Viral News: ಚಲಿಸುವ ಬೈಕ್ ನಿಂದಲೇ 10 ಲಕ್ಷ ದೋಚಿದ ಚಾಲಾಕಿ ಕಳ್ಳ..!

ಸಿಸಿಟಿವಿ ದೃಶ್ಯ

ಸಿಸಿಟಿವಿ ದೃಶ್ಯ

ಎಪಿಎಮ್ ಸಿ ಬಳಿ ಇರುವ ಎಸ್ ಬಿಐ ಬ್ಯಾಂಕ್ ನಿಂದ ರಾಮನಗೌಡ ಪಾಟೀಲ ಅನ್ನೋರು ಹಣ ಡ್ರಾ ಮಾಡ್ಕೊಂಡು ಹೊರಟಿದ್ರು.. ಬ್ಯಾಂಕ್ ನಿಂದಲೇ ಪಾಟೀಲರನ್ನ ಹಿಂಬಾಲಿಸಿ ಬಂದ ಖದೀಮರು ಸರ್ಕಲ್ ಬಳಿ ಹಣ ದೋಚಿದ್ದಾರೆ.

  • Share this:

ಗದಗ(ಏ.10): ಬೈಕ್ ನ ಸೈಡ್ ಪ್ಯಾಕೆಟ್ ನಲ್ಲಿ ಹಣ ಇಡುವ ಮುನ್ನ ಎಚ್ಚರ.. ಚಲಿಸುವ ಬೈಕ್ ನಿಂದಲೇ ಹಣ ದೋಚುವ ಚಾಲಾಕಿಗಳಿದ್ದಾರೆ ಜೋಪಾನ ಹೌದು ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಎಪಿಎಮ್ ಸಿ ಸರ್ಕಲ್ ಬಳಿ ಚಲಿಸುತ್ತಿದ್ದ ಬೈಕ್ (Bike) ನ ಸೈಡ್ ಪ್ಯಾಕೆಟ್ ನಿಂದ ಖದೀಮರು 10 ಲಕ್ಷ ರೂಪಾಯಿಯನ್ನು (10 Lakh Rs) ಖದೀಮರು ದೋಚಿದ್ದಾರೆ. ಪಟ್ಟಣದ ಎಪಿಎಮ್ ಸಿ ಬಳಿ ಇರುವ ಎಸ್ ಬಿಐ ಬ್ಯಾಂಕ್ ನಿಂದ ರಾಮನಗೌಡ ಪಾಟೀಲ ಅನ್ನೋರು ಹಣ ಡ್ರಾ ಮಾಡ್ಕೊಂಡು ಹೊರಟಿದ್ರು.. ಬ್ಯಾಂಕ್ (Bank) ನಿಂದಲೇ ಪಾಟೀಲರನ್ನ ಹಿಂಬಾಲಿಸಿ ಬಂದ ಖದೀಮರು ಸರ್ಕಲ್ ಬಳಿ ಹಣ ದೋಚಿದ್ದಾರೆ.


ಎಪಿಎಮ್ ಸಿ ಆವರಣದಲ್ಲಿ ಅವಳಡಿಸಿರುವ ಸಿಸಿ ಟಿವಿ ಕ್ಯಾಮರಾದಲ್ಲಿ ಖದೀಮರ ಚಲನವಲನ ಸೆರೆಯಾಗಿದೆ. ಬ್ಯಾಂಕ್ ನಿಂದ ರಾಮನಗೌಡ ಅವರಿ ಹೊರ ಬರೋದನ್ನ ಕಾಯುತ್ತಿದ್ದ ಅಪರಿಚಿತ ವ್ಯಕ್ತಿ.


ಬೈಕ್ ಸ್ಲೋ ಆಗ್ತಿದ್ದಂತೆ ಕಳ್ಳತನ


ಬೈಕ್ ಏರಿ ಹೊರಟ ಬಳಿಕ ಹಿಂಬಾಲಿಸಿದ್ದಾನೆ. ಸರ್ಕಲ್ ನಲ್ಲಿ ತುಸು ಟ್ರಾಫಿಕ್ ಜಮಾವಣೆ ಆಗ್ತಿದ್ದಂತೆ ರಾಮನಗೌಡ ಪಾಟೀಲರು ಬೈಕ್ ಸ್ಲೋ ಮಾಡಿದ್ರು. ಇದೇ ಸಮಯಕ್ಕೆ ಕಾಯುತ್ತಿದ್ದ ಖದೀಮ ಬೈಕ್ ಬಳಿ ಬಂದು ಪ್ಯಾಕೆಟ್ ನಿಂದ ಹಣ ಎಗರಿಸಿದ್ದಾನೆ.  ಹಣದ ಬ್ಯಾಗ್ ಕೈಗೆ ಬರುತ್ತಿದ್ದಂತೆ ಅಲ್ಲೇ ಕಾಯುತ್ತಿದ್ದ ಸಾಥೀದಾರರ ಬೈಕ್ ಏರಿ ಸ್ಥಳದಿಂದ ಪರಾರಿಯಾಗಿದ್ದಾನೆ.‌

ಅನುಮಾನಾಸ್ಪದ ರೀತಿಯಲ್ಲಿ ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡಲು ನಿಂತಾಗ ಕೆಲವರು ರಾಮನಗೌಡರನ್ನ ಮಾತನಾಡಿದ್ದಾರೆ. ಹತ್ತಿ ಖರೀದಿ ವ್ಯಾಪಾರ ಮಾಡುವವರ ಬಳಿ ಕೆಲಸ ಮಾಡುವ ರಾಮನಗೌಡರನ್ನ ವ್ಯಾಪಾರ ವಿಚಾರವಾಗಿ ಕೆಲವರು ಮಾತ್ನಾಡಿಸಿದ್ರಂತೆ. ಖದೀರಿ ಕೆಲಸ ನಾನು ಮಾಡಲ್ಲ ನೀವು ಲಕ್ಷ್ಮೀ ನಗರದ ರಾಜೇಂದ್ರ ಕಾಟನ್ ಇಂಡಸ್ಟ್ರಿಗೆ ಹೋಗಿ ನಮ್ಮ ಸಿಬ್ಬಂದಿಗೆ ವಿಚಾರಿಸಬಹುದು ಅಂತಾ ಅವ್ರು ಹೇಳಿದಾರೆ.


ಹಣ ಡ್ರಾ ಮಾಡಿ ರಲು ಬ್ಯಾಂಕ್​ಗೆ ಬಂದ ರಾಮನಗೌಡ ಪಾಟೀಲ


ಅಲ್ಲಿಂದಲೇ ಖದೀಮರು ರಾಮನಗೌಡರನ್ನ ಫಾಲೋ ಮಾಡಿದ್ರಾ ಅನ್ನೋ ಅನುಮಾನವೂ ಇದೆ. ದಲಾಲಿ ವರ್ತಕ ಆಗಿರುವ ಪ್ರಕಾಶ್ ಜೈನ್ ಅನ್ನೋರ ಬಳಿ ರಾಮನಗೌಡ ಪಾಟೀಲ ಕೆಲಸ ಮಾಡ್ತಾರೆ. ಜೈನ್ ಅವರು ರೈತರಿಂದ ಹತ್ತಿ ಖರೀದಿ ಮಾಡಿ ಹಣ ಸಂದಾಯ ಮಾಡಬೇಕಾಗಿತ್ತು.. ಪ್ರಕಾಶ್ ಅವರ ಸೂಚನೆಯಂತೆ 10 ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡು ಬರಲು ರಾಮನಗೌಡರು ಬ್ಯಾಂಕ್ ಗೆ ಹೋಗಿದ್ರು.


ಇದನ್ನೂ ಓದಿ: Evening Digest: ನಾಳೆಯಿಂದ ಬೂಸ್ಟರ್ ಡೋಸ್, ಶಾ ಹೇಳಿಕೆಗೆ ಆಕ್ರೋಶ, ರಶ್ಮಿಕಾ ಭವಿಷ್ಯ: ಈ ದಿನದ ಸುದ್ದಿಗಳು


ಸಿಸಿ ಟಿವಿ ತಪಾಸಣೆ


ಹೀಗೆ ವಾಪಾಸ್ ಬರುವಾಗ ಹಣ ಕಳ್ಳತನವಾಗಿದೆ.ವಿಷ್ಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ವಿಕಾಸ್ ಲಮಾಣಿ ಆ್ಯಂಡ್ ಟೀಮ್ ಸಿಸಿ ಟಿವಿ ತಪಾಸಣೆ ಮಾಡಿದ್ದಾರೆ. ಅಲ್ದೆ, ಖದೀಮರ ಪತ್ತೆಗಾಗಿ ಬಲೆ ಬೀಸಿದ್ದಾರೆ.ಹಣ ಕಳೆದುಕೊಂಡ ವ್ಯಕ್ತಿ ರಾಮನಗೌಡ್ರ ಅವರು ಹೇಳಿಕೆ ನೀಡಿದ್ದಾರೆ.


ಕಣ್ಣೀರಿಟ್ಟ ವ್ಯಕ್ತಿ


ಪ್ರತಿ ದಿನದಂತೆ ಬ್ಯಾಂಕ್‌ಗೆ ಹಣ ಪಾವತಿಸುವುದು, ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಹೋಗುವುದು ಮಾಡುತ್ತೇನೆ. ಎಂದಿನಂತೆ ಇವತ್ತೂ ಹಣವನ್ನು ಡ್ರಾ ಮಾಡಿ ವಾಹನದ ಬ್ಯಾಗ್‌ನಲ್ಲಿ ಇಟ್ಟುಕೊಂಡು ಹೋಗುತ್ತಿರುವಾಗ ನನಗೆ ತಿಳಿಯದಂತೆ ಬ್ಯಾಗ್‌ನಿಂದ ಹಣ ಎಗರಿಸಿದ್ದಾರೆ. ಇದರಿಂದ ನನಗೆ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ ಎಂದು ಹಣ ಕಳೆದುಕೊಂಡ ರಾಮನಗೌಡ್ರ ಪೊಲೀಸರ ಮುಂದೆ ಕಣ್ಣೀರಿಟ್ಟರು.


ಇದನ್ನೂ ಓದಿ: ಶ್ರೀರಾಮ ಸೇನೆಯಿಂದ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ: ಭಯೋತ್ಪಾದಕರಿಗೂ, ಈ ಕಿರಾತಕರಿಗೆ ವ್ಯತ್ಯಾಸವಿಲ್ಲ ಅಂದ್ರು HDK

top videos


    ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಡಿ.ಪ್ರಕಾಶ ಅವರು ಮಾಹಿತಿ ಪಡೆದು ಸುತ್ತಮುತ್ತಲಿನ ಸಿಸಿ ಟಿವ್ಹಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಿದರು. ಸಿಸಿ ಟಿವಿಯಲ್ಲಿ ಬೈಕ್‌ನಿಂದ ಓರ್ವ ಹಣ ಎಗರಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಟಿವಿಯಲ್ಲಿನ ದೃಶ್ಯ ಅಸ್ಪಷ್ಟವಾಗಿದ್ದು ಬಲ್ಲ ಮೂಲಗಳಿಂದ ಕಳ್ಳರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಆದಷ್ಟು ಶೀಘ್ರವೇ ಖದೀಮರನ್ನು ಸೆರೆಹಿಡಿಯಲಾಗುವುದು ಎಂದು ತಿಳಿಸಿದರು.

    First published: