ಚಿನ್ನದ ಸರ ಕದ್ದು ಓಡಲು ಯತ್ನಿಸಿದ..! ಆಮೇಲೇನಾಯ್ತು ಈ ವೀಡಿಯೊ ನೋಡಿ

ಈ ವೇಳೆ ಸರವನ್ನು ಪಡೆದ ಅಂಗಡಿ ಮಾಲೀಕ ಪೊಲೀಸರನ್ನು ಕರೆಸಿದ್ದು, ಕಳ್ಳನನ್ನು ಅವರ ಕೈಗೆ ಒಪ್ಪಿಸಿದ್ದಾರೆ.

zahir | news18
Updated:December 7, 2018, 10:03 PM IST
ಚಿನ್ನದ ಸರ ಕದ್ದು ಓಡಲು ಯತ್ನಿಸಿದ..! ಆಮೇಲೇನಾಯ್ತು ಈ ವೀಡಿಯೊ ನೋಡಿ
Thief
zahir | news18
Updated: December 7, 2018, 10:03 PM IST
ಸಾಮಾನ್ಯವಾಗಿ ಕಳ್ಳರ ಕೈ ಚಳಕದ ವೀಡಿಯೊ ನೋಡಿ ನಿಬ್ಬೆರರಾಗುತ್ತೇವೆ. ಆದರೆ ಥಾಯ್ಲೆಂಡ್​​ನ ಕಳ್ಳನೊಬ್ಬನ ಸಿಸಿ ಟಿವಿ ದೃಶ್ಯಾವಳಿ ನೋಡಿದರೆ ನಗು ಉಕ್ಕಿ ಬರುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಕಳ್ಳತನ ಮಾಡಲು ಹೋಗಿ ಇಷ್ಟೊಂದು ಸುಲಭವಾಗಿ ಸಿಕ್ಕಿ ಹಾಕಿಕೊಂಡ ಉದಾಹರಣೆ  ಇಲ್ಲ ಎನ್ನಬಹುದು.

ಥಾಯ್ಲೆಂಡ್​ನ ಚೋನ್​ಬುರಿ ನಗರದ ಆಭರಣ ಮಳಿಗೆಗೆ ಕೆಲ ದಿನಗಳ ಹಿಂದೆ ಯುವಕನೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಅಂಗಡಿ ಮಾಲೀಕನೊಂದಿಗೆ ಚಿನ್ನದ ಸರವೊಂದನ್ನು ಪಡೆದ ಯುವಕ ಕುತ್ತಿಗೆಗೆ ಹಾಕಿ ಪರೀಕ್ಷಿಸಿಕೊಂಡಿದ್ದಾನೆ. ಈ ವೇಳೆ ಮಾಲೀಕನ ಗಮನ ಬೇರೆಡೆ ಹೋಗುತ್ತಿದ್ದಂತೆ ಅಂಗಡಿಯಿಂದ ಓಡಿ ಹೋಗಲು ಪ್ರಯತ್ನಿಸಿದ. ಆದರೆ ಕಳ್ಳನು ಚಾಪೆ ಕೆಳಗೆ ನುಸುಳಿದರೆ, ಅಂಗಡಿ ಮಾಲೀಕ ಅದಾಗಲೇ ರಂಗೋಲಿ ಕೆಳಗೆ ತೂರಿಯಾಗಿತ್ತು.

ಇದನ್ನೂ ಓದಿ: 70 ಸ್ಥಾನಗಳಿಗೆ ಸಾವಿರ ಆಟಗಾರರ ಪೈಪೋಟಿ: ಈ ಬಾರಿಯ ಐಪಿಎಲ್​​ನಲ್ಲಿ ಅಮೆರಿಕನ್​ ಆಟಗಾರ?

ಯುವಕನ ಚಲನವಲನವನ್ನು ಗಮನಿಸಿದ್ದ ಅಂಗಡಿಯಾತ ಮೊದಲೇ ರಿಮೋಟ್​ ಮೂಲಕ ಶಾಪ್​ನ ಬಾಗಿಲನ್ನು ಲಾಕ್​ ಮಾಡಿದ್ದರು. ಇದರಿಂದ ಚಿನ್ನದ ಸರದೊಂದಿಗೆ ಓಡಲು ಯತ್ನಿಸಿದ ಕಳ್ಳನಿಗೆ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಹೀಗಾಗಿ ಮರಳಿ ಬಂದ ಯುವಕ ಸರವನ್ನು ಪೆಚ್ಚು ಮೊರೆ ಹಾಕಿ ಹಿಂತಿರುಗಿಸಿದ್ದಾನೆ.


Loading...ಈ ವೇಳೆ ಸರವನ್ನು ಪಡೆದ ಅಂಗಡಿ ಮಾಲೀಕ ಪೊಲೀಸರನ್ನು ಕರೆಸಿದ್ದು, ಕಳ್ಳನನ್ನು ಅವರ ಕೈಗೆ ಒಪ್ಪಿಸಿದ್ದಾರೆ. ಈ ಕಳ್ಳತನದ ಸಿಸಿ ಟಿವಿ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕಳ್ಳನ ಹಾವಾಭಾವವನ್ನು ಸಖತ್ತಾಗೆ ಎಂಜಾಯ್ ಮಾಡುತ್ತಿದ್ದಾರೆ.

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...