Viral Video: ಲೈವ್​ನಲ್ಲಿದ್ದ ರಿಪೋರ್ಟರ್ ಮೊಬೈಲ್​​ ಕದ್ದ ಕಳ್ಳ: ಖತರ್ನಾಕ್​ ಖದೀಮನನ್ನು ಸೆರೆ ಹಿಡಿದ ವೀಕ್ಷಕರು!

Viral Video: ಈಜಿಪ್ಟ್​(Egypt)ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪತ್ರಕರ್ತ(Journalist)ನೊಬ್ಬ ಲೈವ್​ನಲ್ಲಿ ಸುದ್ದಿ ನೀಡುತ್ತಿದ್ದಾಗ, ಇದರ ಅರಿವಿರದೇ ಬಂದ ಕಳ್ಳ(Theif) ಆ ಮೊಬೈಲ್​ ಅನ್ನು ಕದ್ದು ಪರಾರಿಯಾಗಿದ್ದಾನೆ.

ಮೊಬೈಲ್​​ ಕದ್ದು ಲೈವ್​​ನಲ್ಲಿ ಮುಖ ತೋರಿಸಿದ ಕಳ್ಳ

ಮೊಬೈಲ್​​ ಕದ್ದು ಲೈವ್​​ನಲ್ಲಿ ಮುಖ ತೋರಿಸಿದ ಕಳ್ಳ

  • Share this:
ಸಾಮಾಜಿಕ ಜಾಲತಾಣ(Social Media)ದಲ್ಲಿ ಅದೆಂತಹ ಸುದ್ದಿ(News)ಗಳಿರಲೀ ಕ್ಷಣ ಮಾತ್ರದಲ್ಲಿ ಎಲ್ಲರ ಕೈ ಸೇರುತ್ತೆ. ಎಲ್ಲೋ ಕೂತು ನಡೆಯುತ್ತಿರುವ ಘಟನೆಗಳನ್ನ ಲೈವ್(Live)​ ಮಾಡಿ ಮತ್ತೊಂದಿಷ್ಟು ಜನರಿಗೆ ತೋರಿಸುತ್ತಾರೆ. ವಿಶ್ವ(World)ದ ಒಂದು ಮೂಲೆಯಿಂದ ಮತ್ತೊಂದು ಮೂಲೆಯವರಗೂ ಪ್ರಸ್ತುತ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹದು. ಅಷ್ಟರ ಮಟ್ಟಿಗೆ ಎಲ್ಲರೂ ಸೋಷಿಯಲ್​ ಮೀಡಿಯಾದಲ್ಲಿ ಆಕ್ಟೀವ್(Active)​ ಆಗಿರುತ್ತಾರೆ. ಕೆಲವೊಂದು ಬಾರಿ ಲೈವ್​ನಲ್ಲಿದ್ದಾಗ ಕೆಲ ಎಡವಟ್ಟುಗಳು ಆಗಿರುವುದನ್ನು ನಾವು ನೋಡಿದ್ದೇವೆ. ಲೈವ್​​ ನೀಡುತ್ತಾ ಬೆಟ್ಟದಿಂದ ಬಿದ್ದು ಸತ್ತಿದ್ದಾರೆ. ಮತ್ತೆ ಕೆಲವರು ಲೈವ್​​ ನೀಡುತ್ತಾ ಬೈಕ್​(Bike) ಓಡಿಸಿಕೊಂಡು ಬಿದ್ದು ಮೃತಪಟ್ಟಿದ್ದಾರೆ. ಆದರೆ ಈಜಿಪ್ಟ್​(Egypt)ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪತ್ರಕರ್ತ(Journalist)ನೊಬ್ಬ ಲೈವ್​ನಲ್ಲಿ ಸುದ್ದಿ ನೀಡುತ್ತಿದ್ದಾಗ, ಇದರ ಅರಿವಿರದೇ ಬಂದ ಕಳ್ಳ(Thief) ಆ ಮೊಬೈಲ್​ ಅನ್ನು ಕದ್ದು ಪರಾರಿಯಾಗಿದ್ದಾನೆ.

ಲೈವ್​​ನಲ್ಲಿ ಎಲ್ಲರಿಗೂ ಮುಖ ತೋರಿಸಿದ ಕಳ್ಳ

ಪತ್ರಕರ್ತನಿಂದ ಮೊಬೈಲ್​ ಕದ್ದು ಬೈಕ್​ನಲ್ಲಿ ಕಳ್ಳ ಸ್ವಲ್ಪ ದೂರ ಬಂದಿದ್ದಾನೆ. ನಂತರ ಮೊಬೈಲ್​ ಅನ್ನು ನೋಡಿದ್ದಾನೆ. ಇತ್ತ ಪತ್ರಕರ್ತ ನೀಡುತ್ತಿದ್ದ ವರದಿಯನ್ನು ನೋಡುತ್ತಿದ್ದ ಸಾವಿರಾರು ಮಂದಿಗೆ ಕಳ್ಳನ ಮುಖ ದರ್ಶನವಾಗಿದೆ. ಬಾಯಲ್ಲಿ ಸಿಗರೇಟ್​ ಸೇದುತ್ತಾ ಮೊಬೈಲ್​ ಕಳ್ಳ ತನ್ನ ದರ್ಶನ ನೀಡಿದ್ದಾನೆ. ಪತ್ರಕರ್ತ ಲೈವ್​ನಲ್ಲಿ ಸುದ್ದಿ ನೀಡುತ್ತಿದ್ದರ ಬಗ್ಗೆ ಈತನಿಗೆ ಯಾವುದೇ ಅರಿವಾಗಿಲ್ಲ. ಇದಾದ ಕೆಲ ನಿಮಿಷಗಳ ಬಳಿಕ ಆತನಿಗೆ ಈ ವಿಚಾರ ತಿಳಿದಿದೆ ಕೂಡಲೇ ಲೈವ್​ ಆಫ್​ ಮಾಡಿ  ಪರಾರಿಯಾಗಿದ್ದ.


ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ವೀಕ್ಷಕರು

ಮಹಮೂದ್​​ ರಾಘೇಬ್​ ಎಂಬ ಪತ್ರಕರ್ತ ಅಲ್ಲಿಯ ಸುದ್ದಿತಾಣವಾದ Youm7 ರಲ್ಲಿ ಕೆಲಸ ಮಾಡುತ್ತಿದ್ದ. ಭೂಕಂಪವಾದ ಸ್ಥಳದಿಂದ ರಾಘೇಬ್​ ಲೈವ್​ ನೀಡುತ್ತಿದ್ದ. ಇದೇ ವೇಳೆ ಇಲ್ಲಿಗೆ ಬಂದ ಕಳ್ಳ ಇದರ ಅರಿವಿಲ್ಲದೇ ಪತ್ರಕರ್ತನ ಮೊಬೈಲ್​ ಎಗರಿಸಿದ್ದಾನೆ. 20 ಸಾವಿರಕ್ಕೂ ಹೆಚ್ಚು ಮಂದಿ ಲೈವ್​ ನೋಡುತ್ತಾ ಇದ್ದರು. ಲೈವ್​ನಲ್ಲಿ ಕಳ್ಳನ ಮುಖ ನೋಡಿದ, ವೀಕ್ಷಕರು ಆತನನ್ನು ಹುಡುಕಲು ಮುಂದಾಗಿದ್ದರು. ಘಟನೆ ನಡೆದ ಸ್ಥಳಕ್ಕೂ ಕೆಲ ವೀಕ್ಷಕರು ಆಗಮಿಸಿದ್ದರು. ಮೊಬೈಲ್​ ಕಳ್ಳತನವಾದ ಸುತ್ತಮುತ್ತಲಿನ ಜಾಗಗಳಲ್ಲಿ ಕಳ್ಳನಿಗಾಗಿ ಸರ್ಚ್ ಮಾಡಿದ್ದಾರೆ. ಇತ್ತ ಪೊಲೀಸರು ಆತನಿಗೆ ಬಲೆ ಬೀಸಿದ್ದರು. ಕೆಲ ಹೊತ್ತಿನ ಬಳಿಕ ಕಳ್ಳನನ್ನು ಹಿಡಿಯುವಲ್ಲಿ ವೀಕ್ಷಕರು ಯಶಸ್ವಿಯಾಗಿದ್ದರು. ಆತನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನು ಓದಿ : ತನ್ನ ಮರಿಯನ್ನು ಉಳಿಸಿಕೊಳ್ಳಲು ಈ ಆನೆ ಮಾಡಿದ್ದೇನು ಗೊತ್ತಾ? ನೀವು ನೋಡಿದರೆ ದಂಗಾಗ್ತೀರಾ!

ಈ ವೈರಲ್​ ವಿಡಿಯೋಗೆ  7 ಮಿಲಿಯನ್​  ವ್ಯೂವ್ಸ್​

ಕಳ್ಳ ಪೋನ್​ ಕದ್ದ ಬಳಿಕ ಈ ವಿಡಿಯೋ ಸಖತ್​ ವೈರಲ್​ ಆಗಿತ್ತು. ಯಾರ ಮೊಬೈಲ್​ ನೋಡಿದರೂ ಈ  ವಿಡಿಯೋ ಹರಿದಾಡುತ್ತಾ ಇತ್ತು. ಈ ವಿಡಿಯೋ ನೋಡಿದ್ದ ಒಬ್ಬರು 10 ಜನರಿಗೆ ಶೇರ್​ ಮಾಡಿದ್ದಾರೆ. ಫೇಸ್​​ಬುಕ್​​ನಲ್ಲಿ 18 ಸಾವಿರಕ್ಕೂ ಹೆಚ್ಚು ಜನ ಈ ವೈರಲ್​ ವಿಡಿಯೋವನ್ನು ಶೇರ್​ ಮಾಡಿದ್ದರು, 7 ಮಿಲಿಯನ್​ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದರು.

ಇದನ್ನು ಓದಿ : ವೆದರ್​ ರಿಪೋರ್ಟ್ ವೇಳೆ ಪೋರ್ನ್ ವಿಡಿಯೋ ಲೈವ್​ ಟೆಲಿಕಾಸ್ಟ್​: ಕ್ಷಮೆಯಾಚಿಸಿದ ನ್ಯೂಸ್​ ಚಾನೆಲ್

ಲೈವ್​ ನೀಡುತ್ತಲೇ ಕೊಚ್ಚಿಹೋದ ಪತ್ರಕರ್ತ

ಈ ಹಿಂದೆ ಕಂಡು ಕೇಳರಿಯದ ಮಳೆಗೆ ಚೀನಾ ತತ್ತರಿಸಿ ಹೋಗಿತ್ತು. ಕೊರೋನಾದಿಂದ ತಪ್ಪಿಸಿಕೊಂಡ್ವಿ ಎಂದು ಖುಷಿಯಲ್ಲಿದ್ದವರಿಗೆ ಮಳೆ ಆಘಾತ ನೀಡಿತ್ತು. ಈ ವೇಳೆ ಪ್ರವಾಹದ ಸ್ಥಳದಿಂದ ಸ್ಥಳೀಯ ಸುದ್ದಿ ವಾಹಿನಿಯ ಪತ್ರಕರ್ತ ಲೈವ್​ ನೀಡುತ್ತಿದ್ದ. ನೀರಿನ ರಭಸ ತಿಳಿಯದೇ ಮುಂದೆ ಮಂದೆ ಹೋಗುತ್ತಿದ್ದ. ಲೈವ್​ನಲ್ಲಿ ಪ್ರವಾಹದ ಬಗ್ಗೆ ಮಾಹಿತಿ ನೀಡುತ್ತಲೇ ನೀರಿನಲ್ಲಿ ಕೊಚ್ಚಿಹೋಗಿದ್ದ. ಈ ಲೈವ್​ ಅನ್ನು 10 ಸಾವಿರಕ್ಕೂ ಹೆಚ್ಚು ಜನ ನೋಡುತ್ತಿದ್ದರು.
Published by:Vasudeva M
First published: