Marriage Registration: ಮದುವೆಯಾಗಿ 40 ವರ್ಷವಾದರೂ, ರಿಜಿಸ್ಟ್ರೇಶನ್​ ಮಾಡಿಸಲಾಗದೆ ಕೋರ್ಟ್ ಮೆಟ್ಟಿಲೇರಿದ ದಂಪತಿ

1981 ರ ಮೇ 28 ರಂದು ನಡೆದಿದ್ದ ಅವರ ಮದುವೆಯ ಸಂದರ್ಭದಲ್ಲಿ ಪತಿಯ ವಯಸ್ಸು 21 ವರ್ಷಕ್ಕಿಂತ ಕೆಳಗಿತ್ತು ಮತ್ತು ಪತ್ನಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇತ್ತು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿವಾಹ ನೋಂದಾವಣಿ(Marriage Registration) ಮಾಡಲೆಂದು, ನೋಂದಾವಣಿ ಕೇಂದ್ರಕ್ಕೆ ಹೋದರೆ, ತಾಂತ್ರಿಕ ಅಡಚಣೆಯಿಂದ ವಿವಾಹ ನೋಂದಾವಣಿ ಅರ್ಜಿ ಸ್ವೀಕೃತವಾಗದೆ, ನಿರಾಶರಾದ ಪತಿ-ಪತ್ನಿ(Husband-Wife) ಈಗ ತಮ್ಮ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿಕೊಂಡು ನ್ಯಾಯಾಲಯ(Court)ದ ಮೆಟ್ಟಿಲು ಹತ್ತಿದ್ದಾರೆ.

ಏನಿದು ಪ್ರಕರಣ?

ಮದುವೆಯ ಸಂದರ್ಭದಲ್ಲಿ , ಗಂಡು ಮತ್ತು ಹೆಣ್ಣು ಅಪ್ರಾಪ್ತ ವಯಸ್ಕಾರಾಗಿದ್ದರು ಎಂಬ ಕಾರಣಕ್ಕೆ, ಮದುವೆಯ ನೋಂದಾವಣಿಯ ಅರ್ಜಿಯನ್ನು ಸಾಫ್ಟ್‍ವೇರ್ ನಿರಾಕರಿಸಿದ್ದರಿಂದ, ನೋಂದಾವಣಿ ಮಾಡಲು ಸಾಧ್ಯವಾಗದ ದಂಪತಿಯ ಮನವಿಗೆ ಉತ್ತರಿಸುವಂತೆ ದೆಹಲಿ ಹೈಕೋರ್ಟ್ ದೆಹಲಿ ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ.
ಗುರು ಹಿರಿಯರ ಆಶೀರ್ವಾದದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿ 40 ವರ್ಷವಾಗಿದೆ, ನಾಲ್ಕು ಮಂದಿ ಮಕ್ಕಳಿದ್ದಾರೆ. ಇಷ್ಟು ವರ್ಷಗಳ ದಾಂಪತ್ಯದ ಬಳಿಕ, ವಿವಾಹ ನೋಂದಾವಣಿ ಮಾಡಿಕೊಳ್ಳಲು ಪ್ರಯತ್ನಿಸಿ, ಆದರೆ ಆ ಪ್ರಯತ್ನ ಸರಿಯಾಗಿ ಕೈಗೂಡದೆ ಒದ್ದಾಡುತ್ತಿರುವ ದಂಪತಿಯ ಕಥೆಯಿದು.

ಇದನ್ನೂ ಓದಿ:Viral News: ಕೊನೆ ಕ್ಷಣದಲ್ಲಿ ‘ಕಬೂಲ್’ ಇಲ್ಲ ಎಂದ ವಧು: ವರನನ್ನ ನೋಡ್ತಿದ್ದಂತೆ ಯುವತಿಯ ನಿರ್ಧಾರ

ವಿವಾಹ ನೋಂದಾವಣಿ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ

ವಿವಾಹ ನೋಂದಾವಣಿ ಮಾಡಲೆಂದು ನೋಂದಾವಣಿ ಕೇಂದ್ರಕ್ಕೆ ಹೋದರೆ, ತಾಂತ್ರಿಕ ಅಡಚಣೆಯಿಂದ ವಿವಾಹ ನೋಂದಾವಣಿ ಅರ್ಜಿ ಸ್ವೀಕೃತವಾಗದೆ, ನಿರಾಶರಾದ ಪತಿ-ಪತ್ನಿ ಈಗ ತಮ್ಮ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿಕೊಂಡು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ದೆಹಲಿ ಹೈ ಕೋರ್ಟ್‍ನಲ್ಲಿರುವ ವಿವಾಹ ನೋಂದಾವಣಿಗೆ ಸಂಬಂಧಿಸಿದ ಪ್ರಕರಣವಿದು.

ಡಿ.23ರಂದು ಪ್ರಕರಣ ಇತ್ಯರ್ಥ

ನ್ಯಾಯಮೂರ್ತಿ ರೇಖಾ ಪಿಳ್ಳೈ ಅವರು, ದೆಹಲಿ ರಾಜ್ಯ ಸರಕಾರ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದ ಇತರರಿಗೆ , ನೊಂದ ದಂಪತಿಯ ಈ ಮನವಿಗೆ ಉತ್ತರಿಸುವಂತೆ ಹೇಳಿದ್ದಾರೆ ಮತ್ತು ಈ ಪ್ರಕರಣವನ್ನು ಡಿಸೆಂಬರ್ 23 ಕ್ಕೆ ಪರಿಹರಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ್ದ ದಂಪತಿ

ದಂಪತಿಗಳು, ವಕೀಲ ಜೆ ಎಸ್ ಮಾನ್ ಅವರ ಮೂಲಕ ಸಲ್ಲಿಸಿರುವ ಮನವಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸುವಂತೆ ಕೇಳಿಕೊಂಡಿದ್ದಾರೆ. ಅರ್ಜಿದಾರರು ವಿವಾಹ ನೋಂದಾವಣಿಗೆ ಅಗತ್ಯ ಇರುವ ಎಲ್ಲಾ ದಾಖಲೆಗಳೊಂದಿಗೆ, ಪ್ರತಿವಾದಿಯನ್ನು ಸಂಪರ್ಕಿಸಿ, ವಿವಾಹ ನೋಂದಾವಣಿಸಿಗೆ ಅರ್ಜಿ ಸಲ್ಲಿಸಿದರು. ಆದರೆ ಸಾಫ್ಟ್​​ವೇರ್ ವ್ಯವಸ್ಥೆ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಯಶಸ್ವಿ ಆಗಲಿಲ್ಲ. ಸಾಫ್ಟ್ ವೇರ್ ಅವರ ಅರ್ಜಿಯನ್ನು ನಿರಾಕರಿಸಲು ಕಾರಣ, 1981 ರ ಮೇ 28 ರಂದು ನಡೆದಿದ್ದ ಅವರ ಮದುವೆಯ ಸಂದರ್ಭದಲ್ಲಿ ಪತಿಯ ವಯಸ್ಸು 21 ವರ್ಷಕ್ಕಿಂತ ಕೆಳಗಿತ್ತು ಮತ್ತು ಪತ್ನಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇತ್ತು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ ಮನವಿ ಮಾಡಿದ ದಂಪತಿ

1954 ರ ವಿಶೇಷ ವಿವಾಹ ಕಾಯಿದೆಯ ಐದನೇ ಶೆಡ್ಯೂಲ್‍ನಲ್ಲಿ ನಿರ್ದಿಷ್ಟಪಡಿಸಿರುವ ನಮೂನೆಯಲ್ಲಿ ಅರ್ಜಿದಾರರ ವಿವಾಹವನ್ನು ನೋಂದಾಯಿಸಲು ಪ್ರತಿವಾದಿಗಳಿಗೆ ನಿರ್ದೇಶನವನ್ನು ನೀಡುವಂತೆ ಮತ್ತು ವಿವಾಹ ನೋಂದಣಿಗೆ 30 ದಿನಗಳ ಮೊದಲು ಸೂಚನೆ ನೀಡಬೇಕು ಎಂಬ ನಿಯಮದ ಅಗತ್ಯವನ್ನು ಮನ್ನಾ ಮಾಡಬೇಕೆಂದು ನಿರ್ದೇಶಿಸುವಂತೆ , ಅರ್ಜಿದಾರ ದಂಪತಿ ಮನವಿಯಲ್ಲಿ ನ್ಯಾಯಾಲಯವನ್ನು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ:Viral News: ಮದ್ವೆಗೆ ಆಗಮಿಸಿದ ಅತಿಥಿಗಳಿಗೆ ಊಟದ ಬಿಲ್ ಕೇಳಿದ ವಧು: ಪ್ರತಿ ಪ್ಲೇಟ್ ಹಣ ಕೇಳಿ ಗೆಸ್ಟ್ ಶಾಕ್

ಅರ್ಜಿದಾರ ದಂಪತಿ ಮನವಿಯಲ್ಲಿ ಏನಿದೆ?

ಅರ್ಜಿದಾರ ದಂಪತಿ ತಮ್ಮ ಮನವಿಯಲ್ಲಿ , 1954ರ ವಿಶೇಷ ವಿವಾಹ ಕಾಯಿದೆಯ ಸೆಕ್ಷನ್ 15 ರಲ್ಲಿ ಸೂಚಿಸಿರುವ ವಿವಾಹ ನೋಂದಣಿಗೆ ಅಗತ್ಯವಿರುವ ಎಲ್ಲಾ ಷರತ್ತುಗಳನ್ನು ಪೂರೈಸಲಾಗಿದೆ ಎಂದು ತಿಳಿಸಿದ್ದಾರೆ. ಏಕೆಂದರೆ, ಅವರು ನೋಂದಣಿಯ ಸಮಯದಲ್ಲಿ 21 ವರ್ಷಗಳನ್ನು ಪೂರೈಸಿದ್ದರು ಮತ್ತು ಅರ್ಜಿದಾರರ ಮದುವೆಯನ್ನು ಹಿಂದೂ ವೈದಿಕ ವಿಧಿಗಳು ಮತ್ತು ಆಚರಣೆಗಳ ಮೂಲಕ 1981 ರ ಮೇ 28 ರಂದು ನೆರವೇರಿಸಲಾಗಿತ್ತು. “ಮದುವೆಯಾದ ದಿನಾಂಕದಿಂದಲೂ, ಅರ್ಜಿದಾರರು ಪತಿ ಮತ್ತು ಪತ್ನಿಯಾಗಿ ತಮ್ಮ ಕುಟುಂಬ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ಅವರಿಗೆ ನಾಲ್ಕು ಮಕ್ಕಳಿದ್ದಾರೆ” ಎಂದು ಮನವಿಯಲ್ಲಿ ಸೇರಿಸಲಾಗಿದೆ.  
Published by:Latha CG
First published: