯಸ್ಥರು ಸಾಕುನಾಯಿ ಮೂತ್ರ ಕುಡಿಯುವುದರಿಂದ ಒಳ್ಳೆಯದಾಗುತ್ತೆ ಎಂದರಂತೆ. ಹಾಗಾಗಿ ಲೀನಾ ತನ್ನ ಸಾಕುನಾಯಿ ಮೂತ್ರವನ್ನು ಕುಡಿಯಲು ಪ್ರಾರಂಭಿಸಿದ್ದಾಳೆ.ಪ್ರಾರಂಭದಲ್ಲಿ ಆಕೆಗೆ ನಾಯಿ ಮೂತ್ರ ಕುಡಿಯಲು ಅಸಹ್ಯ ಎನಿಸಿದರು. ನಂತರ ದಿನಗಳಲ್ಲಿ ಸೇವಿಸುತ್ತಾ ಹೊಂದತೆ ಆಕೆಯ ಮುಖದಲ್ಲಿ ಮೂಡಿದ ಗುಳ್ಳೆಗಳು ಅದರ ಕಲೆಗಳು ಮಾಯವಾಗಿದೆಯಂತೆ.ಸದ್ಯ ಲೀನಾ ನಾಯಿಮೂತ್ರ ಸೇವಿಸುತ್ತಿರುವ ಸುದ್ದಿ ಎಲ್ಲೆಡೆ ವೈರಲ್​ ಆಗುತ್ತಿದೆ. ಅನೇಕರು ನಾಯಿಮೂತ್ರದಲ್ಲಿ ಇಷ್ಟೆಲ್ಲಾ ಶಕ್ತಿಯಿದೆಯಾ? ಎಂದು ಆಲೋಚಿಸುತ್ತಿದ್ದಾರೆ. ಇನ್ನು ಕೆಲವು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
Published by: Harshith AS
First published: January 13, 2021, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading