Viral Video: ಅಂಗಡಿಯಲ್ಲಿ ಕಳ್ಳತನ ಮಾಡಿದ ಬಳಿಕ ಸಿಸಿಟಿವಿ ಮುಂದೆ ಬಂದು ಈ ಕಳ್ಳ ಮಾಡಿದ್ದೇನು ಗೊತ್ತಾ?

ಉತ್ತರ ಪ್ರದೇಶದ ಚಂದೌಲಿಯಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿ ಅವರ ನಿವಾಸದ ಬಳಿಯಲ್ಲಿರುವ ಹಾರ್ಡ್ ವೇರ್ ಶಾಪ್ ನಲ್ಲಿ ಈ ಕಳ್ಳತನ ನಡೆದಿದೆ. ಜಸೂರಿ ಗ್ರಾಮದ ನಿವಾಸಿ ಅಂಶು ಸಿಂಗ್ ಎಂಬವರಿಗೆ ಈ ಅಂಗಡಿ ಸೇರಿದೆ.

ಸಿಸಿಟಿವಿ ದೃಶ್ಯ

ಸಿಸಿಟಿವಿ ದೃಶ್ಯ

  • Share this:
ಯಾವುದೇ ಅಂಗಡಿಗೆ ಕಳ್ಳರು (Thieves) ನುಗ್ಗಿದ್ರೆ ಮೊದಲು ಕಾಣಿಸುವ ಸಿಸಿಟಿವಿ ಕ್ಯಾಮೆರಾ(CCTV Camera)ಗಳನ್ನು ಬಂದ್ ಮಾಡುತ್ತಾರೆ ಅಥವಾ ನಾಶಗೊಳಿಸುತ್ತಾರೆ. ಕೆಲವೊಮ್ಮೆ ಕ್ಯಾಮೆರಾ ಹುಡುಕುವ ಬದಲು ಮುಖಕ್ಕೆ ಬಟ್ಟೆ (Cloth) ಕಟ್ಟಿಕೊಂಡು ತಮ್ಮ ಗುರುತನ್ನು ಮರೆ ಮಾಡುತ್ತಾರೆ. ತಾವು ಬಂದ ಕೆಲಸ ಆಗುತ್ತಿದ್ದಂತೆ ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಆದರೆ ಇಲ್ಲೋರ್ವ ಕಳ್ಳ ಸಿಸಿಟಿವಿ ಕ್ಯಾಮೆರಾ ಮುಂದೆ ಬಂದು ಡ್ಯಾನ್ಸ್ (Dance) ಮಾಡಿದ್ದಾನೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ(Social media)ದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಫನ್ನಿ ಫನ್ನಿ ಕಮೆಂಟ್ ಹಾಕಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಉತ್ತರ ಪ್ರದೇಶದ ಚಂದೌಲಿಯಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿ ಅವರ ನಿವಾಸದ ಬಳಿಯಲ್ಲಿರುವ ಹಾರ್ಡ್ ವೇರ್ ಶಾಪ್ ನಲ್ಲಿ ಈ ಕಳ್ಳತನ ನಡೆದಿದೆ. ಜಸೂರಿ ಗ್ರಾಮದ ನಿವಾಸಿ ಅಂಶು ಸಿಂಗ್ ಎಂಬವರಿಗೆ ಈ ಅಂಗಡಿ ಸೇರಿದೆ.

60 ಸಾವಿರ ನಗದು, ಬೆಲೆ ಬಾಳುವ ವಸ್ತುಗಳು ಕಳ್ಳತನ

ಅಂಗಡಿ ನುಗ್ಗಿರುವ ಕಳ್ಳ 60 ಸಾವಿರ ನಗದು ಮತ್ತು ಸಾವಿರಾರು ರೂ. ಮೌಲ್ಯದ ವಸ್ತುಗಳನ್ನುಕದ್ದು ಪರಾರಿಯಾಗಿದ್ದಾನೆ. ಇಡೀ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಎಸ್.ಪಿ. ನಿವಾಸದ ಬಳಿಯೇ ಕಳ್ಳತನ ನಡೆದಿರೋದನ್ನು ಕಂಡು ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Viral Post: ಪ್ರಯಾಣದ ವೇಳೆ ಊಬರ್ ಚಾಲಕನಿಗೆ ನಮಾಜ್ ಮಾಡಲು ಸಮಯ ನೀಡಿದ ಮಹಿಳೆ: ವೈರಲ್ ಆಯ್ತು ಪೋಸ್ಟ್

ವರದಿಗಳ ಪ್ರಕಾರ ಶುಕ್ರವಾರ ರಾತ್ರಿ ಕಳ್ಳತನ ನಡೆದಿದೆ. ಶನಿವಾರ ಬೆಳಗ್ಗೆ ಮಾಲೀಕ ಅಂಶು ಸಿಂಗ್ ಕಳ್ಳತನ ನಡೆದಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ಅಂಶು ಸಿಂಗ್ ಸದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.24 ಗಂಟೆಗಳ ಕಾಲ ಸಿನಿಮಾ ವೀಕ್ಷಿಸಿ...ತಿಂಗಳಿಗೆ 2 ಲಕ್ಷ ರೂಪಾಯಿ ಎಣಿಸಿ!

ಗೂಗಲ್​ ಮುಂತಾದ ಬೃಹತ್​ ಕಂಪನಿಗಳು ಉದ್ಯೋಗಿಗಳನ್ನು ಆಫೀಸಿಗೆ ಬರಲು ಎಲೆಕ್ಟ್ರಿಕ್​ ಸ್ಕೂಟರ್​ (Electric Scooter) ನೀಡುತ್ತಿದೆ. ಅದಿರಲಿ ಬಹುತೇಕರಿಗೆ ವರ್ಕ್​ ಪ್ರಂ ಹೋಮ್​ ಇಷ್ಟವಾಗಿದೆ. ಹಾಗಾಗಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಬಯಸುತ್ತಿರುವವರು ಅನೇಕರಿದ್ದಾರೆ. ಆದರೆ ಕಂಪನಿ ಮರಳಿ ಆಫೀಸಿಗೆ ಬರಬೇಕು ಎಂದಾಗ ಕೆಲಸ ಬಿಟ್ಟು ವರ್ಕ್​ ಫ್ರಂ ಹೋಂಮ್​ ನೀಡುವ ಕಂಪನಿಗಳ ಮೊರೆ ಹೋಗುತ್ತಿದ್ದಾರೆ ಹಲವರು. ಹೀಗಿರುವಾಗ ಅಂತವರಿಗಾಗಿ ಸುಲಭವಾಗಲೆಂದು ಕಂಪನಿಯೊಂದು ಕೆಲಸಕ್ಕೆ (Job) ಆಹ್ವಾನಿಸಿದೆ. ಅದೇನೆಂದರೆ ಮನೆಯಲ್ಲಿಯೇ ಕುಳಿತು ಟಿವಿ (Tv) ನೋಡುವ ಕೆಲಸ!.

ಹೌದು. ಇಂದೊಂದು ವಿಚಿತ್ರ ಉದ್ಯೋಗ, ಮನೆಯಲ್ಲಿ ಕುಳಿತುಕೊಂಡು 24 ಗಂಟೆಗಳ ಕಾಲ ಟಿವಿ ವೀಕ್ಷಿಸಬೇಕು. ಅಷ್ಟು ಮಾತ್ರವಲ್ಲ. ವೀಕ್ಷಣೆಗಾರರಿಗೆ 2 ಲಕ್ಷದಷ್ಟು ಸಂಬಳವನ್ನು ನೀಡುತ್ತಿದ್ದಾರೆ.

24 ಗಂಟೆಗಳ ಮರ್ಡರ್ ಮಿಸ್ಟರಿ

ಮ್ಯಾಗೆಲ್ಲನ್‌ಟಿವಿ ಅಪರಾಧ ಘಟನೆಗಳ ಕುರಿತು ಸಾಕ್ಷ್ಯಚಿತ್ರಗಳನ್ನು ಪ್ರಸಾರ ಮಾಡುವ ಸ್ಟ್ರೀಮಿಂಗ್ ಸೇವೆಯಾಗಿದೆ. ಇದರ ಅಡಿಯಲ್ಲಿ, ಯಾರಾದರೂ ತಮ್ಮ ಅಪರಾಧವನ್ನು ಆಧರಿಸಿದ ಸಾಕ್ಷ್ಯಚಿತ್ರವನ್ನು 24 ಗಂಟೆಗಳ ಕಾಲ ವೀಕ್ಷಿಸುತ್ತಿದ್ದರೆ, ಅವರಿಗೆ $ 2,400 ಅಂದರೆ 1.8 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಈ ಕೊಡುಗೆಯನ್ನು ಸತತ ಮೂರನೇ ವರ್ಷಕ್ಕೆ ಮೆಗೆಲ್ಲನ್ ಟಿವಿ ನೀಡಿದೆ.

ಅವರು ಆಯ್ದ ಕೆಲವರಿಗೆ ಇಡೀ ದಿನ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲು ಅವಕಾಶ ನೀಡುತ್ತಾರೆ. ಈ ಸವಾಲು ಕೇಳಲು ಸಾಕಷ್ಟು ಸುಲಭವಾಗಿ ತೋರುತ್ತದೆ, ಆದರೆ ದಿನವಿಡೀ ಭಯಾನಕ ಕಥೆಗಳನ್ನು ಹೊತ್ತುಕೊಳ್ಳುವುದು ಸುಲಭವಲ್ಲ.

ಇದನ್ನೂ ಓದಿ: Viral News: ಕ್ರೇಜ್ ಅಂದ್ರೆ ಹೇಗೆಲ್ಲಾ ಇರುತ್ತೆ! ಇಷ್ಟದ ಗಾಯಕನಿಗಾಗಿ ಸೈಕಲ್, ಬಸ್ ಏರಿ 185 ಕಿಮೀ ದೂರ ಬಂದ 14ರ ಹುಡುಗ!

ಕೊಲೆ-ದರೋಡೆ ಮತ್ತು ದೆವ್ವಗಳ ಕಥೆ

ಇದೊಂದು ಸವಾಲಿನ ಮಾತ್ರವಲ್ಲ  ಸಕ್ತಿದಾಯಕವಾಗಿದೆ, ಆದರೆ ಇದನ್ನು ಪೂರ್ಣಗೊಳಿಸುವುದು ಹೆಚ್ಚು ಕಷ್ಟ. ಉದ್ಯೋಗಿಯು ಈ ಕಾರ್ಯವನ್ನು ಪೂರ್ಣಗೊಳಿಸಿದರೆ, ಅವರು 1.8 ಲಕ್ಷ ರೂಪಾಯಿಗಳ ಬಹುಮಾನವನ್ನು ಪಡೆಯುತ್ತಾರೆ, ಜೊತೆಗೆ ಒಂದು ವರ್ಷದವರೆಗೆ MagellanTV ಗೆ ಚಂದಾದಾರಿಕೆಯನ್ನು ಸಹ ಉಚಿತವಾಗಿ ನೀಡಲಾಗುತ್ತದೆ.
Published by:Mahmadrafik K
First published: