ಈ ಪುಟ್ಟ ನಾಯಿಮರಿ ಬೆಳೆಯೋದೇ ಇಲ್ವಂತೆ, ಸದಾ ಕ್ಯೂಟ್ ಆಗಿರೋ ಇದು ಈಗ ಎಲ್ಲರ ಫೇವರಿಟ್!

German Shepherd: ಪಿಟುಟರಿ ಡ್ವಾರ್ಫಿಶ್ ಅನ್ನು ಹಾರ್ಮೋನಿನ ಕೊರತೆ ಅಥವಾ ಡ್ವಾರ್ಫಿಸಂ ಎಂದು ಕೂಡ ಕರೆಯುತ್ತಾರೆ. ಈ ಸಮಸ್ಯೆ ಜರ್ಮನ್ ಶೆಪರ್ಡ್ ಮತ್ತು ಕಾರ್ಗಿಸ್‍ನಂತಹ ನಾಯಿ ತಳಿಗಳಲ್ಲಿ ಪ್ರಚಲಿತವಾಗಿದೆ.

ಜರ್ಮನ್ ಶೇಪರ್ಡ್

ಜರ್ಮನ್ ಶೇಪರ್ಡ್

  • Share this:
ರೇಂಜರ್ ( Ranger)ಎಂಬ ಹೆಸರಿನ ಜರ್ಮನ್ ಶೇಪರ್ಡ್ (German Shepherd)ನಾಯಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಸ್ಟಾರ್ ಆಗಿಬಿಟ್ಟಿದೆ. ಈ ನಾಯಿ ಯಾವುದೋ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಚೆನ್ನಾಗಿ ನಟಿಸಿದೆ ಅಥವಾ ಯಾವುದೋ ವಿಭಿನ್ನ ಇಲ್ಲವೇ ವಿಶೇಷ ಸಾಧನೆ ಮಾಡಿರಬಹುದು ಎಂದುಕೊಂಡರೆ, ನಿಮ್ಮ ಊಹೆ ಖಂಡಿತಾ ತಪ್ಪು! ಯಾಕಂತೀರಾ? 4 ವರ್ಷ ವಯಸ್ಸಾದರೂ, ಹಾಗೆ ಕಾಣದೆ ಇನ್ನೂ ಪುಟ್ಟ ಮರಿಯಂತೆ ಕಾಣುತ್ತಿರುವುದೇ ಈ ನಾಯಿಯ ಜನಪ್ರಿಯತೆ ಕಾರಣ. ಅರೇ, ಇದು ಹೇಗಪ್ಪಾ ಸಾಧ್ಯ ಎಂದು ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರಂತೆ. ಈ ನಾಯಿ ಪಿಟುಟರಿ ಡ್ವಾರ್ಫಿಶ್ (hormone deficiency )ಎಂಬ, ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಆರೋಗ್ಯ(Health) ಸಮಸ್ಯೆ ಹೊಂದಿದ್ದು, ಆ ಕಾರಣದಿಂದಾಗಿ ಎಷ್ಟೇ ವಯಸ್ಸಾದರೂ ಜೀವಮಾನವಿಡೀ ಪುಟ್ಟ ಮರಿಯಂತೆಯೇ (puppy forever)ಕಾಣುತ್ತದೆ.

ಹಾರ್ಮೋನಿನ ಕೊರತೆ
ಪಿಟುಟರಿ ಡ್ವಾರ್ಫಿಶ್ ಅನ್ನು ಹಾರ್ಮೋನಿನ ಕೊರತೆ ಅಥವಾ ಡ್ವಾರ್ಫಿಸಂ ಎಂದು ಕೂಡ ಕರೆಯುತ್ತಾರೆ. ಅದು ದೇಹದಲ್ಲಿ ಬೆಳವಣಿಗೆಯ ಹಾರ್ಮೋನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆ ಆಗದ ಸ್ಥಿತಿಯಾಗಿದೆ. ಈ ಸಮಸ್ಯೆಯನ್ನು ಹೊಂದಿರುವವರು , ಸಾಮಾನ್ಯ ದೇಹದ ಪ್ರಮಾಣಕ್ಕಿಂತ ಕಡಿಮೆ ಎತ್ತರ ಹೊಂದಿರುತ್ತಾರೆ.

ಇದನ್ನೂ ಓದಿ: Viral Video: 4 ಲಕ್ಷ ಸಂಗ್ರಹಿಸಿ ಬೀದಿ ನಾಯಿಗೆ ಕೃತಕ ಕಾಲು ಜೋಡಿಸಿದ ಶ್ವಾನ ಪ್ರೇಮಿಗಳು!

ಇದು ಪ್ರಾಣಿಗಳಲ್ಲಿ ಮಾತ್ರವಲ್ಲ, ಮನುಷ್ಯರೂ ಸೇರಿದಂತೆ, ಜಗತ್ತಿನ ಹಲವಾರು ಪ್ರಭೇದದ ಜೀವಿಗಳಲ್ಲಿ ಕಂಡು ಬರುತ್ತದೆ. ಈ ಸಮಸ್ಯೆ ಜರ್ಮನ್ ಶೆಪರ್ಡ್ ಮತ್ತು ಕಾರ್ಗಿಸ್‍ನಂತಹ ನಾಯಿ ತಳಿಗಳಲ್ಲಿ ಪ್ರಚಲಿತವಾಗಿದೆ. ಆದರೂ, ನಾಯಿಯ ಎರಡೂ ಪೋಷಕರಲ್ಲಿ ಆ ಅನುವಂಶಿಕ ವಾಕಹಗಳು ಇದ್ದಲ್ಲಿ ಇದು ಸಾಧ್ಯವಾಗುತ್ತದೆ.

ಶೆಪರ್ಡ್ ಮರಿಯಂತೆ ನೋಟ
ಹತ್ತಿರ ಸಂಬಂಧ ಇರುವ ನಾಯಿಗಳಿಂದಲೇ ಸಂತಾನೋತ್ಪತ್ತಿ ಮಾಡಿಸಿರುವುದೇ ರೇಂಜರ್‌ನ ಈ ಸ್ಥಿತಿಗೆ ಕಾರಣ ಎನ್ನುತ್ತಾರೆ ಅದರ ಮಾಲೀಕರಾದ ಶೆಲ್ಬಿ ಮಾಯೋ. ಈ ಸಮಸ್ಯೆಯ ಕಾರಣದಿಂದಾಗಿ ರೇಂಜರ್ , ಸಾಮಾನ್ಯ ಜರ್ಮನ್ ಶೇಪರ್ಡ್‍ನ ಮೂರನೇ ಒಂದು ಭಾಗದಷ್ಟು ಮಾತ್ರ ಬೆಳೆಯುತ್ತದೆ. ರೇಂಜರ್‌ ಅನ್ನು ಯಾರಾದರೂ ಹತ್ತಿರದಿಂದ ಅಥವಾ ಪೋಟೋಗಳಲ್ಲಿ ಮತ್ತು ವಿಡಿಯೋಗಳಲ್ಲಿ ನೋಡಿದರೆ ಅದು ಸಾಮಾನ್ಯ ಜರ್ಮನ್ ಶೆಪರ್ಡ್ ಮರಿಯಂತೆ ಕಾಣುತ್ತದೆ. ಆದರೆ ರೇಂಜರ್ ಮರಿಯಲ್ಲ, 4 ವರ್ಷ ವಯಸ್ಸಿನ ನಾಯಿ.

1.38 ಲಕ್ಷ ಹಿಂಬಾಲಕರು
ಈ ಅಪರೂಪದ ಸ್ಥಿತಿಯು, ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳಿಗೆ ಮತ್ತು ಕಡಿಮೆ ಜೀವಿತಾವಧಿಗೆ ಕಾರಣ ಆಗಬಹುದು. ನಾಯಿಯ ಅನೇಕ ಅಭಿಮಾನಿಗಳು ಇಂತಹ ಹೆಚ್ಚಿನ ನಾಯಿ ಮರಿಗಳನ್ನು ಹುಟ್ಟಿಸಲು ಸಂತಾನೋತ್ಪತ್ತಿಯ ಬಗ್ಗೆ ಆಲೋಚಿಸುವಂತೆ ಮೇಯೋಗೆ ಸಲಹೆ ನೀಡಿದ್ದಾರೆ. ರೇಂಜರ್ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಸ್ಟಾರ್ ಆಗಿದ್ದು, ಇನ್‍ಸ್ಟಾಗ್ರಾಂನಲ್ಲಿ 1.38 ಲಕ್ಷ ಹಿಂಬಾಲಕರನ್ನು ಹೊಂದಿದೆ.

ಒಳ್ಳೆಯ ನಾಯಿ
“ರೇಂಜರ್ ತುಂಬಾ ಮುದ್ದಾಗಿದ್ದಾನೆ ಮತ್ತು ಅವನು ಒಳ್ಳೆಯ ನಾಯಿ. ಆದರೆ ಅಂತಿಮವಾಗಿ ಇದು ಸಂತಾನೋತ್ಪತ್ತಿಯ ಫಲವಾಗಿದೆ ಮತ್ತು ನಾವದನ್ನು ತಡೆಯಬೇಕಿದೆ. ಈ ರೀತಿ ಸಂಭವಿಸಬಹುದು ಎಂಬುವುದರ ಬಗ್ಗೆ ಬ್ರೀಡರ್‌ಗಳು ಎಚ್ಚರಿಕೆ ಜಾಗೃತರಾಗಿರಬೇಕು ಮತ್ತು ಹಾಗಾಗಂತೆ ತಡೆಯಲು ಪ್ರಯತ್ನಿಸಬೇಕು” ಎಂದು ಅದರ ಮಾಲೀಕಳಾದ ಮೇಯೋ ಹೇಳಿದ್ದಾರೆ. “ ರೇಂಜರ್ ಇಲ್ಲಿಯವರೆಗೆ ಒಳ್ಳೆಯ ಜೀವನ ಪಡೆದಿದೆ. ಆದರೆ ಅಂತಹ ಎಲ್ಲಾ ನಾಯಿಗಳ ವಿಷಯದಲ್ಲೂ ಹಾಗೆ ಆಗುವುದಿಲ್ಲ” ಎನ್ನುತ್ತಾರೆ ಅವರು.

ತ್ವರಿತ ಚಿಕಿತ್ಸೆ
ರೇಂಜರ್ ಈ ಸಮಸ್ಯೆಯೊಂದಿಗೆ ಜನ್ಮಿಸಿರಲಿಲ್ಲ. ಅದು ಗಿರ್ಡಿಯಾ ಎಂಬ ಪ್ಯಾರಸೈಟ್ ಸಮಸ್ಯೆಗೆ ತುತ್ತಾದ ಬಳಿಕ , ಈ ರೋಗ ಕಾಣಿಸಿಕೊಂಡಿತು. ಪ್ಯಾರಸೈಟ್ ಸಮಸ್ಯೆ ಕಡಿಮೆ ಮಾಡುವುದಕ್ಕೆ ತ್ವರಿತ ಚಿಕಿತ್ಸೆ ನೀಡಿದರೂ, ರೇಂಜರ್ ಇತರ ಸಾಮಾನ್ಯ ಜರ್ಮನ್ ಶೆಪರ್ಡ್‍ಗಳ ಪ್ರಮಾಣದ ದರದಲ್ಲಿ ಬೆಳೆಯುವುದು ನಿಂತು ಹೋಯಿತು.

ಇದನ್ನೂ ಓದಿ: Dog Phone: ಸಾಕು ಪ್ರಾಣಿ ಜೊತೆ ವಿಡಿಯೋ ಕರೆ ಮಾಡಿ ಮಾತನಾಡ್ಬೋದು! ಅದಕ್ಕೆಂದೇ ಬಂದಿದೆ ಈ ಡಾಗ್​​ಫೋನ್

ನಾವು ಬ್ರೀಡರ್‌ನಿಂದ ರೇಂಜರ್‌ ಕೊಂಡಾಗ ಅವನು ಇತರ ನಾಯಿ ಮರಿಗಳಿಗಿಂತ ಚಿಕ್ಕವನಿದ್ದ. ಆದರೆ, ಕೋಕ್ಸಿಡಿಯಾ ಎಂಬ ಪ್ಯಾರಸೈಟ್ ಸಮಸ್ಯೆ ಇದ್ದಿದ್ದಕ್ಕೆ ಹಾಗಾಗಿರಬಹುದು ಎಂದು ಭಾವಿಸಿದ್ದೆವು. ನಾವು ಮನೆಗೆ ಕರೆದುಕೊಂಡು ಹೋದ ಕೆಲವು ವಾರಗಳ ಬಳಿಕ ಅವನು ಪ್ಯಾರಸೈಟ್‍ನಿಂದ ಮುಕ್ತನಾದ. ಆದರೆ ಮತ್ತೆ ಗಿಯಾರ್ಡಿಯ ಎಂಬ ಪ್ಯಾರಸೈಟ್ ಸಮಸ್ಯೆಗೆ ತುತ್ತಾದ” ಎಂದು ಮೇಯೋ ಹೇಳಿದ್ದಾರೆ
Published by:vanithasanjevani vanithasanjevani
First published: