ಕೆಲವು ದಿನಗಳ ಹಿಂದಷ್ಟೇ ನಾವು ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾನೇ ವೈರಲ್ (Viral) ಆಗಿದ್ದ ಒಂದು ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿ ಸಾಕಿಕೊಂಡ ಬೆಕ್ಕಿನ ಮರಿಯನ್ನು (Kitten) ಚುಂಬಿಸುತ್ತಿರುವ ಮತ್ತು ಆ ಸರಣಿ ಚುಂಬನಕ್ಕೆ ಬೇಸತ್ತ ಬೆಕ್ಕಿನ ಮರಿ ‘ಸಾಕಪ್ಪಾ ಸಾಕು ನಿಲ್ಲಿಸು’ ಅಂತ ಹೇಳುವಂತೆ ತನ್ನ ಮುಂದಿನ ಕಾಲಿನಿಂದ ಆ ವ್ಯಕ್ತಿಯ ಮುಖಕ್ಕೆ ಮುಟ್ಟಿ ಹೇಳುತ್ತಿರುವುದನ್ನು ನಾವೆಲ್ಲಾರೂ ನೋಡಿದ್ದೇವೆ. ಇವತ್ತು ಸಹ ನಾವು ಅಂತಹದೇ ಒಂದು ವಿಡಿಯೋ ವೈರಲ್ (Video Viral) ಆಗಿರುವುದನ್ನು ನೋಡಬಹುದು. ಆದರೆ ಇಲ್ಲಿ ವ್ಯತ್ಯಾಸ ಎಂದರೆ ಒಂದು ಅಂಬೆಗಾಲಿಡುವ ಮಗು ಬೆಕ್ಕಿಗೆ ಮುದ್ದಾಗಿ ಚುಂಬಿಸುತ್ತಿರುವುದನ್ನು (Kissing) ನಾವು ನೋಡಬಹುದು.
ನೀವು ಈ ಸಾಕು ಪ್ರಾಣಿಗಳ ಮತ್ತು ಪುಟ್ಟ ಮಕ್ಕಳ ವಿಡಿಯೋಗಳ ದೊಡ್ಡ ಅಭಿಮಾನಿಯಾಗಿದ್ದರೆ, ನೀವು ಖಂಡಿತವಾಗಿಯೂ ಇದನ್ನು ನೋಡಲೇಬೇಕು. ಈ ವಿಡಿಯೋದಲ್ಲಿ ಒಂದು ಮಗುವು ಅಲ್ಲೇ ಕುಳಿತಂತಹ ಒಂದು ಬೆಕ್ಕಿಗೆ ಮುತ್ತು ನೀಡುತ್ತಿರುವುದನ್ನು ನೋಡಬಹುದು.
ಈ ಮುದ್ದಾದ ವಿಡಿಯೋವನ್ನು ಬ್ಯೂಟೆಂಗೇಬೈಡೆನ್ ಎಂಬ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 2.5 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ ಎಂದು ಹೇಳಬಹುದು.
ಈ ವೈರಲ್ ವಿಡಿಯೋದಲ್ಲಿ ಪುಟ್ಟ ಮಗುವು ಬೆಕ್ಕಿಗೆ ಮುತ್ತುಗಳನ್ನು ನೀಡಿ ನಂತರ ಅದನ್ನು ಮುದ್ದಾಡುವುದನ್ನು ನೋಡಬಹುದು. ಅಂಬೆಗಾಲಿಡುವ ಮಗು ಬೆಕ್ಕನ್ನು ನೋಡಿ ಸ್ವಲ್ಪವೂ ಹೆದರುವುದಿಲ್ಲ ಮತ್ತು ಅದನ್ನು ನೋಡಿ ಅಲ್ಲಿಂದ ಓಡಿ ಹೋಗಲು ಸಹ ಮಗು ಪ್ರಯತ್ನಿಸುವುದಿಲ್ಲ. ಆ ಬೆಕ್ಕಿನ ಸಹವಾಸದಲ್ಲಿ ಮಗು ತುಂಬಾನೇ ಆರಾಮದಾಯಕವಾಗಿದ್ದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
"ಟ್ವಿಟ್ಟರ್ ಗೆ ಇದು ತುಂಬಾನೇ ಅಗತ್ಯವಿದೆ" ಎಂದು ವೀಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಕಾಮೆಂಟ್ಸ್ ವಿಭಾಗವು ಹೃದಯದ ಎಮೋಜಿಗಳಿಂದ ತುಂಬಿ ಹೋಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದು ತುಂಬಾ ಸಕಾರಾತ್ಮಕ ವೀಡಿಯೋ ಆಗಿದ್ದು, ಇದು ಹೇಗೆ ಎಲ್ಲರನ್ನೂ ನಗುವಂತೆ ಮಾಡಿತು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
"ನಕಾರಾತ್ಮಕತೆಯಿಂದ ತುಂಬಿರುವ ಈ ಜಗತ್ತಿನಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಹ, ನಾನು ಯಾವಾಗಲೂ ನನ್ನನ್ನು ಅಥವಾ ಯಾವುದೇ ಬೇರೆ ವ್ಯಕ್ತಿಗಳನ್ನು ಸಂತೋಷ ಪಡಿಸುವ ಇಂತಹ ಸಕಾರಾತ್ಮಕ ವಿಷಯಗಳ ಮೇಲೆ ಅವಲಂಬಿತನಾಗಿದ್ದೇನೆ. ನಾನು ಅಹಿತಕರ ಎನಿಸುವ ವಿಷಯಗಳನ್ನು ನೋಡಲು ಇಷ್ಟಪಡುವುದಿಲ್ಲ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಈ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು “ಪ್ರಾಣಿಗಳು ಸಹ ಹೆಚ್ಚು ಬುದ್ಧಿವುಳ್ಳವಾಗಿರುತ್ತವೆ ಎಂದು ಅನೇಕ ಅಧ್ಯಯನಗಳು ಸೂಚಿಸುತ್ತವೆ. ನಾನು ಗ್ರಾಮೀಣ ಮತ್ತು ಕೃಷಿ ಪರಿಸರದಲ್ಲಿ ಬೆಳೆದಿದ್ದೇನೆ ಮತ್ತು ನಾವು ಸಾಕುವ ಪ್ರಾಣಿಗಳನ್ನು ಮತ್ತು ನಾವು ತಿನ್ನುವ ಪ್ರಾಣಿಗಳನ್ನು ತುಂಬಾ ಹತ್ತಿರದಿಂದ ನೋಡುತ್ತಾ ಬೆಳೆದಿದ್ದೇನೆ. ಅವೆಲ್ಲ ಪ್ರಾಣಿಗಳು ಒಂದೇ ರೀತಿಯ ಕಾಳಜಿಗೆ ಅರ್ಹವಾಗಿವೆ” ಎಂದು ಕಾಮೆಂಟ್ ಮಾಡಿದ್ದಾರೆ.
Twitter needs this.. 😊 pic.twitter.com/YpIYxr8e6b
— Buitengebieden (@buitengebieden_) April 16, 2022
ಇನ್ನೊಬ್ಬ ಬಳಕೆದಾರರು ಈ ವಿಡಿಯೋ ನೋಡಿ “ಬೆಕ್ಕುಗಳನ್ನು ಇಷ್ಟ ಪಡುವುದಿಲ್ಲ ಎಂದು ಹೇಳುವ ಜನರು ಸರಿಯಾದ ಬೆಕ್ಕನ್ನು ಭೇಟಿಯಾಗಿಲ್ಲ ಅಂತ ಕಾಣುತ್ತೆ. ಬೆಕ್ಕುಗಳು ಎಲ್ಲಾ ಪ್ರಾಣಿಗಳಿಗಿಂತಲೂ ಸ್ವಲ್ಪ ವಿಭಿನ್ನವಾಗಿರುತ್ತವೆ. ಕೆಲವರು ಬೆಕ್ಕಿಗೆ ಆಹಾರವನ್ನು ನೀಡಲು ಮಾತ್ರ ಬಯಸುತ್ತಾರೆ, ಆದರೆ ಅವುಗಳಿಗೆ ನಮ್ಮ ಪ್ರೀತಿ ಮತ್ತು ವಾತ್ಸಲ್ಯ ಸಹ ಬೇಕಾಗಿರುತ್ತದೆ” ಎಂದು ಹೇಳಿದ್ದಾರೆ.
ಪುಟ್ಟ ಬೆಕ್ಕು ಮಡಕೆಯನ್ನು ಹೇಗೆ ತಯಾರಿಸಬೇಕೆಂದು ಕಲಿಯುತ್ತಿದೆ!
ಇನ್ನೊಂದು ವೈರಲ್ ಆದ ವಿಡಿಯೋದಲ್ಲಿ ಒಂದು ಕುತೂಹಲಕಾರಿ ಪುಟ್ಟ ಬೆಕ್ಕು ಮಡಕೆಯನ್ನು ಹೇಗೆ ತಯಾರಿಸುವುದು ಎಂದು ಕುಳಿತು ನೋಡುತ್ತಿರುವುದನ್ನು ನಾವು ನೋಡಬಹುದು. ಹೌದು.. ಪುಟ್ಟ ಬೆಕ್ಕು ಕುಂಬಾರಿಕೆಯ ಚಕ್ರದ ಮೇಲಿನ ಮಣ್ಣಿನ ದಿಬ್ಬವನ್ನು ಸ್ಪರ್ಶಿಸುವುದನ್ನು ಮತ್ತು ಏನಾಗುತ್ತಿದೆ ಎಂದು ನಿಖರವಾಗಿ ಕಂಡು ಹಿಡಿಯಲು ಪ್ರಯತ್ನಿಸುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಇದು 14 ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಕುಂಬಾರಿಕೆಯ ಚಕ್ರದ ಮೇಲೆ ಒಬ್ಬ ವ್ಯಕ್ತಿಯು ಜೇಡಿಮಣ್ಣನ್ನು ರೂಪಿಸುತ್ತಿರುವುದನ್ನು ಕಾಣಬಹುದು. ಇದನ್ನು ನೋಡಿದ ಕುತೂಹಲ ಭರಿತ ಬೆಕ್ಕು ಮಡಕೆಗಳ ಮೇಲೆ ತನ್ನ ಕೈಗಳನ್ನು ಪ್ರಯತ್ನಿಸಲು ಬಯಸಿತು ಮತ್ತು ಚಕ್ರದ ಮೇಲೆ ತುಂಬಿದ ಜೇಡಿಮಣ್ಣಿನ ಮಾದರಿಯನ್ನು ಸ್ಪರ್ಶಿಸಲು ಪ್ರಾರಂಭಿಸಿತು. ಈ ವಿಡಿಯೋವನ್ನು ನೆಟ್ಟಿಗರು ತುಂಬಾನೇ ಇಷ್ಟ ಪಟ್ಟಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ