Expensive Fruits; ಬೆಲೆ ಮಾತ್ರ ಐಷಾರಾಮಿ ಬೈಕ್‌ಗಳಿಗಿಂತಲೂ ದುಬಾರಿ..!

ಈ ದುಬಾರಿ ಹಣ್ಣುಗಳು, ಐಷಾರಾಮಿ ಕಾರು ಮತ್ತು ಬೈಕ್​ಗಳ ಬೆಲೆಗಿಂತ ಹೆಚ್ಚು ಎಂದರೆ ನೀವು ನಂಬಲೇ ಬೇಕು. ಹೌದು, ಹಾಗಾದರೆ ಆ ಹಣ್ಣುಗಳು ಯಾವುವು, ಬೆಲೆ ಎಷ್ಟು ಅಂತ ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರುಚಿಕರವಾದ, ಸಿಹಿಯಾದ ಹಣ್ಣುಗಳು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಮನುಷ್ಯ ಆರೋಗ್ಯವಂತನಾಗಿರಬೇಕಾದರೆ ಆಹಾರ ಪದ್ಧತಿಯಲ್ಲಿ ದಿನಕ್ಕೆ ಒಂದು ಹಣ್ಣನಾದರೂ ಸೇರಿಸಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಕೆಲವರು ಡಯೆಟ್‍ನಲ್ಲಿರುವವರು ಊಟಕ್ಕಿಂತ ಹಣ್ಣುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಡ್ರ್ಯಾಗನ್, ಕಿವಿ, ಪ್ಯಾಶನ್ ಹಣ್ಣುಗಳನ್ನು ನಾವು ದುಬಾರಿ ಹಣ್ಣುಗಳು ಎಂದು ಭಾವಿಸುತ್ತೇವೆ. ಆದರೆ ಈ ಹಣ್ಣುಗಳಿಂತಲೂ ದುಬಾರಿಯಾದ ಹಣ್ಣುಗಳು ಈ ಪ್ರಪಂಚದಲ್ಲಿದೆ ಎಂದರೆ ನೀವು ನಂಬಲೇ ಬೇಕು.

ಹೌದು, ಈ ದುಬಾರಿ ಹಣ್ಣುಗಳು, ಐಷಾರಾಮಿ ಬೈಕ್​ಗಳ ಬೆಲೆಗಿಂತ ಹೆಚ್ಚು ಎಂದರೆ ನೀವು ನಂಬಲೇ ಬೇಕು. ಹೌದು, ಹಾಗಾದರೆ ಆ ಹಣ್ಣುಗಳು ಯಾವುವು, ಬೆಲೆ ಎಷ್ಟು ಅಂತ ನೋಡೋಣ.

The Worlds Most Expensive Fruits, Sembikiya Queen strawberries, Taiyo-no-Tamago Mangoes, Ruby Roman Grapes, Sekai Ichi Apples, Cubed watermelon, Fruits, Sekai Ichi Apples, Health, Lifestyle, ಹಣ್ಣುಗಳು, ಸೆಕೈ ಇಚೀ ಸೇಬು, ಆರೋಗ್ಯ, ಜೀವನಶೈಲಿ, these Are The Worlds Most Expensive Fruits ae,
ಬುದ್ಧ ಆಕಾರದ ಪಿಯರ್


1. ಆ್ಯನ್ ಎಗ್ ಆಫ್ ದ ಸನ್, ಭಾರತ

ಭಾರತದಲ್ಲಿ ವಿರಳವಾಗಿ ಬೆಳೆಯುವ ಈ ಹಣ್ಣಿನ ಬೆಲೆ ಒಂದು ಕೆ.ಜಿಗೆ 2.7 ಲಕ್ಷ ರೂ. ಆರ್ಚಾರ್ಡಿಸ್ಟ್ ದಂಪತಿಗಳಾದ ರಾಣಿ ಮತ್ತು ಸಂಕಲ್ಪ್ ಪರಿಹಾರ್ ಅವರು ತಾವು ಬೆಳೆದ ಅಪರೂಪದ ಮಾವಿನಹಣ್ಣುಗಳನ್ನು ರಕ್ಷಿಸಲು ನಾಲ್ಕು ಕಾವಲುಗಾರರು ಮತ್ತು ಆರು ನಾಯಿಗಳನ್ನು ನಿಯೋಜಿಸಿದ್ದರು. ಈ ದಂಪತಿ ಪ್ರಸ್ತುತ ಏಳು ಹಣ್ಣುಗಳನ್ನು ಬೆಳೆಸಿದ್ದಾರೆ. ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ವ್ಯಕ್ತಿಯೊಬ್ಬ ಕೆಲವು ಮಾವಿನ ಸಸಿಗಳನ್ನು ನೀಡಿದರು. ದಂಪತಿಗಳು ತಮ್ಮ ತೋಟದಲ್ಲಿ ಎರಡು ಸಸಿಗಳನ್ನು ನೆಟ್ಟರು, ಆದರೆ ಇದು ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣುಗಳು ಎಂದು ದಂಪತಿಗೆ ತಿಳಿದಿರಲಿಲ್ಲ.

2. ಬುದ್ಧ ಆಕಾರದ ಪಿಯರ್

ಬುದ್ಧ-ಆಕಾರದ ಪಿಯರ್ ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ, ಇದು ಒಂದು ಸಣ್ಣ ಪಿಯರ್ಸ್​ಗೆ ಅಮೆರಿಕ ಡಾಲರ್ 9 (ರೂ. 665, ಅಂದಾಜು) ವೆಚ್ಚವಾಗುತ್ತದೆ. ಕೆಲವು ವರದಿಗಳ ಪ್ರಕಾರ, ಬುದ್ಧನ ಪ್ರತಿಮೆಯ ಆಕಾರದ ಪೇರಳೆಗಳನ್ನು ಕ್ಸಿಯಾನ್‍ಜಾಂಗ್ ಹಾವೊ ಬೆಳೆಸಿದರು. ಈ ಪೇರಳೆಗಳನ್ನು ಬೆಳೆಯುವ ಪ್ರಕ್ರಿಯೆಯು ನೈಸರ್ಗಿಕವಾಗಿ ಬೆಳೆಯುವ ಪೇರಳೆಗಳಿಗಿಂತ ಭಿನ್ನವಾಗಿದೆ.

ಇದನ್ನೂ ಓದಿ: Weight Loss: ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕಾದ್ರೆ ಈ ಹಣ್ಣುಗಳಿಂದ ದೂರವಿರಿ..!

3. ಕ್ಯೂಬ್ ರೂಪದ ಕಲ್ಲಂಗಡಿ ಹಣ್ಣು

ಕಲ್ಲಂಗಡಿಗಳಿಲ್ಲದೆ ಬೇಸಿಗೆಯನ್ನು ಊಹಿಸಿಕೊಳ್ಳುವುದು ಅಸಾಧ್ಯ. ಆದರೆ 5 ಕೆಜಿ ಕಲ್ಲಂಗಡಿಗಾಗಿ ನೀವು ಸುಮಾರು 60,000 ರೂ. ಖರ್ಚು ಮಾಡಲು ಬಯಸುವಿರಾ? ಘನ ಅಥವಾ ಚದರ ಕಲ್ಲಂಗಡಿಗಳು ವಿಶ್ವದ ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ. ಒಂದು ಕಲ್ಲಂಗಡಿಯ ಸರಾಸರಿ ತೂಕ 5 ಕೆಜಿ. ಅಂದರೆ, ಒಂದು ಕಿಲೋ ಕಲ್ಲಂಗಡಿ ಬೆಲೆ ಸುಮಾರು 12,000 ರೂ. ಈ ಕಲ್ಲಂಗಡಿಗಳು ಚದರ ಪೆಟ್ಟಿಗೆಗಳ ಒಳಗೆ ಬೆಳೆದಿದ್ದರಿಂದ ಅವುಗಳ ಆಕಾರ ವಿಶಿಷ್ಟವಾಗಿದೆ.

4. ಸೆಕೈ ಇಚಿ ಸೇಬು

ದಿನಕ್ಕೊಂದು ಸೇಬು ಸೇವಿಸುವುದರಿಂದ ನಾವು ವೈದ್ಯರಿಂದ ದೂರವಿರಬಹುದು ಎಂಬುದು ನಮಗೆಲ್ಲಾ ಗೊತ್ತಿರುವ ಗಾದೆ. ಆದರೆ ನಾವು ಸೆಕೈ ಇಚಿ ಸೇಬು ಕೊಂಡು ತಿನ್ನುವುದು ಕಷ್ಟ. ಏಕೆಂದರೆ ಒಂದು ಏಕೈಕ ಸೆಕೈ ಇಚಿ ಸೇಬಿನ ಬೆಲೆ ಸುಮಾರು 1,588 ರೂ. ಅಂದರೆ 907 ಗ್ರಾಂ ಸೇಬಿಗೆ ಸುಮಾರು 21 ಅಮೆರಿಕನ್ ಡಾಲರ್.

5. ರುಬಿ ರೋಮನ್ ದ್ರಾಕ್ಷಿ

ಇದನ್ನು ಜಪಾನ್‍ನಲ್ಲಿ ಬೆಳೆಯಲಾಗುತ್ತದೆ. 2020ರಲ್ಲಿ ಈ ನಿರ್ದಿಷ್ಟ 24 ದ್ರಾಕ್ಷಿಗಳ ಒಂದು ಗುಂಪು ಸುಮಾರು 7.5 ಲಕ್ಷಕ್ಕೆ ಮಾರಾಟ ಮಾಡಲಾಯಿತು.

6. ತಯ್ಯೊ-ನೋ-ತಮಗೋ ಮಾವಿನಹಣ್ಣುಗಳು

ಇದನ್ನು ಹಣ್ಣುಗಳ ರಾಜ ಎಂದು ಬಣ್ಣಿಸಲಾಗುತ್ತದೆ. ಇದು ವಿಶ್ವದ ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ. ಹೌದು ಈ ಎರಡು ಮಾವಿನ ಹಣ್ಣಿನ ಬೆಲೆ 2.26,ಲಕ್ಷ ರೂಪಾಯಿ.

7. ಸೆಂಬಿಕಿಯಾ ರಾಣಿ ಸ್ಟ್ರಾಬೆರಿಗಳು

12 ಸೆಂಬಿಕಿಯಾ ಕ್ವೀನ್ ಸ್ಟ್ರಾಬೆರಿಗಳ ಪ್ಯಾಕ್ ಬೆಲೆ 85 ಅಮೆರಿಕ ಡಾಲರ್. ರೂ. 6,427 ರಷ್ಟಿದೆ, ಆದರೆ ಈ ಸ್ಟ್ರಾಬೆರಿಗಳು ಬಣ್ಣ, ರುಚಿ, ವಿನ್ಯಾಸ ಮತ್ತು ಆಕಾರದಲ್ಲಿ ಸಾಮಾನ್ಯ ಹಣ್ಣುಗಳಿಗಿಂತ ಭಿನ್ನವಾಗಿದೆ.

8. ಯುಬರಿ ಕಿಂಗ್ ಮೆಲನ್

ಜಪಾನ್‍ನ ಯುಬ್ರಿ ಮೆಲನ್ ಅನ್ನು ವಿಶೇಷವಾಗಿ ಜಪಾನ್‍ನ ಯುಬಾರಿ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಇವುಗಳಲ್ಲಿ ಎರಡು ಯುಬ್ರಿ 2019ರಲ್ಲಿ 45,000ಕ್ಕೆ (ಸುಮಾರು ರೂ. 33,00,000) ಹರಾಜಾಗಿ ದಾಖಲೆ ಸೃಷ್ಟಿಸಿತ್ತು.

9. ಡೆಕೊಪಾನ್ ಕಿತ್ತಳೆ

ಡೆಕೊಪಾನ್ ಬೀಜರಹಿತ ಮತ್ತು ಸಿಹಿಯಾದ ಮ್ಯಾಂಡರಿನ್ ಕಿತ್ತಳೆ. ಇದು 1972ರಲ್ಲಿ ಜಪಾನ್‍ನಲ್ಲಿ ಅಭಿವೃದ್ಧಿಪಡಿಸಿದ ಕಿಯೋಮಿ ಮತ್ತು ಪೊಂಕನ್ ನಡುವಿನ ಹೈಬ್ರಿಡ್ ತಳಿ. ಆರು ಹಣ್ಣುಗಳಿಗೆ 80 ಅಮೆರಿಕನ್ ಡಾಲರ್ (ಅಂದಾಜು ರೂ 6,000) ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Health Tips: ಮಧುಮೇಹ ಸಮಸ್ಯೆ ಹೊಂದಿರುವವರು ಈ ಹಣ್ಣುಗಳ ಸೇವನೆ ಮಾಡಬಾರದು..

10. ಹೆಲಿಗನ್ ಪೈನಾಪಲ್ಸ್

ಈ ಅನಾನಸ್‍ಗಳನ್ನು ಯುಕೆಯ ಗಾರ್ಡನ್ ಆಫ್ ಹೆಲಿಗನ್‍ನಲ್ಲಿ ಮಾತ್ರ ಬೆಳೆಯಬಹುದು. ಈ ಹಣ್ಣಿನ ಬೆಲೆ ಸುಮಾರು 1,00,000 ರೂ. ಬಿಬಿಸಿ ಪ್ರಕಾರ, ತೋಟಗಾರಿಕಾ ತಜ್ಞರು ವಿಕ್ಟೋರಿಯನ್ ಹಸಿರುಮನೆಗಳಲ್ಲಿ ಅನಾನಸ್ ಬೆಳೆಯಲು ಏಳು ವರ್ಷ ತೆಗೆದುಕೊಂಡರು ಎಂದು ಹೇಳಿದೆ.

11. ಡೆನ್ಸೂಕ್ ಕಲ್ಲಂಗಡಿ ಹಣ್ಣು

ಈ ಕಪ್ಪು, ಕಲೆರಹಿತ ಕಲ್ಲಂಗಡಿ ಜಪಾನ್‍ನ ಹೊಕ್ಕೈಡ್ ದ್ವೀಪದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಇದು ಟೋಕಿಯೋದ ಸೆಂಬಿಕಿಯಾ ಫ್ಲಾಗ್‍ಶಿಪ್ ಅಂಗಡಿಯಲ್ಲಿ ಲಭ್ಯವಿದೆ. ಪ್ರತಿ ಕಲ್ಲಂಗಡಿ ಸುಮಾರು 11 ಕೆಜಿ ತೂಗುತ್ತದೆ ಮತ್ತು ವಿಶಿಷ್ಟವಾದ ಸಿಹಿ, ಸುವಾಸನೆ ಮತ್ತು ರುಚಿಯನ್ನು ಹೊಂದಿದೆ. ಡೆನ್ಸೂಕ್ ಕಲ್ಲಂಗಡಿ ಹಣ್ಣನ್ನು ಜಪಾನ್‍ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. 2014ರಲ್ಲಿ ಪ್ರತಿ ಹಣ್ಣು 6,000 ಅಮೆರಿಕನ್ ಡಾಲರ್ (ಸುಮಾರು ರೂ. 4.4 ಲಕ್ಷ) ದಂತೆ ಮಾರಾಟವಾಯಿತು.
Published by:Anitha E
First published: