• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Twin Children: ಇವರಿಬ್ಬರು ಅವಳಿ ಮಕ್ಕಳಂದ್ರೆ ನಂಬ್ತೀರಾ? ಗಿನ್ನಿಸ್ ವರ್ಲ್ಡ್ ರೆಕಾರ್ಡ್​ ಸೇರಿದೆ ಈ ಜೋಡಿ

Twin Children: ಇವರಿಬ್ಬರು ಅವಳಿ ಮಕ್ಕಳಂದ್ರೆ ನಂಬ್ತೀರಾ? ಗಿನ್ನಿಸ್ ವರ್ಲ್ಡ್ ರೆಕಾರ್ಡ್​ ಸೇರಿದೆ ಈ ಜೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯೋಶಿ 162.5 ಸೆಂಟಿ ಮೀಟರ್ ಎಂದರೆ 5 ಅಡಿ 4 ಇಂಚು ಎತ್ತರವಿದ್ದರೆ, ಮಿಚಿ 87.5 ಸೆಂಟಿ ಮೀಟರ್ ಎಂದರೆ ಬರೋಬ್ಬರಿ 2 ಅಡಿ 10.5 ಇಂಚು ಎತ್ತರವಾಗಿದ್ದಾರೆ.

  • Trending Desk
  • 2-MIN READ
  • Last Updated :
  • Share this:

ಸಾಮಾನ್ಯವಾಗಿ ನಾವು ಈ ಅವಳಿ ಮಕ್ಕಳು(Twins Children) ಹುಟ್ಟಿದಾಗ ಕೆಲವೊಮ್ಮೆ ಅವುಗಳು ಒಂದೇ ರೀತಿ ಕಾಣುತ್ತವೆ ಮತ್ತು ಒಂದೇ ರೀತಿಯ ಎತ್ತರವನ್ನು ಮತ್ತು ಮುಖದ ಲಕ್ಷಣವನ್ನು ಹೊಂದಿರುವುದನ್ನು ನೋಡಬಹುದು. ಇನ್ನೂ ಕೆಲವೊಂದು ಸಂದರ್ಭಗಳಲ್ಲಿ(Situations) ಅವಳಿ ಸಹೋದರರು ಅಥವಾ ಅವಳಿ ಸಹೋದರಿಯರು ನೋಡಲು ಬೇರೆ ಬೇರೆ ಆಗಿರುವ ಮುಖದ(Face) ಲಕ್ಷಣವನ್ನು ಹೊಂದಿರಬಹುದು ಮತ್ತು ಎತ್ತರದಲ್ಲಿಯೂ ಸಹ ತುಂಬಾನೇ ವ್ಯತ್ಯಾಸ ಇರಬಹುದು. ಒಟ್ಟಿನಲ್ಲಿ ಹೇಳುವುದಾದರೆ ಅವಳಿ ಮಕ್ಕಳು ಒಂದೇ ರೀತಿ ಇರುತ್ತವೆ ಅಂತ ಹೇಳಲು ಬರುವುದಿಲ್ಲ.


ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ. ಮಕ್ಕಳ ನಡುವೆ ತುಂಬಾನೇ ಎತ್ತರದ ವ್ಯತ್ಯಾಸವಿದೆ. ಈ ಸಹೋದರಿಯರ ಮಧ್ಯೆ ಇರುವ ಎತ್ತರದ ವ್ಯತ್ಯಾಸ ಈಗ ಗಿನ್ನಿಸ್ ವಿಶ್ವ ದಾಖಲೆಯಾಗಿದೆ ನೋಡಿ.


ಅವಳಿ ಸಹೋದರಿಯರ ಎತ್ತರದಲ್ಲಿ ಎಷ್ಟು ವ್ಯತ್ಯಾಸವಿದೆ ನೋಡಿ..


ಅಸಾಧಾರಣ ಎತ್ತರ ವ್ಯತ್ಯಾಸದೊಂದಿಗೆ ಜಪಾನಿನ ಅವಳಿ ಸಹೋದರಿಯರು ಗಿನ್ನಿಸ್ ವಿಶ್ವ ದಾಖಲೆಗಳನ್ನು ಪ್ರವೇಶಿಸಿದ್ದಾರೆ. ಸಹೋದರಿ ಯೋಶಿ ಮತ್ತು ಜಪಾನ್ ನ ಒಕಾಯಾಮಾದಲ್ಲಿ ವಾಸಿಸುವ ಮಿಚಿ ಕಿಕುಚಿ ನಡುವೆ 75 ಸೆಂಟಿ ಮೀಟರ್ ಎಂದರೆ ಬರೋಬ್ಬರಿ 2 ಅಡಿ 5.5 ಇಂಚು ವ್ಯತ್ಯಾಸ ಇದೆ ಅಂತ ಹೇಳಬಹುದು.


ಇದನ್ನೂ ಓದಿ: Reality Show: ಮಾಸ್ಟರ್ ಶೆಫ್​ ಸ್ಪರ್ಧೆಯಲ್ಲಿ ಯುವತಿಯ ಎಡವಟ್ಟು, ಕಥೆ ಕೇಳಿ ಉಗಿದು ಉಪ್ಪಿನಕಾಯಿ ಹಾಕಿದ ನೆಟ್ಟಿಗರು!


ಒಂದೇ ರೀತಿ ಕಾಣದ ಅವಳಿಗಳಲ್ಲಿ (ಹೆಣ್ಣು ಮಕ್ಕಳು) ಅತಿ ಹೆಚ್ಚು ಎತ್ತರ ವ್ಯತ್ಯಾಸಕ್ಕಾಗಿ ಅವಳಿ ಸಹೋದರಿಯರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ ಅಂತ ಹೇಳಬಹುದು.


ಈ ಅವಳಿಗಳು ನೋಡಲು ಅಲ್ಪ ಸ್ವಲ್ಪ ಒಂದೇ ರೀತಿ ಕಾಣುತ್ತಾರೆ, ಆದರೆ ಎತ್ತರದಲ್ಲಿ ತುಂಬಾನೇ ವ್ಯತ್ಯಾಸವಿದೆ ಅಂತ ಹೇಳಲಾಗುತ್ತಿದೆ. ಆದರೆ 33 ವರ್ಷದ ಸಹೋದರಿಯರಿಗೆ, ಅವರ ಮುಖದ ಲಕ್ಷಣಗಳು ಮತ್ತು ಎತ್ತರವು ಅವರನ್ನು ಪ್ರತ್ಯೇಕಿಸುತ್ತದೆ.


ಯೋಶಿ 162.5 ಸೆಂಟಿ ಮೀಟರ್ ಎಂದರೆ 5 ಅಡಿ 4 ಇಂಚು ಎತ್ತರವಿದ್ದರೆ, ಮಿಚಿ 87.5 ಸೆಂಟಿ ಮೀಟರ್ ಎಂದರೆ ಬರೋಬ್ಬರಿ 2 ಅಡಿ 10.5 ಇಂಚು ಎತ್ತರವಾಗಿದ್ದಾರೆ.


ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಈ ಅವಳಿ ಸಹೋದರಿಯರ ಕಥೆಯನ್ನು ತನ್ನ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದೆ. "ಹೊಸ ದಾಖಲೆ: ಜೀವಂತ ಸಹೋದರ ಅವಳಿಗಳಲ್ಲಿ (ಹೆಣ್ಣು) ಎತ್ತರದಲ್ಲಿ ತುಂಬಾನೇ ದೊಡ್ಡ ವ್ಯತ್ಯಾಸ - ಯೋಶಿ ಮತ್ತು ಮಿಚಿ ಕಿಕುಚಿ (ಜಪಾನ್) ನಡುವೆ ಇರುವುದು 75.0 ಸೆಂಟಿ ಮೀಟರ್ ಎಂದರೆ 2 ಅಡಿ 5.5 ಇಂಚು.


ಅವರ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಯೋಶಿ ಮತ್ತು ಮಿಚಿ ಸಹೋದರಿಯರಿಬ್ಬರು ಪರಸ್ಪರ ತುಂಬಾನೇ ಹತ್ತಿರವಾಗಿದ್ದಾರೆ" ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ.


ಇದನ್ನೂ ಓದಿ: Viral Video: ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು, ಕುಳ್ಳಿಯರ ಗೋಳಿಗೆ ಇಲ್ವಾ ಮುಲಾಮು?


ಅವಳಿ ಸಹೋದರಿಯರು ಜನಿಸಿದ್ದು 1989 ರಲ್ಲಿ ಅಂತೆ..


ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನ ಪತ್ರಿಕಾ ಪ್ರಕಟಣೆಯ ಪ್ರಕಾರ, ಕಿಕುಚಿ ಸಹೋದರಿಯರು ಎರಡು ಪ್ರತ್ಯೇಕ ಮೊಟ್ಟೆಗಳ ಫಲೀಕರಣದ ಪರಿಣಾಮವಾಗಿ ಭ್ರಾತೃತ್ವದ ಅವಳಿಗಳು.


ಇವರಿಬ್ಬರು 15 ಅಕ್ಟೋಬರ್ 1989 ರಂದು ಜನಿಸಿದರು. ಮಿಚಿಗೆ ಜನ್ಮಜಾತ ಸ್ಪೈನಲ್ ಎಪಿಫಿಸಿಯಲ್ ಡಿಸ್ಪ್ಲಾಸಿಯಾ ಎಂಬ ಕಾಯಿಲೆ ಇದ್ದು, ಇದು ಮೂಳೆ ಅಸ್ವಸ್ಥತೆಯಾಗಿದ್ದು, ಅದು ಅವಳ ಬೆಳವಣಿಗೆಯನ್ನು ಅಡ್ಡಿಪಡಿಸಿದೆ ಅಂತ ಹೇಳುತ್ತಾರೆ ವೈದ್ಯರು.




ಮಿಚಿ ತನ್ನ ಹೆತ್ತವರ ಜೊತೆಯಲ್ಲಿ ವಾಸಿಸುತ್ತಾಳೆ ಮತ್ತು ಅವಳು ತನ್ನ ತಂದೆ ನಡೆಸುತ್ತಿರುವ ದೇವಾಲಯದ ದೈನಂದಿನ ನಿರ್ವಹಣೆಗೆ ತನ್ನ ಕೈಲಾದಷ್ಟು ಸಹಾಯ ಮಾಡುತ್ತಾಳೆ.


ಯೋಶಿ ಕುಟುಂಬದಿಂದ ಹೊರಬಂದಿದ್ದು ಮತ್ತು ಈಗ ಆಕೆ ತಾಯಿಯಾಗಿದ್ದಾಳೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಜೊತೆ ಮಾತನಾಡಿದ ಮಿಚಿ "ನಾನು 2012 ರಲ್ಲಿ ಅತ್ಯಂತ ಕುಳ್ಳಗಿನ ವ್ಯಕ್ತಿಯ ಬಗ್ಗೆ ಓದಿದೆ ಮತ್ತು ನನಗೆ ಆಘಾತವಾಯಿತು. ನನ್ನ ಸ್ಥಿತಿಯ ಬಗ್ಗೆ ನಾನು ನಾಚಿಕೆಪಡುತ್ತಿರುವಾಗ, ಅಲ್ಲಿ ಒಬ್ಬ ವ್ಯಕ್ತಿ ನನಗಿಂತ ಕುಳ್ಳಗೆ ಇದ್ದಾರೆ ಎಂಬುದು ನನಗೆ ತಿಳಿಯಿತು" ಎಂದು ಹೇಳಿದರು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು