• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Inspirational Story: 74ನೇ ವಯಸ್ಸಿನಲ್ಲೂ ಯುವಕನಂತೆ ಕೆಲಸ ಮಾಡಿ ಬದುಕು ಸಾಗಿಸುತ್ತಿರುವ ಕಾಕಾ! ಇವರ ಕಥೆ ಅನೇಕರಿಗೆ ಸ್ಫೂರ್ತಿ

Inspirational Story: 74ನೇ ವಯಸ್ಸಿನಲ್ಲೂ ಯುವಕನಂತೆ ಕೆಲಸ ಮಾಡಿ ಬದುಕು ಸಾಗಿಸುತ್ತಿರುವ ಕಾಕಾ! ಇವರ ಕಥೆ ಅನೇಕರಿಗೆ ಸ್ಫೂರ್ತಿ

74 ವಯಸ್ಸಿನ ವ್ಯಕ್ತಿ

74 ವಯಸ್ಸಿನ ವ್ಯಕ್ತಿ

ಕೆಲಸ ಚಿಕ್ಕದು-ದೊಡ್ಡದು ಅಂತ ಇರುವುದಿಲ್ಲ. ನಾವು ಮಾಡುವ ಕೆಲಸದಿಂದ ನಮ್ಮನ್ನೇ ನಂಬಿಕೊಂಡಿರುವವರ ಹೊಟ್ಟೆ ತುಂಬುತ್ತಿದೆಯಲ್ಲಾ ಅದು ಮುಖ್ಯವಾಗುತ್ತದೆ.

  • Share this:

ನಮ್ಮಲ್ಲಿ ಅನೇಕರು ವಯಸ್ಸು 50 ದಾಟಿತೆಂದರೆ ಸಾಕು ‘ಸಾಕಪ್ಪಾ ಸಾಕು ಈ ಜೀವನ (Life), ಕೆಲಸ, ಸಂಸಾರ ಅಂತೆಲ್ಲಾ ನಿರುತ್ಸಾಹದಿಂದ ಮಾತಾಡುತ್ತಾರೆ. ಹೀಗೆ ಸ್ವಲ್ಪ ಮಕ್ಕಳು ಓದು ಮುಗಿಸಿದರೆ ಸಾಕು ಕೆಲಸದಿಂದ ನಿವೃತ್ತಿ ತೆಗೆದುಕೊಂಡು ಆರಾಮಾಗಿ ಮನೆಯಲ್ಲಿ ಇದ್ದು ಬಿಡೋಣ ಅನ್ನೋರಿಗೇನೂ ಕಡಿಮೆ ಇಲ್ಲ ನಮ್ಮಲ್ಲಿ. ಹೀಗೆ ನಿಮಗೂ ಸಹ ಜೀವನದಲ್ಲಿ ‘ಎಷ್ಟು ಮಾಡಿದರೂ ಅಷ್ಟೇ, ಇಲ್ಲಿ ಎಲ್ಲರನ್ನೂ ಸಂತೋಷಪಡಿಸಲು ಆಗುವುದಿಲ್ಲ’ ಅಂತ ಅನ್ನಿಸಿದರೆ, ಈ ಸ್ಪೂರ್ತಿ ನೀಡುವ ಕಾಕಾನ ಜೀವನದ ಕಥೆಯನ್ನು (Life Story) ನೀವು ಒಮ್ಮೆ ಓದಲೇಬೇಕು. ಹೌದು, 74 ವರ್ಷದ ವ್ಯಕ್ತಿಯೊಬ್ಬರು ತಮ್ಮ ವೃದ್ದಾಪ್ಯದಲ್ಲೂ (Old Age) ಸಹ ಎಳೆಯ ವಯಸ್ಸಿನ ಯುವಕನಂತೆ ಓಡಾಡಿಕೊಂಡು ಕೆಲಸ ಮಾಡುತ್ತಿದ್ದಾರೆ ನೋಡಿ. ಕೆಲಸ ಚಿಕ್ಕದು-ದೊಡ್ಡದು ಅಂತ ಇರುವುದಿಲ್ಲ. ನಾವು ಮಾಡುವ ಕೆಲಸದಿಂದ ನಮ್ಮನ್ನೇ ನಂಬಿಕೊಂಡಿರುವವರ ಹೊಟ್ಟೆ ತುಂಬುತ್ತಿದೆಯಲ್ಲಾ ಅದು ಮುಖ್ಯವಾಗುತ್ತದೆ.


ಹಸನ್ ಅಲಿ ಎಂಬ ವ್ಯಕ್ತಿ ಒಂದು ದಶಕದ ಹಿಂದೆ ತಮ್ಮ ಕೆಲಸದಿಂದ ನಿವೃತ್ತರಾದರು, ಆದರೆ ಅವರ ಕೆಲಸ ಮಾಡುವ ಆ ಉತ್ಸಾಹ ಇನ್ನೂ ಜೀವಂತವಾಗಿದೆ. ಹಸನ್ ಅವರು ಈಗ ಮುಂಬೈನ ಬೊರಿವಲಿ ರೈಲ್ವೆ ನಿಲ್ದಾಣದಲ್ಲಿ ಕರವಸ್ತ್ರಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಾರೆ.


ಹಸನ್ ಕಥೆಯನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಹ್ಯೂಮನ್ಸ್ ಆಫ್ ಬಾಂಬೆ


ಹಸನ್ ಅವರ ಸ್ಪೂರ್ತಿದಾಯಕ ಕಥೆಯನ್ನು ಹ್ಯೂಮನ್ಸ್ ಆಫ್ ಬಾಂಬೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದೆ. ಅವರೊಂದಿಗೆ ಮಾತನಾಡುವಾಗ, ಹಸನ್ ಅವರು ಶೂ ಅಂಗಡಿಯಲ್ಲಿ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದರು ಮತ್ತು ಮಾರಾಟ ಮಾಡುವ ಕಲೆಯನ್ನು ತಿಳಿದಿದ್ದಾರೆ ಎಂದು ಮಾಹಿತಿ ನೀಡಿದರು.


"ಮಾರಾಟ ಮಾಡುವುದು ಒಂದು ಕಲೆ, ಎದುರಿಗಿರುವ ಗ್ರಾಹಕನಿಗೆ ಏನು ಬೇಕಾಗಿದೆ ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು ಮತ್ತು ಅದನ್ನು ಅವರಿಗೆ ನಿಖರವಾಗಿ ನೀಡಬೇಕು.


ನಾನು ಅನೇಕ ವರ್ಷಗಳಿಂದ ಆ ಕೆಲಸವನ್ನು ಮಾಡಲು ಕಲಿತಿದ್ದೇನೆ. ಎದುರಿಗಿರುವ ವ್ಯಕ್ತಿಯನ್ನು ಒಮ್ಮೆ ನೋಡಿದರೆ ಸಾಕು, ಅವರು ಏನು ಬಯಸುತ್ತಾರೆಂದು ನನಗೆ ತಿಳಿಯುತ್ತದೆ. ಅದನ್ನೇ ನಾನು ಇಂದು ಕೂಡ ಮಾಡುತ್ತಿದ್ದೇನೆ" ಎಂದು ಅವರು ಹೇಳಿದರು.


ಹಸನ್ ಅವರ ಬಗ್ಗೆ ಏನ್ ಹೇಳುತ್ತೇ ಅವರ ಕುಟುಂಬ


ಹಸನ್ ಕಳೆದ 17 ವರ್ಷಗಳಿಂದ ಕರವಸ್ತ್ರಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದಲ್ಲದೆ ಅವರ ಕುಟುಂಬವು ಯಾವಾಗಲೂ ವಿಶ್ರಾಂತಿ ಪಡೆಯಲು ಮತ್ತು ನಿವೃತ್ತಿ ಜೀವನವನ್ನು ಆನಂದಿಸಲು ಹೇಳುತ್ತಾರೆ.


ಇದನ್ನೂ ಓದಿ: ಇವ್ನು ತಿನ್ನೋದು ಬರೀ ಹಸಿ ಚಿಕನ್​! ಇವ್ನೇನು ಮನುಷ್ಯನಾ ಎಂದು ಕೇಳಿದ್ರು ನೆಟ್ಟಿಗರು


"ನನ್ನ ಕುಟುಂಬಕ್ಕೆ ಸಂಬಂಧಿಸಿದಂತೆ, ನನಗೆ ಒಳ್ಳೆಯ ಹೆಂಡತಿ, ಮಗ, ಸೊಸೆ ಮತ್ತು ಮೊಮ್ಮಗಳು ಇದ್ದಾರೆ. ಅವರು ಎಲ್ಲಾ ರೀತಿಯಿಂದಲೂ ಪರಿಪೂರ್ಣರಾಗಿದ್ದಾರೆ.


ಅವರೆಲ್ಲರೂ ನನಗೆ ನಿವೃತ್ತಿ ಜೀವನವನ್ನು ಆರಾಮಾಗಿ ಕಳೆಯಲು ಹೇಳುತ್ತಾರೆ. ನನ್ನ ಮಗ ಸಹ ನನಗೆ 'ಅಪ್ಪಾ, ಎಷ್ಟೊಂದು ಕೆಲಸ ಮಾಡ್ತೀರಾ’ ಅಂತೆಲ್ಲಾ ಹೇಳುತ್ತಾನೆ.


ಆದರೆ ನಾನು ಜೀವನದಲ್ಲಿ ಸಕ್ರಿಯವಾಗಿರಲು ಬಯಸುತ್ತೇನೆ ಮತ್ತು ಹಾಸಿಗೆಗೆ ಭಾರವಾಗಬಾರದು ಅಂತ ನಾನು ಯಾವಾಗಲೂ ಅವನಿಗೆ ಹೇಳುತ್ತೇನೆ" ಎಂದು ಅವರು ಹೇಳಿದರು.
ಹಸನ್ ಅವರನ್ನು ಅವರ ಗ್ರಾಹಕರು ಪ್ರೀತಿಯಿಂದ ಕಾಕಾ ಅಂತ ಕರೀತಾರೆ. "ಪ್ರತಿದಿನ, ನಾನು ನನ್ನ ಮನೆಯಿಂದ ಬಸ್ ಹಿಡಿದುಕೊಂಡು ಈ ಕರವಸ್ತ್ರಗಳನ್ನು ಮಾರಾಟ ಮಾಡಲು ಇಲ್ಲಿಗೆ ಬರುತ್ತೇನೆ.


ಇದನ್ನೂ ಓದಿ: ದೇಶದ 10 ಸುಂದರ ರಾಷ್ಟ್ರೀಯ ಉದ್ಯಾನವನಗಳಿವು


ಇಷ್ಟು ವರ್ಷಗಳಲ್ಲಿ ನಾನು ಅನೇಕ ಜನ ಗ್ರಾಹಕರನ್ನು ಸಂಪಾದಿಸಿದ್ದೇನೆ. ಅವರೆಲ್ಲರೂ ನನ್ನನ್ನು ಪ್ರೀತಿಯಿಂದ ಕಾಕಾ ಅಂತ ಕರೀತಾರೆ. ನನಗೂ ನನ್ನ ಎಲ್ಲಾ ಗ್ರಾಹಕರ ಬಗ್ಗೆ ತುಂಬಾನೇ ಪ್ರೀತಿ ಇದೆ” ಅಂತಾರೆ ಹಸನ್.


ಈ ವೈರಲ್ ವೀಡಿಯೋ ನಿಜಕ್ಕೂ ಅನೇಕರಿಗೆ ಸ್ಪೂರ್ತಿ


ಈ ವೈರಲ್ ವೀಡಿಯೋವನ್ನು ನೋಡಿದ ನಂತರ ಅವರ ಕಥೆ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಒಂದು ರೀತಿಯ ಸ್ಪೂರ್ತಿ ನೀಡಿದ್ದಂತೂ ನಿಜ. "ನಾನು ಇಂತಹ ಜನರೊಂದಿಗೆ ಕುಳಿತು ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತೇನೆ, ಏಕೆಂದರೆ ಜೀವನದಲ್ಲಿ ಕಲಿಯಲು ತುಂಬಾ ಇರುತ್ತದೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.
ಇನ್ನೊಬ್ಬ ಬಳಕೆದಾರರು "ಈ ವ್ಯಕ್ತಿ ನನಗಿದ್ದ ಉತ್ಸಾಹವನ್ನು ದುಪ್ಪಟ್ಟು ಮಾಡಿದ್ದಾರೆ" ಅಂತ ಹೇಳಿದರು. "ಇಂತಹ ಕಥೆಗಳು ನಮಗೆ ಪ್ರತಿದಿನ ಬೆಳಗ್ಗೆ ಎದ್ದು ಕೆಲಸ ಮಾಡಲು ಹೊಸ ಸ್ಪೂರ್ತಿ ನೀಡುತ್ತವೆ" ಎಂದು ಹಸನ್ ಹೇಳಿದರು.

top videos
    First published: