Penguins: ಜಪಾನ್ ನಲ್ಲಿರುವ ಈ ಪೆಂಗ್ವಿನ್‌ಗಳು ಬರೀ ದುಬಾರಿ ಮೀನು ಮಾತ್ರ ತಿನ್ನೋದಂತೆ, ಏನ್ ಲೆವೆಲ್ ನೋಡಿ ಇವುಗಳದ್ದು!

ಜಪಾನ್‌ ದೇಶದ ಕನಗಾವಾ ಪ್ರಾಂತ್ಯದಲ್ಲಿ ಇರುವ ಅಕ್ವೇರಿಯಂನಲ್ಲಿರುವ ಅಧಿಕಾರಿಗಳು “ಪೆಂಗ್ವಿನ್‌ಗಳು ತುಂಬಾ ದುಬಾರಿ ಪ್ರಾಣಿ ಮತ್ತು ಅದು ತಿನ್ನುವ ಆಹಾರ ಮೀನುಗಳು ಕೂಡ ಅಷ್ಟೆ ದುಬಾರಿಯಾಗಿದ್ದು, ತಿನ್ನಲು ರುಚಿಯಿದ್ದರೆ ಮಾತ್ರ ತಿನ್ನುತ್ತವೆ, ಅಗ್ಗದ ಮೀನುಗಳನ್ನು ತಿನ್ನಲು ನೀಡಿದರೆ ಅವುಗಳನ್ನು ಬಿಸಾಡುತ್ತಿವೆ” ಎಂದು ಅಕ್ವೇರಿಯಮ್‌ ಅಧಿಕಾರಿಗಳು ಹೇಳಿದ್ದಾರೆ.

ಪೆಂಗ್ವಿನ್‌

ಪೆಂಗ್ವಿನ್‌

  • Share this:
ಜಗತ್ತಿನಲ್ಲಿ ಅನೇಕರು ದಿನನಿತ್ಯ ಆಹಾರದ (Food) ಕೊರತೆಯಿಂದ ಸಾವನ್ನಪ್ಪುತ್ತಿರುವ (Deaths) ಸಂಗತಿಗಳನ್ನು ನಾವು ಸುದ್ದಿ ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೆವೆ. ಈ ಹಣದುಬ್ಬರದ (Inflation) ಸಮಯದಲ್ಲಿ ಸಾಮಾನ್ಯರೂ ದಿನನಿತ್ಯದ ಊಟಕ್ಕೂ ಪರದಾಡುತ್ತಿರುತ್ತಾರೆ. ಇಂತಹ ಪರಿಸ್ಥಿತಿಗಳು ಇರಬೇಕಾದರೆ ಈ ಪೆಂಗ್ವಿನ್‌ (Penguin) ಹೆಸರು ಕೇಳಿದ್ದಿರಿ ತಾನೇ, ಈ ಪೆಂಗ್ವಿನ್‌ಗಳು ನೋಡಲು ಎಷ್ಟು ಸುಂದರವಾಗಿರುತ್ತವೆಯೋ ಹಾಗೆಯೇ ತುಂಬಾ ಕ್ಲಾಸಿ ಆಗಿ ಬದುಕುವ ಪ್ರಾಣಿಗಳಲ್ಲಿ ಏಕೈಕ ಪ್ರಾಣಿ (Animal) ಎಂದರೆ ತಪ್ಪಾಗಲಾರದು. ಆ ಪ್ರಾಣಿಯ ಸೃಷ್ಟಿಯೇ ಆಗಿದೆ. ಅವುಗಳು ಎಲ್ಲೆಂದರಲ್ಲಿ ಅಲ್ಲಿ ಇರುವುದಿಲ್ಲ, ಹೇಗೆ ಬೇಕೋ ಆಗೆ ಬದುಕುವುದಿಲ್ಲ. ಅವುಗಳು ತುಂಬಾ ವ್ಯವಸ್ಥಿತವಾಗಿ ಬದುಕುವ ಪ್ರಾಣಿಗಳಾಗಿವೆ.

ಅಕ್ವೇರಿಯಂನಲ್ಲಿ ಪೆಂಗ್ವಿನ್‌ಗಳು ತುಂಬಾ ದುಬಾರಿ ಪ್ರಾಣಿ
ಇಂದು ಎಲ್ಲ ಕಡೆ ಸಾಮಾನ್ಯ ಸಮಸ್ಯೆ ಎಂದರೆ ಈ ಹಣದುಬ್ಬರ ಸಮಸ್ಯೆ ಆಗಿದೆ. ಇದು ಜೀವನ ನಿರ್ವಹಣೆಗೆ ಸಾಕಷ್ಟು ಕಷ್ಟಗಳನ್ನು ತಂದೊಡ್ಡುತ್ತದೆ. ಇದರ ಮಧ್ಯೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಯಾವ ದೇಶ ಎಂದು ಕುತೂಹಲ ಆಗುತ್ತಿದೆಯೇ? ಅದು ಜಪಾನ್‌ ದೇಶ ಆಗಿದೆ. ಇಲ್ಲಿ ಒಂದು ಅಕ್ವೇರಿಯಮ್‌ ಇದೆ. ಅದರ ಹೆಸರು ʼಹಕೋನ್-ಎನ್ ಅಕ್ವೇರಿಯಂʼ ಆಗಿದ್ದು, ಇಲ್ಲಿ ದಿನನಿತ್ಯ ನಡೆಯುತ್ತಿರುವ ವಿಚಿತ್ರ ಸಂಗತಿಯು ಏರುತ್ತಿರುವ ಬೆಲೆಗಳಿಂದ ಮನುಷ್ಯರಿಗೆ ಮಾತ್ರ ತೊಂದರೆ ಆಗುತ್ತಿಲ್ಲ. ಇದರಿಂದ ಪ್ರಾಣಿಗಳೂ ಕೂಡ ಪರದಾಡುವಂತೆ ಆಗಿದೆ.

ಜಪಾನ್‌ ದೇಶದ ಕನಗಾವಾ ಪ್ರಾಂತ್ಯದಲ್ಲಿ ಇರುವ ಅಕ್ವೇರಿಯಂನಲ್ಲಿರುವ ಅಧಿಕಾರಿಗಳು “ಪೆಂಗ್ವಿನ್‌ಗಳು ತುಂಬಾ ದುಬಾರಿ ಪ್ರಾಣಿ ಮತ್ತು ಅದು ತಿನ್ನುವ ಆಹಾರ ಮೀನುಗಳು ಕೂಡ ಅಷ್ಟೆ ದುಬಾರಿಯಾಗಿದ್ದು, ತಿನ್ನಲು ರುಚಿಯಿದ್ದರೆ ಮಾತ್ರ ತಿನ್ನುತ್ತವೆ, ಅಗ್ಗದ ಮೀನುಗಳನ್ನು ತಿನ್ನಲು ನೀಡಿದರೆ ಅವುಗಳನ್ನು ಬಿಸಾಡುತ್ತಿವೆ” ಎಂದು ಅಕ್ವೇರಿಯಮ್‌ ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಅಕ್ವೇರಿಯಂನ ಮುಖ್ಯಸ್ಥೆ ಹೇಳಿದ್ದು ಹೀಗೆ 
ಅಕ್ವೇರಿಯಂ ಮುಖ್ಯಸ್ಥ ಹಿರೋಕಿ ಶಿಮಾಮೊಟೊ, AFP ನೊಂದಿಗೆ ಮಾತನಾಡುತ್ತಾ, "ಪೆಂಗ್ವಿನ್‌ಗಳು ಮೊದಲು ಕೊಟ್ಟ ಮೀನುಗಳನ್ನು ತೆಗೆದುಕೊಂಡು, ಬಾಯಿಯಲ್ಲಿ ಇಟ್ಟುಕೊಳ್ಳುತ್ತವೆ, ಆದರೆ ಅದರ ನಂತರದಲ್ಲಿ ಅವು ಆ ಅಗ್ಗದ ಮೀನುಗಳನ್ನು ಇಷ್ಟ ಪಡದೇ ಆಗೇ ಬಿಸಾಡುತ್ತವೆ” ಎಂದು ಹೇಳಿದರು.

ಇದನ್ನೂ ಓದಿ: Elephant: ಆನೆಗೆ ಚಡ್ಡಿ ಅಲ್ಲ ಕಣ್ರೀ, ಚಪ್ಪಲಿ ಹಾಕಿಸಿದ್ದಾರೆ! 12 ಸಾವಿರ ರೂಪಾಯಿ ಪಾದರಕ್ಷೆ ಧರಿಸಿ ಗಜ ನಡಿಗೆ

ಈ ಅಕ್ವೇರಿಯಂ ಕೆಲವು ದುಬಾರಿ ಕುದುರೆ ಮ್ಯಾಕೆರೆಲ್ ಗಳನ್ನು ಸಾಕುವುದನ್ನು ಈಗ ಬಿಟ್ಟಿದೆ. ಅದರ ಬದಲಾಗಿ, ಅಗ್ಗದ ಕುದುರೆ ಮ್ಯಾಕೆರೆಲ್‌ಗಳನ್ನು ಪರಿಚಯಿಸಿದ್ದಾರೆ. ಜಪಾನಿನಲ್ಲಿ ಈ ವಾರದ ಸುದ್ದಿ ವಿಭಾಗವು ಪ್ರಾಣಿಗಳ ಈ ವಿಡಿಯೋವನ್ನು ಎಲ್ಲ ಕಡೆ ಪ್ರಸಾರ ಮಾಡುತ್ತಿದೆ.

ಅಗ್ಗದ ಮೀನುಗಳನ್ನು ತಿನ್ನಲು ನಿರಾಕರಿಸುತ್ತಿರುವ ಪೆಂಗ್ವಿನ್ ಗಳು 
AFP ನ್ಯೂಸ್‌ ಏಜೆನ್ಸಿಯು ಹಣದುಬ್ಬರ ಮತ್ತು ಇತ್ತೀಚಿಗೇ ಕುದುರೆ ಮೆಕೆರೆಲ್‌ಗಳ ಕಡಿಮೆ ಇಳುವರಿಯಿಂದಾಗಿ ವೆಚ್ಚ ಹೆಚ್ಚಾಗುತ್ತಿದೆ ಲಾಭ ಕಡಿಮೆ ಆಗುತ್ತಿದೆ. ಆದ್ದರಿಂದ ಈ ಅಕ್ವೇರಿಯಮ್‌ ನಲ್ಲಿ ಈ ದುಬಾರಿ ಕುದುರೆಗಳ ಬದಲು ಅಗ್ಗದ ಕುದುರೆ ಬಳಸುತ್ತಿದ್ದಾರೆ.ಅಕ್ವೇರಿಯಮ್‌ನಲ್ಲಿ ಈ ಮೊದಲು ಮೇ ತಿಂಗಳಲ್ಲಿ ಕಡಿಮೆ ಬೆಲೆಯ ಮ್ಯಾಕೆರೆಲ್‌ಗಳಿಗೆ ಪ್ರಾಣಿಗಳ ಊಟವನ್ನು ಪೂರೈಸಲು ಪ್ರಾರಂಭಿಸಿತು. ಈ ಪೆಂಗ್ವಿನ್‌ಗಳಿಗೆ , ಈಗ ಅಗ್ಗದ ಮೀನುಗಳು ಅವುಗಳ ಹೆಚ್ಚಿನ ಆಹಾರವಾಗಿದೆ. "ಹೊಸ ಮೀನುಗಳನ್ನು ತಿನ್ನಲು ನಿರಾಕರಿಸುವ ಪೆಂಗ್ವಿನ್‌ಗಳಿಗೆ ಅವು ತಿನ್ನುವ ಆಹಾರವನ್ನೇ ನಾವು ನೀಡುತ್ತಿದ್ದೇವೆ” ಎಂದು ಶಿಮಾಮೊಟೊ ಹೇಳಿದರು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಪೆಂಗ್ವಿನ್ ಫೋಟೋ ಹಾಗೂ ವಿಡಿಯೋಗಳು  
CNN ನ ಜೇಕ್ ಕ್ವಾನ್ ಪೆಂಗ್ವಿನ್‌ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ “ಏರುತ್ತಿರುವ ಹಣದುಬ್ಬರದ ನಡುವೆ ಜಪಾನಿನ ಮೃಗಾಲಯವು ತನ್ನ ಸಮುದ್ರ ಪ್ರಾಣಿಗಳಿಗೆ ಅಗ್ಗದ ಮೀನುಗಳನ್ನು ಆಹಾರವಾಗಿ ನೀಡಲು ಮುಂದಾಗಿದೆ. ಪೆಂಗ್ವಿನ್‌ಗಳು ಅವುಗಳನ್ನು ತಿನ್ನುವುದು ಇರಲಿ, ನೋಡುವುದಕ್ಕೂ ಸಹ ನಿರಾಕರಿಸಿ, ಅವುಗಳನ್ನು ಬಿಸಾಡುತ್ತಿವೆ” ಎಂಬ ಕ್ಯಾಪ್ಷನ್‌ ಅಡಿಯಲ್ಲಿ ಶೇರ್‌ ಮಾಡಲಾಗಿದೆ. ಈ ಚಿತ್ರವು 90 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆಯುತ್ತಿದೆ.

ಇದನ್ನೂ ಓದಿ:  Viral Video: ಬಣ್ಣಗಳನ್ನು ನೋಡಿ ಕರಡಿ ಫುಲ್ ಖುಷ್, ಏನ್ಮಾಡಿದೆ ನೋಡಿ!

ಈ ಹಣದುಬ್ಬರ ಮಾಡುತ್ತಿರುವ ಸಮಸ್ಯೆಗಳು ಒಂದಲ್ಲ ಎರಡಲ್ಲ ಬಿಡಿ. ಇಷ್ಟು ದಿನ ಇದರಿಂದ ಮನುಷ್ಯರಾದ ನಾವು ಮಾತ್ರ ತೊಂದರೆಗೆ ಒಳಗಾಗುತ್ತಿದ್ದೆವು. ಈ ಸಮಸ್ಯೆಯಿಂದ ಪ್ರಾಣಿಗಳು ಆಹಾರ ಕೊರತೆ ಎದುರಿಸುತ್ತಿವೆ.
Published by:Ashwini Prabhu
First published: