Alien-Looking Creature: ಏಲಿಯನ್ ರೀತಿ ಕಾಣೋ ಈ ಕಡಲ ಜೀವಿ ಸಿಕ್ಕಾಪಟ್ಟೆ ದುಬಾರಿ! ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ

ಕೆಲವು ಅಪರೂಪದ ಜೀವಿಗಳು ದಡಕ್ಕೆ ಅಪ್ಪಳಿಸಿ, ಜನರಿಗೆ ದಿಗ್ಭ್ರಮೆ ಉಂಟು ಮಾಡುತ್ತವೆ. ಆಳ ಸಮುದ್ರದಲ್ಲಿ ಜೀವಿಸುವ ಆ ಜೀವಿಗಳು, ಹಾಗೋ ಹೀಗೂ ತೀರದ ಕಡೆ ಸಾಗಿ ಬಂದು ಜನರಿಗೆ ದರ್ಶನ ನೀಡುತ್ತವೆ. ಅಂತದ್ದೇ ಒಂದು ಅಪರೂಪದ ಆಳ ಸಮುದ್ರದ ಜೀವಿಯನ್ನು, ಡೈಫ್ರಿನ್ ಅರ್ಡುಡ್ವಿ ಸಮೀಪದ ವೇಲ್ಸಿನ ಬೆನ್ನಾರ್ ಕಡಲ ತೀರದಲ್ಲಿ ಪತ್ತೆ ಹಚ್ಚಲಾಗಿದೆ.

ಅನ್ಯಗ್ರಹ ಜೀವಿಯಂತೆ ಕಾಣುವ ಈ ಕಡಲ ಜೀವಿ

ಅನ್ಯಗ್ರಹ ಜೀವಿಯಂತೆ ಕಾಣುವ ಈ ಕಡಲ ಜೀವಿ

  • Share this:
ಕಡಲಿನ ಒಡಲಿನಲ್ಲಿ ಸಾಕಷ್ಟು ರಹಸ್ಯಗಳು ಅಡಗಿವೆ. ಆಗೊಮ್ಮೆ ಈಗೊಮ್ಮೆ ಅವು ಈಚೆಗೆ ಬರುವುದುಂಟು. ಆದರೂ ಇಂದಿಗೂ, ನಮಗೆ ಸಮುದ್ರ ಆಳದಲ್ಲಿ (depth of the sea) ನೆಲೆ ಕಂಡುಕೊಂಡಿರುವ ಸಾಕಷ್ಟು ಜೀವ ಮತ್ತು ಸಸ್ಯ ಪ್ರಭೇದಗಳ ಬಗ್ಗೆ ತಿಳಿದೇ ಇಲ್ಲ. ಪ್ರಪಂಚದಾದ್ಯಂತ ಇರುವ ಕಡಲುಗಳ ತೀರಗಳಲ್ಲಿ, ಅಲೆಗಳ (Waves) ಜೊತೆಗೆ ತೀರಕ್ಕೆ ಬಂದು ಬೀಳುವ ಲಕ್ಷಾಂತರ ವಸ್ತುಗಳ ಪೈಕಿ ಒಮ್ಮೊಮ್ಮೆ ಅದೃಷ್ಟವಶಾತ್ (ಅವುಗಳ ಪಾಲಿಗೆ ದುರಾದೃಷ್ಟ ಅನ್ನಬಹುದೇನೋ) ಅಂತಹ ಕೆಲವು ಅಪರೂಪದ ಜೀವಿಗಳು (Creatures) ದಡಕ್ಕೆ ಅಪ್ಪಳಿಸಿ, ಜನರಿಗೆ ದಿಗ್ಭ್ರಮೆ ಉಂಟು ಮಾಡುತ್ತವೆ. ಆಳ ಸಮುದ್ರದಲ್ಲಿ ಜೀವಿಸುವ ಆ ಜೀವಿಗಳು, ಹಾಗೋ ಹೀಗೂ ತೀರದ ಕಡೆ ಸಾಗಿ ಬಂದು ಜನರಿಗೆ ದರ್ಶನ ನೀಡುತ್ತವೆ.

ಒಂದು ಅಪರೂಪದ ಆಳ ಸಮುದ್ರದ ಜೀವಿಯನ್ನು, ಡೈಫ್ರಿನ್ ಅರ್ಡುಡ್ವಿ ಸಮೀಪದ ವೇಲ್ಸಿನ ಬೆನ್ನಾರ್ ಕಡಲ ತೀರದಲ್ಲಿ ಪತ್ತೆ ಹಚ್ಚಲಾಗಿದೆ.

ಅಪರೂಪದ ಆಳ ಸಮುದ್ರದ ಜೀವಿ ಪತ್ತೆ

ಆ ಜೀವಿಯ ಫೋಟೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು, ಅರೇ ಇದು ಸ್ಟ್ರೇಂಜರ್ ಥಿಂಗ್ಸ್ ಸಿರೀಸ್‍ನ ಶ್ಯಾಡೋ ಮಾನ್‍ಸ್ಟರಿನ್ನಂತೆ ಕಾಣಿಸುತ್ತಿದೆಯಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಹೌದು, ನೀವೇನಾದರೂ ಸ್ಟ್ರೇಂಜರ್ ಥಿಂಗ್ಸ್ ಸಿರೀಸ್ ಅನ್ನು ವೀಕ್ಷಿಸಿದ್ದರೆ, ಈ ಜೀವಿಯ ಫೋಟೊ ಕಂಡು ಬಹುಷಃ ಹಾಗೆಯೇ ಅಂದುಕೊಳ್ಳಬಹುದು.

ವೈರಲ್ ಆಯ್ತು ಕಡಲ ಜೀವಿಯ ಫೋಟೋ

ಈ ಕಡಲಾಳದ ಜೀವಿಯ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡವರು ಶೇಲ್ ಲಾಂಗ್ ಮೋರ್. ಅವರು ಹಾಗೇ ಸುಮ್ಮನೆ ಬೆನ್ನಾರ್ ಕಡಲ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅಲೆಗಳ ಜೊತೆ ಕೊಚ್ಚಿಕೊಂಡು ಬಂದು ತೀರದಲ್ಲಿ ಬಿದ್ದುಕೊಂಡಿದ್ದ ಈ ಜೀವಿಯನ್ನು ಕಂಡರಂತೆ. ಅದು ಯಾವ ಜೀವಿಯೆಂದು ಗುರುತಿಸಲು ಸಾಧ್ಯವಾಗದೆ, ಶೇಲ್ ಲಾಂಗ್ ಮೋರ್, ಅದರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಜೀವಿ ಯಾವುದೆಂಬ ತನ್ನ ಪ್ರಶ್ನೆಗೆ ಉತ್ತಮ ಸಿಗುತ್ತದೆ ಎಂಬ ಅನಿಸಿಕೆ ಅವರದಾಗಿತ್ತು. ಆದರೆ ನೆಟ್ಟಿಗರು ಕೂಡ ಆ ಜೀವಿಯನ್ನು ನೋಡಿ, ಶೇಲ್ ಲಾಂಗ್ ಮೋರ್ ಅವರಂತೆಯೇ ತಬ್ಬಿಬ್ಬಾಗಿದ್ದಾರೆ.

ಇದನ್ನೂ ಓದಿ:  Giant Sturgeon: ಸೆರೆ ಸಿಕ್ಕಿತು ಅಪರೂಪದ ಜೈಂಟ್ ಸರ್ಜನ್! ಇದಕ್ಕೆ 100 ವರ್ಷ

“ಇದನ್ನು ನೋಡುವ ವರೆಗೂ, ಈಗಾಗಲೇ ನಾನು ಎಲ್ಲಾ ಸ್ಥಳೀಯ ವೈಲ್ಡ್‍ಲೈಫ್ ಅನ್ನು ನೋಡಿದ್ದೇನೆ ಎಂದು ಭಾವಿಸಿದ್ದೆ, ಇದು ನನಗೊಂದು ದೊಡ್ಡ ಶಾಕ್ ಆಗಿದೆ ! ಅದು ಒಂದು ವಿಚಿತ್ರವಾಗಿ ಕಾಣುವ ಜೀವಿಯಾಗಿತ್ತು, ಆದರೆ ತುಂಬಾ ಸುಂದರವಾಗಿತ್ತು ಕೂಡ” ಎಂದು ಆಕೆ ಹೇಳಿಕೊಂಡಿದ್ದಾರೆ.

ಗೂಸೆನೆಕ್ ಬಾರ್ನಾಕಲ್ಸಿನ ಗಾಗಲ್
ಈ ವಿಚಿತ್ರ ಜೀವಿ, ಒಂದು ದೈತ್ಯ ಜೇಡದಂತೆ ಕಾಣುತ್ತದೆ ಮತ್ತು ಸ್ಟ್ರೇಂಜರ್ ಥಿಂಗ್ಸ್‌‌‌‌‌‌‌‌ನ ಮೈಂಡ್ ಫ್ಲೈಯರಿನ್ನಂತೆ ಕಾಣುತ್ತದೆ ಎಂದು ಬಹಳಷ್ಟು ಮಂದಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅದರ ಫೋಟೋ ವೈರಲ್ ಆದ ನಂತರ, ತಜ್ಞರು ಈ ಜೀವಿಯನ್ನು ಗೂಸೆನೆಕ್ ಬಾರ್ನಾಕಲ್ಸಿನ ಗಾಗಲ್ ಎಂದು ಗುರುತಿಸಿದ್ದಾರೆ.

ಇದನ್ನೂ ಓದಿ:  Burmese Python: ಅಬ್ಬಾಬ್ಬಾ, ಈ ಹೆಬ್ಬಾವಿನ ಹೊಟ್ಟೆಯಲ್ಲಿ ಇತ್ತಂತೆ ಬರೋಬ್ಬರಿ 122 ಮೊಟ್ಟೆಗಳು!

ಗೂಸ್ ಬಾರ್ನಾಕಲ್ಸ್ ಅಥವಾ ಗೂಸೆನೆಕ್ ಬಾರ್ನಾಕಲ್ ಎಂಬುವುದು ಫಿಲ್ಟರ್ ಫೀಡಿಂಗ್ ಕ್ರಸ್ಟಿಯನ್‍ಗಳಾಗಿದ್ದು, ಅವು ಸಮುದ್ರದ ಇಂಟರ್ಟೈಡಲ್ ವಲಯದಲ್ಲಿ ಕಲ್ಲುಗಳು ಮತ್ತು ಫ್ಲೋಟ್ಸಾಮುಗಳ ಗಟ್ಟಿಯಾದ ಮೇಲ್ಮೈಗಳಿಗೆ ಅಂಟಿಕೊಂಡಿರುತ್ತವೆ. ಈ ಜೀವಿಗಳ ಇನ್ನೊಂದು ವಿಶೇಷ ಏನು ಗೊತ್ತೇ? ಅವುಗಳನ್ನು ಅಪರೂಪದ ರುಚಿಕರ ಪದಾರ್ಥವೆಂದು ಪರಿಗಣಿಸಲಾಗುತ್ತದೆ ಮತ್ತು ಅವು ವಿಶ್ವದ ಅತ್ಯಂತ ದುಬಾರಿ ಸಮುದ್ರ ಆಹಾರಗಳಲ್ಲಿ ಒಂದಾಗಿವೆ.

ಪ್ರತಿ ಕಿಲೋಗೆ ಇದರ ಬೆಲೆ ಎಷ್ಟು ಗೊತ್ತಾ?
ಪೋರ್ಚುಗಲ್ ಮತ್ತು ಸ್ಪೇನ್, ಕೆಲವು ಜಾತಿಯ ಗೂಸ್ ಬಾರ್ನಾಕಲ್‍ಗಳನ್ನು ಪರ್ಸೆಬ್ಸ್ ಎಂಬ ದುಬಾರಿ ರುಚಿಕರ ಪದಾರ್ಥವಾಗಿ ಸೇವಿಸುತ್ತಾರಂತೆ. ವರದಿಗಳ ಪ್ರಕಾರ, ಇದರ ರಫ್ತು ಬೆಲೆ ಪ್ರತಿ ಕಿಲೋಗೆ ಸುಮಾರು 28,000 ರೂ.ಗಳು. ಅವುಗಳನ್ನು ಸ್ಪೇನ್‍ನ ಕೋಸ್ಟಾ ಡ ಮೋರ್ಟೆಯಲ್ಲಿ, ನೀರ ಒಳಗಿನ ಬಂಡೆಗಳು ಮತ್ತು ಬಿರುಕುಗಳಿಂದ ಸಂಗ್ರಹಿಸಲಾಗುತ್ತದೆ. ಮೀನುಗಾರರು ಅವುಗಳನ್ನು ಹಿಡಿಯಲು, ಅಪ್ಪಳಿಸುವ ಅಲೆಗಳ ಕೆಳಗೆ ಧುಮುಕುವ ಮೂಲಕ ತನ್ನ ಜೀವವನ್ನು ಪಣಕ್ಕಿಡಬೇಕಾಗುತ್ತದೆ, ಈ ಕಾರಣಕ್ಕಾಗಿ ಈ ಜೀವಿಯ ಬೆಲೆ ತುಂಬಾ ದುಬಾರಿಯಾಗಿದೆ.
Published by:Ashwini Prabhu
First published: