• Home
 • »
 • News
 • »
 • trend
 • »
 • Soda History: ಈ ಸ್ವದೇಶಿ ಸೋಡಾ ಬ್ರ್ಯಾಂಡ್‌ಗಳು 90ರ ದಶಕವನ್ನೊಮ್ಮೆ ನೆನಪಿಸುತ್ತೆ; ಇಲ್ಲಿದೆ ನೋಡಿ ಇದರ ಇತಿಹಾಸ

Soda History: ಈ ಸ್ವದೇಶಿ ಸೋಡಾ ಬ್ರ್ಯಾಂಡ್‌ಗಳು 90ರ ದಶಕವನ್ನೊಮ್ಮೆ ನೆನಪಿಸುತ್ತೆ; ಇಲ್ಲಿದೆ ನೋಡಿ ಇದರ ಇತಿಹಾಸ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತದಲ್ಲಿ ಸೋಡಾ ಸೇವನೆಯು ಹೇಗೆ ಪ್ರಾರಂಭವಾಯಿತು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಲೇಖನದಲ್ಲಿ, ಭಾರತದಲ್ಲಿನ ಸೋಡಾ ಇತಿಹಾಸದ ಬಗ್ಗೆ ತಿಳಿಸಿದ್ದೇವೆ ನೋಡಿ.

 • News18 Kannada
 • Last Updated :
 • New Delhi, India
 • Share this:

  ನೀವು 90 ರ ದಶಕದಲ್ಲಿ ಹುಟ್ಟಿದವರಾಗಿದ್ದರೆ, ನಿಮಗೆ 'ಬಂಟ ಸೋಡಾ' (Bunta Soda) ಅಥವಾ ‘ಗೋಲಿ ಸೋಡಾ’ (Goli Soda) ಎಂದರೇನು ಎಂದು ನಿಮಗೆ ಖಂಡಿತವಾಗಿಯೂ ತಿಳಿದಿರುತ್ತದೆ. ಜನಪ್ರಿಯ ದೇಸಿ ಪಾನೀಯವಾದ ಇದು ವಿವಿಧ ಬೀದಿ ಬದಿಯ ಅಂಗಡಿಗಳಲ್ಲಿ ಬಣ್ಣ ಬಣ್ಣದ ಬಾಟಲಿಗಳಲ್ಲಿ ವ್ಯಾಪಕವಾಗಿ ಲಭ್ಯವಿದ್ದವು. 'ಬಂಟ ಸೋಡಾ' ಉತ್ತರ ಭಾರತದಲ್ಲಿ ಜನಪ್ರಿಯವಾಗಿದ್ದರೂ, ಇದನ್ನು ದಕ್ಷಿಣ ಭಾರತದಲ್ಲಿ (South India) 'ಗೋಲಿ ಸೋಡಾ' ಎಂದು ಕರೆಯಲಾಗುತ್ತಿತ್ತು. ಅದೇ ನೀವು ಕೋಲ್ಕತ್ತಾದಲ್ಲಿ ಇದ್ದರೆ, ಈ ಪಾನೀಯವನ್ನು 'ಫೋಟಾಶ್ ಜೋಲ್' ಎಂದು ಕರೆಯಲಾಗುತ್ತದೆ. ಇದರರ್ಥ ಬಾಟಲಿ ತೆರೆದಾಗ ನೀರು ಎಂದರ್ಥ.


  ಈ ಪಟ್ಟಿ ಇಲ್ಲಿಗೆ ಮುಗಿಯುವುದಿಲ್ಲ, ಹಲವಾರು ವರ್ಷಗಳಿಂದ ಅನೇಕ ಭಾರತೀಯ ಸೋಡಾ ಬ್ರ್ಯಾಂಡ್ ಗಳು ಅನೇಕರ ಹೃದಯಗಳನ್ನು ಗೆದ್ದಿದೆ ಎಂದು ಹೇಳಬಹುದು. ಕೋಕಾ-ಕೋಲಾ, ಪೆಪ್ಸಿ ಮತ್ತು ಇತರ ಜಾಗತಿಕ ಬ್ರ್ಯಾಂಡ್ ಗಳಿಗೆ ನ್ಯಾಯೋಚಿತ ಸ್ಪರ್ಧೆಯನ್ನು ನೀಡಿರುವುದನ್ನು ನಾವು ನೋಡಿದ್ದೇವೆ. ಈಗ, ಭಾರತದಲ್ಲಿ ಸೋಡಾ ಸೇವನೆಯು ಹೇಗೆ ಪ್ರಾರಂಭವಾಯಿತು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಲೇಖನದಲ್ಲಿ, ಭಾರತದಲ್ಲಿನ ಸೋಡಾ ಇತಿಹಾಸದ ಬಗ್ಗೆ ತಿಳಿಸಿದ್ದೇವೆ ನೋಡಿ.


  ಈ ಸೋಡಾ ಮೊದಲಿಗೆ ಶುರುವಾದದ್ದು ಹೇಗೆ?


  ಇತಿಹಾಸಕಾರರ ಪ್ರಕಾರ, ಸೋಡಾ ಪಾನೀಯವಾಗಿ 19ನೇ ಶತಮಾನದ ಆರಂಭದಲ್ಲಿ ಇಂಗ್ಲೆಂಡಿನಲ್ಲಿ ಜನಪ್ರಿಯವಾಯಿತು. ನಂತರ ಈ ಪಾನೀಯವು ಭಾರತಕ್ಕೆ ಬಂದಿತು, ಇಲ್ಲಿ ಅದು ಬ್ರಿಟಿಷರ ಬಳಕೆಯ ಐಷಾರಾಮಿ ಪಾನೀಯವಾಯಿತು. 1837 ರಲ್ಲಿ, ಮುಂಬೈನಲ್ಲಿ ರಸಾಯನಶಾಸ್ತ್ರಜ್ಞ ಹೆನ್ರಿ ರೋಜರ್ಸ್ ಪಶ್ಚಿಮ ಭಾರತದ ಮೊದಲ ಇದರ ಕಾರ್ಖಾನೆಯನ್ನು ಸ್ಥಾಪಿಸಿದರು. ಸ್ವಲ್ಪ ಸಮಯದಲ್ಲೇ, ಭಾರತದ ಜನರು ಈ ಕಾರ್ಬೊನೇಟೆಡ್ ಪಾನೀಯವನ್ನು ಅಥವಾ ಕ್ಲಬ್ ಸೋಡಾ ಎಂದು ನಾವು ಕರೆಯುವ ಪಾನೀಯವನ್ನು ಪ್ರೀತಿಸಲು ಶುರು ಮಾಡಿದರು.


  ಇದನ್ನೂ ಓದಿ: ಡಿಜಿಟಲ್ ವ್ಯವಹಾರವನ್ನು ಬೆಳೆಸಲು ಇಲ್ಲಿದೆ 6 ಸಲಹೆಗಳು!


  ರೋಜರ್ ನ ಯಶಸ್ಸು ಪಾರ್ಸಿ ಉದ್ಯಮಿಗಳ ಗಮನವನ್ನು ಸೆಳೆಯಿತು, ಅವರು ಈ ಬ್ರಿಟಿಷ್ ಪಾನೀಯದ ವಾಣಿಜ್ಯ ಅವಕಾಶವನ್ನು ಹುಡುಕಲು ಪ್ರಾರಂಭಿಸಿದರು. ಇತಿಹಾಸಕಾರ ದಿನ್ಯಾರ್ ಪಟೇಲ್ ಅವರ ಬಿಬಿಸಿ ಲೇಖನದ ಪ್ರಕಾರ, 1913 ರ ಹೊತ್ತಿಗೆ, ಮುಂಬೈನಲ್ಲಿ 150ಕ್ಕೂ ಹೆಚ್ಚು ಪರವಾನಗಿ ಪಡೆದ ಸೋಡಾ ಕಾರ್ಖಾನೆಗಳು ಇದ್ದವು. "ಪಾರ್ಸಿಗಳು  ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ತಮ್ಮ ಹೆಸರಿನ ಮುಂದೆ ಜೋಡಿಸಿಕೊಂಡಿರುವ ಉಪನಾಮಗಳಿಂದ ರುಜುವಾತಾಗಿದೆ. ಸೋಡಾವಾಟರ್ವಾಲಾ, ಸೋಡಾವಾಟರ್ ಬಾಟಲ್ವಾಲಾ ಮತ್ತು ಸೋಡಾವಾಟರ್ ಬಾಟಲ್ಪೊನರ್ವಾಲಾ" ಎಂದೆಲ್ಲಾ ಇಟ್ಟುಕೊಂಡಿದ್ದರು.


  ಹಲವಾರು ವರ್ಷಗಳ ಕಾಲ ಮಾರುಕಟ್ಟೆಯನ್ನು ಆಳಿದ ಅಂತಹ ಕೆಲವು ಅಪ್ರತಿಮ ಮನೆಯಲ್ಲಿ ಬೆಳೆದ ಸೋಡಾ ಬ್ರ್ಯಾಂಡ್ ಗಳ ವಿವರ ಇಲ್ಲಿದೆ ನೋಡಿ.


  ಭಾರತದಲ್ಲಿನ 5 ಐಕಾನಿಕ್ ಸೋಡಾ ಬ್ರ್ಯಾಂಡ್‌ಗಳು ಇಲ್ಲಿವೆ:


  1. ರೋಜರ್ಸ್: 1837 ರಲ್ಲಿ ರೋಜರ್ಸ್ ಸ್ಥಾಪಿಸಿದ ಈ ಬ್ರ್ಯಾಂಡ್ ಕೇವಲ ಒಂದು ಫಿಜಿ ಪಾನೀಯಕ್ಕಿಂತ ಹೆಚ್ಚಿನದನ್ನು ಭಾರತದ ಜನರಿಗೆ ಮಾರಾಟ ಮಾಡಿತು. 19ನೇ ಶತಮಾನದ ಆರಂಭದಲ್ಲಿ, ಮುಂಬೈ ನಗರವು ಬಾವಿ ನೀರನ್ನು ಅವಲಂಬಿಸಿತ್ತು ಮತ್ತು ನಿವಾಸಿಗಳ ಪ್ರಕಾರ ನೀರು ಕೆಟ್ಟ ವಾಸನೆಯನ್ನು ಹೊಂದಿರುವುದರೊಂದಿಗೆ ಹಳದಿ-ಕಂದು ಬಣ್ಣದ ಮಣ್ಣಿನ ದ್ರವವಾಗಿತ್ತು. ಅಂತಿಮವಾಗಿ ಇದರಿಂದ ಜನರಿಲ್ಲಿ ಕಾಲರಾ ರೋಗವು ಕಾಣಿಸಿಕೊಂಡಿತು. ಇದು ನೂರಾರು ಜನರ ಪ್ರಾಣವನ್ನು ತೆಗೆದುಕೊಂಡಿತು. ನಂತರ ಜನರು ಕಾರ್ಬೊನೇಟೆಡ್ ನೀರನ್ನು ಸೇವಿಸಲು ಪ್ರಾರಂಭಿಸಿದರು, ಇದು ದೇಹದಲ್ಲಿನ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ಕೊಲ್ಲಲು ಸಹಾಯ ಮಾಡಿತು ಎಂದು ನಂಬಲಾಗಿದೆ. ಈ ಸಮಯದಲ್ಲಿ ಪಾರ್ಸಿಗಳು ಬ್ರಿಟಿಷರು ಸೇವಿಸುವ ಹೊಸ ಫಿಜಿ ಪಾನೀಯದಿಂದ ವ್ಯಾಪಾರದ ಅವಕಾಶವನ್ನು ಗ್ರಹಿಸಿದರು.


  2. ಪಲೋಂಜೀಸ್: ಒಂದು ವೇಳೆ ನೀವು ಮುಂಬೈನ ಇರಾನಿ ಕೆಫೆಗೆ ಹೋದರೆ, ಪಲೋಂಜೀಸ್ ಸಿಹಿಯಾದ ರಾಸ್ಪ್ಬೆರಿ ಸೋಡಾದ ಬಾಟಲಿಯನ್ನು ನೀವು ಖಂಡಿತವಾಗಿಯೂ ನೋಡಿರುತ್ತೀರಿ. ವಾಸ್ತವವಾಗಿ, ಈ ಪಾನೀಯವನ್ನು ಕುಡಿಯದೆ ಪಾರ್ಸಿ ಉಪಾಹಾರ ಗೃಹಕ್ಕೆ ಭೇಟಿ ನೀಡುವುದು ಅಪೂರ್ಣ ಅಂತಾನೆ ಹೇಳಲಾಗುತ್ತಿತ್ತು. ಪಲೋಂಜೀಸ್ ಬ್ರ್ಯಾಂಡ್ 1865 ರಲ್ಲಿ ಸ್ಥಾಪಿತವಾಯಿತು ಮತ್ತು ಅಂದಿನಿಂದಲೂ ಜನರ ಹೃದಯಗಳನ್ನು ಆಳುತ್ತಿದೆ. ಇಂದು, ನೀವು ದೆಹಲಿ, ಬೆಂಗಳೂರು ಮತ್ತು ಲಂಡನ್ ನಲ್ಲಿ ಸಹ ಪಲೋಂಜೀಸ್ ಸೋಡಾದ ಬಾಟಲಿಗಳನ್ನು ನೋಡಬಹುದು.


  3. ಡ್ಯೂಕ್ಸ್: ಇದನ್ನು 1889 ರಲ್ಲಿ ದಿನ್ಶಾವ್ಜಿ ಪಂಡೋಲ್ ಎಂಬ ಪಾರ್ಸಿ ಉದ್ಯಮಿ ಶುರು ಮಾಡಿದರು. ಪಾರ್ಸಿ ಕ್ರಿಕೆಟ್ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಅವರು ಬಳಸಿದ ಕ್ರಿಕೆಟ್ ಚೆಂಡಿನ ಬ್ರ್ಯಾಂಡ್ ಹೆಸರನ್ನು ಪಂಡೋಲ್ ಈ ಪಾನೀಯಕ್ಕೆ ಇಟ್ಟರು. ಡ್ಯೂಕ್ಸ್ ಸುವಾಸನೆಯ ರುಚಿಯ ಸೋಡಾಗಳೊಂದಿಗೆ ಮಾರುಕಟ್ಟೆಗೆ ಬಂದರು, ಅದು ಆ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿತು.


  4. ಕಾಟನ್ಸ್ ಆಂಡ್ ಕಂಪನಿ: ಈ ಐಕಾನಿಕ್ ಬ್ರ್ಯಾಂಡ್ 1906 ರಲ್ಲಿ ಕೋಲ್ಕತ್ತಾದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಈ ಬ್ರ್ಯಾಂಡ್ ಜಿಂಜರ್ ಆಲೆ ಮತ್ತು ಐಸ್ಕ್ರೀಮ್ ಸೋಡಾವನ್ನು ಬಡಿಸಿತು, ಇದು ಅನೇಕರಿಗೆ ಬಾಲ್ಯದ ನೆನಪುಗಳನ್ನು ಪ್ರಚೋದಿಸಿತು. ದುರದೃಷ್ಟವಶಾತ್, ಜಾಗತಿಕ ತಂಪು ಪಾನೀಯ ಬ್ರ್ಯಾಂಡ್ ಗಳ ಹೆಚ್ಚು ಸ್ಪರ್ಧಾತ್ಮಕ ಮಾರುಕಟ್ಟೆಯು ಸ್ಪರ್ಧೆಯನ್ನು ತಡೆದುಕೊಳ್ಳಲು ಅವರಿಗೆ ಕಷ್ಟವಾಗುವಂತೆ ಮಾಡಿತು. ಆದಾಗ್ಯೂ, ನೀವು ಈಗಲೂ ಕೋಲ್ಕತ್ತಾದ ಕೆಲವು ಸ್ಥಳಗಳಲ್ಲಿ ಈ ರುಚಿಕರವಾದ ಪಾನೀಯಗಳನ್ನು ಪೂರೈಸುವುದನ್ನು ನೀವು ಕಾಣಬಹುದು.


  5. ಸೋಸಿಯೋ: 1923 ರಲ್ಲಿ ಸೂರತ್ ಮೂಲದ ಉದ್ಯಮಿ ಅಬ್ಬಾಸ್ ರಹೀಮ್ ಹಜೂರಿ ಈ ಬ್ರ್ಯಾಂಡ್ ಅನ್ನು ಸ್ಥಾಪಿಸಿದರು. ಅವರು ಜ್ಯೂಸ್-ಆಧಾರಿತ ಗಾಳಿಯಾಡುವ ಪಾನೀಯಗಳನ್ನು ತಯಾರಿಸಿದರು ಮತ್ತು ಅವುಗಳನ್ನು ಸೋಸಿಯೋ ಎಂದು ಹೆಸರಿಸಿದರು. ಈ ಪಾನೀಯವು ತಕ್ಷಣವೇ ತುಂಬಾನೇ ಜನಪ್ರಿಯವಾಯಿತು. ನಂತರ ಈ ಬ್ರ್ಯಾಂಡ್ ' ಸೋಸಿಯೋ' ಎಂದು ಉಚ್ಚರಿಸುವಾಗ ಸ್ಥಳೀಯರಿಗೆ ಶಬ್ದಕೋಶದ ಬಲವಾದ ಪ್ರಭಾವವನ್ನು ಕಂಡಿತು. ಆದ್ದರಿಂದ 1953 ರಲ್ಲಿ ಈ ಹೆಸರನ್ನು 'ಸೋಸ್ಯೋ' ಎಂದು ಬದಲಾಯಿಸಿದರು. ಇಂದು, ಸೋಸ್ಯೋವನ್ನು ಹಲವಾರು ದೇಶಗಳಿಗೆ ರಫ್ತು ಮಾಡುವುದನ್ನು ಸಹ ನೀವು ನೋಡಬಹುದು.


  ಪಾರ್ಸಿ ಸೋಡಾ ಉದ್ಯಮಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇತಿಹಾಸಕಾರ ದಿನ್ಯಾರ್ ಪಟೇಲ್ ಹೇಳುವಂತೆ, 1920ರ ದಶಕದಿಂದ ಸಿಂಗಾಪುರದಲ್ಲಿ ಪಾರ್ಸಿ ಸೋಡಾದ ಎರಡು ಫ್ರಮ್ರೋಜ್ ಮತ್ತು ಫೀನಿಕ್ಸ್ ಎಂಬ ಎರಡು ಬ್ರ್ಯಾಂಡ್ ಗಳಿದ್ದವು. 1992 ರಿಂದ, ಕೋಕಾ-ಕೋಲಾ ಮತ್ತು ಪೆಪ್ಸಿಯಂತಹ ಬ್ರ್ಯಾಂಡ್ ಗಳು ಮನೆಯಲ್ಲಿ ಬೆಳೆದ ಈ ಬ್ರ್ಯಾಂಡ್ ಗಳನ್ನು ಹಿಂದಿಕ್ಕಲು ಪ್ರಾರಂಭಿಸಿದವು.

  Published by:Prajwal B
  First published: