• Home
  • »
  • News
  • »
  • trend
  • »
  • Burgers: ಈ ಸ್ಪೆಷಲ್ ಬರ್ಗರ್ ತಿಂದ್ರೆ ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಅಪಾಯ ಇರಲ್ವಂತೆ, ತಜ್ಞರು ಹೇಳಿದ್ದು!

Burgers: ಈ ಸ್ಪೆಷಲ್ ಬರ್ಗರ್ ತಿಂದ್ರೆ ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಅಪಾಯ ಇರಲ್ವಂತೆ, ತಜ್ಞರು ಹೇಳಿದ್ದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡೈರಿ ಉತ್ಪನ್ನಗಳನ್ನು ಸೇವಿಸದ ಜನರು ಈ ಹೃದ್ರೋಗಗಳಿಂದ ಬಳಲುವ ಸಾಧ್ಯತೆ ಶೇಕಡಾ 32ರಷ್ಟು ಕಡಿಮೆ ಎಂದು ಹೇಳಲಾಗುತ್ತಿದೆ.

  • Share this:

ತಾವು ದೀರ್ಘಕಾಲದವರೆಗೆ ಸಂತೋಷದಿಂದ ಮತ್ತು ಆರೋಗ್ಯಕರ ಜೀವನ (Healthy life) ನಡೆಸಲು ಯಾರಿಗೆ ತಾನೇ ಇಷ್ಟವಿರುವುದಿಲ್ಲ ನೀವೇ ಹೇಳಿ? ಇದು ಪ್ರತಿಯೊಬ್ಬರೂ ಬಯಸುವ ವಿಷಯವಾಗಿದೆ, ಆದರೂ ಅನೇಕರಿಗೆ ಈ ರೋಗ ರುಜಿನಗಳು(Diseases ) ಬಹು ಬೇಗನೆ ಅಂಟಿಕೊಳ್ಳುತ್ತವೆ ಮತ್ತು ಅವರನ್ನು ದುರ್ಬಲಗೊಳಿಸುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಾವು ದೀರ್ಘಾಯುಷಿಗಳಾಗಬೇಕಾದರೆ ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ (Cholesterol) ಅಥವಾ ಅಧಿಕ ರಕ್ತದೊತ್ತಡ, ಬೊಜ್ಜು, ಅಥವಾ ಇತರ ಯಾವುದೇ ಅನಾರೋಗ್ಯಗಳು (Illnesses )ನಮ್ಮನ್ನು ಕಾಡದೆ ಇರಬೇಕು ಎಂದು ನಾವು ಅಂದುಕೊಂಡರೆ ನಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಬೇಕು ಮತ್ತು ಆಹಾರ ಕ್ರಮವನ್ನು ಸರಿಯಾಗಿ ಅನುಸರಿಸುವುದರೊಂದಿಗೆ ಪ್ರತಿದಿನ ತಪ್ಪದೆ ವ್ಯಾಯಾಮ, ಯೋಗ ಮಾಡುವುದು ಉತ್ತಮ ಎಂದು ತಜ್ಞರು (Experts )ಹೇಳುತ್ತಾರೆ.


ಸಂಶೋಧನೆಗಳ ಪ್ರಕಾರ
ಆದರೆ ಇತ್ತೀಚೆಗೆ ನಡೆದ ಅಧ್ಯಯನಗಳು ಮತ್ತು ಸಂಶೋಧನೆಗಳು ಬೇರೆ ಕಥೆಯನ್ನೇ ಹೇಳುತ್ತಿವೆ, ಅದೇನಪ್ಪಾ ಎಂದರೆ ಮೆಸಾಚುಸೆಟ್ಸ್ ಆಮ್ಹರ್ಸ್ಟ್ ವಿಶ್ವವಿದ್ಯಾಲಯವು ನಡೆಸಿದ ಗೋಮಾಂಸ ಮತ್ತು ಪರ್ಯಾಯ ಬರ್ಗರ್‌ಗಳ ಪೌಷ್ಠಿಕಾಂಶದ ಹೋಲಿಕೆಯ ಪ್ರಕಾರ, ಪ್ಯಾಕೇಜ್ ಮಾಡಿದ ಬೀಫ್ ಬರ್ಗರ್‌ಗಳು ಸಸ್ಯಾಹಾರಿ ಬರ್ಗರ್‌ಗಳಿಗೆ ವಿರುದ್ಧವಾಗಿ ಹೆಚ್ಚು ಕೊಲೆಸ್ಟ್ರಾಲ್, ಕ್ಯಾಲೋರಿಗಳು, ಪ್ರೋಟೀನ್ ಮತ್ತು ಕೊಬ್ಬು ಮತ್ತು ಕಡಿಮೆ ನಾರು ಹಾಗೂ ಸೋಡಿಯಂ ಹೊಂದಿರುತ್ತವೆ ಎಂದು ಕಂಡುಕೊಂಡಿದ್ದಾರೆ.


ಇದನ್ನೂ ಓದಿ: Fatty Acids: ನಿಮ್ಮ ದೇಹಕ್ಕೆ ಯಾವ ಕೊಬ್ಬು ಉತ್ತಮ? ಯಾವ ಆಹಾರವನ್ನು ಚಿಂತೆ ಇಲ್ಲದೆ ತಿನ್ನಬಹುದು?


ಸಸ್ಯಹಾರಿ ಬರ್ಗರ್ ಆಯ್ಕೆ ಇರಲಿ
ಸಾಂಪ್ರದಾಯಿಕ, ತರಕಾರಿ ಮತ್ತು ಬರ್ಗರ್‌ಗಳು ಸೇರಿದಂತೆ 158 ಆಹಾರ ಉತ್ಪನ್ನಗಳ ವಿಶ್ಲೇಷಣೆಯಾದ ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಈ ಅಧ್ಯಯನವು, ಸಂಸ್ಕರಿಸಿದ ಗೋಮಾಂಸದ ಪ್ಯಾಟಿಗಳು ಶೇಕಡಾ 10 ರಿಂದ 13 ರಷ್ಟು ಸಾವಿನ ಅಪಾಯಕ್ಕೆ ಸಂಬಂಧಿಸಿವೆ ಎಂದು ಕಂಡುಹಿಡಿಯಲಾಗಿದೆ. ಆದ್ದರಿಂದ, ಹಂದಿ ಮಾಂಸ ಬಿಟ್ಟು ಮತ್ತು ಮಾಂಸ ಆಧಾರಿತ ಬರ್ಗರ್‌ಗಳನ್ನು ತ್ಯಜಿಸಿ ಸಸ್ಯಹಾರಿ ಆಧಾರಿತ ಬರ್ಗರ್ ಆಯ್ಕೆ ಮಾಡುವುದು ದೀರ್ಘಾಯುಷ್ಯ ಹೆಚ್ಚಿಸಲು ಮತ್ತು ವಯಸ್ಸಿಗೆ ಸಂಬಂಧಿಸಿದ ಪರಿಸ್ಥಿತಿಗಳ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.


ಕೆಂಪು ಮಾಂಸ ಸೇವನೆಯು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತೇ?
ಕೆಂಪು ಮಾಂಸ, ಅದರ ಕಬ್ಬಿಣ, ಸಂರಕ್ಷಕಗಳು ಮತ್ತು ಸೋಡಿಯಂ ಅಂಶದಿಂದಾಗಿ, ಈ ಆಹಾರದ ಹೆಚ್ಚಿನ ಸೇವನೆಯು ಕೊಲೆಸ್ಟ್ರಾಲ್ ಗೆ ಸಂಬಂಧಿಸಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಮಾಂಸವನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದರೆ ಕ್ಯಾನ್ಸರ್ ಅಪಾಯ. ತಜ್ಞರು ಗೋಮಾಂಸವನ್ನು ಮಧುಮೇಹದ ಹೆಚ್ಚಿನ ಅಪಾಯಕ್ಕೆ ಜೋಡಿಸುತ್ತಾರೆ.


ಅಧ್ಯಯನದ ಲೇಖಕರ ಪ್ರಕಾರ, ಪ್ರೋಟೀನ್ ಮೂಲ ಬದಲಾಯಿಸುವುದು, ಸಂಪೂರ್ಣ ಧಾನ್ಯಗಳು ಮತ್ತು ತರಕಾರಿಗಳಂತಹ ಸಸ್ಯ ಆಧಾರಿತ ಆಹಾರಗಳನ್ನು ಆಯ್ಕೆ ಮಾಡುವುದು ದೀರ್ಘಾಯುಷ್ಯವನ್ನು ಉತ್ತೇಜಿಸಬಹುದು. ಇದರರ್ಥ ನೀವು ಸಂಪೂರ್ಣವಾಗಿ ಸಸ್ಯಾಹಾರಿಗಳಾಗಬೇಕು ಎಂದಲ್ಲವಾದರೂ, ಕೆಲವು ಕೆಂಪು ಮಾಂಸಗಳನ್ನು ಸಸ್ಯ ಆಧಾರಿತ ಆಹಾರಗಳೊಂದಿಗೆ ಬದಲಾಯಿಸುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.


ಇದನ್ನೂ ಓದಿ: Health Tips: ದಿನನಿತ್ಯ ಪಪ್ಪಾಯಿ ತಿನ್ನೊದ್ರಿಂದ ಕೆಮ್ಮು, ವಾತ ನಿಮ್ಮ ಹತ್ರನೂ ಸುಳಿಯಲ್ಲ..


ಸಸ್ಯಾಹಾರಿ ಆಗುವುದು ನಮ್ಮ ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಸಹಾಯ ಮಾಡಬಹುದು?
ನೀವು ಸಂಪೂರ್ಣವಾಗಿ ಸಸ್ಯಾಹಾರಿಯಾಗಿ ಬದಲಾದಲ್ಲಿ ಅಲ್ಪಾವಧಿ ಮತ್ತು ದೀರ್ಘಕಾಲೀನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಡೈರಿ ಉತ್ಪನ್ನಗಳನ್ನು ಸೇವಿಸದ ಜನರು ಈ ಹೃದ್ರೋಗಗಳಿಂದ ಬಳಲುವ ಸಾಧ್ಯತೆ ಶೇಕಡಾ 32ರಷ್ಟು ಕಡಿಮೆ ಎಂದು ಹೇಳಲಾಗುತ್ತಿದೆ. ಹೆಚ್ಚುವರಿಯಾಗಿ, ಸಸ್ಯಾಹಾರಿಯಾಗುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್‌ನ ಶೇಕಡಾ 35 ಪ್ರತಿಶತದಷ್ಟು ಅಪಾಯವನ್ನು ಮತ್ತು ಟೈಪ್ 2 ಮಧುಮೇಹದ ಶೇಕಡಾ 23 ಪ್ರತಿಶತದಷ್ಟು ಅಪಾಯ ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

Published by:vanithasanjevani vanithasanjevani
First published: